About: http://data.cimple.eu/claim-review/5b13fa685356b6dfa97e264610b2af1fb1f09ca93d77f9dd6c530c34     Goto   Sponge   NotDistinct   Permalink

An Entity of Type : schema:ClaimReview, within Data Space : data.cimple.eu associated with source document(s)

AttributesValues
rdf:type
http://data.cimple...lizedReviewRating
schema:url
schema:text
  • Authors Claim ಡೊನಾಲ್ಡ್ ಟ್ರಂಪ್ ಅವರು ರಾಹುಲ್ ಗಾಂಧಿಯನ್ನು ‘ಜಾರ್ಜ್ ಸೊರೊಸ್’ ಏಜೆಂಟ್ ಎಂದು ಕರೆದಿದ್ದಾರೆ, ಎಂಬಂತೆ ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೆಯನ್ನು ಹಂಚಲಾಗುತ್ತಿದೆ. ಫೇಸ್ಬುಕ್ ನಲ್ಲಿ ಕಂಡುಬಂದ ಹೇಳಿಕೆಯಲ್ಲಿ “ಅಮೇರಿಕಾದ ಹೊಸ ಅಧ್ಯಕ್ಷರಾದ ಟ್ರಂಪ್ ಅವರಿಗೆ ಶುಭಕೋರಿದ ರಾಹುಲ್ ಗಾಂಧಿಯನ್ನು ಅವರು ಅಣಕಿಸಿದ್ದು ಹೇಗೆ ಮತ್ತು ಏಕೆ ಗೊತ್ತಾ..?? ಇತ್ತೀಚೆಗೆ ಅಮೇರಿಕಾದಲ್ಲಿ ಅಧ್ಯಕ್ಷೀಯ ಚುನಾವಣೆಯ ಪ್ರಚಾರಕ್ಕಾಗಿ ಅತೀ ಹೆಚ್ಚು ಭಾರತೀಯ ಮೂಲದ ಮತಗಳನ್ನು ಹೊಂದಿರುವ ಅಮೇರಿಕಾದಲ್ಲಿ ಹಿಂದೂ ಬ್ರಾಂಡ್ ಪ್ರಯೋಗಿಸಲು ಮೋದಿಜಿಯನ್ನು ಕರೆಸಿದಂತೆ ಎಡಪಂಥೀಯ ಅಂದರೆ ಭಯೋತ್ಪಾದಕ ಸಂಘಟನೆಗಳ ಸಾಥ್ ಕೊಡುವವರ ಪ್ರಚಾರಕ್ಕಾಗಿ ರಾಹುಲ್ಗಾಂದಿ ಯನ್ನು ಅಮೇರಿಕಾ ಕರೆಸಿಕೊಂಡಿತ್ತು.ಈ ಪ್ರಚಾರದಲ್ಲಿ ಅಮೇರಿಕಾದ ನೆಲದಲ್ಲಿ ನಿಂತು ಭಾರತದ ಸನಾತನ ಧರ್ಮವನ್ನು ಹಾಗೂ ನರೇಂದ್ರ ಮೋದಿಜಿಯವರನ್ನು ಟೀಕಿಸುವ ಭರದಲ್ಲಿ ಇಡೀ ಭಾರತೀಯರ ಮಾನ ಹರಾಜು ಅಮೇರಿಕಾದಲ್ಲಿ ಮಾಡಿದ್ದ ರಾಹುಲ್ಗಾಂದಿಯನ್ನು ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಅವರು ಗೆಲ್ಲುತ್ತಿದ್ದಂತೆ ತೀಕ್ಷ್ಣವಾದ ಭಾಷೆಯಲ್ಲಿ ತಾನು ಉಂಡ ದೇಶಕ್ಕೆ ದ್ರೋಹ ಬಗೆಯುವವನು ಎಂಬರ್ಥದಲ್ಲಿ ರಾಹುಲ್ ಗಾಂಧಿಯನ್ನು ಟ್ರಂಪ್ ಕಾಲೆಳಿದಿದ್ದಾರೆ.” ಎಂಬ ಹೇಳಿಕೆಯೊಂದಿಗೆ ಡೊನಾಲ್ಡ್ ಟ್ರಂಪ್ ಅವರ ಟ್ವೀಟ್ ಎಂದ ಫೊಟೋ ಒಂದನ್ನು ಹಂಚಿಕೊಳ್ಳಲಾಗುತ್ತಿದೆ. Also Read: ವಕ್ಫ್ ಪ್ರಕರಣದಲ್ಲಿ ಸಚಿವ ಜಮೀರ್ ಅಹ್ಮದ್ಗೆ ರೈತರು ಘೇರಾವ್ ಹಾಕಿದರೇ, ನಿಜ ಏನು? ಈ ಹೇಳಿಕೆಯನ್ನು ಪರಿಶೀಲಿಸುವಂತೆ ನ್ಯೂಸ್ಚೆಕರ್ ವಾಟ್ಸಾಪ್ ಟಿಪ್ ಲೈನ್ (+91- 9999499044)ಗೆ ಸತ್ಯಶೋಧನೆ ನಡೆಸುವಂತೆ ಬಳಕೆದಾರರೊಬ್ಬರು ವಿನಂತಿಸಿಕೊಂಡಿದ್ದಾರೆ. ಅದನ್ನು ತನಿಖೆಗೆ ಅಂಗೀಕರಿಸಲಾಗಿದೆ. Fact ಸತ್ಯಶೋಧನೆಗಾಗಿ ನಾವು ಗೂಗಲ್ ನಲ್ಲಿ ಹುಡುಕಾಡಿದ್ದೇವೆ. “Donald Trump,” “Rahul Gandhi” ಮತ್ತು“George Soros” ಎಂಬ ಪದಗಳನ್ನು ಬಳಸಿ ಹುಡುಕಾಟ ನಡೆಸಿದ್ದು, ಚುನಾಯಿತ ಅಮೆರಿಕದ ಅಧ್ಯಕ್ಷರು ಅಂತಹ ಟೀಕೆ ಮಾಡಿದ್ದಾಗಿ ಹೇಳುವ ಯಾವುದೇ ವರದಿಗಳು ನಮಗೆ ಲಭ್ಯವಾಗಿಲ್ಲ. ಆ ಬಳಿಕ ವೈರಲ್ ಚಿತ್ರವನ್ನು ಎಚ್ಚರಿಕೆಯಿಂದ ವಿಶ್ಲೇಷಿಸಿದಾಗ, ರಾಹುಲ್ ಗಾಂಧಿಯವರ ಎಕ್ಸ್ ಪೋಸ್ಟ್ ಒಂದಕ್ಕೆ ಆ ವೈರಲ್ ಪ್ರತಿಕ್ರಿಯೆಯನ್ನು ಎಕ್ಸ್ ಖಾತೆ “@thedonaldtrumph.” ಇಂದ ಮಾಡಿರುವುದನ್ನು ಗಮನಿಸಿದ್ದೇವೆ. ಇದರಲ್ಲಿ ಟ್ರಂಪ್ ಸ್ಪೆಲ್ಲಿಂಗ್ ನಲ್ಲಿ ತಪ್ಪಾಗಿದೆ. ಗಮನಿಸಬೇಕಾದ ಅಂಶವೆಂದರೆ, ಡೊನಾಲ್ಡ್ ಟ್ರಂಪ್ ಅವರ ಅಧಿಕೃತ ಎಕ್ಸ್ ಖಾತೆ ” @realDonaldTrump” ಎಂಬುದಾಗಿದೆ. ಬಳಿಕ ನಾವು @thedonaldtrumph ಎಕ್ಸ್ ಖಾತೆಯನ್ನು ನೋಡಿದ್ದೇವೆ ಮತ್ತು ಅದು ಅಮೆರಿಕದ ಚುನಾಯಿತ ಅಧ್ಯಕ್ಷರನ್ನು ವಿಡಂಬಿಸುವ ಮಾಡುವ ಖಾತೆ ಎಂಬುದನ್ನು ಕಂಡುಕೊಂಡಿದ್ದೇವೆ. ಅದರ ವಿವರಣೆಯಲ್ಲಿ”ಯುನೈಟೆಡ್ ಸ್ಟೇಟ್ಸ್ ನ 47ನೇ ಅಧ್ಯಕ್ಷರ ಅಭಿಮಾನಿಗಳಿಂದ ನಿರ್ವಹಿಸಲ್ಪಡುವ ಖಾತೆ” ಎಂದಿದೆ. ಈ ಖಾತೆಯನ್ನು ಪರಿಶೀಲನೆ ನಡೆಸುವ ವೇಳೆ ಟ್ರಂಪ್ ರಾಹುಲ್ ಗಾಂಧಿಯನ್ನು ‘ಸೊರೊಸ್ ಏಜೆಂಟ್’ ಎಂದು ಕರೆದಿದ್ದಾರೆ ಎಂದು ಹೇಳಲು ಹಂಚಿಕೊಳ್ಳಲಾಗುತ್ತಿರುವ ಎಕ್ಸ್ ಪೋಸ್ಟ್ ಅನ್ನು ನಾವು ಗುರುತಿಸಿದ್ದೇವೆ. ‘ಅಶ್ವಿನಿ ಶ್ರೀವಾಸ್ತವ’ (@AshwiniSahaya) ಎಂಬವರನ್ನು ಈ @thedonaldtrumph ಖಾತೆಯ ರ್ವಾಹಕರು ಎಂದು ಗುರುತಿಸಲಾಗಿದೆ. ನವೆಂಬರ್ 6, 2024 ರಂದು ಎಕ್ಸ್ ಪೋಸ್ಟ್ನಲ್ಲಿ , ಅವರು ಅದನ್ನು ದೃಢಪಡಿಸಿದ್ದಾರೆ. “ಹಲೋ, ಎಲ್ಲರಿಗೂ! @thedonaldtrumph ಅವರಿಂದ ನರೇಂದ್ರ ಮೋದಿ, ರಾಹುಲ್ ಗಾಂಧಿ, @JustinTrudeau & Khalistanis ಅವರಿಗೆ ನನ್ನ ಪ್ರತ್ಯುತ್ತರಗಳು ಹೇಗಿವೆ ?