About: http://data.cimple.eu/claim-review/7a21e2ffb0c2913f33698b2b42da1801cd9609d395445fabc5b3ca9d     Goto   Sponge   NotDistinct   Permalink

An Entity of Type : schema:ClaimReview, within Data Space : data.cimple.eu associated with source document(s)

AttributesValues
rdf:type
http://data.cimple...lizedReviewRating
schema:url
schema:text
  • ಫ್ಯಾಕ್ಟ್ಚೆಕ್: ಅಯೋಧ್ಯೆಯ ರಾಮಮಂದಿರವ ಕುರಿತು ಚಲನಚಿತ್ರವೊಂದು ಪ್ರದರ್ಶನಗೊಳ್ಳಲಿದೆ ಎಂಬ ಸುದ್ದಿಯ ಅಸಲಿಯತ್ತೇನು? ಅಯೋಧ್ಯೆಯ ರಾಮಮಂದಿರವ ಕುರಿತು ಚಲನಚಿತ್ರವೊಂದು ಪ್ರದರ್ಶನಗೊಳ್ಳಲಿದೆ ಎಂಬ ಸುದ್ದಿಯ ಅಸಲಿಯತ್ತೇನು? Claim :ಅಯೋಧ್ಯೆಯ ರಾಮಮಂದಿರವ ಕುರಿತು ಸಿನಿಮವೊಂದು ನಿರ್ಮಾಣವಾಗುತ್ತಿದೆ. Fact :ಸಾಮಾಜಿಕ ಜಾಲತಾಣದಲ್ಲಿ ಕಂಡುಬರುವ ವಿಡಿಯೋ ಅಯೋಧ್ಯೆಯ ರಾಮಮಂದಿರಕ್ಕೆ ಸಂಬಂಧಿಸಿದ್ದು ಅಲ್ಲ. 2018ರಲ್ಲಿ ಸನ್ನಿ ಡಿಡೊಲ್ ನಟನೆಯ ʼಮೊಹಲ್ಲಾ ಅಸ್ಸಿʼ ಸಿನಿಮಾಗೆ ಸಂಬಂಧಿಸಿದ್ದು. ಅಯೋಧ್ಯೆಯ ರಾಮಮಂದಿರದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಟಾಪನೆ ಇತ್ತೀಚಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ಅದ್ದೂರಿಯಾಗಿ ನಿರ್ವಹಿಸಿದರು. ಪ್ರಾಣ ಪ್ರತಿಷ್ಟಾಪನೆಯ ಭಾಗವಾಗಿ 8000ಕ್ಕೂ ಅಧಿಕ ಗಣ್ಯಾತಿಗಣ್ಯರು ಹಾಜರಾಗಿದ್ದರು. ಪ್ರತಿಷ್ಟಾಪನೆಯ ನೇರ ಪ್ರಸಾರವನ್ನು ಕೋಟ್ಯಾದಿ ಜನರು ವೀಕ್ಷಿಸಿದ್ದರು. ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಅಯೋಧ್ಯೆಯ ರಾಮಮಂದಿರವ ಕುರಿತು ಸಾಕಷ್ಟು ವಿಷಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಅಯೋಧ್ಯೆಯ ರಾಮಮಂದಿರದ ಮೇಲೆ ಸಿನಿಮಾವೊಂದು ಚಿತ್ರೀಕರಿಸಲಾಗುತ್ತಿದೆ ಎಂಬ ಸುದ್ದಿ ವೈರಲ್ ಆಗಿದೆ. “अयोध्या राम मंदिर युद्ध पर बनी न्यू मूवी” ಎಂಬ ಶೀರ್ಷಿಕೆಯೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗಿದೆ. ಶೀರ್ಷಿಕೆಯನ್ನು ಅನುವಾದಿಸಿದಾಗ, ಅಯೋಧ್ಯೆಯಲ್ಲಿ ಚಿತ್ರೀಕರಿಸುತ್ತಿರುವ ಚಿತ್ರವಿದುʼ ಎಂಬ ಶೀರ್ಷಿಕೆಯನ್ನೊಳಗೊಂಡಿದೆ. ವಿಡಿಯೋ-01 