About: http://data.cimple.eu/claim-review/5c2363b627b80f45d8e9c5925f9120f0591b5346bf23626506c1c8f5     Goto   Sponge   NotDistinct   Permalink

An Entity of Type : schema:ClaimReview, within Data Space : data.cimple.eu associated with source document(s)

AttributesValues
rdf:type
http://data.cimple...lizedReviewRating
schema:url
schema:text
  • ಫ್ಯಾಕ್ಟ್ಚೆಕ್: ಅಶ್ವಿನಿ ಪುನೀತ್ ರಾಜ್ಕುಮಾರ್ ಡೀಪ್ಫೇಕ್ ವಿಡಿಯೋ ವೈರಲ್ ಅಶ್ವಿನಿ ಪುನೀತ್ ರಾಜ್ಕುಮಾರ್ ಡೀಪ್ಫೇಕ್ ವಿಡಿಯೋ ವೈರಲ್ Claim :ಪುನೀತ್ ಪಾಜ್ಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜ್ಕುಮಾರ್ ಮರುಮದುವೆ ಮಾಡಿಕೊಳ್ಳಲಿದ್ದಾರೆ Fact :ವೈರಲ್ ಆದ ವಿಡಿಯೋದಲ್ಲಿ ಕಾಣುವುದು ಅಶ್ವಿನಿ ಪುನಿತ್ ರಾಜ್ ಕುಮಾರ್ ಅಲ್ಲ. ಈ ವಿಡಿಯೋವನ್ನು ಎಐ ಮೂಲಕ ರಚಿಸಲಾಗಿದೆ ಅಶ್ವಿನಿ ಪುನಿತ್ ರಾಜ್ಕುಮಾರ್ರವರು ಕನ್ನಡದ ಖ್ಯಾತ ನಟ, ನಿರ್ದೇಶಕ ಮತ್ತು ನಿರ್ಮಾಪಕ ಪುನೀತ್ ರಾಜಕುಮಾರ್ ರವರ ಧರ್ಮಪತ್ನಿ. 2021ರಲ್ಲಿ ಪತಿ ಪುನೀತ್ ಅಗಲಿಕೆಯ ನಂತರ ಪುನೀತ್ರವರ ಸ್ಥಾನವನ್ನು ಅಶ್ವಿನಿಯವರು ತುಂಬುತ್ತಿದ್ದಾರೆ. ರಾಜ್ಯದಲ್ಲಿ ನಡೆಯುವ ಪ್ರತಿ ಕಾರ್ಯಕ್ರಮದಲ್ಲೂ ಸಹ ಅಪ್ಪುಗೆ ನಮನ ಸಲ್ಲಿಸಲಾಗುತ್ತದೆ. ಅಶ್ವಿನಿ ಅವರು ಹಲವು ಕಾರ್ಯಕ್ರಮಗಳಿಗೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಅಶ್ವಿನಿ ಪುನೀತ್ರಾಜ್ಕುಮಾರ್ಗೆ ಸಂಬಂಧಿಸಿದ ವಿಡಿಯೋವೊಂದು ವೈರಲ್ ಆಗಿದೆ. ಯೋಗೇಂದ್ರ ಪ್ರಸಾದ್ ಎಂಬ ಎಕ್ಸ್ ಖಾತೆದಾರ ತನ್ನ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. 11 ಸೆಕೆಂಡ್ ಒಳಗೊಂಡ ವಿಡಿಯೋವಿನಲ್ಲಿ ಅಶ್ವಿನಿ ಪುನಿತ್ ರಾಜ್ಕುಮಾರ್ ಮತ್ತು ಯೋಗೇಂದ್ರ ಪ್ರಸಾದ್ ತಬ್ಬಿಕೊಳ್ಳುವುದನ್ನು ನಾವು ನೋಡಬಹುದು. ಈ ವಿಡಿಯೋಗೆ ಶೀರ್ಷಿಕೆಯಾಗಿ "'ಗಂಡ ಸತ್ತ ಮು** ಅಶ್ವಿನಿ ಪುನೀತ್ ರಾಜ್ ಕುಮಾರ್ಗೆ ಬಾಳು ಕೊಡಲು ನಿರ್ಧರಿಸಿದ್ದೇನೆ. 