schema:text
| - Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact checks doneFOLLOW US
Fact Check
Claim
ನೀರಿನಲ್ಲಿ ಮುಳುಗಿ ವ್ಯಕ್ತಿ ಸತ್ತರೆ, ಬಳಿಕ ಉಪ್ಪಿನ ರಾಶಿಯಲ್ಲಿ ಮೃತದೇಹವನ್ನಿಟ್ಟರೆ ವ್ಯಕ್ತಿ ಜೀವಂತವಾಗುತ್ತಾನೆ
Fact
ಮುಳುಗಿ ಸತ್ತವರ ಮೃತದೇಹವನ್ನು ಉಪ್ಪಿನ ರಾಶಿಯಲ್ಲಿಟ್ಟರೆ ಮತ್ತೆ ವ್ಯಕ್ತಿ ಜೀವಂತವಾಗುತ್ತಾನೆ ಎನ್ನುವುದು ಸಂಪೂರ್ಣ ಸುಳ್ಳಾಗಿದೆ
ಉಪ್ಪಿನ ರಾಶಿಯಲ್ಲಿ ಮೃತ ದೇಹವನ್ನಿಟ್ಟರೆ ವ್ಯಕ್ತಿ ಮತ್ತೆ ಜೀವಂತವಾಗುತ್ತಾನೆ ಎಂಬ ಪೋಸ್ಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.
ಫೇಸ್ಬುಕ್ನಲ್ಲಿ ಕಂಡುಬಂದ ಕ್ಲೇಮಿನಲ್ಲಿ “ಯಾರಾದರೂ ನೀರಿನಲ್ಲಿ ಮುಳುಗಿ ಸತ್ತರೆ ಮತ್ತು ಅವರ ದೇಹವು 3-4 ಗಂಟೆಗಳಲ್ಲಿ ಪತ್ತೆಯಾದರೆ, ನಾವು ಅವನ ಜೀವವನ್ನು ಮರಳಿ ತರಲು ಸಾಧ್ಯವಿದೆ…. ಒಂದೂವರೆ ಕ್ವಿಂಟಾಲ್ ಉಪ್ಪನ್ನು ಹಾಸಿಗೆಯಂತೆ ಹಾಕಿ, ರೋಗಿಯನ್ನು ಅದರ ಮೇಲೆ ಬಟ್ಟೆಯೊಂದಿಗೆ ಮಲಗಿಸಿ. ಉಪ್ಪು ನಿಧಾನವಾಗಿ ದೇಹದಿಂದ ನೀರನ್ನು ಹೀರಿಕೊಳ್ಳುತ್ತದೆ. ವ್ಯಕ್ತಿಗೆ ನಿಧಾನವಾಗಿ ಪ್ರಜ್ಞೆ ಬರುತ್ತದೆ. ವ್ಯಕ್ತಿಯು ಪ್ರಜ್ಞೆಯನ್ನು ಮರಳಿ ಪಡೆದಾಗ, ಅವನನ್ನು ಆಸ್ಪತ್ರೆಗೆ ಕರೆದೊಯ್ಯಿರಿ” ಎಂದು ಹೇಳಲಾಗಿದೆ.
Also Read: ಪ್ರಧಾನಿ ನರೇಂದ್ರ ಮೋದಿ ಚಿನ್ನದ ಪ್ರತಿಮೆ ಸೌದಿಯಲ್ಲಿ ಕೆತ್ತಲಾಗಿದೆ ಎನ್ನುವುದು ನಿಜವೇ?
ಈ ಕುರಿತು ನ್ಯೂಸ್ಚೆಕರ್ ಸತ್ಯಶೋಧನೆ ನಡೆಸಿದ್ದು, ಇದು ಸಂಪೂರ್ಣ ಸುಳ್ಳು ಎಂದು ಕಂಡುಕೊಂಡಿದೆ.
