schema:text
| - Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact checks doneFOLLOW US
Fact Check
Claim
ವಿಧಾನಸೌಧದಿಂದ ಪರಪ್ಪನ ಅಗ್ರಹಾರ ಜೈಲಿಗೆ 420 ಸಂಖ್ಯೆಯ ಬಸ್ ಇದೆ
Fact
ವಿಧಾನಸೌಧದಿಂದ ಕೇಂದ್ರ ಕಾರಾಗೃಹ ಪರಪ್ಪನ ಅಗ್ರಹಾರಕ್ಕೆ 420 ಸಂಖ್ಯೆಯ ಬಸ್ ಇದೆ ಎನ್ನುವುದು ಸುಳ್ಳು. ಅಲ್ಲಿಗೆ ನೇರ ಬಸ್ ಇಲ್ಲ ಮತ್ತು ವೈರಲ್ ಪೋಸ್ಟ್ ನಲ್ಲಿ ಬಳಸಿದ ಚಿತ್ರ ತಿರುಚಿದ್ದಾಗಿದೆ
ಬೆಂಗಳೂರಿನಲ್ಲಿ ವಿಧಾನಸೌಧದಿಂದ ಕೇಂದ್ರ ಕಾರಾಗೃಹ ಪರಪ್ಪನ ಅಗ್ರಹಾರಕ್ಕೆ 420 ಸಂಖ್ಯೆಯ ಬಸ್ ಆರಂಭಿಸಲಾಗಿದೆ ಎಂಬ ಹೇಳಿಕೆಯುಳ್ಳ ವಾಟ್ಸಾಪ್ ಸಂದೇಶವೊಂದು ಮರಾಠಿಯಲ್ಲಿ ವೈರಲ್ ಆಗಿದೆ.
ಇದಕ್ಕೂ ಮೊದಲು ಇಂತಹುದೇ ಹೇಳಿಕೆಯುಳ್ಳ ಪೋಸ್ಟ್ ಗಳು ವೈರಲ್ ಆಗಿರುವುದನ್ನು ನಾವು ಗಮನಿಸಿದ್ದೇವೆ. ಮೊದಲು ಇಂತಹ ಪೋಸ್ಟ್ ಗಳು ಇಂಗ್ಲಿಷ್ ನಲ್ಲಿದ್ದು, ಬಳಿಕ ಇದೀಗ ಪ್ರಾದೇಶಿಕ ಭಾಷೆಗಳಲ್ಲೂ ಕಾಣಿಸಿವೆ.
Also Read: ಹಮಾಸ್ನಿಂದ ಅಂತಿಮ ಯಾತ್ರೆಯ ನಾಟಕ ಎನ್ನುವ ವೀಡಿಯೋ ನಿಜವೇ?
ಸತ್ಯಶೋಧನೆಯ ಆರಂಭದಲ್ಲಿ ನಾವು ವೈರಲ್ ಆಗಿರುವ ಫೋಟೋದ ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ. ಇದನ್ನು ಬಿಎಂಟಿಸಿ ವೋಲ್ವೇ ಬಸ್ ಪುಟದ ಪ್ರೊಫೈಲ್ ಚಿತ್ರದಲ್ಲಿ ಗಮನಿಸಿದ್ದೇವೆ.
ಈ ಫೋಟೋವನ್ನು ಮೇ 8, 2010 ರಂದು ಪ್ರೊಫೈಲ್ ಪಿಕ್ ಆಗಿ ಅಪ್ಲೋಡ್ ಮಾಡಲಾಗಿದೆ. ವೈರಲ್ ಫೋಟೋ ಮತ್ತು ಈ ಫೋಟೋದಲ್ಲಿ, ಬಸ್ ಸಂಖ್ಯೆ ಕೆಎ -01 ಎಫ್ -3975 ಎಂಬ ಸಂಖ್ಯೆ ಇದ್ದು ಎರಡರಲ್ಲೂ ಒಂದೇ ರೀತಿ ಇರುವುದನ್ನು ಗುರುತಿಸಿದ್ದೆವೆ. ಆದರೆ ವೈರಲ್ ಚಿತ್ರದಲ್ಲಿ ಬಸ್ ಮಾರ್ಗ ಸಂಖ್ಯೆ 420 ಅನ್ನು ತೋರಿಸುತ್ತದೆ. ಮತ್ತು ಮೂಲ ಚಿತ್ರವು ಮಾರ್ಗ ಸಂಖ್ಯೆ 365 ಅನ್ನು ತೋರಿಸುತ್ತದೆ.
