About: http://data.cimple.eu/claim-review/610b5c587b67acbab84119208f744b3f694ea8b7905e6c34cd5df7ce     Goto   Sponge   NotDistinct   Permalink

An Entity of Type : schema:ClaimReview, within Data Space : data.cimple.eu associated with source document(s)

AttributesValues
rdf:type
http://data.cimple...lizedReviewRating
schema:url
schema:text
  • Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check Contact Us: checkthis@newschecker.in Fact checks doneFOLLOW US Fact Check Claim ಕಾಲಿನ ಅಡಿಯಲ್ಲಿ ಟೆನ್ನಿಸ್ ಬಾಲ್ ಅನ್ನು ಇಟ್ಟು 5 ನಿಮಿಷಗಳ ಕಾಲ ರೋಲ್ ಮಾಡುವುದರಿಂದ ಕಾಲು ನೋವು ಮತ್ತು ಬೆನ್ನು ನೋವು ನಿವಾರಣೆಯಾಗುತ್ತದೆ Fact ಉತ್ತಮವಾಗಿ ಮಸಾಜ್ ಮಾಡುವುದರಿಂದ ಸ್ನಾಯು ನೋವು ಶಮನವಾಗುತ್ತದೆ ಎಂಬುದು ತಿಳಿದುಬಂದಿದೆ. ಈ ಅಭ್ಯಾಸಕ್ಕೆ ಮಯೋಫೇಸಿಯಲ್ ರಿಲೀಸ್ ಎಂದು ವೈಜ್ಞಾನಿಕ ಹೆಸರಿದೆ. ಇದಕ್ಕೆ ಫೋಮ್ ರೋಲರ್ ಬಳಸುತ್ತಾರೆ. ಆದರೆ, ಫೋಮ್ ರೋಲರ್ ಗಳ ಬದಲಾಗಿ ಟೆನ್ನಿಸ್ ಬಾಲ್ಗಳನ್ನು ಉಪಯೋಗಿಸಬಹುದು ಎಂಬುದಕ್ಕೆ ಯಾವುದೇ ವೈಜ್ಞಾನಿಕ ಸಂಶೋಧನಾ ವರದಿಗಳು ಲಭ್ಯವಿಲ್ಲ ಕಾಲಿನ ಅಡಿಯಲ್ಲಿ ಟೆನ್ನಿಸ್ ಬಾಲ್ ಇಟ್ಟು ತಿರುಗಿಸುವುದರಿಂದ ಕಾಲು ನೋವು-ಬೆನ್ನು ನೋವು ಇಲ್ಲವಾಗುತ್ತದೆ ಎಂಬ ಕ್ಲೇಮ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಈ ಕುರಿತು ಫೇಸ್ಬುಕ್ನಲ್ಲಿ ಕಂಡುಬಂದ ಕ್ಲೇಮ್ ಒಂದು “ಕಾಲಿನ ಅಡಿಯಲ್ಲಿ ಟೆನ್ನಿಸ್ ಬಾಲ್ ಅನ್ನು ಇಟ್ಟು 5 ನಿಮಿಷಗಳ ಕಾಲ ರೋಲ್ ಮಾಡುವುದರಿಂದ ಕಾಲು ನೋವು ಮತ್ತು ಬೆನ್ನು ನೋವು ನಿವಾರಣೆಯಾಗುತ್ತದೆ” ಎಂದು ಹೇಳಿದೆ. ಈ ಕುರಿತು ಸತ್ಯಶೋಧನೆಯನ್ನು ನ್ಯೂಸ್ಚೆಕರ್ ನಡೆಸಿದ್ದು, ಇದು ಭಾಗಶಃ ತಪ್ಪು ಎಂದು ಕಂಡುಕೊಂಡಿದೆ. ಟೆನ್ನಿಸ್ ಬಾಲ್ ಅನ್ನು ಕಾಲಿನ ಅಡಿಯಲ್ಲಿ ಇಟ್ಟು 5 ನಿಮಿಷ ತಿರುಗಿಸುವುದರಿಂದ ಕಾಲಿನ ಮತ್ತು ಬೆನ್ನಿನ ನೋವು ಕಡಿಮೆಯಾಗುತ್ತದೆ ಎನ್ನುವುದಕ್ಕೆ ಯಾವುದೇ ವೈಜ್ಞಾನಿಕ ಸಾಕ್ಷ್ಯಗಳು ಲಭ್ಯವಾಗಿಲ್ಲ. ಆದರೆ ಕೆಲವೊಂದು ವೆಬ್ಸೈಟ್ಗಳು ಟೆನ್ನಿಸ್ ಬಾಲನ್ನು ತಿರುಗಿಸುವುದು ನೋವು ನಿವಾರಣೆಗೆ ಪರಿಣಾಮಕಾರಿಯಾಗುತ್ತವೆ ಎಂಬುದನ್ನು ಹೇಳಿದ್ದು ಕಂಡುಬಂದಿದೆ. ಈ ವೆಬ್ಸೈಟ್ಗಳು ಟೆನ್ನಿಸ್ ಬಾಲನ್ನು ತಿರುಗಿಸುವುದು ಮಸಾಜ್, ಆಕ್ಯುಪ್ರೆಶರ್ ಮತ್ತು ರಿಫ್ಲೆಕ್ಸೋಲಜಿಯ ತತ್ವಗಳನ್ನು ಒಳಗೊಂಡಿರುತ್ತದೆ ಎಂಬುದನ್ನು ಎತ್ತಿ ಹೇಳಿವೆ. ಇದು ಸ್ನಾಯು ನೋವುಗಳನ್ನು ನಿವಾರಿಸಲು ನೆರವು ನೀಡುತ್ತದೆ ಎಂದಿದೆ. ಈ ವ್ಯಾಯಾಮದ ಹಿಂದಿನ ವೈಜ್ಞಾನಿಕತೆಯ ಬಗ್ಗೆ ವೆಬ್ಸೈಟ್ಗಳಲ್ಲಿರುವ ಲೇಖನದಲ್ಲಿ ತಿಳಿಸಲಾಗಿದೆ. ಬಾಲನ್ನು ಉಳಿಸುವುದರಿಂದ ಗುರುತ್ವಾಕರ್ಷಣೆಯು ಒತ್ತಡವನ್ನು ಎಳೆದುಕೊಳ್ಳಲು ಸಹಾಯ ಮಾಡುತ್ತದೆ. ಇದರಿಂದ ಟೆನ್ನಿಸ್ ಬಾಲ್ ಕೆಲವೊಂದು ಕೇಂದ್ರಗಳಲ್ಲಿ ಒತ್ತಿದಂತಾಗುತ್ತದೆ. ಇದರಿಂದ ಸ್ನಾಯು ಒತ್ತಡ ಮತ್ತು ರಕ್ತದ ಪರಿಚಲನೆ ಸುಧಾರಿಸುತ್ತದೆ. ಈ ಪ್ರಕ್ರಿಯೆ ಮಸಾಜ್ ಮಾಡುವವರು ಗಂಟು ಬಿಡಿಸುವಂತೆ ಭಾಸವಾಗುತ್ತದೆ. Also Read: ವಾಲ್ನಟ್ನಿಂದಾಗಿ ವೀರ್ಯದ ಗುಣಮಟ್ಟ ವೃದ್ಧಿಯಾಗುತ್ತಾ? ಈ ಬಗ್ಗೆ ನಾವು ಇನ್ನಷ್ಟು ಪರಿಶೀಲನೆ ನಡೆಸಿದ್ದು, ಉತ್ತಮವಾಗಿ ಮಸಾಜ್ ಮಾಡುವುದರಿಂದ ಸ್ನಾಯು ನೋವು ಶಮನವಾಗುತ್ತದೆ ಎಂಬುದು ತಿಳಿದುಬಂದಿದೆ. ಈ ಅಭ್ಯಾಸಕ್ಕೆ ಮಯೋಫೇಸಿಯಲ್ ರಿಲೀಸ್ ಎಂದು ವೈಜ್ಞಾನಿಕ ಹೆಸರಿದೆ. ಈ ಮಸಾಜ್ ಅವಧಿಯಲ್ಲಿ ಥೆರಪಿಸ್ಟ್ಗಳು, ಕೈರೋಪ್ರಾಕ್ಟರ್ಗಳು ಮಸಾಜ್ ಮಾಡಿ, ಸ್ನಾಯುಗಳನ್ನು ಹಿಗ್ಗಿಸಿ ನೋವನ್ನು ಕಡಿಮೆ ಮಾಡುತ್ತಾರೆ. ಆದಾಗ್ಯೂ ಕೆಲವೊಂದು ಉಪಕರಣಗಳ ನೆರವಿನೊಂದಿಗೆ ಮಯೋಫೇಸಿಯಲ್ ಮಸಾಜ್ಗಳನ್ನು (ನೋವು ನಿವಾರಕ) ನಾವೇ ಮಾಡಬಹುದು. ಇಂತಹ ಅಭ್ಯಾಸವನ್ನು ಸೆಲ್ಫ್ ಮಯೋಫೇಶಿಯಲ್ ರಿಲೀಸ್ (ಎಸ್ಎಂಆರ್) ಎಂದು ಕರೆಯುತ್ತಾರೆ. ಎಸ್ಎಂಆರ್ನಲ್ಲಿ ಇದಕ್ಕಾಗಿ ಸಾಮಾನ್ಯವಾಗಿ ಬಳಸುವ ಉಪಕರಣ ಎಂದರೆ ಫೋಮ್ ರೋಲರ್ ಆಗಿರುತ್ತದೆ. ಫೋಮ್ ರೋಲರ್ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹೇಳಿದ ಟೆನ್ನಿಸ್ ಬಾಲ್ ರೀತಿಯೇ ಉಪಯೋಗಿಸಲಾಗುತ್ತದೆ. ಆದರೆ, ಫೋಮ್ ರೋಲರ್ ಗಳ ಬದಲಾಗಿ ಟೆನ್ನಿಸ್ ಬಾಲ್ಗಳನ್ನು ಉಪಯೋಗಿಸಬಹುದು ಎಂಬುದಕ್ಕೆ ಯಾವುದೇ ವೈಜ್ಞಾನಿಕ ಸಂಶೋಧನಾ ವರದಿಗಳು ಲಭ್ಯವಿಲ್ಲ. ಈ ಸತ್ಯಶೋಧನೆ ಪ್ರಕಾರ, ಕಾಲಿನ ಅಡಿಯಲ್ಲಿ ಟೆನ್ನಿಸ್ ಬಾಲ್ ಇಟ್ಟು ತಿರುಗಿಸುವುದರಿಂದ ಕಾಲು ನೋವು-ಬೆನ್ನು ನೋವು ಇಲ್ಲವಾಗುತ್ತದೆ ಎಂಬ ಕ್ಲೇಮ್ ಭಾಗಶಃ ತಪ್ಪಾಗುತ್ತದೆ. Our Sources: How to Use a Tennis Ball to Relieve Back Pain – Minnesota Spine Institute How A Tennis Ball Can Help with Pain Management (internationalpain.org) How to Use Tennis Ball to Relieve Sciatic Pain and Back Pain (healthyandnaturalworld.com) Effects of self-myofascial release: A systematic review – PubMed (nih.gov) INYBI: A New Tool for Self-Myofascial Release of