schema:text
| - ಫ್ಯಾಕ್ಟ್ಚೆಕ್: ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಐಷಾರಾಮಿ ಕಾರು ಖರೀದಿಸಿದ್ದಾರೆ ಎಂದು ಸರ್ಕಾರಿ ವಾಹನದ ವಿಡಿಯೋ ಹಂಚಿಕೆ
ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಐಷಾರಾಮಿ ಕಾರು ಖರೀದಿಸಿದ್ದಾರೆ ಎಂದು ಸರ್ಕಾರಿ ವಾಹನದ ವಿಡಿಯೋ ಹಂಚಿಕೆ
Claim :
ಸಿಎಂ ರೇಖಾ ಗುಪ್ತಾರವರು ಅಧಿಕಾರ ವಹಿಸಿಕೊಂಡ ತಕ್ಷಣ 50 ಲಕ್ಷದ ಐಷಾರಾಮಿ ಕಾರನ್ನು ಖರೀದಿಸುತ್ತಾರೆFact :
ಅರವಿಂದ್ ಕೇಜ್ರಿವಾಲ್ ಅವರು ಮುಖ್ಯಮಂತ್ರಿ ಆಗಿದ್ದಾಗ ಖರೀದಿಸಿರುವುದು ಸರ್ಕಾರಿ ವಾಹನವಿದುರೇಖಾ ಗುಪ್ತಾ ಅವರು ಫೆಬ್ರವರಿ 19, 2025 ರಂದು ದೆಹಲಿಯ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಇದರ ಬೆನ್ನಲ್ಲೇ ರೇಖಾ ಗುಪ್ತಾರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯೊಂದು ವೈರಲ್ ಆಗುತ್ತಿದೆ. ವೈರಲ್ ಆದ ವಿಡಿಯೋವಿನಲ್ಲಿ ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅಧಿಕಾರ ವಹಿಸಿಕೊಂಡ 48 ಗಂಟೆಗಳಲ್ಲಿ ಕಪ್ಪು ಬಣ್ಣದ ಎಮ್ಜಿ ಗ್ಲೋಸ್ಟರ್ ಹೆಸರಿನ ಐಷಾರಾಮಿ ಕಾರನ್ನು ಖರೀದಿಸಿದ್ದಾರೆ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಬೋನೆಟ್ನಲ್ಲಿ ಗವರ್ನ್ಮೆಂಟ್ ಆಫ್ ದಿಲ್ಲಿ ಎಂಬ ಫಲಕವಿರುವುದನ್ನು ಕಪ್ಪು ಬಣ್ಣದ ಕಾರಿನಲ್ಲಿ ತೋರಿಸಲಾಗಿದ್ದು, ದೆಹಲಿಯ ರಸ್ತೆಯಲ್ಲಿ ಇದು ಸಂಚರಿಸುತ್ತಿದೆ ಎಂದು ಬರೆದುಕೊಂಡಿದ್ದಾರೆ.