ಈ ಫೋಟೋಗಾಗಿ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ, ಬಿಎಂಟಿಸಿ ವೋಲ್ವೋ ಬಸ್ ತಯಾರಿಸಿದ ಈ ಫೋಟೋವನ್ನು ಇತರ ಸ್ಥಳಗಳಲ್ಲಿಯೂ ಕಂಡುಕೊಂಡಿದ್ದೇವೆ. ನವೆಂಬರ್ 19, 2021 ರಂದು mangaloremerijaan.com ಪ್ರಕಟಿಸಿದ ಕಥೆಯಲ್ಲಿ ನಾವು ಈ ಫೋಟೋವನ್ನು ಕಂಡುಕೊಂಡಿದ್ದೇವೆ.
Also Read: ಬುರ್ಖಾ ಧರಿಸದವರನ್ನು ಬಸ್ ಹತ್ತದಂತೆ ಕೇರಳದಲ್ಲಿ ತಡೆಯಲಾಗಿದೆಯೇ?
ಈ ಫೋಟೋವನ್ನು ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ, ಬಿಎಂಟಿಸಿ ವೋಲ್ವೋ ಬಸ್ ಫೋಟೋವನ್ನು ಇತರ ಸ್ಥಳಗಳಲ್ಲಿಯೂ ಹಂಚಿಕೊಂಡಿರುವುದು ಗೊತ್ತಾಗಿದೆ. ನವೆಂಬರ್ 19, 2021 ರಂದು mangaloremerijaan.com ಪ್ರಕಟಿಸಿದ ವರದಿಯಲ್ಲಿ ಈ ಫೋಟೋವನ್ನು ಬಳಸಲಾಗಿದೆ.
ರೈಸಿಂಗ್ ಸಿಟಿಜೆನ್ ಎಂಬಲ್ಲಿಯೂ ಅದೇ ಫೋಟೋ ಬಳಸಿರುವುದನ್ನು ಗಮನಿಸಿದ್ದೇವೆ.
ಇದನ್ನು ಖಚಿತಪಡಿಸಿದ ಬಳಿಕ ಮೂಲ ಚಿತ್ರವನ್ನು ತಿರುಚಲಾಗಿದೆ ಎಂದು ಗೊತ್ತಾಗಿದೆ. ಇವುಗಳ ಮಧ್ಯೆ ಇರುವ ವ್ಯತ್ಯಾಸವನ್ನು ನಾವು ಕಂಡುಕೊಂಡಿದ್ದೇವೆ.
Also Read:ಇಸ್ರೇಲ್ ಸ್ನಿಪರ್ ಗಳು ಶೂಟ್ ಮಾಡುತ್ತಿರುವ ದೃಶ್ಯ ಎನ್ನುವುದು ನಿಜವಾದ್ದೇ?
ಎರಡು ಫೋಟೋಗಳನ್ನು ತುಲನೆ ಮಾಡಿದ ಮೂಲ ಫೋಟೋದಲ್ಲಿ ಬಸ್ ಬೋರ್ಡ್ ನಲ್ಲಿ 365 ಮತ್ತು ನ್ಯಾಷನಲ್ ಪಾರ್ಕ್ ಎಂದು ಕನ್ನಡದಲ್ಲಿ ಬರೆದಿರುವುದನ್ನು ನೋಡಿದ್ದೇವೆ. ಇದೇ ವೇಳೆ ವೈರಲ್ ಆಗಿರುವ ಫೋಟೋದಲ್ಲಿ 420 ಸಂಖ್ಯೆ ಮತ್ತು ವಿಧಾನಸೌಧ-ಪರಪ್ಪನ ಅಗ್ರಹಾರ ಎಂದು ಇಂಗ್ಲಿಷ್ನಲ್ಲಿ ಬರೆಯಲಾಗಿದೆ. ಮತ್ತು ಅದರ ಬಣ್ಣ ಹಸಿರು ಇದೆ. ಇದರೊಂದಿಗೆ ಬಸ್ ಸಂಖ್ಯೆ ಒಂದೇ ರೀತಿ ಅಂದರೆ ಕೆಎ-01-3975 ಎಂದಿರುವುದನ್ನು ನಾವು ಗಮನಿಸಿದ್ದೇವೆ. ಇನ್ನು ವೈರಲ್ ಚಿತ್ರದಲ್ಲಿ ಪೊಲಿಟೀಷ್ಯನ್ಸ್ ಓನ್ಲಿ ಎಂದು ಬರೆದಿದ್ದರೆ, ಮೂಲ ಚಿತ್ರದಲ್ಲಿ ಅದೇನೂ ಇಲ್ಲದಿರುವುದು ಗಮನಿಸಬಹುದು.