1990ರಲ್ಲಿ ಅಯೋದ್ಯೆಯಲ್ಲಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಲು ಸನ್ನಿ ಡಿಯೋಲ್ ಮನೆಯಿಂದ ಹೊರಬರುತ್ತಿರುವ ದೃಶ್ಯವನ್ನು ಈ ವಿಡಿಯೋದಲ್ಲಿ ನೋಡಬಹುದು. ವಿಡಿಯೋ-02 ಈ ವಿಡಯೋದಲ್ಲಿ ಅಯೋಧ್ಯೆಯ ರಾಮಮಂದಿರದವ ಕುರಿತು ಬೀದಿಯಲ್ಲಿ ಅನೇಕರು ಚರ್ಚಿಸುತ್ತಿರುವುದನ್ನು ಈ ದೃಶ್ಯದಲ್ಲಿ ನೋಡಬಹುದು. ಅಷ್ಟೇ ಅಲ್ಲ ಬೀಡಿಗಳಲ್ಲಿ ನಡೆದ ಬೃಹತ್ ರ್ಯಾಲಿಯಲ್ಲಿ ಜನರು ʼಜೈ ಶ್ರೀರಾಮ್" ಎಎಂಬ ಘೋಷಣೆಗಳೊಂದಿಗೆ ಸಾಗುತ್ತಿರುವುದನ್ನು ನಾವು ಈ ಎರಡನೇ ವಿಡಿಯೋದಲ್ಲಿ ನೋಡಬಹುದು. ಫ್ಯಾಕ್ಟ್ಚೆಕ್ ವೈರಲ್ ಆದ ವಿಡಿಯೋದಲ್ಲಿ ಸತ್ಯಾಂಶವಿಲ್ಲ. ವೈರಲ್ ಆದ ವಿಡಿಯೋ 2018ರದ್ದು, ನಟ ಸನ್ನಿ ಡಿಯೋಲ್ ನಟನೆಯ "ಮೊಹಲ್ಲಾ ಅಸ್ಸಿ" ಸಿನಿಮಾದ ತುಣುಕು. ನಾವು ವೈರಲ್ ಆದ ಎರಡೂ ವಿಡಿಯೋವನ್ನು ಪರಿಶೀಲಿಸಿದೆವು. ಎರಡೂ ವಿಡಿಯೋವನಲ್ಲರುವ ಕೆಲವು ಕೀ ಫ್ರೇಮ್ಗಳನ್ನು ಗೂಗಲ್ ರಿವರ್ಸ್ ಇಮೇಜ್ ರಿಸರ್ಚ್ ಮೂಲಕ ಹುಡುಕಿದೆವು. ಫಲಿತಾಂಶವಾಗಿ ನಮಗೆ ಯೂಟ್ಯೂಬ್ ಚಾನೆಲ್ "ಜೋರ್ದಾರ್ ಟ್ರೆಂಡಿಂಗ್ ಮೂವಿಸಿ" ಚಾನೆಲ್ನಲ್ಲಿ ಅಕ್ಟೊಬರ್ 15,2022 ರಲ್ಲಿ “भगवान को तो छोड़ दो सालो | Sunny Deol Best Dialogue | Mohalla Assi” ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವೊಂದು ಅಪ್ಲೋಡ್ ಆಗಿತ್ತು. ಮೊಹನ್ ಅಸ್ಸಿ ಎಂಬ ಹೆಸರಿನಲ್ಲಿರುವ ಯೂಟ್ಯೂಬ್ ಚಾನೆಲ್ನ್ನು ಹುಡುಕಿದಾಗ ನಮಗೆ "ಬಾಲಿವುಡ್ ಮೂವಿಸ್" ಎಂಬ ಯೂಟ್ಯೂಬ್ ಚಾನೆಲ್ನಲ್ಲಿ ಸಿನಿಮಾ ಪೂರ್ತಿ ಅಪ್ಲೋಡ್ ಆಗಿತ್ತು. ವಿಡಿಯೋಗೆ ಶೀರ್ಷಿಕೆಯಾಗಿ “Mohalla Assi (Full HD Movie) – Sunny Deol II Sakshi Tanwar II Ravi Kishan II Saurabh Shukla" ಎಂಬ ಟೈಟಲ್ನೊಂದಿಗೆ 2020ರಲ್ಲಿ ಹಂಚಿಕೊಂಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ಕಂಡುಬರುವ ಸಾಕಷ್ಟು ವಿಡಿಯೋವಿನ ತುಣುಕುಗಳನ್ನು ನಾವು ಈ ಚಿತ್ರದಲ್ಲಿ ನೋಡಬಹುದು. ಇನ್ನು ಮೊಹಲ್ಲಾ ಅಸ್ಸಿ ಚಿತ್ರವನ್ನು ಪ್ರಸಿದ್ದ ಹಿಂದಿ ಕಾದಂಬರಿಗಾರ ಡಾಕ್ಟರ್ ಕಾಶಿ ನಾಥ್ ಸಿಂಗ್ ರಚನೆಯ ಕಾದಂಬರಿ ಆಧಾರಿತ "ಕಾಶಿ ಕಾ ಅಸ್ಸಿ" ಕಾದಂಬರಿಯಿಂದ ಆಧರಿಸಲಾಗಿದೆ. ಈ ಚಿತ್ರ ಆನ್ಲೈನ್ನಲ್ಲೂ ಲಭ್ಯವಿದೆ. ಈ ಚಿತ್ರ ಬಿಡುಗಡೆಗೊಳ್ಳುವುದಕ್ಕೆ ಸಾಕಷ್ಟು ಅಡೆತಡೆಗಳೂ ಸಹ ಎದುರಾಗಿತ್ತು. ಹಿಂದಿ.ನ್ಯೂಸ್18.ಕಾಂ ವರದಿಯ ಪ್ರಕಾರ 2018ರಲ್ಲಿ ಸನ್ನಿ ಡಿಯೋಲ್ ನಟನೆಯ ಈ ಚಿತ್ರ ಆತನ ಕೆರಿಯರ್ನಲ್ಲೆ ದೊಡ್ಡ ಫ್ಲಾಪ್ ಚಿತ್ರ ಎಂದು ವರದಿ ಮಾಡಿದೆ. ಮೊಹಲ್ಲಾ ಅಸ್ಸಿ ಚಿತ್ರವನ್ನು ಚಿತ್ರೀಕರಿಸಲು ಚಿತ್ರತಂಡ ಸತತ 5 ವರ್ಷಗಳು ತೆಗೆದುಕೊಂಡಿತ್ತು. ಬರೋಬ್ಬರಿ 20 ಕೋಟಿ ವೆಚ್ಚದಲ್ಲಿ ತಯಾರಾಗಿತ್ತು ಈ ಚಿತ್ರ. ಚಿತ್ರದ ಟ್ರೈಲರ್ 2015ರಲಿ ಬಿಡುಗಡೆಗೊಂಡಿತು, ಜೊತೆಗೆ ಚಿತ್ರದ ಹೆಚ್ಡಿ ಪ್ರಿಂಟ್ನ್ನು ಸಹ ಹಂಚಿಕೊಳ್ಳಲಾಯಿತು. ಆದರೆ ಏಪ್ರಿಲ್ 2016ರಲ್ಲಿ ಸಿಬಿಎಫ್ಸಿ ಈ ಚಿತ್ರವನ್ನು ಬಹಿಷ್ಕಾರ ಮಾಡಿತ್ತು. ನಂತರ 2018ರಲ್ಲಿ ಹೈಕೋರ್ಟ್ ಈ ಚಿತ್ರದ ಮೇಲಿದ್ದ ನಿಷೇಧವನ್ನು ತೊಲಗಿಸಿತು. ಹೀಗಾಗಿ ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಕಂಡುಬರುವ ವಿಡಿಯೋ ಅಯೋಧ್ಯೆಯ ರಾಮಮಂದಿರಕ್ಕೆ ಸಂಬಂಧಿಸಿದ್ದು ಅಲ್ಲ. 2018ರಲ್ಲಿ ಸನ್ನಿ ಡಿಡೊಲ್ ನಟನೆಯ ʼಮೊಹಲ್ಲಾ ಅಸ್ಸಿʼ ಸಿನಿಮಾಗೆ ಸಂಬಂಧಿಸಿದ್ದು.
schema:reviewRating
schema:author
schema:datePublished
schema:inLanguage
  • Telugu
schema:itemReviewed
Faceted Search & Find service v1.16.115 as of Oct 09 2023


Alternative Linked Data Documents: ODE     Content Formats:   [cxml] [csv]     RDF   [text] [turtle] [ld+json] [rdf+json] [rdf+xml]     ODATA   [atom+xml] [odata+json]     Microdata   [microdata+json] [html]    About   
This material is Open Knowledge   W3C Semantic Web Technology [RDF Data] Valid XHTML + RDFa
OpenLink Virtuoso version 07.20.3238 as of Jul 16 2024, on Linux (x86_64-pc-linux-musl), Single-Server Edition (126 GB total memory, 11 GB memory in use)
Data on this page belongs to its respective rights holders.
Virtuoso Faceted Browser Copyright © 2009-2025 OpenLink Software