ಫೆಬ್ರವರಿ 22, 2025ರಂದು ʼಪ್ರೇಮ್ ಕುಮಾರ್ʼ ಎಂಬ ಎಕ್ಸ್ ಬಳಕೆದಾರರೊಬ್ಬರು ʼCM बनने के 48 घंटे के भीतर 50 लाख की कार| मुख्यमंत्री रेखा गुप्ता 'शीश महल' नहीं जाएंगी| सड़क पर ही 'शीश महल' बनवाएंगी। नई सीएम और नई कार के लिए एकसमान वाक्य- गीत के बोल| हाँ तुम बिल्कुल वैसी हो | जैसा मैंने सोचा था|ʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼದೆಹಲಿ ಮುಖ್ಯಮಂತ್ರಿಯಾದ 48 ಗಂಟೆಯಲ್ಲಿ 50 ಲಕ್ಷ ಮೌಲ್ಯದ ಎಂಜಿ ಗ್ಲೋಸ್ಟರ್ ಕಾರ್ನ್ನು ಖರೀದಿಸಿದ್ದಾರೆ ರೇಖಾ ಗುಪ್ತಾ. ಇನ್ನು ಮುಂದೆ ಇದೇ ಕಾರನ್ನು ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ಬಳಕೆ ಮಾಡಲಿದ್ದಾರೆ, ಅವರು ಶೀಷ್ ಮಹಲ್ಗೆ ಹೋಗುವುದಿಲ್ಲ. ರಸ್ತೆಯಲ್ಲೇ 'ಶೀಶ್ ಮಹಲ್' ನಿರ್ಮಿಸಿಕೊಳ್ಳುತ್ತಾರೆ. ಹೊಸ ಸಿಎಂ ಮತ್ತು ಹೊಸ ಕಾರಿಗೆ ಇದೇ ರೀತಿಯ ವಾಕ್ಯಗಳು - ಹಾಡಿನ ಸಾಹಿತ್ಯ: 'ಹೌದು ನೀವು ನಾವು ಊಹಿಸಿದಂತೆಯೇ ಇದ್ದೀರಿʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ವೈರಲ್ ಆದ ಸುದ್ದಿಯ ಸ್ಕ್ರೀನ್ಶಾಟ್ನ್ನು ನೀವಿಲ್ಲಿ ನೋಡಬಹುದು
ಫೆಬ್ರವರಿ 23, 2025ರಂದು ʼಎಎನ್ಸಿ ಭಾರತ್ ನ್ಯೂಸ್ʼ ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ दिल्ली की नई सीएम रेखा गुप्ता की 50 लाख की कार वायरल... ಎಂಬ ಶೀರ್ಷಿಕೆಯೊಂದಿಗೆ ಕಪ್ಪು ಬಣ್ಣದ ಕಾರಿನ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼದೆಹಲಿಯ ನೂತನ ಮುಖ್ಯಮಂತ್ರಿ ರೇಖಾ ಗುಪ್ತಾ ಅವರ 50 ಲಕ್ಷ ರೂಪಾಯಿ ಮೌಲ್ಯದ ಕಾರು ವೈರಲ್...ʼ ಎಂಬ ಶಿರ್ಷಿಕೆಯೊಂದಿಗಿರುವುದನ್ನು ನಾವು ಕಂಡುಕೊಂಡೆವು.
ತನ್ಮಯ್ ಎಂಬ ಎಕ್ಸ್ ಖಾತೆದಾರ ʼKejriwal vs Rekha Gupta. As soon as #RekhaGupta became the Chief Minister of Delhi, She first bought a Car worth ₹50 lakh for herself. Arvind Kejriwal has a Car worth ₹20 lakhs. And the Hypocracy #Kejriwal's ₹20 lakh car was one of the #BJP's issues in the #DelhiElections2025ʼ ಎಂಬ ಶಿರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼರೇಖಾಗುಪ್ತ ದೆಹಲಿಯ ಅಧಿಕಾರ ಕೈಗೆತ್ತಿಕೊಂಡೊಡನೆ ರೂ 50 ಲಕ್ಷ ಮೌಲ್ಯದ ಐಷಾರಾಮಿ ಕಾರನ್ನು ಖರೀದಿಸಿದ್ದಾರೆ. ಅರವಿಂದ್ ಕೇಜ್ರಿವಾಲ್ ಬಳಿ ರೂ 20 ಮೌಲ್ಯದ ಕಾರಿತ್ತು. ಕೇಜ್ರಿವಾಲ್ 20 ಲಕ್ಷ ಮೌಲ್ಯದ ಕಾರು ಹೊಂದಿದ್ದರುʼ ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ
Kejriwal vs Rekha Gupta
— তন্ময় l T͞anmoy l (@tanmoyofc) February 22, 2025
📍As soon as #RekhaGupta became the Chief Minister of Delhi, She first bought a Car worth ₹50 lakh for herself.
📍Arvind Kejriwal has a Car worth ₹20 lakhs.