29 ಅಕ್ಟೋಬರ್ 2024 ರಂದು ನಾನು ವಿವಾಹವಾಗಲಿದ್ದೇನೆ. ದಯವಿಟ್ಟು ಅಪ್ಪು ಬಾಸ್ ಅಭಿಮಾನಿಗಳು ರಾಜವಂಶದ ಅಭಿಮಾನಿಗಳು ಎಲ್ಲರೂ ಬಂದು ಆಶೀರ್ವಾದ ಮಾಡಬೇಕು ಎಂದು ನಮ್ಮ ಸವಿನಯ ಆಮಂತ್ರಣ. ಸ್ಥಳ ʼಶ್ರೀ ಕಂಠೀರವನಗರ ಸ್ಟುಡಿಯೋಸ್, ನಾರ್ತ್ ವೆಸ್ಟ್ ಬೆಂಗಳೂರು #ಅಪ್ಪು #ರಾಜ್ಕುಮಾರ್ ಎಂದು ಬರೆದು ಪೋಸ್ಟ್ ಮಾಡಿರುವುದನ್ನು ಕಾಣಬಹುದು. ಎಕ್ಸ್ ಖಾತೆಯಲ್ಲಿ ಕೇವಲ 100 ಫಾಲೋವರ್ಸ್ ಹೊಂದಿರುವ ಯೋಗೇಂದ್ರ ಪ್ರಸಾದ್ ಎಂಬ ಹೆಸರಿನ ಈ ವ್ಯಕ್ತಿ ತಾನು ರಾಜವಂಶದ ಅಭಿಮಾನಿ ಎಂದು ಹೇಳಿಕೊಂಡಿದ್ದಾನೆ. ಅಲ್ಲದೆ ತಾನು ಚಿತ್ರನಟ ಹಾಗೂ ರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಳ, ಬಿನ್ನಿ ಪೇಟೆ ಘಟಕದ ಅಧ್ಯಕ್ಷ ಎಂದು ತನ್ನ ಬಯೋನಲ್ಲಿ ಹಾಕಿಕೊಂಡಿರುವುದನ್ನು ಗಮನಿಸಬಹುದು. https://x.com/Yogendra_prk/status/1829092805756567903?t=0y-HFXKoaebhboB9Ln9KLA&s=08 ಆಗಸ್ಟ್ 27, 2024ರಂದು ಪ್ರಳಯಾಂತಕ ಎಂಬ ಎಕ್ಸ್ ಖಾತೆದಾರ ತನ್ನ ಖಾತೆಯಲ್ಲಿ ಇದೇ ಫೋಟೋವನ್ನು ಹಂಚಿಕೊಂಡು ಶೀರ್ಷಿಕೆಯಾಗಿ "ಪುನಿತ್ ಸರ್ ಹೋದಮೇಲೆ ಅಶ್ವಿನಿ ಮೇಡಂ. ಒಬ್ಬರೆ ಆಗಿದ್ದರು ಅವರಿಗೆ ಲೈಫ್ ಕೊಟ್ಟ ಅಣ್ಣ ನಿಮಗೆ ನಮಸ್ಕಾರ. ನಿಮ್ಮ ಹೊಸ ಜೀವನಕ್ಕೆ ಒಳ್ಳೆಯದ್ದಾಗಲಿ @Ashwini_PRK ಮೇಡಂ ನಿವು ಆರಾಮಾಗಿರಿ ಇವರ ಜೊತೆ #ಪುನೀತ್ರಾಜ್ಕುಮಾರ್ ಸರ್ ನಿಮಗೆ ಮೇಲಿಂದ ಆಶೀರ್ವಾದ ಮಾಡುತ್ತಾರೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. Puneeth sir hodamele Ashwini madam. Obbare agidru avarige life kottide anna nimge 🙏🙏❤️— ಪ್ರಳಯಾಂತಕ (@kichchaMallu12) August 27, 2024 Nimm hosa jeevan ke olleyadu agli @Ashwini_PRK madam aramse eri Ivar jote #PuneethRajkumar sir nimge mela gade enda ashirvad madatare 🙏#appu #PuneethRajkumar pic.twitter.com/mxWyxhlAnG Nam Dodmane Sose @Ashwini_PRK Nodi Ganda Illa Anta Yashtu Forward Agavare🙏— 𝗣𝘂𝗻𝗲𝗲𝘁𝗵 𝗥𝗮𝗷𝗸𝘂𝗺𝗮𝗿 𝗙𝗮𝗻🙏 (@AppuFan7999) August 29, 2024 Nave Appu Fans DBoss Fansge Hige Edit Madi Anta Heli Troll Madistidivi Idu Nam Appu Fans ತಾಕತ್ Suppa💪🗿🥂🔥#PuneethRajkumar #Ashwini #Yogendra #DBoss #BossOfSandalwood #Sudeep #yash #YuvaRajkumar pic.twitter.com/jkXYg4HVRe ಫ್ಯಾಕ್ಟ್ಚೆಕ್ ವೈರಲ್ ಆದ ವಿಡಿಯೋದಲ್ಲಿ ಯಾವುದೇ ಸತ್ಯಾಂಶವಿಲ್ಲ. ವೈರಲ್ ಆದ ವಿಡಿಯೋದಲ್ಲಿ ಕಾಣಿವುದು ಅಶ್ವಿನಿ ಪುನೀತ್ರಾಜ್ಕುಮಾರ್ ಅಲ್ಲ. ಈ ವಿಡಿಯೋವನ್ನು ಎಐ ಮೂಲಕ ರಚಿಸಲಾಗಿದೆ. ನಟಿ ರಶ್ಮಿಕಾ ಮಂದಣ್ಣ, ಕತ್ರಿನಾ ಕೈಫ್ ನಂತರ ಇದೀಗ ಬಾಲಿವುಡ್ ನ ಹಿರಿಯ ನಟಿ ಕಾಜೋಲ್ ಅವರ ಡೀಪ್ ಫೇಕ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ರಶ್ಮಿಕಾ ಮಂದಣ್ಣ ಅವರ ಡೀಪ್ ಫೇಕ್ ವಿಡಿಯೋ ವೈರಲ್ ಆದಾಗ ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್, ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಸೇರಿದಂತೆ ಹಲವು ಗಣ್ಯರು ಖಂಡಿಸಿದ್ದರು. 17ನೇ ಆವೃತ್ತಿಯ ಐಪಿಎಲ್ ಆರಂಭಕ್ಕೂ ಮುನ್ನ ನಡೆದ ಆರ್ಸಿಬಿ ಜೆರ್ಸಿ ಅನಾವರಣ ಕಾರ್ಯಕ್ರಮದಲ್ಲಿ ಪುನೀತ್ ರಾಜ್ಕುಮಾರ್ ಅವರಿಗೆ ಫ್ರಾಂಚೈಸಿ ವಿಶೇಷ ಗೌರವ ಸಲ್ಲಿಸಿತ್ತು. ಇದಾದ ಬಳಿಕ ನಡೆದ ಪಂದ್ಯಗಳಲ್ಲಿ ಆರ್ಸಿಬಿ ತಂಡವು ಸರಣಿ ಸೋಲುಗಳನ್ನು ಕಂಡಿತ್ತು. ಅಶ್ವಿನಿ ಪುನೀತ್ ರಾಜ್ಕುಮಾರ್ ಜರ್ಸಿ ಲಾಂಚ್ ಮಾಡಿದ್ದೇ ಕಾರಣ ಎಂದು ಆಗಲೂ ಕೆಟ್ಟದಾಗಿ ಕಾಮೆಂಟ್ ಮಾಡಿದ್ದರು. ನಾವು ವೈರಲ್ ವಿಡಿಯೋವನ್ನು ಎಐ ಡಿಟೆಕ್ಟರ್ ಆಪ್ನಲ್ಲಿ ಹುಡುಕಿದಾಗ ಈ ವಿಡಿಯೋ ಡೀಫ್ಫೇಕ್ ವಿಡಿಯೋ ಎಂದು ತಿಳಿಯಿತು. ಎಐ ಡಿಟೆಕ್ಟರ್ ಆಪ್ನ ಪ್ರಕಾರ 98%ದಷ್ಟು ವೈರಲ್ ಆದ ವಿಡಿಯೋದಲ್ಲಿ ಡೀಫ್ಫೇಕ್ ಇದೆ ಎಂದು ಫಲಿತಾಂಶ ಬಂದಿರುವುದನ್ನು ನಾವು ನೋಡಬಹುದು. ವೈರಲ್ ಆದ ವಿಡಿಯೋವಿನಲ್ಲಿ ಸತ್ಯಾಂಶವನ್ನು ತಿಳಿಯಲು ನಾವು ವಿಡಿಯೋವಿನಲ್ಲಿರುವ ಕೆಲವು ಪ್ರಮುಖ ಫ್ರೇಮ್ಗಳನ್ನು ಉಪಯೋಗಿಸಿ ನಾವು ಗೂಗಲ್ ರಿವರಸ್ ಸರ್ಚ್ ಮಾಡಿದೆವು. ಹುಡುಕಾಟದಲ್ಲಿ ನಮಗೆ ಕೆಲವು ಕನ್ನಡ ಮಾಧ್ಯಮ ಸಂಸ್ಥೆಗಳು ಅಶ್ವಿನಿ ಪುನೀತ್ರಾಜ್ಕುಮಾರ್ ಅವರ ವಿಡಿಯೋ ಡೀಪ್ಫೇಕ್ ಎಂದು ವರದಿ ಮಾಡಿರುವುದನ್ನು ನಾವು ನೋಡಬಹುದು. ಅಷ್ಟೇ ಅಲ್ಲ, ಅಶ್ವಿನಿ ಪುನೀತ್ ರಾಜ್ಕುಮಾರ್ ಅವರ ಡೀಪ್ಫೇಕ್ ವಿಡಿಯೋ ನೋಡಿ ಕಿಡಿಕಾರಿರುವ ನೆಟ್ಟಿಗರು ಕಠಿಣ ಕ್ರಮಕ್ಕೆ ಆಗ್ರಹಿಸಿ ಬೆಂಗಳೂರು ನಗರ ಪೊಲೀಸರನ್ನು ಟ್ಯಾಗ್ ಮಾಡಿದ್ದಾರೆ. ಕೂಡಲೇ ಈ ದುರುಳನನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ ಎಂದು