About: http://data.cimple.eu/claim-review/4f4723891576a939a185cb1428fd286f47903c7577f5023919069115     Goto   Sponge   NotDistinct   Permalink

An Entity of Type : schema:ClaimReview, within Data Space : data.cimple.eu associated with source document(s)

AttributesValues
rdf:type
http://data.cimple...lizedReviewRating
schema:url
schema:text
  • ಫ್ಯಾಕ್ಟ್ಚೆಕ್: ನಟಿ ನಿವೇತಾ ಪೇತುರಾಜ್ ಪೊಲೀಸರೊಂದಿಗೆ ವಾಗ್ವಾದ ಮಾಡುತ್ತಿರುವ ವಿಡಿಯೋ ವೈರಲ್ ನಟಿ ನಿವೇತಾ ಪೇತುರಾಜ್ ಪೊಲೀಸರೊಂದಿಗೆ ವಾಗ್ವಾದ ಮಾಡುತ್ತಿರುವ ವಿಡಿಯೋ ವೈರಲ್ Claim :ಕಾರಿನ ಟ್ರಂಕ್ ತೆರೆಯಲು ಕೇಳಿದಾಗ ನಿವೇತಾ ಪೇತುರಾಜ್ ಪೊಲೀಸ್ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸುತ್ತಿರುವ ವಿಡಿಯೋ ವೈರಲ್ Fact :ವೈರಲ್ ವೀಡಿಯೊ ಪರುವು ಹೆಸರಿನ Zee5 ನಲ್ಲಿ ಸ್ಟ್ರೀಮ್ ಆಗಲಿರುವ ವೆಬ್ ಸರಣಿಯ ಪ್ರಚಾರದ ಶಾಟ್ ಇತ್ತೀಚಿನ ದಿನಗಳಲ್ಲಿ ಪ್ರೇಕ್ಷಕರನ್ನು ಆಕರ್ಷಿಸಲು ವಿಭಿನ್ನ ರೀತೊಯಲ್ಲಿ ಪ್ರಮೋಟಿಂಗ್ ಮಾಡುತ್ತಿರುತ್ತಾರೆ. ಉದಾಹರಣೆಗೆ ಇತ್ತೀಚೆಗಷ್ಟೇ ಪೂನಂ ಪಾಂಡೆ ಗರ್ಭಕಂಠದ ಕ್ಯಾನ್ಸರ್ ನಿಂದ ಸಾವನ್ನಪ್ಪಿದ್ದೇನೆ ಎಂದು ಸುಳ್ಳು ಸುದ್ದಿಯನ್ನು ಹಬ್ಬಿಸಿದ್ದರು. ಎಲ್ಲಾ ಮಾಧ್ಯಮದವರೂ ಸಹ ಇದನ್ನೇ ನಂಬಿ ವರದಿಗಳನ್ನು ಸಹ ಬರೆದಿದ್ದವು. ಆದರೆ ನಂತರ, ಆಕೆಯ PR ತಂಡವು ಇದು PR ಸ್ಟಂಟ್ ಎಂದು ಬಹಿರಂಗಪಡಿಸಿತು. ಮಹಿಳೆಯರಲ್ಲಿ ಗರ್ಭಕಂಠದ ಕ್ಯಾನ್ಸರ್ ಬಗ್ಗೆ ಜಾಗೃತಿಗಾಗಿ ಮೂಡಿಸಲು ಈ ರೀತಿ ಮಾಡಿದ್ದೆವು ಎಂದು ಮಾತು ಬದಲಾಯಿಸಿದ್ದರು. ಇದರ ನಡುವೆ, ದಕ್ಷಿಣ ಭಾರತದ ನಟಿ ನಿವೇತಾ ಪೇತುರಾಜ್ ಕೂಡ ಜನರ ಗಮನ ಸೆಳೆಯುವ ಕಾರ್ಯವನ್ನು ಯಶ್ಸವಿಯಾಗಿ ಮಾಡಿದ್ದಾರೆ. ನಿವೇತಾ ಪೇತುರಾಜ್ ಕಾರನ್ನು ಓಡಿಸುವಾಗ ಪೊಲೀಸ್ ಅಧಿಕಾರಿಗಳ ಜೊತೆ ವಾಗ್ವಾದ ಮಾಡಿದ್ದರಿಂದ ಪೊಲೀಸರು ಆಕೆಯನ್ನು ಬಂಧಿಸಿದ್ದ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ನಟಿ ನಿವೇತಾ ಪೇತುರಾಜ್ ತೆಲುಗು ಭಾಷೆಯಲ್ಲಿ ಪೊಲೀಸರೊಂದಿಗೆ ಜಗಳವಾಡುತ್ತಿರುವುದನ್ನು ನೋಡಬಹುದು. ಪೊಲೀಸ್ ಅಧಿಕಾರಿಗಳು ಕಾರಿನ ಡಿಕ್ಕಿಯನ್ನು ತೆರೆಯಲು ಕೇಳಿದಾಗ, ನಾನು ಕಾರಿನ ಡಿಕ್ಕಿಯನ್ನು ತೆಗೆಯುವುದಿಲ್ಲ, ತೆಗೆದರೆ ನನ್ನ ಮಾರ್ಯಾದೆ ಹೋಗುತ್ತದೆ ಎಂದು ಹೇಳುವುದನ್ನು ನಾವು ವಿಡಿಯೋವಿನಲ್ಲಿ ನೋಡಬಹುದು. ವೀಡಿಯೋವಿನ ಕೊನೆಯಲ್ಲಿ, ಯಾರೋ ವಿಡಿಯೋ ರೆಕಾರ್ಡ್ ಮಾಡುತ್ತಿರುವುದನ್ನು ಕಂಡು ಗಾಬರಿಗೊಂಡು ಅವರ ಮೇಲೆ ಕೂಗಾಡುವುದನ್ನು ನೋಡಬಹುದು. “ನಟಿ #ನಿವೇತಾ ಪೇತುರಾಜ್ ವಾದ ಮಾಡಿ ಕಾರಿನ ಹಿಂಬದಿಯ ಟ್ರಂಕ್ ತೆರೆಯಲು ಹಿಂದೇಟು ಹಾಕಿದರು ಮತ್ತು ರೆಕಾರ್ಡ್ ಮಾಡಿದ ವ್ಯಕ್ತಿಯನ್ನು ಗದರಿಸಿದರು. ಆಕೆಯ ಮುಖಭಾವಗಳು ಪೊಲೀಸರಿಗೆ ತನ್ನ ಮೇಲೆಯೇ ಅನುಮಾನ ಬರುವಂತೆ ಮಾಡಿತು... #Tollywood #NivethaPethuraj #Police ” ಎಂಬ ಶೀರ್ಷಿಕೆಯೊಂದಿಗೆ ವೀಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿದೆ. Kalesh over Actress Nivetha Pethuraj argued and hesitated to open backside trunk of the car and scolded the recorded person (Her expressions made Policemen to doubt on herself)— Ghar Ke Kalesh (@gharkekalesh) May 30, 2024 pic.twitter.com/WgpDodD8LO Actress #NivethaPethuraj argued and hesitated to open backside trunk of the car and scolded the recorded person...— Anchor_Karthik (@Karthikkkk_7) May 29, 2024 Her expressions made Policemen to doubt on herself...#Tollywood #NivethaPethuraj #Police pic.twitter.com/49W6DNPcdL ಫ್ಯಾಕ್ಟ್ಚೆಕ್ ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ವೈರಲ್ ಆಗಿರುವ ವೀಡಿಯೋ ತೆಲುಗಿನ 'ಪರುವು' ಎಂಬ ವೆಬ್ ಸರಣಿಯ ಪ್ರಚಾರದ ಭಾಗವಾಗಿದೆ. ವೈರಲ್ ವೀಡಿಯೊದ ಕುರಿತು ಹೆಚ್ಚಿನ ಮಾಹಿತಿಗಾಗಿ ನಾವು ಹುಡುಕಿದಾಗ, ನಮಗೆ ವಿಡಿಯೋವಿಗೆ ಸಾಮಾಜಿಕ ಮಾಧ್ಯಮ ಬಳಕೆದಾರರಿಂದ ಬಂದಂತಹ ಹಲವಾರು ಕಾಮೆಂಟ್ಗಳು ಕಂಡುಬಂದುವು. ಕೆಲವರು ಇದು ಪ್ರಚಾರದ ಗಿಮಿಕ್ಕ್ ಎಂದು ಇನ್ನು ಕೆಲವರು ಸಿನಿಮಾ ಶೂಟಿಂಗ್ ಇರಬಹುದು ಎಂದು ಬರೆದಿದ್ದರು. ವೀಡಿಯೊವನ್ನು ತೀಕ್ಷ್ಣವಾಗಿ ನೋಡಿದರೆ, ವಿಡಿಯೋವಿನ ಆರಂಭದಲ್ಲಿ, ಪೊಲೀಸ್ ಅಧಿಕಾರಿಗಳು ಶೂಗಳ ಬದಲಿಗೆ ಕ್ರಾಕ್ಸ್ ಚಪ್ಪಿಯನ್ನು ಹಾಕಿಕೊಂಡಿರುವುದನ್ನು ನಾವು ನೋಡಬಹುದು. Actress #NivethaPethuraj argued and hesitated to open backside trunk of the car and scolded the recorded person...— Anchor_Karthik (@Karthikkkk_7) May 29, 2024 Her expressions made Policemen to doubt on herself...