ಸತ್ಯಶೋಧನೆಗಾಗಿ ನಾವು ಮೊದಲು ವೈರಲ್ ಹೇಳಿಕೆಯೊಂದಿಗೆ ನೀಡಲಾದ ಫೋನ್ ನಂಬರ್ ಬಗ್ಗೆ ಶೋಧ ನಡೆಸಿದ್ದೇವೆ. ಪ್ರಶಾಂತ್ ತ್ರಿಪಾಠಿ ಎಂಬ ಹೆಸರಿನಲ್ಲಿ ಎರಡು ಸಂಖ್ಯೆಗಳನ್ನು ನೀಡಲಾಗಿದೆ. ಇದರಲ್ಲಿ ಮೊದಲು ನೀಡಿದ ಸಂಖ್ಯೆ (+9194543111111) ಆಗಿದ್ದು ಇದರಲ್ಲಿ 11 ಸಂಖ್ಯೆ ಇದೆ. ಆದ್ದರಿಂದ ಇದು ಸರಿಯಾದ ಸಂಖ್ಯೆಯಲ್ಲ. ಎರಡನೇ ಸಂಖ್ಯೆ (+919335673001) ಮತ್ತು ಆಫ್ ಸಿ ರೂಪಾ ಹೆಸರಿನಲ್ಲಿರುವ ಮೂರನೇ ಸಂಖ್ಯೆ (9303237548) ಡಯಲ್ ಮಾಡಿದಾಗ ಎರಡೂ ಸಂಖ್ಯೆಗಳು ಸ್ವಿಚ್ ಆಫ್ ಆಗಿದೆ ಎಂದು ತಿಳಿದುಬಂದಿದೆ.
ಆ ಬಳಿಕ ನಾವು ಗೂಗಲ್ ಕೀವರ್ಡ್ ಸರ್ಚ್ ನಡೆಸಿದ್ದೇವೆ. ಈ ವೇಳೆ ಹಲವು ಫಲಿತಾಂಶಗಳು ಲಭ್ಯವಾಗಿವೆ.
ಇದರಲ್ಲಿ ಬಳ್ಳಾರಿಯಲ್ಲಿ ನಡೆದ ಘಟನೆಯೊಂದರಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಸಂದೇಶವನ್ನು ನಂಬಿ 10 ವರ್ಷದ ಮೃತ ಬಾಲಕನ ದೇಹವನ್ನು ಆತನ ಹೆತ್ತವರು ಉಪ್ಪಿನ ರಾಶಿಯಲ್ಲಿಟ್ಟು ಮತ್ತೆ ಜೀವಂತವಾಗುತ್ತಾನೆ ಎಂದು ಕಾದಿದ್ದಾಗಿ ಹೇಳಲಾಗಿದೆ.
ದಿ ಇಂಡಿಯನ್ ಎಕ್ಸ್ ಪ್ರೆಸ್ ಸೆಪ್ಟೆಂಬರ್ 7, 2022ರಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಈ ಬಗ್ಗೆ ವರದಿ ಮಾಡಿದ್ದು, “ಸಾಮಾಜಿಕ ಜಾಲತಾಣದ ಪೋಸ್ಟ್ ನಂಬಿ ಹೆತ್ತವರು ನೀರಿಗೆ ಬಿದ್ದ ಮಗನ ದೇಹವನ್ನ ಉಪ್ಪಿನ ರಾಶಿಯಲ್ಲಿಟ್ಟು ಮತ್ತೆ ಜೀವಂತವಾಗುತ್ತಾನೆ ಎಂದು ಕಾದಿದ್ದಾರೆ. ಈ ಘಟನೆ ಬಳ್ಳಾರಿ ಜಿಲ್ಲೆಯ ಸಿರವಾರದಲ್ಲಿ ನಡೆದಿದೆ” ಎಂದಿದೆ. “10 ವರ್ಷದ ಬಾಲಕ ಸುರೇಶ್ ಕೆರೆಗೆ ಈಜಲು ಹೋಗಿದ್ದು, ಮುಳುಗಿದ್ದ. ಬಳಿಕ ಹೆತ್ತವರು ಸಾಮಾಜಿಕ ಜಾಲತಾಣದ ಪೋಸ್ಟ್ ನಂಬಿದ ಗ್ರಾಮಸ್ಥರೊಂದಿಗೆ ಸೇರಿಕೊಂಡು ಉಪ್ಪಿನ ರಾಶಿಯಲ್ಲಿ ನಾಲ್ಕೈದು ತಾಸು ಇಟ್ಟು, ಪೋಸ್ಟ್ ನಲ್ಲಿ ಹೇಳಿದಂತೆ ಜೀವಂತ ಬರುತ್ತಾನೆ ಎಂದು ಕಾದಿದ್ದಾರೆ” ಎಂದಿದೆ.
Also Read: ಬೆಂಗಳೂರಲ್ಲಿ ಮಳೆ ನೀರಿನಲ್ಲಿ ಮಗುಚಿಬಿದ್ದ ವಿಮಾನ ಎಂದಿರುವುದು ನಿಜವೇ?
ಸೆಪ್ಟೆಂಬರ್ 6, 2022ರ ಟೈಮ್ಸ್ ಆಫ್ ಇಂಡಿಯಾ ವರದಿಯಲ್ಲೂ ಬಳ್ಳಾರಿಯ ಘಟನೆ ಬಗಗೆ ಹೇಳಲಾಗಿದ್ದು, ಕುಟುಂಬಿಕರು ಮತ್ತು ಗ್ರಾಮಸ್ಥರು ಬಾಲಕನ ಶವವನ್ನು ಉಪ್ಪಿನ ರಾಶಿಯಲ್ಲಿಟ್ಟು ಜೀವಂತ ಬರುತ್ತಾನೆ ಎಂದು ಕಾದಿದ್ದಾಗಿ ಹೇಳಿದೆ.
ಈ ವರದಿಗಳ ಬಳಿಕ ನಾವು ಉಪ್ಪಿನಲ್ಲಿ ಶವ ಇಟ್ಟರೆ ಜೀವಂತ ಬರುತ್ತಾರೆ ಎಂಬುದು ನಿಜವೇ ಎಂಬ ಕುರಿತು ಫಾರೆನ್ಸಿಕ್ ತಜ್ಞರನ್ನು ಸಂಪರ್ಕಿಸಿದ್ದೇವೆ.
ಈ ಕುರಿತು ನ್ಯೂಸ್ಚೆಕರ್ ವರುಣ್ ಅರ್ಜುನ್ ಮೆಡಿಕಲ್ ಕಾಲೇಜು, ಶಹಜಾನ್ಪುರ, ಉ.ಪ್ರದೇಶದ ಫಾರೆನ್ಸಿಕ್ ಮೆಡಿಸಿನ್ ಸ್ನಾತಕೋತ್ತರ ವಿಭಾಗದ ವೈದ್ಯ ಡಾ.ಸಿವಕುಮಾರ್ ಅವರನ್ನು ಸಂಪರ್ಕಿಸಿದ ವೇಳೆ ಅವರು ಮಾತನಾಡಿ, “ನೀರಿನಲ್ಲಿ ಮುಳುಗಿ ಮೃತನಾದ ವ್ಯಕ್ತಿಯನ್ನು ಉಪ್ಪಿನಲ್ಲಿ ಹಾಕಿಟ್ಟು ಮತ್ತೆ ಜೀವಂತ ಮಾಡುವುದು ಎಷ್ಟು ಮಾತ್ರಕ್ಕೂ ಅಸಾಧ್ಯ. ಒಂದು ವೇಳೆ ವ್ಯಕ್ತಿ ಎದ್ದು ಬಂದಿದ್ದೇ ಆದಲ್ಲಿ ಆತ ಮೃತಪಡದೇ ಇರುವ ಸಾಧ್ಯತೆ ಕಡಿಮೆ ಇರುತ್ತದೆ ಮತ್ತು ಆ ವ್ಯಕ್ತಿ “ಸತ್ತಿಲ್ಲ” ಎಂದು ಪರಿಗಣಿಸಬೇಕಾಗುತ್ತದೆ. ಅದೇನಿದ್ದರೂ ಉಪ್ಪಿನ ರಾಶಿಯಲ್ಲಿ ದೇಹವನ್ನಿಟ್ಟರೆ ಮತ್ತೆ ಎದ್ದು ಬರುತ್ತಾರೆ ಎನ್ನುವುದು ಸಂಪೂರ್ಣ ಅವೈಜ್ಞಾನಿಕವಾಗಿದೆ” ಎಂದಿದ್ದಾರೆ. “ನೀರಿನಲ್ಲಿ ಮುಳುಗಿದ ವ್ಯಕ್ತಿ ಒಂದು ವೇಳೆ ಮೃತಪಡದೇ, ಸ್ಮೃತಿ ಮಾತ್ರ ತಪ್ಪಿದ್ದು ತುರ್ತು ಚಿಕಿತ್ಸೆ ಅಗತ್ಯವಿದ್ದಿದ್ದೇ ಆದಲ್ಲಿ ಅದನ್ನು ವಿಳಂಬಗೊಳಿಸಬಹುದು.ಈ ಮೂಲಕ ಜೀವಕ್ಕೆ ಅಪಾಯಕಾರಿಯಾಗಬಹುದು. ಒಂದು ವೇಳೆ ವ್ಯಕ್ತಿಯೊಬ್ಬ ನೀರಿನಲ್ಲಿ ಮುಳುಗಿದ್ದಾನೆ ಎಂದಾದರೆ ಆತನನ್ನು ನೀರಿನಿಂದ ಮೇಲಕ್ಕೆತ್ತಿ ಹೊಟ್ಟೆ ಮತ್ತು ಶ್ವಾಸಕೋಶದಲ್ಲಿ ನೀರು ತುಂಬಿದ್ದರೆ ಅದನ್ನು ಖಾಲಿ ಮಾಡಿ ಸಿಪಿಆರ್ ಅನ್ನು ಪ್ರಾರಂಭಿಸಬೇಕು ಮತ್ತು ತುರ್ತು ವೈದ್ಯಕೀಯ ಸಹಾಯಕ್ಕೆ ವೈದ್ಯರನ್ನುಸಂಪರ್ಕಿಸಬೇಕು” ಎಂದು ಹೇಳಿದ್ದಾರೆ.
