About: http://data.cimple.eu/claim-review/845ef48a17be97cce9cd8e1df2658223de23e066e0a884598e07f440     Goto   Sponge   NotDistinct   Permalink

An Entity of Type : schema:ClaimReview, within Data Space : data.cimple.eu associated with source document(s)

AttributesValues
rdf:type
http://data.cimple...lizedReviewRating
schema:url
schema:text
  • ಫ್ಯಾಕ್ಟ್ಚೆಕ್: ಪ್ಯಾನ್ 2.0 ಯೋಜನೆಯಡಿ ಹೊಸ ಪ್ಯಾನ್ ಕಾರ್ಡ್ ಪಡೆಯಲು ಸರ್ಕಾರಕ್ಕೆ ಶುಲ್ಕ ಪಾವತಿಸಬೇಕು ಪ್ಯಾನ್ 2.0 ಯೋಜನೆಯಡಿ ಹೊಸ ಪ್ಯಾನ್ ಕಾರ್ಡ್ ಪಡೆಯಲು ಸರ್ಕಾರಕ್ಕೆ ಶುಲ್ಕ ಪಾವತಿಸಬೇಕು Claim :ಪ್ಯಾನ್ 2.0 ಯೋಜನೆಯಡಿ ಸರ್ಕಾರವು ಹೊಸ ಪ್ಯಾನ್ ಕಾರ್ಡ್ನ್ನು ಉಚಿತವಾಗಿ ನೇರವಾಗಿ ನಮ್ಮ ವಿಳಾಸಕ್ಕೆ ಕಳುಹಿಸುತ್ತದೆ Fact :ಪ್ಯಾನ್ 2.0 ಯೋಜನೆಯಡಿ ಹೊಸ ಪ್ಯಾನ್ ಕಾರ್ಡ್ ಪಡೆಯಲು ಸರ್ಕಾರಕ್ಕೆ ಶುಲ್ಕ ಪಾವತಿಸಬೇಕು ಇತ್ತೀಚಿಗೆ ಕೇಂದ್ರ ಸರ್ಕಾರ ಪ್ರಸ್ತುತ ಬಳಕೆಯಲ್ಲಿರುವ ಪ್ಯಾನ್ ಕಾರ್ಡ್ ವ್ಯವಸ್ಥೆಯನ್ನು ಪರಿಷ್ಕರಿಸುವ ಸಂಬಂಧ ʼಪ್ಯಾನ್ 2.0ʼ ಯೋಜನೆಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಹೆಚ್ಚುವರಿ ಸುರಕ್ಷತೆ, ಕ್ಯೂಆರ್ ಕೋಡ್ ಸೇರಿದಂತೆ ಹೊಸ ತಂತ್ರಜ್ಞಾನವನ್ನು ನೂತನ ಪಾನ್ ಕಾರ್ಡ್ನಲ್ಲಿ ಬಳಸಲಾಗುತ್ತಿದೆ. ಬಳಕೆದಾರರಿಗೆ ಪ್ರವೇಶವನ್ನು ಸುಲಭಗೊಳಿಸಲು ಎಲ್ಲಾ ಪಾನ್ ಸಂಬಂಧಿತ ಸೇವೆಗಳಿಗೆ ಒಂದೇ ವೆಬ್ ಪೋರ್ಟಲ್ ಇದಾಗಿದೆ. ಡಿಸಂಬರ್ 17, 2024ರಂದು ʼಧ್ರುವಚಂದ್ರ ಅರಕಲಗೂಡುʼ ಎಂಬ ಫೇಸ್ಬುಕ್ ಖಾತೆದಾರ ತನ್ನ ಖಾತೆಯಲ್ಲಿ ʼಪ್ಯಾನ್ 2.0ʼ, "ಕೇಂದ್ರ ಸರ್ಕಾರವು ಹೊಸ PAN ಕಾರ್ಡ್ ಆವೃತ್ತಿ PAN 2.0 ಅನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ ಆದರೆ ಇದಕ್ಕಾಗಿ ನೀವು ಏನನ್ನೂ ಮಾಡಬೇಕಾಗಿಲ್ಲ. ಸರ್ಕಾರವೇ ಹೊಸ ನವೀಕರಿಸಿದ ಪ್ಯಾನ್ ಕಾರ್ಡ್ ಅನ್ನು ನೇರವಾಗಿ ನಿಮ್ಮ ವಿಳಾಸಕ್ಕೆ ಕಳುಹಿಸುತ್ತದೆ. ಆದ್ದರಿಂದ ಜಾಗರೂಕರಾಗಿರಿ: ಯಾವುದೇ ಫೋನ್, ಸಂದೇಶ ಅಥವಾ ಮೇಲ್ಗೆ ಪ್ರತಿಕ್ರಿಯಿಸಬೇಡಿ ಅಥವಾ PAN ಕಾರ್ಡ್ ನವೀಕರಣಕ್ಕಾಗಿ ಯಾವುದೇ ಮಾಹಿತಿ ಅಥವಾ OTP ಅನ್ನು ನೀಡಬೇಡಿ. ಇಲ್ಲ ಎಂದರೆ ಇಲ್ಲ. ಜಾಗರೂಕರಾಗಿರಿ, ಸೈಬರ್ ವಂಚನೆ ತಪ್ಪಿಸಿ. ಈ ಸಂದೇಶವನ್ನು ಇತರ ಗುಂಪುಗಳಿಗೂ ಕಳುಹಿಸಿ. ಆದರೆ ಮೋಸ ಹೋಗಬೇಡಿ" ಎಂಬ ಶೀರ್ಷಿಕೆಯನ್ನು ನೀಡಿ ಪೋಸ್ಟ್ ಮಾಡಿದ್ದಾರೆ. ವೈರಲ್ ಆದ ಪೋಸ್ಟ್ನ ಸ್ಕ್ರೀನ್ಶಾಟ್ ಚಿತ್ರ ಇಲ್ಲಿದೆ ಡಿಸಂಬರ್ 15, 2024ರಂದು ʼಇಂಡಿಯನ್ ಸಿಟಿಜನ್ ಅಫೀಷಿಯಲ್ʼ ಎಂಬ ಇನ್ಸ್ಟಾಗ್ರಾಮ್ ಖಾತೆದಾರ ತನ್ನ ಖಾತೆಯಲ್ಲಿ ʼGovt. Has Announced A New Version Of PAN Card, PAN 2.0. Allotment, Updation Or Correction Will Be Done Free Of Cost & e-PAN Will Be Sent To Registered Mail Id. Important: To Update PAN Card, If Someone Calls, Texts, Or Contacts, Don't Share Any Information Or OTP. Be Aware, Protect Yourself From Cyber Fraudʼ ಎಂದು ಪೋಸ್ಟ್ನಲ್ಲಿರುವ ಚಿತ್ರದಲ್ಲಿ ಬರೆದಿರುವುದನ್ನು ನೋಡಬಹುದು. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಸರ್ಕಾರ PAN ಕಾರ್ಡ್ನ ಹೊಸ ಆವೃತ್ತಿಯನ್ನು ಪ್ರಕಟಿಸಿದೆ, PAN 2.0. ಹಂಚಿಕೆ, ನವೀಕರಣ ಅಥವಾ ತಿದ್ದುಪಡಿಯನ್ನು ಉಚಿತವಾಗಿ ಮಾಡಿ ಕೊಡಲಾಗುತ್ತಿದೆ ಮತ್ತು ಇ-ಪ್ಯಾನ್ನ್ನು ನಿಮ್ಮ ನೋಂದಾಯಿತ ಇಮೇಲ್ ಐಡಿಗೆ ಕಳುಹಿಸಲಾಗುತ್ತದೆ. ಎಚ್ಚರ: ಪ್ಯಾನ್ ಕಾರ್ಡ್ನ್ನು ನವೀಕರಿಸಲು, ಯಾರಾದರೂ ಕರೆ ಮಾಡಿ, ಮೆಸೇಜ್ ಅಥವಾ ಸಂಪರ್ಕ ಮಾಡಿ ನಿಮಗೆ ಬಂದತಹ ಒಟಿಪಿಯನ್ನು ಹೇಳಲು ಹೇಳಿದರೆ, ಯಾವುದೇ ಮಾಹಿತಿ ಅಥವಾ OTP ಅನ್ನು ಹಂಚಿಕೊಳ್ಳಬೇಡಿ. ಜಾಗೃತರಾಗಿರಿ, ಸೈಬರ್ ವಂಚನೆಯಿಂದ ನಿಮ್ಮನ್ನು ರಕ್ಷಿಸಿಕೊಳ್ಳಿʼ ಎಂದಿರುವುದನ್ನು ನಾವು ನೋಡಬಹುದು. ಮತ್ತಷ್ಟು ವೈರಲ್ ಆದ ಪೋಸ್ಟ್ಗಳನ್ನು ನೀವಿಲ್ಲಿ, ಇಲ್ಲಿ, ಇಲ್ಲಿ, ಇಲ್ಲಿ ನೋಡಬಹುದು ಫ್ಯಾಕ್ಟ್ಚೆಕ್ ವೈರಲ್ ಆದ ಸುದ್ದಿ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವೈರಲ್ ಆದ ಸುದ್ದಿಯ ಶೀರ್ಷಿಕೆಯ ಪ್ರಕಾರ ಸರ್ಕಾರವೇ ಹೊಸ ನವೀಕರಿಸಿದ ಪ್ಯಾನ್ ಕಾರ್ಡ್ನ್ನು ನೇರವಾಗಿ ನಿಮ್ಮ ವಿಳಾಸಕ್ಕೆ ಉಚಿತವಾಗಿ ಕಳುಹಿಸುತ್ತದೆ ಎಂಬ ಸುದ್ದಿಯಲ್ಲಿ ಸತ್ಯಾಂಶವಿಲ್ಲ. ವಾಸ್ತವವಾಗಿ ಹೊಸ ಪ್ಯಾನ್ ಕಾರ್ಡ್ ಪಡೆಯಲು ಸರ್ಕಾರಕ್ಕೆ ಶುಲ್ಕ ಪಾವತಿಸಬೇಕು. ನಾವು ವೈರಲ್ ಆದ ಸುದ್ದಿಯ ಬಗ್ಗೆ ಸತ್ಯಾಂಶವನ್ನು ತಿಳಿಯಲು ವೈರಲ್ ಆದ ಚಿತ್ರವನ್ನು ಬಳಸಿ ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮತ್ತು ಕೆಲವು ಪ್ರಮುಖ ಕೀವರ್ಡ್ಗಳ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ಡಿಸಂಬರ್ 05, 2024ರಂದು ʼಟೈಮ್ಸ್ ಆಫ್ ಇಂಡಿಯಾʼ ವೆಬ್ಸೈಟ್ನಲ್ಲಿ ʼPAN 2.0: With PAN Card going digital, will you need a physical PAN for KYC, ID proof?ʼ ಎಂಬ ಶೀರ್ಷಿಕೆಯೊಂದಿಗೆ ವರದಿಯೊಂದನ್ನು ನಾವು ಕಂಡುಕೊಂಡೆವು. ವರದಿಯಲ್ಲಿ " ಹಣಕಾಸು ಸಚಿವಾಲಯವು ಕಳೆದ ವರ್ಷ ನವೆಂಬರ್ 26, 2024ರಂದು ಪತ್ರಿಕಾ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ. ಪ್ಯಾನ್ ಅಲಾಟ್ಮೆಂಟ್,ಪ್ಯಾನ್ ಅಪ್ಡೇಟ್ ಅಥವಾ ಪ್ಯಾನ್ ಕಾರ್ಡ್ ತಿದ್ದುಪಡಿಯನ್ನು ಉಚಿತವಾಗಿ ತಮ್ಮ e-PAN ಅನ್ನು ನೋಂದಾಯಿತ ಮೇಲ್ ಐಡಿಗೆ ಕಳುಹಿಸಲಾಗುತ್ತದೆ. ಪಾನ್ 2.0 ಯೋಜನೆಯಡಿ, ನೀವು ರೂ. 50 ಪಾವತಿಸಿ ಹೊಸ ಪ್ಯಾನ್ ಕಾರ್ಡ್ ಪಡೆಯಬಹುದು. ಅದೇ ರೀತಿ, ಭಾರತದ ಹೊರಗಿನವರು 15 ರೂಪಾಯಿ ಮತ್ತು ಅಂಚೆ ಶುಲ್ಕವನ್ನು ಪಾವತಿಸಿ ಕಾರ್ಡ್ನ್ನು ಪಡೆಯಬಹುದು ಎಂದು ವರದಿಯಾಗಿರುವುದನ್ನು ನಾವು ನೋಡಬಹುದು. ಮತ್ತಷ್ಟು ಮಾಹಿತಿಯನ್ನು ಕಲೆಹಾಕಲು ನಾವು ಕೆಲವು ಕೀವರ್ಡ್ಗಳನ್ನು ಬಳಸಿ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ನವಂಬರ್ 26, 2024ರಂದು ಆದಾಯ ತೆರಿಗೆ ಇಲಾಖೆ ಹೊರಡಿಸಿದ ಪತ್ರಿಕಾ ಪ್ರಕಟನೆಯೊಂದು ನಮಗೆ ದೊರಕಿತು. ಈ ಪ್ರಕಟನೆಯಲ್ಲಿ ನಾವು ನೋಡುವುದಾದರೆ, ಪ್ಯಾನ್ ಕಾರ್ಡ್ನ್ನು ಹೊಂದಿರುವವರು, ಹೊಸದಾದ ಪ್ಯಾನ್ 2.0 ಯೋಜನೆಗಾಗಿ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ ಎಂದು ತಿಳಿಸಲಾಗಿದೆ. ಅಲ್ಲದೆ ಅಸ್ತಿತ್ವದಲ್ಲಿರುವ ಪ್ಯಾನ್ ಹೊಂದಿರುವವರು ತಮ್ಮ ಅಸ್ತಿತ್ವದಲ್ಲಿರುವ ಪ್ಯಾನ್ ನಲ್ಲಿ ಯಾವುದೇ ತಿದ್ದುಪಡಿಗಳು ಅಥವಾ ಅಪ್ಡೇಟ್ಗಳನ್ನು ಮಾಡಲು ಬಯಸಿದರೆ ಇ-ಮೇಲ್ ಐಡಿ, ಮೊಬೈಲ್ ನಂಬರ್, ವಿಳಾಸ ಅಥವಾ ನಿಮ್ಮ ಹೆಸರು, ಹುಟ್ಟಿದ ದಿನಾಂಕವನ್ನು ಬದಲಾಯಿಸಲು ಪ್ಯಾನ್ 2.0 ಸ್ಕೀಮ್ನ್ನು ಪ್ರಾರಂಭಿಸಿದ ನಂತರ ಉಚಿತವಾಗಿ ಸರಿಪಡಿಸಿಕೊಳ್ಳಬಹುದು. ಹಳೆಯ ಪ್ಯಾನ್ ಕಾರ್ಡ್ ಯೋಜನೆ ಅಡಿ ಕೂಡ ಈ ಬದಲಾವಣೆಗಳು ಮಾನ್ಯವಾಗಿದೆ ಎಂದು ಇದರಲ್ಲಿ ಉಲ್ಲೇಖಿಸಲಾಗಿರುವುದು ಕಂಡುಬಂದಿದೆ ಎಂಬುದು ಪತ್ರಿಕಾ ಪ್ರಕಟನೆಯಲ್ಲಿರುವುದನ್ನು ನಾವು ನೋಡಬಹುದು. ಇದರಿಂದ ಸಾಭೀತಾಗಿದ್ದೇನೆಂದರೆ, ವೈರಲ್ ಆದ ಸುದ್ದಿ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವೈರಲ್ ಆದ ಸುದ್ದಿಯ ಶೀರ್ಷಿಕೆಯ ಪ್ರಕಾರ ಸರ್ಕಾರವೇ ಹೊಸ ನವೀಕರಿಸಿದ ಪ್ಯಾನ್ ಕಾರ್ಡ್ನ್ನು ನೇರವಾಗಿ ನಿಮ್ಮ ವಿಳಾಸಕ್ಕೆ ಉಚಿತವಾಗಿ ಕಳುಹಿಸುತ್ತದೆ ಎಂಬ ಸುದ್ದಿಯಲ್ಲಿ ಸತ್ಯಾಂಶವಿಲ್ಲ. ವಾಸ್ತವವಾಗಿ ಹೊಸ ಪ್ಯಾನ್ ಕಾರ್ಡ್ ಪಡೆಯಲು ಸರ್ಕಾರಕ್ಕೆ ಶುಲ್ಕ ಪಾವತಿಸಬೇಕು. ఇప్పుడు Desh Telugu Keyboard యాప్ సహాయంతో మీ ప్రియమైన వారికి తెలుగులో సులభంగా మెసేజ్ చెయ్యండి. Desh Telugu Keyboard and Download The App Now
schema:mentions
schema:reviewRating
schema:author
schema:datePublished
schema:inLanguage
  • Telugu
schema:itemReviewed
Faceted Search & Find service v1.16.115 as of Oct 09 2023


Alternative Linked Data Documents: ODE     Content Formats:   [cxml] [csv]     RDF   [text] [turtle] [ld+json] [rdf+json] [rdf+xml]     ODATA   [atom+xml] [odata+json]     Microdata   [microdata+json] [html]    About   
This material is Open Knowledge   W3C Semantic Web Technology [RDF Data] Valid XHTML + RDFa
OpenLink Virtuoso version 07.20.3238 as of Jul 16 2024, on Linux (x86_64-pc-linux-musl), Single-Server Edition (126 GB total memory, 3 GB memory in use)
Data on this page belongs to its respective rights holders.
Virtuoso Faceted Browser Copyright © 2009-2025 OpenLink Software