About: http://data.cimple.eu/claim-review/818ba59e7cb1fdef800f16b79bf20bc86f357c0d63257866227a2560     Goto   Sponge   NotDistinct   Permalink

An Entity of Type : schema:ClaimReview, within Data Space : data.cimple.eu associated with source document(s)

AttributesValues
rdf:type
http://data.cimple...lizedReviewRating
schema:url
schema:text
  • Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check Contact Us: checkthis@newschecker.in Fact checks doneFOLLOW US Fact Check Claim: ಚಿಕ್ಕಿ ತಿನ್ನುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ, ಒಳ್ಳೆ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ Fact: ಚಿಕ್ಕಿ ತಿನ್ನುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ ಎನ್ನುವುದನ್ನು ಖಚಿತ ಪಡಿಸುವಂತೆ ವೈಜ್ಞಾನಿಕ ಸಾಕ್ಷ್ಯಗಳು ಲಭ್ಯವಿಲ್ಲ ಚಿಕ್ಕಿ ತಿನ್ನುವುದರಿಂದ ಕೆಟ್ಟ ಕೊಲೆಸ್ಟರಾಲ್ ಕಡಿಮೆಯಾಗುತ್ತದೆ ಎಂಬ ಪೋಸ್ಟ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿದೆ. ಫೇಸ್ಬುಕ್ನಲ್ಲಿ ಕಂಡುಬಂದ ಈ ಕ್ಲೇಮ್ ಹೀಗಿದೆ. ಶೇಂಗಾ ಬರ್ಫಿ (ಚಿಕ್ಕಿ) ತಿನ್ನುವುದರಿಂದ ಚರ್ಮದ ತೊಂದರೆಗಳು ನಿವಾರಣೆಯಾಗುತ್ತದೆ ಮತ್ತು ಕೆಟ್ಟ ಕೊಲೆಸ್ಟರಾಲ್ ಅನ್ನು ಕಡಿಮೆ ಮಾಡಿ, ದೇಹದಲ್ಲಿ ಉತ್ತಮ ಕೊಲೆಸ್ಟರಾಲ್ ಅನ್ನು ಹೆಚ್ಚಿಸುತ್ತದೆ. ಈ ಕುರಿತು ನ್ಯೂಸ್ಚೆಕರ್ ಸತ್ಯಶೋಧನೆ ನಡೆಸಿದ್ದು, ಇದೊಂದು ತಪ್ಪಾದ ಸಂದರ್ಭ ಎಂದು ತಿಳಿದುಬಂದಿದೆ. ಕೊಲೆಸ್ಟ್ರಾಲ್ ಎನ್ನುವುದು ಒಂದು ರೀತಿಯ ಕೊಬ್ಬು ಆಗಿದ್ದು, ದೇಹ ಸಾಮಾನ್ಯವಾಗಿ ಕಾರ್ಯವೆಸಗಲು ಅಗತ್ಯವಾಗಿದೆ. ಆದರೆ ಇದು ತುಂಬಾ ಹೆಚ್ಚಾದರೆ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ಎಲ್ಡಿಎಲ್ ಕೊಲೆಸ್ಟರಾಲ್ ಇರುವುದನ್ನು ಕೆಟ್ಟ ಕೊಲೆಸ್ಟರಾಲ್ ಎಂದು ಕರೆಯುತ್ತೇವೆ. “ಕೆಟ್ಟ” ಕೊಲೆಸ್ಟ್ರಾಲ್ ಅಂದರೆ, ಹೆಚ್ಚಿನ ಮಟ್ಟದ ಎಲ್ಡಿಎಲ್ ಅಪಧಮನಿಗಳಲ್ಲಿ ಪ್ಲೇಕ್ (ಬಿಲ್ಲೆಗಳು) ಸಂಗ್ರಹಕ್ಕೆ ಕಾರಣವಾಗಬಹುದು, ಇದು ಹೃದ್ರೋಗ ಮತ್ತು ಪಾರ್ಶ್ವವಾಯು ಅಪಾಯವನ್ನು ಹೆಚ್ಚಿಸುತ್ತದೆ. ಮತ್ತೊಂದೆಡೆ, ಎಚ್ಡಿಎಲ್ ಕೊಲೆಸ್ಟ್ರಾಲ್ ಅನ್ನು “ಉತ್ತಮ” ಕೊಲೆಸ್ಟ್ರಾಲ್ ಎಂದು ಕರೆಯಲಾಗುತ್ತದೆ ಏಕೆಂದರೆ ಇದು ರಕ್ತಪರಿಚಲನೆಯಿಂದ ಎಲ್ಡಿಎಲ್ ಕೊಲೆಸ್ಟ್ರಾಲನ್ನು ಯಕೃತ್ತಿಗೆ ಸಾಗಿಸಿ ಅದನ್ನು ಸಂಸ್ಕರಿಸಿ ತೆಗೆದುಹಾಕಲು ಸಹಾಯ ಮಾಡುತ್ತದೆ. ಚಿಕ್ಕಿ ಎನ್ನುವುದು ಒಂದು ಸಿಹಿಯ ತಿನಿಸು ಆಗಿದ್ದು ಇದರಲ್ಲಿ ಸಕ್ಕರೆ ಅಂಶ, ಕಡಲೆಬೀಜ ಮತ್ತು ನೀರಿನಂಶ ಇರುತ್ತದೆ. ಕಡಲೆಬೀಜ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ನೆರವು