ಇನ್ನು ನಾವು ಪುದುಚೇರಿಯ ವೈದ್ಯರಾದ ಡಾ.ಪೂರ್ಣಿಮಾ ಸಂತಾನಕೃಷ್ಣನ್ ಅವರನ್ನು ಸಂಪರ್ಕಿಸಿದ್ದು, “ಮೃತ ವ್ಯಕ್ತಿಯನ್ನು ಉಪ್ಪಿನಲ್ಲಿಟ್ಟರೆ ಎದ್ದು ಬರುತ್ತಾನೆ ಎನ್ನುವುದು ಸುಳ್ಳು ಹೇಳಿಕೆಯಾಗಿದೆ. ನೀರಿನಲ್ಲಿ ಮುಳುಗಿದಾಗ ವಿವಿಧ ಕಾರಣಗಳಿಗೆ ಸಾವು ಸಂಭವಿಸಬಹುದು. ಶ್ವಾಸಕೋಶ, ಆಘಾತ, ಹೃದಯ ಸ್ತಂಭನ, ಮೆದುಳಿಗೆ ಹಾನಿ, ಶ್ವಾಸನಾಶದ ಸೆಳೆತ ಇತ್ಯಾದಿ ಕೆಲವು ಸೆಕೆಂಡ್ ಅಥವಾ ನಿಮಿಷದೊಳಗೆ ಸಂಭವಿಸಬಹುದು. ಇದರೊಂದಿಗೆ ಉಪ್ಪು ನೀರಿನಲ್ಲಿ ಮತ್ತು ಸಿಹಿ ನೀರಿನಲ್ಲಿ ವ್ಯಕ್ತಿ ಮುಳುಗಿದಾಗ ಸಾವಿಗೆ ಕಾರಣವಾಗುವ ಅಂಶಗಳ ಅವಧಿ ವ್ಯತ್ಯಾಸವಾಗುತ್ತದೆ. ಇನ್ನು ಮುಳುಗಿದ ವ್ಯಕ್ತಿ ಮೇಲೆದ್ದು ಬರುತ್ತಾನೆ ಎಂದು ಉಪ್ಪಿನಲ್ಲಿ ಇಡುವುದು ತೀರ ಅವೈಜ್ಞಾನಿಕವಾಗಿದೆ. ಒಂದು ವೇಳೆ ಆತ ಬದುಕುವ ಸಾಧ್ಯತೆ ಇದ್ದರೂ ಉಪ್ಪಿನಲ್ಲಿ ಇಡುವುದು ರೋಗಿಗೆ ಹಾನಿಕಾರಕವಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಕಂಡುಬರುವ ಎಲ್ಲ ಸುಳ್ಳು ಪೋಸ್ಟ್ ಗಳನ್ನು ಪರಿಶೀಲಿಸಿದೆಯೇ ನಂಬುವುದರಿಂದ ಜನರು ದೂರವಿರಬೇಕು” ಎಂದು ಅವರು ಹೇಳಿದ್ದಾರೆ.
Also Read: ಮೆಡಿಕಲ್ ಕಾಲೇಜಿನಲ್ಲಿ ಚಲಿಸಿದ ಏಣಿ, ಈ ವೀಡಿಯೋ ಹಿಂದಿನ ಸತ್ಯ ಏನು?
ಈ ಸತ್ಯಶೋಧನೆಯ ಪ್ರಕಾರ ಉಪ್ಪಿನ ರಾಶಿಯಲ್ಲಿ ಮೃತ ದೇಹವನ್ನಿಟ್ಟರೆ ವ್ಯಕ್ತಿ ಮತ್ತೆ ಜೀವಂತವಾಗುತ್ತಾನೆ ಎಂಬುದು ಸುಳ್ಳಾಗಿದೆ ಎಂದು ಗೊತ್ತಾಗಿದೆ.
Our Sources:
Report By The New Indian express, Dated: September 7, 2022
Report By Times of India, Dated: September 6, 2022
Conversation with Dr. Sivakumar, MD forensic medicine, Varun Arjun Medical College, Shahjahanpur
Conversation with Dr. Poornima Santanakrishnan, Puducherry
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.
|