About: http://data.cimple.eu/claim-review/57a17e9573757c20fa5ba781a369bbc6d21eec74aae56d5b550cfee5     Goto   Sponge   NotDistinct   Permalink

An Entity of Type : schema:ClaimReview, within Data Space : data.cimple.eu associated with source document(s)

AttributesValues
rdf:type
http://data.cimple...lizedReviewRating
schema:url
schema:text
  • ಫ್ಯಾಕ್ಟ್ಚೆಕ್: ಅಂಬೇಡ್ಕರ್ರವರ ಫೋಟೋವನ್ನು ಇರಿಸಿರುವುದು ಬೆಳಗಾವಿಯ ವಿಧಾನ ಪರಿಷತ್ತಿನಲ್ಲಿ, ಕೇಂದ್ರ ಸಂಸತ್ತಿನಲಲ್ಲ ಅಂಬೇಡ್ಕರ್ರವರ ಫೋಟೋವನ್ನು ಇರಿಸಿರುವುದು ಬೆಳಗಾವಿಯ ವಿಧಾನ ಪರಿಷತ್ತಿನಲ್ಲಿ, ಕೇಂದ್ರ ಸಂಸತ್ತಿನಲಲ್ಲ Claim :ಸಂಸತ್ತಿನ ಎಲ್ಲಾ ಆಸನಗಳ ಮೇಲೆ ಅಂಬೇಡ್ಕರ್ರವರ ಚಿತ್ರವನ್ನು ಇರಿಸಲಾಗಿದೆ Fact :ಕರ್ನಾಟಕದ ಬೆಳಗಾವಿಯಲ್ಲಿರುವ ವಿಧಾನ ಪರಿಷತ್ತಿನ ಚಿತ್ರವದು. ಕೇಂದ್ರ ಸಂಸತ್ತಿನದಲ್ಲ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಬಗ್ಗೆ ಕೇಂದ್ರ ಸಚಿವ ಅಮಿತ್ ಶಾ ಆಡಿರುವ ಅವಹೇಳನಕಾರಿ ಮಾತುಗಳನ್ನು ಖಂಡಿಸಿ ದೇಶದೆಲ್ಲೆಡೆ ಅಮಿತ್ ಶಾ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಡಿಸೆಂಬರ್ 18, 2024ರಂದು ಭಾರತೀಯ ಸಂವಿಧಾನದ 75 ವರ್ಷಗಳನ್ನು ಆಚರಿಸುವ ಸಂದರ್ಭದಲ್ಲಿ ರಾಜ್ಯಸಭೆಯಲ್ಲಿ ನಡೆದ ಚರ್ಚೆಯ ಸಂದರ್ಭದಲ್ಲಿ, ಕೇಂದ್ರ ಗೃಹ ಸಚಿವ ಅಮಿತ್ ಶಾರವರು ತಮ್ಮ ಹೇಳಿಕೆಗಳ ಮೂಲಕ ವಿವಾದವನ್ನು ಹುಟ್ಟುಹಾಕಿದರು. ಪ್ರತಿಪಕ್ಷಗಳಿಗೆ ಡಾ. ಬಿ. ಆರ್. ಅಂಬೇಡ್ಕರ್ ಅವರ ಹೆಸರನ್ನು ಜಪಿಸುವುದೇ ಫ್ಯಾಷನ್ ಆಗಿಬಿಟ್ಟಿದೆ ಎಂದು ಶಾ ಹೇಳಿಕೆಯನ್ನೀಡಿದ್ದರು. ಅಂಬೇಡ್ಕರ್ ಅವರ ಹೆಸರ ಬದಲು ಭಗವಾನ್ ರಾಮನ ಹೆಸರನ್ನು ಹೇಳಿದರೆ, ಅವರು ಸ್ವರ್ಗವನ್ನು ಪಡೆಯುತ್ತಾರೆ ಎಂದು ಅವರು ಟೀಕಿಸಿದರು. ಈ ಹೇಳಿಕೆಗೆ ವಿವಿಧ ವಲಯಗಳಿಂದ ಟೀಕೆ ವ್ಯಕ್ತವಾಗಿತ್ತು. ಇದೇ ಸಮಯದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಅಂಬೇಡ್ಕರ್ರವರಿಗೆ ಸಂಬಂಧಿಸಿದ ಕೆಲವು ಪೊಸ್ಟ್ಗಳು ವೈರಲ್ ಆಗುತ್ತಿವೆ. ʼಕೃಷ್ಣ ಪಟೇಲ್ʼ ಎಂಬ ಎಕ್ಸ್ ಖಾತೆದಾರ ʼभारतीय संसद की ये तश्वीर भारत का भूत,भविष्य, वर्तमान सब दिखा रही ʼ ಎಂಬ ಶೀರ್ಷಿಕೆಯೊಂದಿಗೆ ಚಿತ್ರವನ್ನು ಹಂಚಿಕೊಂಡಿದ್ದಾರೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಭಾರತೀಯ ಸಂಸತ್ತಿನ ಈ ಚಿತ್ರವು ಭಾರತದ ಭೂತ, ಭವಿಷ್ಯ ಮತ್ತು ವರ್ತಮಾನವನ್ನು ತೋರಿಸುತ್ತದೆʼ ಎಂದು ಬರೆದು ಪೊಸ್ಟ್ ಮಾಡಿರುವುದನ್ನು ನಾವು ನೋಡಬಹುದು. ವೈರಲ್ ಆದ ಪೋಸ್ಟ್ನ ಸ್ಕ್ರೀನ್ಶಾಟ್ನ್ನು ನೀವಿಲ್ಲಿ ನೋಡಬಹುದು ʼಲವ್ ದತ್ತʼ ಎಂಬ ಎಕ್ಸ್ ಖಾತೆದಾರ ತನ್ನ ಖಾತೆಯಲ್ಲಿ ʼBig Breaking.. Baba Sahab Ambedkar's photo on each & every Opposition bench in Rajya Sabha. Jai Bheemʼ ಎಂಬ ಶೀರ್ಷಿಕೆಯೊಂದಿಗೆ ವೈರಲ್ ಆದ ಚಿತ್ರವನ್ನು ಪೊಸ್ಟ್ ಮಾಡಿದ್ದಾರೆ. ಶೀರ್ಷಿಕೆಯನ್ನು ಕನ್ನಡದಲ್ಲಿ ಅನುವಾದಿಸಿದಾಗ ʼಬಿಗ್ ಬ್ರೇಕಿಂಗ್# ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ಸದಸ್ಯರ ಆಸನದ ಮೇಲೆ ಬಾಬಾಸಾಹೇಬ ಅಂಬೇಡ್ಕರ್ ಅವರ ಫೋಟೋವನ್ನಿಡಲಾಗಿದೆ. ಜೈ ಭೀಮ್ʼ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ʼದಲಿತ್ ಟೈಮ್ಸ್ʼ ಎಂಬ ಎಕ್ಸ್ ಖಾತೆದಾರರು ತಮ್ಮ ಖಾತೆಯಲ್ಲಿ ʼआज संसद की यह तस्वीर सोशल मीडिया पर सबसे ज़्यादा वायरल रही ! तस्वीर पर आप क्या कहेंगे कमेंट में बताइयेʼ ಎಂಬ ಶೀರ್ಷಿಕೆಯೊಂದಿಗೆ ಚಿತ್ರವನ್ನು ಹಂಚಿಕೊಂಡಿದ್ದಾರೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಇಂದು ಸಂಸತ್ತಿನ ಈ ಚಿತ್ರವು ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗಿದೆ! ಕಾಮೆಂಟ್ಗಳಲ್ಲಿ ನೀವು ಏನು ಹೇಳುತ್ತೀರಿ?