ನೀಡುತ್ತದೆ ಮತ್ತು ಉತ್ತಮ ಕೊಲೆಸ್ಟರಾಲ್ ಹೆಚ್ಚಿಸುತ್ತದೆ ಎಂಬ ಬಗ್ಗೆ ತೋರಿಸಲು ಲಭ್ಯವಿರುವ ಸಾಕ್ಷ್ಯಗಳು ಕಡಿಮೆ ಮಾದರಿಯನ್ನು ಹೊಂದಿದ್ದು, ನಿಯಂತ್ರಿತ ಪರಿಸರದಲ್ಲಿ ಅಧ್ಯಯನ ನಡೆಸಿದ್ದಾಗಿದೆ. ಇನ್ನು, ಎಷ್ಟು ದೇಹದ ಭಾರ ಹೊಂದಿರುವವರು ಕಡಲೆಕಾಯಿಯನ್ನು ಎಷ್ಟು ಪ್ರಮಾಣದಲ್ಲಿ ತಿನ್ನಬಹುದು ಎಂಬುದು ತಿಳಿದಿಲ್ಲ. Also Read: ಹೃದಯದ ಬ್ಲಾಕ್ಗೆ ಆಂಜಿಯೋಪ್ಲಾಸ್ಟಿ ಬದಲಿಗೆ ಮನೆಮದ್ದು, ಆಯುರ್ವೇದ ಔಷಧ ಪ್ರಯೋಜನವಾಗುತ್ತಾ, ಸತ್ಯ ಏನು? ವಿವಿಧ ಹೃದಯರಕ್ತನಾಳದ ಕಾಯಿಲೆಗಳಿಗೆ ಅಪಾಯಕಾರಿಯಾಗಿರುವ ಹೆಚ್ಚಿನ ಸಾಂದ್ರತೆಯ ಲಿಪೊಪ್ರೋಟೀನ್ (ಎಚ್ಡಿಎಲ್) ಮೇಲೆ ಕಡಲೆಬೀಜ ಪರಿಣಾಮ ಬೀರಬಹುದು ಎಂಬುದಕ್ಕೆ ಪುರಾವೆಗಳು ಲಭ್ಯವಾಗಿವೆ. ಇನ್ನು ಕೆಲವು ಪುರಾವೆಗಳು ಕಡಲೆಕಾಯಿ ಕೆಲವು ಜನರಿಗೆ ಅಲರ್ಜಿಯಾಗುತ್ತದೆ ಮತ್ತು ಅದನ್ನು ಗುಣಪಡಿಸದಿದ್ದರೆ ಅದು ಮಾರಣಾಂತಿಕವೂ ಆಗಬಹುದು ಎಂಬುದನ್ನು ಹೇಳಿವೆ. ಸಕ್ಕರೆ ವಿಚಾರಕ್ಕೆ ಬಂದಾಗ, ಆಹಾರದಲ್ಲಿ ಸಂಸ್ಕರಿಸಿದ ಸಕ್ಕರೆಯನ್ನು ಸೇರಿಸುವುದು ಪರಿಧಮನಿಯ ಹೃದಯ ಕಾಯಿಲೆಯ ಅಪಾಯ ಹೆಚ್ಚಿಸುತ್ತದೆ. ಆದ್ದರಿಂದ ಇದರ ಬಳಕೆಯನ್ನು ಪುರಾವೆಗಳು ಶಿಫಾರಸು ಮಾಡುವುದಿಲ್ಲ. ಹೈದ್ರಾಬಾದ್ ಮೂಲದ ಆಹಾರ ತಜ್ಞರಾದ ನಿಧಿ ಸರಿನ್ ಅವರು ಹೇಳುವ ಪ್ರಕಾರ, “ಕಡಲೆಕಾಯಿ ಮತ್ತು ಬೆಲ್ಲವು ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಮತ್ತು ಹೃದಯ ಕಾಯಿಲೆಗಳನ್ನು ತಡೆಯಲು ಸಹಾಯ ಮಾಡುವುದಿಲ್ಲ. ಆದರೆ ಎರಡನ್ನೂ ಮಿತವಾಗಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು. ಆದರೆ ಬೆಣ್ಣೆ, ಕೆನೆ, ತುಪ್ಪ ಮತ್ತು ಕೆಂಪು ಮಾಂಸದಂತಹ ಸ್ಯಾಚುರೇಟೆಡ್ ಮತ್ತು ಟ್ರಾನ್ಸ್ ಕೊಬ್ಬುಗಳ ಸೇವನೆಯನ್ನು ಕಡಿಮೆಗೊಳಿಸಬೇಕು ಮತ್ತು ಅವುಗಳನ್ನು ಕಡಲೆಕಾಯಿ ಬೆಣ್ಣೆ, ಆಲಿವ್ಗಳು ಮತ್ತು ಸಸ್ಯ ಆಧಾರಿತ ಎಣ್ಣೆಗಳಂತಹ ಮೊನೊ-ಸ್ಯಾಚುರೇಟೆಡ್ ಮತ್ತು ಪಾಲಿ-ಸ್ಯಾಚುರೇಟೆಡ್ ಕೊಬ್ಬುಗಳೊಂದಿಗೆ ಬದಲಾಯಿಸಬೇಕು. ಇದು ಎಲ್ಡಿಎಲ್ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ” ಎಂದು ಹೇಳಿದ್ದಾರೆ. ಆದ್ದರಿಂದ ಈ ಸತ್ಯಶೋಧನೆಯ ಪ್ರಕಾರ, ಚಿಕ್ಕಿ ತಿಂದರೆ ಉತ್ತಮ ಕೊಲೆಸ್ಟ್ರಾಲ್ ಹೆಚ್ಚಿ, ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ ಎನ್ನುವುದು ತಪ್ಪಾದ ಸಂದರ್ಭವಾಗಿದೆ. Our Sources: What is Cholesterol? | American Heart Association Frontiers | Effect of Peanut Consumption on Cardiovascular Risk Factors: A Randomized Clinical Trial and Meta-Analysis (frontiersin.org) A systematic review of the effects of nuts on blood lipid profiles in humans – Database of Abstracts of