ಕೆಲವರು ಈ ಖಾತೆಯನ್ನು @thedonaldtrumph ಅನ್ನು ಬಿಜೆಪಿ ಐಟಿ ಸೆಲ್ ನಡೆಸುತ್ತಿದೆ ಎಂದು ಹೇಳಿಕೊಳ್ಳುತ್ತಿದ್ದಾರೆ, ಆದರೆ ನಾನು ಖಂಡಿತವಾಗಿಯೂ ಐಟಿ ಸೆಲ್ನ ಭಾಗವಾಗಿಲ್ಲ…” ಎಂದಿದ್ದಾರೆ. ಈ ಸತ್ಯಶೋಧನೆ ಪ್ರಕಾರ ಡೊನಾಲ್ಡ್ ಟ್ರಂಪ್ ರಾಹುಲ್ ಗಾಂಧಿಯನ್ನು ‘ಸೊರೊಸ್ ಏಜೆಂಟ್’ ಎಂದು ಕರೆದಿದ್ದಾರೆ ಎಂದು ಹೇಳಲು ಟ್ರಂಪ್ ಅವರನ್ನು ವಿಡಂಬಿಸುವ ಖಾತೆಯಿಂದ ಮಾಡಲಾದ ಎಕ್ಸ್ ಪೋಸ್ಟ್ ಅನ್ನು ಹಂಚಿಕೊಳ್ಳಲಾಗಿದೆ ಎಂದು ಕಂಡುಬಂದಿದೆ. Also Read: ಜಮೀನು ಪಹಣಿಯಲ್ಲಿ ವಕ್ಫ್ ಹೆಸರು ನಮೂದಾದ್ದರಿಂದ ಹಾವೇರಿ ರೈತ ಆತ್ಮಹತ್ಯೆ? ಸತ್ಯ ಇಲ್ಲಿದೆ Result: False Our Sources X Account Of @thedonaldtrumph X Account Of @realDonaldTrump (ಈ ಲೇಖನವನ್ನು ಮೊದಲು ನ್ಯೂಸ್ಚೆಕರ್ ಇಂಗ್ಲಿಷ್ ನಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ) ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.
schema:mentions
schema:reviewRating
schema:author
schema:datePublished
schema:inLanguage
  • Hindi
schema:itemReviewed
Faceted Search & Find service v1.16.115 as of Oct 09 2023


Alternative Linked Data Documents: ODE     Content Formats:   [cxml] [csv]     RDF   [text] [turtle] [ld+json] [rdf+json] [rdf+xml]     ODATA   [atom+xml] [odata+json]     Microdata   [microdata+json] [html]    About   
This material is Open Knowledge   W3C Semantic Web Technology [RDF Data] Valid XHTML + RDFa
OpenLink Virtuoso version 07.20.3238 as of Jul 16 2024, on Linux (x86_64-pc-linux-musl), Single-Server Edition (126 GB total memory, 11 GB memory in use)
Data on this page belongs to its respective rights holders.
Virtuoso Faceted Browser Copyright © 2009-2025 OpenLink Software