ʼ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಮತ್ತಷ್ಟು ಪೋಸ್ಟ್ಗಳನ್ನು ನೀವಿಲ್ಲಿ, ಇಲ್ಲಿ, ಇಲ್ಲಿ ನೋಡಬಹುದು ಫ್ಯಾಕ್ಟ್ಚೆಕ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಸುದ್ದಿ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವಾಸ್ತವಾಗಿ ಬಾಬಾಸಾಹೇಬ ಅಂಬೇಡ್ಕರ್ ಅವರ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿದ ಅವಹೇಳನಾಕಾರಿ ಹೇಳಿಕೆಗಳನ್ನು ಖಂಡಿಸಿ ಕರ್ನಾಟಕದ ಕಾಂಗ್ರೆಸ್ ಶಾಸಕರು, ಸಚಿವರು ಸುವರ್ಣಸೌಧದಲ್ಲಿ ಅಂಬೇಡ್ಕರ್ ಭಾವಚಿತ್ರ ಹಿಡಿದು ಪ್ರತಿಭಟನೆ ನಡೆಸಿದ್ದಾರೆ. ವೈರಲ್ ಆದ ಚಿತ್ರ ತೆಗೆದದ್ದು ಸಂಸತ್ತಿನಲ್ಲಿ ಅಲ್ಲ ಕರ್ನಾಟಕ ಸುವರ್ಣಸೌಧದಲ್ಲಿ. ನಾವು ವೈರಲ್ ಆದ ಸುದ್ದಿಯ ಬಗ್ಗೆ ಸತ್ಯಾಂಶವನ್ನು ತಿಳಿಯಲು ನಾವು ವೈರಲ್ ಆದ ಚಿತ್ರವನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ, ಡಿಸಂಬರ್ 19,2024ರಲ್ಲಿ ʼಕರ್ನಾಟಕ ಪ್ಲಾನೆಟ್ʼ ಎಂಬ ವೆಬ್ಸೈಟ್ನಲ್ಲಿ ʼಅಂಬೇಡ್ಕರ್ ಪ್ರಭೆಯಿಂದ ಕಂಗೊಳಿಸಿದ ವಿಧಾನಸಭೆʼ ಎಂಬ ಶೀರ್ಷಿಕೆಯೊಂದಿಗೆ ವರದಿ ಮಾಡಿರುವುದನ್ನು ನೋಡಬಹುಹು. ವರದಿಯಲ್ಲಿ ʼಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅವಹೇಳನ ಮಾಡಿರುವುದನ್ನು ವಿರೋಧಿಸಿ ಆಡಳಿತ ಪಕ್ಷದ ಸದಸ್ಯರು ಸದನದಲ್ಲಿ ಪ್ರತಿಭಟನೆ ನಡೆಸಿದರು. ಈ ವೇಳೆ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಅಮಿತ್ ಶಾ ಅವರನ್ನು ಸಮರ್ಥಿಸಿ ಸದನದಿಂದ ಹೊರ ನಡೆದರು. ಬಳಿಕ ಆಡಳಿತ ಪಕ್ಷದ ಸದಸ್ಯರು ತಮ್ಮ ಆಸನಗಳ ಎದುರು ಅಂಬೇಡ್ಕರ್ ಅವರ ಭಾವಚಿತ್ರವನ್ನು ಅತ್ಯಂತ ಪ್ರೀತಿ ಮತ್ತು ಗೌರವದಿಂದ ಜೋಡಿಸಿಟ್ಟರು. ಆ ವೇಳೆ ಸದನ ಅಂಬೇಡ್ಕರ್ ಪ್ರಭೆಯಿಂದ ಕಂಗೊಳಿಸಿದ ದೃಶ್ಯ ಹೀಗಿದೆ.ʼ ಎಂದು ವರದಿ ಮಾಡಿರುವುದನ್ನು ನಾವು ನೋಡಬಹುದು. ಡಿಸಂಬರ್ 19,2024ರಂದು ʼಕರ್ನಾಟಕ ಕಾಂಗ್ರೆಸ್ʼ ಎಕ್ಸ್ ಖಾತೆಯಲ್ಲಿ ʼಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಅಪಮಾನಿಸಿ ಕೇಂದ್ರ ಗೃಹ ಸಚಿವ @AmitShah ನೀಡಿರುವ ಹೇಳಿಕೆಯನ್ನು ಖಂಡಿಸಿ ಕರ್ನಾಟಕದ ಕಾಂಗ್ರೆಸ್ ಶಾಸಕರು, ಸಚಿವರು ಸುವರ್ಣಸೌಧದಲ್ಲಿ ಅಂಬೇಡ್ಕರ್ ಭಾವಚಿತ್ರ ಹಿಡಿದು ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆ ಬಳಿಕ ಅಂಬೇಡ್ಕರ್ ಅವರ ಚಿತ್ರವನ್ನು ಸದಸ್ಯರ ಮುಂಭಾಗದ ಟೇಬಲ್ಗಳಲ್ಲಿ ಇರಿಸಲಾಗಿದ್ದು, ಸದನದ ತುಂಬ ಅಂಬೇಡ್ಕರ್ ಅವರ ಚಿತ್ರಗಳು ಕಂಗೊಳಿಸಿವೆ! ಎಂಬ ಶೀರ್ಷಿಕೆಯೊಂದಿಗೆ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ʼಸಂವಿಧಾನ ಶಿಲ್ಪಿ ಡಾ| ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರು ಅವಹೇಳನ ಮಾಡಿರುವುದನ್ನು ವಿರೋಧಿಸಿ ಸದನದಲ್ಲಿ ಇಂದು ಆಡಳಿತ ಪಕ್ಷದ ಸದಸ್ಯರ ಆಸನಗಳ ಎದುರು ಅಂಬೇಡ್ಕರರ ಭಾವಚಿತ್ರವಿಟ್ಟು ಪ್ರತಿಭಟನೆ ನಡೆಸಲಾಯಿತು.ʼ ಎಂಬ ಶೀರ್ಷಿಕೆಯನ್ನೀಡಿ ಚಿತ್ರವನ್ನು ಪೋಸ್ಟ್ ಮಾಡಿದ್ದನ್ನು ನಾವಿಲ್ಲಿ ನೋಡಬಹುದು. ಈಟಿವಿ ಭಾರತ್ ಕನ್ನಡ ವೆಬ್ಸೈಟ್ನಲ್ಲಿ ʼಅಂಬೇಡ್ಕರ್ ಕುರಿತ ಅಮಿತ್ ಶಾ ಹೇಳಿಕೆ: ವಿಧಾನಸಭೆಯಲ್ಲೂ ಕಾಂಗ್ರೆಸ್ ಶಾಸಕರಿಂದ ಪ್ರತಿಭಟನೆ - CONGRESS MLAS PROTESTʼ ಎಂಬ ಶೀರ್ಷಿಕೆಯನ್ನೀಡಿ ವರದಿ ಮಾಡಿರುವುದನ್ನು ನಾವಿಲ್ಲಿ ನೋಡಬಹುದು. ವರದಿಯಲ್ಲಿ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆಂದು ಗುರುವಾರ ವಿಧಾನಸಭೆಯಲ್ಲಿ ವಿಷಯ ಪ್ರಸ್ತಾಪಿಸಿ, ಆಡಳಿತ ಪಕ್ಷದ ಶಾಸಕರೇ ಪ್ರತಿಭಟನೆ ನಡೆಸಿದರು. ಸದನದ ಒಳಗೆ ಯಾವುದೇ ಭಿತ್ತಿಪತ್ತ ಹಾಗೂ ಭಾವಚಿತ್ರಗಳನ್ನು ಪ್ರದರ್ಶನ ಮಾಡುವಂತಿಲ್ಲ ಎಂದು ಸ್ಪೀಕರ್ ಖಾದರ್ ಹೇಳಿದರೂ ಸಹ ಕೇಳಿಸಿಕೊಳ್ಳದ ಕಾಂಗ್ರೆಸ್ ಶಾಸಕರು ಪ್ರತಿಭಟನೆಯನ್ನು ಮುಂದುವರೆಸಿದರು. ಆ ನಂತರವೂ ಕಾಂಗ್ರೆಸ್ ಶಾಸಕರು ಅಂಬೇಡ್ಕರ್ ಭಾವಚಿತ್ರ ಹಿಡಿದು ಪ್ರತಿಭಟನೆ ಮುಂದುವರೆಸಿದರು. ಜೈ ಭೀಮ್ ಘೋಷಣೆಗಳನ್ನು ಕೂಗಿದರು. ಸದನದಲ್ಲಿ ಕುಳಿತಿದ್ದು ಮುಖ್ಯಮಂತ್ರಿಯವರು ಅಂಬೇಡ್ಕರ್ ಅವರ ಭಾವಚಿತ್ರ ಹಿಡಿದು ತಮ್ಮ ಶಾಸಕರ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದರುʼ ಎಂಬ ಶೀರ್ಷಿಕೆಯೊಂದಿಗೆ ವರದಿ ಮಾಡಿದ್ದಾರೆ. ʼಮಾಸುಮ್ ರೇಜಾʼ ಎಂಬ ಎಕ್ಸ್ ಖಾತೆದಾರರು ತಮ್ಮ ಖಾತೆಯಲ್ಲಿ ʼअमित शाह जी, आपके लिए ये तस्वीर कर्नाटक की विधानसभा में- अंबेडकर.. अंबेडकर.. अंबेडकर.. अंबेडकर जय भीमʼ ಎಂಬ ಶೀರ್ಷಿಕೆಯನ್ನೀಡಿ ಪೋಸ್ಟ್ ಮಾಡಿದ್ದಾರೆ. ಮತ್ತಷ್ಟು ಹುಡುಕಾಟ ನಡೆಸಿದಾಗ ನಮಗೆ ಹಿಂದೂಸ್ತಾನ್ ಟೈಮ್ಸ್, ದಿ ನ್ಯೂಸ್ ಮಿನಿಟ್, ನ್ಯೂಸ್ ತಕ್ ವೆಬ್ಸೈಟ್ನಲ್ಲಿ ಮಾಡಿರುವ ವೈರಲ್ ಸುದ್ದಿಗೆ ಸಂಬಂಧಿಸಿದ ವರದಿಯನ್ನು ನೋಡಬಹುದು. ಇದರಿಂದ ಸಾಭೀತಾಗಿದ್ದೇನೆಂದರೆ, ವೈರಲ್ ಆದ ಸುದ್ದಿ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ ಎಂದು ಸ್ಪಷ್ಟವಾಯಿತು. ವೈರಲ್ ಆದ ಪೋಸ್ಟ್ ಕರ್ನಾಟಕದ ಬೆಳಗಾವಿಯಲ್ಲಿರುವ ವಿಧಾನ ಪರಿಷತ್ತಿನ ಚಿತ್ರವದು. ಕೇಂದ್ರ ಸಂಸತ್ತಿನದಲ್ಲ ಎಂದು ಸ್ಪಷ್ಟವಾಗಿದೆ.
schema:mentions
schema:reviewRating
schema:author
schema:datePublished
schema:inLanguage
  • Telugu
schema:itemReviewed
Faceted Search & Find service v1.16.115 as of Oct 09 2023


Alternative Linked Data Documents: ODE     Content Formats:   [cxml] [csv]     RDF   [text] [turtle] [ld+json] [rdf+json] [rdf+xml]     ODATA   [atom+xml] [odata+json]     Microdata   [microdata+json] [html]    About   
This material is Open Knowledge   W3C Semantic Web Technology [RDF Data] Valid XHTML + RDFa
OpenLink Virtuoso version 07.20.3238 as of Jul 16 2024, on Linux (x86_64-pc-linux-musl), Single-Server Edition (126 GB total memory, 11 GB memory in use)
Data on this page belongs to its respective rights holders.
Virtuoso Faceted Browser Copyright © 2009-2025 OpenLink Software