Reviews of Effects (DARE): Quality-assessed Reviews – NCBI Bookshelf (nih.gov) Peanuts as functional food: a review – PMC (nih.gov) Caloric sweetener consumption and dyslipidemia among US adults – PubMed (nih.gov) Peanuts, peanut oil, and fat free peanut flour reduced cardiovascular disease risk factors and the development of atherosclerosis in Syrian golden hamsters – PubMed (nih.gov) Peanut and cardiovascular disease risk factors: A systematic review and meta-analysis – PubMed (nih.gov) Peanut Allergy – StatPearls – NCBI Bookshelf (nih.gov) The Evidence for Saturated Fat and for Sugar Related to Coronary Heart Disease – PubMed (nih.gov) Caloric sweetener consumption and dyslipidemia among US adults – PubMed (nih.gov) Conversation with Nutritionist Nidhi Sarin, Hyderabad ಈ ಲೇಖನವನ್ನು ಆಹಾರ ತಜ್ಞರಾದ ನಿಧಿ ಸರಿನ್ ಅವರ ಪ್ರತಿಕ್ರಿಯೆಯೊಂದಿಗೆ ಪರಿಷ್ಕರಿಸಲಾಗಿದೆ. (This article has been published in collaboration with THIP Media) ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು. Newschecker and THIP Media November 8, 2024 Newschecker and THIP Media September 27, 2024 Newschecker and THIP Media July 22, 2023
schema:mentions
schema:reviewRating
schema:author
schema:datePublished
schema:inLanguage
  • Hindi
schema:itemReviewed
Faceted Search & Find service v1.16.115 as of Oct 09 2023


Alternative Linked Data Documents: ODE     Content Formats:   [cxml] [csv]     RDF   [text] [turtle] [ld+json] [rdf+json] [rdf+xml]     ODATA   [atom+xml] [odata+json]     Microdata   [microdata+json] [html]    About   
This material is Open Knowledge   W3C Semantic Web Technology [RDF Data] Valid XHTML + RDFa
OpenLink Virtuoso version 07.20.3238 as of Jul 16 2024, on Linux (x86_64-pc-linux-musl), Single-Server Edition (126 GB total memory, 5 GB memory in use)
Data on this page belongs to its respective rights holders.
Virtuoso Faceted Browser Copyright © 2009-2025 OpenLink Software