the Suboccipital Muscles in Patients With Chronic Non-Specific Neck Pain: A Randomized Controlled Trial – PubMed (nih.gov) An Acute Bout of Self-Myofascial Release in the Form of Foam Rolling Improves Performance Testing – PMC (nih.gov) Benefits of a self-myofascial release program on health-related quality of life in people with fibromyalgia: a randomized controlled trial – PubMed (nih.gov) Effect of Self-myofascial Release on Reduction of Physical Stress: A Pilot Study – PMC (nih.gov) (PDF) The Evidence Behind Foam Rolling: A Review (researchgate.net) Comparing the effects of self-myofascial release with static stretching on ankle range-of-motion in adolescent athletes – PubMed (nih.gov) Do Self-Myofascial Release Devices Release Myofascia? Rolling Mechanisms: A Narrative Review | SpringerLink (This article has been published in collaboration with THIP Media) ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.
schema:mentions
schema:reviewRating
schema:author
schema:datePublished
schema:inLanguage
  • Hindi
schema:itemReviewed
Faceted Search & Find service v1.16.115 as of Oct 09 2023


Alternative Linked Data Documents: ODE     Content Formats:   [cxml] [csv]     RDF   [text] [turtle] [ld+json] [rdf+json] [rdf+xml]     ODATA   [atom+xml] [odata+json]     Microdata   [microdata+json] [html]    About   
This material is Open Knowledge   W3C Semantic Web Technology [RDF Data] Valid XHTML + RDFa
OpenLink Virtuoso version 07.20.3238 as of Jul 16 2024, on Linux (x86_64-pc-linux-musl), Single-Server Edition (126 GB total memory, 5 GB memory in use)
Data on this page belongs to its respective rights holders.
Virtuoso Faceted Browser Copyright © 2009-2025 OpenLink Software