𝐀𝐧𝐝 𝐓𝐡𝐞 𝐇𝐲𝐩𝐨𝐜𝐫𝐚𝐜𝐲#Kejriwal's ₹20 lakh car was one of the #BJP's issues in… pic.twitter.com/5ZX2bRqGYsಮತ್ತೊಬ್ಬ ಎಕ್ಸ್ ಬಳಕೆದಾರ ʼದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ 50 ಲಕ್ಷ ರೂಪಾಯಿ ಬೆಲೆಬಾಳುವ ಕಾರಿನಲ್ಲಿ ಸುತ್ತಾಡುತ್ತಿದ್ದಾರೆ. ಅವರು ಬಂದ ತಕ್ಷಣ ತೆರಿಗೆದಾರರ ಹಣವನ್ನು ವ್ಯರ್ಥ ಮಾಡಲು ಪ್ರಾರಂಭಿಸಿದ್ದಾರೆʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
दिल्ली की मुख्यमंत्री रेखा गुप्ता 50 लाख की कार में घूम रही है।
— Rajneesh Ram Tripathi Official (@officialrajnesh) February 22, 2025
इन्होंने आते हो टैक्स पेयर्स का पैसा बर्बाद करना शुरू कर दिया है। pic.twitter.com/1H8IVnQVXO
ವೈರಲ್ ಅದ ಸುದ್ದಿ ಸಾಮಾಜಿಕ ಜಾಲತಾಣದ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವೈರಲ್ ಆದ ಕಾರುನ್ನು ಆಗಿನ ದೆಹಲಿ ಮುಖ್ಯಮಂತ್ರಿ ಎಎಪಿ ನಾಯಕ ಅರವಿಂದ್ ಕೇಜ್ರಿವಾಲ್ ಮತ್ತು ನಂತರ 2025ರಲ್ಲಿ ಗುಪ್ತಾ ಅಧಿಕಾರ ವಹಿಸಿಕೊಳ್ಳುವ ಮೊದಲು ಅತಿಶಿ ಬಳಸುತ್ತಿದ್ದರು.
ನಾವು ವೈರಲ್ ಆದ ಸುದ್ದಿಯ ಬಗ್ಗೆ ಸತ್ಯಾಂಶವನ್ನು ತಿಳಿಯಲು ವೈರಲ್ ಆದ ವಿಡಿಯೋವಿನ ಕೆಲವು ಪ್ರಮುಖ ಕೀಫ್ರೇಮ್ಗಳನ್ನು ಬಳಸಿ ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ಫೆಬ್ರವರಿ 20, 2025ರಂದು ʼಐಎಎನ್ಎಸ್ʼ ಸುದ್ದಿ ಸಂಸ್ಥೆ ತನ್ನ ಎಕ್ಸ್ ಖಾತೆಯಲ್ಲಿ ʼDelhi: CM security arrived to escort Rekha Gupta, for the official proceedingsʼ ಎಂಬ ಶಿರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವರದಿಯ ಪ್ರಕಾರ ಈ ಹಿಂದಿನ ಮುಖ್ಯಮಂತ್ರಿಗಳು ಬಳಸುತ್ತಿದ್ದ ಇದೇ ಕಾರಿನಲ್ಲಿ ಗುಪ್ತಾ ತಮ್ಮ ಭದ್ರತಾ ಸಿಬ್ಬಂದಿಯೊಂದಿಗೆ ಪ್ರಮಾಣವಚನ ಕಾರ್ಯಕ್ರಮಕ್ಕೆ ಬಂದಿರುವುದು ಸಾಭೀತಾಗಿದೆ. ಇದರಿಂದ ತಿಳಿಯುವುದೇನೆಂದರೆ ರೇಖಾ ಗುಪ್ತಾರವರು ಯಾವುದೇ ಹೊಸ ಕಾರನ್ನು ಖರೀದಿಸಿಲ್ಲ.
Delhi: CM security arrived to escort Rekha Gupta, for the official proceedings pic.twitter.com/vacTfUmeAY
— IANS (@ians_india) February 20, 2025
ಮತ್ತಷ್ಟು ಮಾಹಿತಿಯನ್ನು ಕಲೆಹಾಕಲು ನಾವು ವೈರಲ್ ಆದ ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದೆವು. ಇದರಲ್ಲಿ ಎಂಜಿ ಗ್ಲೋಸ್ಟರ್ ಕಾರ್ ಸ್ಪಷ್ಟವಾಗಿ ಕಂಡು ಬಂದಿದ್ದು, ಇದರ ನೋಂದಣಿ ಸಂಖ್ಯೆ ‘DL11CM0001’ ಆಗಿರುವುದನ್ನು ನಾವು ಗಮನಿಸಿದೆವು.
ನಂತರ ನಾವು ಕಾರಿನಲ್ಲಿ ಕಂಡುಬರುವ ನಂಬರ್ ಪ್ಲೇಟ್ - DL11CM0001 ಬಳಸಿ ಆರ್ಟಿಒ ವೆಹಿಕಲ್ ಇನ್ಷರ್ಮೇಷನ್.ಕಾಂ ಎಂಬ ವೆಬ್ಸೈಟ್ನಲ್ಲಿ ನೋಂದಣಿ ವಿವರಗಳನ್ನು ಹುಡುಕಿದೆವು, ಹುಡುಕಾಟದಲ್ಲಿ ನಮಗೆ ಈ ಕಾರು ಏಪ್ರಿಲ್ 22, 2022 ನೋಂದಣಿ ದಿನಾಂಕದೊಂದಿಗೆ MG ಗ್ಲೋಸ್ಟರ್ ಎಂದು ಗುರುತಿಸಲ್ಪಟ್ಟಿದೆ. ಈ ಕಾರನ್ನು ಮಾಲ್ ರೋಡ್ ದಿಲ್ಲಿಯಲ್ಲಿ ನೋಂದಾಣಿಸಲಾಗಿದೆ ಎಂದು ನಾವು ಕಂಡುಕೊಂಡೆವು.
ವೈರಲ್ ಆಗಿರುವ ಈ ವೀಡಿಯೊದ ಕಾಮೆಂಟ್ ವಿಭಾಗದಲ್ಲಿ, ಅನೇಕ ಬಳಕೆದಾರರು ಈ ಕಾರನ್ನು ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಅವಧಿಯಲ್ಲಿ ಖರೀದಿಸಲಾಗಿದೆ ಎಂದು ಹೇಳಿದ್ದಾರೆ. ನಾವು ಮತ್ತಷ್ಟು ಸತ್ಯಾಂಶವನ್ನು ತಿಳಿಯಲು ಸಂಬಂಧಿತ ಕೀವರ್ಡ್ಗಳ ಮೂಲಕ ನಾವು ಅದನ್ನು ತನಿಖೆ ಮಾಡಿದಾಗ, ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಅತಿಶಿ ಮರ್ಲೆನಾ ಅವರು ವಿವಿಧ ಸಂದರ್ಭಗಳಲ್ಲಿ ಈ ಕಾರನ್ನು ಬಳಸುತ್ತಿರುವ ಹಲವಾರು ಹಳೆಯ ವೀಡಿಯೊಗಳು ನಮಗೆ ಕಂಡುಬಂದಿವೆ. ಇದರಿಂದ ಸಾಭೀತಾಗಿದ್ದೇನೆಂದರೆ ದೆಹಲಿ ಸರ್ಕಾರದ ಮುಖ್ಯಮಂತ್ರಿಗಳು ಈಗಾಗಲೇ ಕಾರನ್ನು ಬಳಸುತ್ತಿದ್ದರು ಎಂದು ಸಾಭೀತಾಗಿದೆ.