ವರದಿ ಮಾಡಲಾಗಿದೆ. ಡೀಫ್ಫೇಕ್ ತಂತ್ರಜ್ಞಾನವನ್ನು 21ನೇ ಶತಮಾನದ ಫೋಟೋಶಾಪ್ ಮೂಲಕ ನ ಉತ್ತರದಾಯಿ ಎಂದು ಹೇಳಲಾಗುತ್ತಿದೆ. ಕೃತಕ ಬುದ್ದಿಮತ್ತೆಯ ಸಹಾಯದಿಂದ ಯಾರದ್ದೋ ದೇಹಕ್ಕೆ ಯಾರದ್ದೋ ತಲೆಯನ್ನು ಫೋಟೋ ಎಡಿಟಿಂಗ್ ಟೂಲ್ ಮೂಲಕ ಜೋಡಿಸಲಾಗುತ್ತದೆ. ಇದು ಫೋಟೋ ಫಾರ್ಮ್ಯಾಟ್ ನಲ್ಲಿದ್ದರೆ ನೋಡುಗರಿಗೆ ಸಾಮಾನ್ಯವಾಗಿ ಸ್ವಲ್ಪವಾದರೂ ಅನುಮಾನ ಬರುತ್ತದೆ. ಆದರೆ ಈ ಡೀಪ್ ಫೇಕ್ ತಂತ್ರಜ್ಞಾನದಲ್ಲಿ ಯಾವುದೇ ಅನುಮಾನ ಬಾರದಂತೆ ಫೋಟೋ ಅಲ್ಲ ವಿಡಿಯೋವನ್ನೇ ಸೃಷ್ಟಿ ಮಾಡಲಾಗುತ್ತದೆ. ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಮತ್ತು ಮೆಷಿನ್ ಲರ್ನಿಂಗ್ ತಂತ್ರಜ್ಞಾನ ನೆರವಿನಿಂದ ಮಾರ್ಫಿಂಗ್ ವಿಡಿಯೋ, ಫೋಟೋಗಳು ಸೃಷ್ಟಿ ಮಾಡುವುದಕ್ಕೆ ಡೀಪ್ಫೇಕ್ ಎಂದು ಕರೆಯುತ್ತಾರೆ. ಹೀಗಾಗಿ ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ಕಿಡಿಗೇಡಿಯೋರ್ವ ಅಶ್ವಿನಿ ಪುನೀತ್ರಾಜ್ಕುಮಾರ್ ಅವರ ಡೀಪ್ಫೇಕ್ ವಿಡಿಯೋ ಹರಿಬಿಟ್ಟಿದ್ದಾನೆ. ಈ ವಿಡಿಯೋವನ್ನು ಎಐ ಮೂಲಕ ರಚಿಸಲಾಗಿದೆ ಎಂದು ಸಾಭೀತಾಗಿದೆ.
schema:mentions
schema:reviewRating
schema:author
schema:datePublished
schema:inLanguage
  • Telugu
schema:itemReviewed
Faceted Search & Find service v1.16.115 as of Oct 09 2023


Alternative Linked Data Documents: ODE     Content Formats:   [cxml] [csv]     RDF   [text] [turtle] [ld+json] [rdf+json] [rdf+xml]     ODATA   [atom+xml] [odata+json]     Microdata   [microdata+json] [html]    About   
This material is Open Knowledge   W3C Semantic Web Technology [RDF Data] Valid XHTML + RDFa
OpenLink Virtuoso version 07.20.3238 as of Jul 16 2024, on Linux (x86_64-pc-linux-musl), Single-Server Edition (126 GB total memory, 5 GB memory in use)
Data on this page belongs to its respective rights holders.
Virtuoso Faceted Browser Copyright © 2009-2025 OpenLink Software