ಬಸ್ ಮಾರ್ಗದ ಬಗ್ಗೆ ಮಾಹಿತಿ ನೀಡುವ narasimhadatta.info ವೆಬ್ಸೈಟ್ನಲ್ಲಿ, ವಿಧಾನಸೌಧದಿಂದ ಪರಪ್ಪನ್ ಅಗ್ರಹಾರ ಮಾರ್ಗದಲ್ಲಿ ಬಸ್ ಸೇವೆ ಇದೆಯೇ? ಎಂಬುದನ್ನು ಪರಿಶೀಲಿಸಿದ್ದೇವೆ. ಈ ವೇಳೆ ಅಂತಹ ಸಂಖ್ಯೆಯ ಬಸ್ಗಳು, ಮತ್ತು ಪರಪ್ಪನ ಅಗ್ರಹಾರಕ್ಕೆ ನೇರ ಬಸ್ ಸಂಪರ್ಕ ವಿಧಾನಸೌಧದಿಂದ ಇಲ್ಲ ಎಂಬುದನ್ನು ಗೊತ್ತುಮಾಡಿದ್ದೇವೆ. ಕನಿಷ್ಠ ಎರಡು ಬಸ್ಸುಗಳನ್ನು ಬದಲಾಯಿಸುವ ಮೂಲಕ, ನೀವು ವಿಧಾನಸೌಧದಿಂದ ಪರಪ್ಪನ ಅಗ್ರಹಾರ ಕಡೆಗೆ ಪ್ರಯಾಣಿಸಬಹುದು.
ಈ ಕುರಿತಂತೆ ಬಿಎಂಟಿಸಿಯ ಪಿಆರ್ ಒ ಸುನೀತಾ ಅವರನ್ನು ಸಂಪರ್ಕಿಸಿದಾಗ, “ವಿಧಾನಸೌಧದಿಂದ ಪರಪ್ಪನ್ ಅಗ್ರಹಾರಕ್ಕೆ ಪ್ರಯಾಣಿಸಲು ನೇರ ಬಸ್ ಲಭ್ಯವಿಲ್ಲ. ಅಂತಹ ಯಾವುದೇ ಸಂಖ್ಯೆಯ ಬಸ್ ಇಲ್ಲ ” ಎಂದು ಅವರು ವೈರಲ್ ಹೇಳಿಕೆಯನ್ನು ನಿರಾಕರಿಸಿದ್ದಾರೆ
ಎಡಿಟ್ ಮಾಡಿದ ಫೋಟೋಗಳ ಮೂಲಕ ತಪ್ಪುದಾರಿಗೆಳೆಯುವಂತೆ ಹೇಳಿಕೆಗಳನ್ನು ನೀಡಲಾಗಿದೆ ಎಂದು ನಮ್ಮ ತನಿಖೆಯಿಂದ ತಿಳಿದುಬಂದಿದೆ.
Also Read: ಹಮಾಸ್ ದಾಳಿಕೋರರು ಇಸ್ರೇಲ್ ವ್ಯಕ್ತಿಯ ಎದೆ ಸೀಳಿ ಹೃದಯ ಹೊರ ತೆಗೆದಿದ್ದಾರೆಯೇ?
ಬೆಂಗಳೂರಿನಲ್ಲಿ, ವಿಧಾನಸೌಧದಿಂದ ಪರಪ್ಪನ ಅಗ್ರಹಾರಕ್ಕೆ 420 ಸಂಖ್ಯೆಯ ಬಸ್ ಅನ್ನು ಪ್ರಾರಂಭಿಸಲಾಗಿ ಎಂಬ ಹೇಳಿಕೆ ಸುಳ್ಳು ಮತ್ತು ದಾರಿತಪ್ಪಿಸುವಂಥದ್ದಾಗಿದೆ. ಎಡಿಟ್ ಮಾಡಿದ ಫೋಟೋ ಮೂಲಕ ಈ ಹೇಳಿಕೆ ನೀಡಲಾಗಿದ್ದು, ಬಿಎಂಟಿಸಿ ಇದನ್ನು ನಿರಾಕರಿಸಿದೆ.
Our Sources
Profile photo BMTC Volvo Bus page, Dated: May 8, 2010
Report by mangaloremerijaan, Dated: November 19, 2021
Blog post by risingcitizen.blogspot, Dated: August 15, 2009
BMTC route search platform narasimhadatta.info
Conversation with PRO of BMTC Sunitha
(ಈ ಲೇಖನವನ್ನು ಮೊದಲು ನ್ಯೂಸ್ಚೆಕರ್ ಮರಾಠಿಯಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.
Ishwarachandra B G
October 21, 2024
Ishwarachandra B G
October 17, 2024
Ishwarachandra B G
August 29, 2024
|