ಕೇಜ್ರಿವಾಲ್ ಮುಖ್ಯಮಂತ್ರಿಯಾಗಿದ್ದಾಗ ಅದೇ ವಾಹನವನ್ನು ಬಳಸುತ್ತಿರುವುದನ್ನು ತೋರಿಸುವ 2022 ರ ದೃಶ್ಯಗಳನ್ನು ಸುದ್ದಿ ವರದಿಗಳಲ್ಲಿ ಪ್ರಕಟಿಸಲಾಗಿದೆ ಎಂದು ನಾವು ಕಂಡುಕೊಂಡೆವು.
#WATCH | Delhi CM Arvind Kejriwal arrived at the residence of Lt Governor Vinai Kumar Saxena for the weekly meeting pic.twitter.com/9isa9y9ZIc
— ANI (@ANI) July 29, 2022ಏಪ್ರಿಲ್ 16, 2023 ರಂದು ಎಎನ್ಐ ಟ್ವೀಟ್ ನಮಗೆ ಕಂಡುಬಂದಿದೆ, ಅದರಲ್ಲಿ ಆಗಿನ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅದೇ ಕಾರಿನಲ್ಲಿ ಮುಖ್ಯಮಂತ್ರಿ ಭವನಕ್ಕೆ ಆಗಮಿಸುತ್ತಿರುವುದನ್ನು ನೋಡಬಹುದು.
#UPDATE | Delhi CM Arvind Kejriwal leaves the CBI office after nine hours of questioning in the liquor policy case. https://t.co/6KTfu5RB8H pic.twitter.com/yHVay3w7uM
— ANI (@ANI) April 16, 2023ಫೆಬ್ರವರಿ 9, 2025 ರಂದು ಪ್ರಕಟವಾದ ʼಎಎನ್ಐʼಯ ವೀಡಿಯೊ ವರದಿಯ ಪ್ರಕಾರ ದೆಹಲಿ ಚುನಾವಣೆಯಲ್ಲಿ ಎಎಪಿ ಸೋತ ನಂತರ ರಾಜೀನಾಮೆ ಸಲ್ಲಿಸಲು ಅತಿಶಿ ಅದೇ ನಂಬರ್ ಪ್ಲೇಟ್ ಹೊಂದಿರುವ ಅದೇ ವಾಹನದಲ್ಲಿ ತೆರಳಿದ್ದರು ಎಂಬುದು ವರದಿಯಾಗಿದೆ.
#WATCH | Delhi CM Atishi leaves from her residence. She will go to Raj Niwas to submit her resignation
— ANI (@ANI) February 9, 2025
BJP emerged victorious in #DelhiAssemblyElection2025 yesterday after winning 48 out of 70 seats pic.twitter.com/OrioFVtJeR
ಇದರಿಂದ ಸಾಭೀತಾಗಿದ್ದೇನೆಂದರೆ, ವೈರಲ್ ಅದ ಸುದ್ದಿ ಸಾಮಾಜಿಕ ಜಾಲತಾಣದ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವೈರಲ್ ಆದ ಕಾರುನ್ನು ಆಗಿನ ದೆಹಲಿ ಮುಖ್ಯಮಂತ್ರಿ ಎಎಪಿ ನಾಯಕ ಅರವಿಂದ್ ಕೇಜ್ರಿವಾಲ್ ಮತ್ತು ನಂತರ 2025ರಲ್ಲಿ ಗುಪ್ತಾ ಅಧಿಕಾರ ವಹಿಸಿಕೊಳ್ಳುವ ಮೊದಲು ಅತಿಶಿ ಬಳಸುತ್ತಿದ್ದರು. ಈ ಕಾರನ್ನು ಅರವಿಂದ್ ಕೇಜ್ರಿವಾಲ್ ಅವರು ಮುಖ್ಯಮಂತ್ರಿ ಆಗಿದ್ದಾಗ ಖರೀದಿಸಿರುವುದು ಹಲವು ವರದಿಗಳಿಂದ ಸ್ಪಷ್ಟವಾಗಿದೆ.
|