#Tollywood #NivethaPethuraj #Police pic.twitter.com/49W6DNPcdL ಮತ್ತಷ್ಟು ಹುಡುಕಾಟದ ನಂತರ, ನಮಗೆ ಜೀ ತೆಲುಗು ಪೋಸ್ಟ್ವೊಂದು ಕಾಣಿಸಿತು. “Here you go! Not caught in the act, but really one for our latest original #PARUVUonZee5”, making it clear that it is indeed a promotion for a web series created by Zee 5" ಎಂದು ಪೋಸ್ಟ್ ಮಾಡಿದ್ದರು. Zee 5 ತೆಲುಗು OTT ನಲ್ಲಿ ಪರುವು ತೆಲುಗು ವೆಬ್ ಸರಣಿ ಸ್ಟ್ರೀಮ್ ಆಗಲಿದೆ. ಈ ಸರಣಿಯು 2024 ಜೂನ್ ತಿಂಗಳಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಹಿಂದೂಸ್ತಾನ್ ಟೈಮ್ಸ್ ತೆಲುಗು ವರದಿಯ ಪ್ರಕಾರ , ವೈರಲ್ ವೀಡಿಯೊ ವೆಬ್ ಸರಣಿಯ ಪ್ರಚಾರದ ಭಾಗವಾಗಿದೆ ಎಂದು ವರದಿ ಮಾದ್ದಾರೆ. ಮರ್ಯಾದಾ ಹತ್ಯೆಗಳ ಹಿನ್ನೆಲೆಯಲ್ಲಿ ಸಂದೇಶವನ್ನು ಇಟ್ಟುಕೊಂಡು ಈ ಸರಣಿಯನ್ನು ರೂಪಿಸಲಾಗಿದೆ. ದಕ್ಷಿಣ ಭಾರತದ ನಟಿ ನಿವೇತಾ ಪೇತುರಾಜ್ ಅವರನ್ನು ನಿಜವಾಗಿಯೂ ಪೊಲೀಸರು ಬಂಧಿಸಿದ್ದಾರೆ ಮತ್ತು ಕಾರಿನ ಟ್ರಂಕ್ ತೆರೆಯಲು ಅವರೊಂದಿಗೆ ಜಗಳವಾಡುತ್ತಿದ್ದಾರೆ ಎಂಬ ಹೇಳಿಕೆಯಲ್ಲಿ ಯಾವುದೇ ಸತ್ಯಾಂಶವಿಲ್ಲ. ವೈರಲ್ ಆದ ವಿಡಿಯೋವಿನಲ್ಲಿ ಯಾವುದೇ ಸತ್ಯಾಂಶವಿಲ್ಲವೆಂದು ಸಾಭೀತಾಯಿದೆ. ವೈರಲ್ ವಿಡಿಯೋವಿನಲ್ಲಿ ಕಾಣುವ ಹಾಗೆ ನಟಿ ನಿವೇತಾ ಪೇತುರಾಜ್ ಪೊಲೀಸರೊಂದಿಗೆ ವಾಗ್ವಾದ ಮಾಡಿಲ್ಲ ಇದೆಲ್ಲಾ ಝೀ5 ನಲ್ಲಿ ಬರುವ ʼಪರುವುʼ ವೆಬ್ ಸರಣಿಯ ಭಾಗವಾಗಿದೆ.
schema:mentions
schema:reviewRating
schema:author
schema:datePublished
schema:inLanguage
  • Telugu
schema:itemReviewed
Faceted Search & Find service v1.16.115 as of Oct 09 2023


Alternative Linked Data Documents: ODE     Content Formats:   [cxml] [csv]     RDF   [text] [turtle] [ld+json] [rdf+json] [rdf+xml]     ODATA   [atom+xml] [odata+json]     Microdata   [microdata+json] [html]    About   
This material is Open Knowledge   W3C Semantic Web Technology [RDF Data] Valid XHTML + RDFa
OpenLink Virtuoso version 07.20.3238 as of Jul 16 2024, on Linux (x86_64-pc-linux-musl), Single-Server Edition (126 GB total memory, 5 GB memory in use)
Data on this page belongs to its respective rights holders.
Virtuoso Faceted Browser Copyright © 2009-2025 OpenLink Software