About: http://data.cimple.eu/claim-review/90885cad1615c24191291bb7fcaa7364022d2ca1e131ed1a623204b3     Goto   Sponge   NotDistinct   Permalink

An Entity of Type : schema:ClaimReview, within Data Space : data.cimple.eu associated with source document(s)

AttributesValues
rdf:type
http://data.cimple...lizedReviewRating
schema:url
schema:text
  • ಫ್ಯಾಕ್ಟ್ಚೆಕ್: ಬಾಲಿವುಡ್ ಬಾದ್ಷಾ ಶಾರುಖ್ ಖಾನ್ ಆಸ್ಪತ್ರೆಗೆ ದಾಖಲಾಗಿದ್ದಾರೆಂದು ಸುಳ್ಳು ಸುದ್ದಿ ಹಂಚಿಕೆ ಇತ್ತೀಚಿಗೆ ಬಾಲಿವುಡ್ ಬಾದ್ಷಾ ಶಾರುಖ್ ಖಾನ್ಗೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. Claim :ಚಿಂತಾಜನಕ ಸ್ಥಿತಿಯಲ್ಲಿರುವ ಬಾಲಿವುಡ್ ನಟ ಶಾರುಖ್ ಖಾನ್ Fact :ಶಾರುಖ್ ಖಾನ್ ಆಸ್ಪತ್ರೆಗೆ ದಾಖಲಾಗಿದ್ದಾರೆಂದು ಸುಳ್ಳು ಸುದ್ದಿ ಹಂಚಿಕೆ ಇತ್ತೀಚಿಗೆ ಬಾಲಿವುಡ್ ಬಾದ್ಷಾ ಶಾರುಖ್ ಖಾನ್ಗೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೈರಲ್ ಆದ ವಿಡಿಯೋವನ್ನು ನೋಡುವುದಾದರೆ, ನಟ ಶಾರುಖ್ ಖಾನ್ ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಯ ಬೆಡ್ ಮೇಲೆ ಮಲಗಿರುವುದನ್ನು ನೋಡಬಹುದು. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಶಾರುಖ್ ಖಾನ್ ಆಸ್ಪತ್ರೆಗೆ ದಾಖಲಾಗಿದ್ದಾರೆ ಅವರ ಆರೋಗ್ಯದ ಸ್ಥಿತಿ ತುಂಬಾ ಹದಗೆಟ್ಟಿದೆ ಎಂಬ ಶಿರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ, ನವಂಬರ್ 26, 2024ರಂದು ʼರೂ ಕುಶಲ್ʼ ಎಂಬ ಇನ್ಸ್ಟ್ರಾಗ್ರಾಮ್ ಖಾತೆದಾರರೊಬ್ಬರು ʼಬಾಲಿವುಡ್ನ ಮೆಗಾಸ್ಟಾರ್ ಶಾರುಖ್ ಖಾನ್ ಹೀಟ್ ಸ್ಟ್ರೋಕ್ನಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಎಲ್ಲರೂ ದೇವರಲ್ಲಿ ಪ್ರಾರ್ಥಿಸಿʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಫ್ಯಾಕ್ಟ್ಚೆಕ್ ವೈರಲ್ ಆದ ಸುದ್ದಿ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ನಟ ಶಾರುಖ್ ಖಾನ್ ಆರೋಗ್ಯವಾಗಿಯೇ ಇದ್ದಾರೆ. ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ನಾವು ವೈರಲ್ ಆದ ಸುದ್ದಿಯ ಬಗ್ಗೆ ಸತ್ಯಾಂಶವನ್ನು ತಿಳಿಯಲು ವೈರಲ್ ಆದ ವಿಡಿಯೋವಿನಲ್ಲಿರುವ ಕೆಲವು ಪ್ರಮುಖ ಫ್ರೇಮ್ಗಳನ್ನು ಬಳಸಿ ಗೂಗಲ್ ರಿವರ್ಸ್ ಇಮೇಜ್ ಮೂಲಕ ಹುಡುಕಾಟ ನಡೆಸಿದೆವು ಹುಡುಕಾಟದಲ್ಲಿ ನಮಗೆ, ಇತ್ತೀಚಿಗೆ ಶಾರುಖ್ ಆಸ್ಪತ್ರೆಗೆ ದಾಖಲಾಗಿರುವ ಬಗ್ಗೆ ಯಾವುದೇ ಮಾಧ್ಯಮ ವರದಿಗಳಾಗಲಿ, ಸುದ್ದಿಯಾಗಲಿ ನಮಗೆ ಸಿಗಲಿಲ್ಲ. ನಮಗೆ ಮೇ 22, 2024ರಂದು ಶಾರುಖ್ ಖಾನ್ ಅಹಮದಾಬಾದ್ನ ಕೆ.ಡಿ ಆಸ್ಪತ್ರೆಗೆ ದಾಖಲಾಗಿರುವ ಬಗ್ಗೆ ಸುದ್ದಿ ಮಾಧ್ಯಮಗಳಲ್ಲಿರುವ ವರದಿಗಳು ಕಂಡುಬಂದಿತು. ವರದಿಯಲ್ಲಿ, ಐಪಿಎಲ್ ಪಂದ್ಯ ನೋಡಲು ಬಂದಿದ್ದ ಶಾರುಖ್ ಖಾನ್ಗೆ ಹೀಟ್ ಸ್ಟ್ರೋಕ್ನಿಂದಾಗಿ ಹಠಾತ್ ಆಗಿ ಆರೋಗ್ಯ ಹದಗೆಟ್ಟಿದ್ದರಿಂದ ಅವರನ್ನು ಅಹಮದಾಬಾದ್ನಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ. ಮೇ 22, 2024ರಂದು ಟಿವಿ9 ಮರಾಠಿ ಯೂಟ್ಯೂಬ್ ಚಾನೆಲ್ನಲ್ಲಿ " ShahRukh Khan अहमदाबादच्या K.D Hospital मध्ये भरती : tv9 Marathi". ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಶಾರುಖ್ ಖಾನ್ ಅವರನ್ನು ಅಹಮದಾಬಾದ್ನ ಕೆಡಿ ಆಸ್ಪತ್ರೆಗೆ ದಾಖಲಿಸಲಾಗಿದೆʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಮೇ 23, 2024ರಂದು ಎನ್ಡಿಟಿವಿ ವರದಿಯಲ್ಲಿ ʼShah Rukh Khan Admitted To Ahmedabad Hospital Due To Heat Strokeʼ ಎಂಬ ಶೀರ್ಷಿಕೆಯೊಂದಿಗೆ ವರದಿಯಾಗಿದೆ. ವರದಿಯಲ್ಲಿ, ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್ರೈಸರ್ಸ್ ಹೈದರಾಬಾದ್ ನಡುವಿನ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯವನ್ನು ವೀಕ್ಷಿಸಲು ಬಂದಿದ್ದ ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್, ಹೀಟ್ ಸ್ಟ್ರೋಕ್ನಿಂದಾಗಿ ಅವರನ್ನು ಅಹಮದಾಬಾದ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಹಮದಾಬಾದ್ನಲ್ಲಿ 45 ಡಿಗ್ರಿ ಸೆಲ್ಸಿಯಸ್ನ ಅಧಿಕ ತಾಪಮಾನದ ನಡುವೆ ನಟ ಡಿಹೈಡ್ರೇಷನ್ನಿಂದ ಬಳಲುತ್ತಿದ್ದರು. ಅವರ ಆರೋಗ್ಯ ಸ್ಥಿರವಾಗಿದ್ದರೂ ಅವರು ವೈದ್ಯಕೀಯ ನಿಘಾದಲ್ಲಿ ಇಟ್ಟಿದ್ದಾರೆ. ಆಸ್ಪತ್ರೆಯ ಸುತ್ತಲೂ ಭದ್ರತೆಯನ್ನು ಬಿಗಿಗೊಳಿಸಲಾಗಿದೆ" ಎಂದು ಸುದ್ದಿ ಸಂಸ್ಥೆ IANS ವರದಿ ಮಾಡಿದೆ. ಮತ್ತಷ್ಟು ಮಾಧ್ಯಮ ವರದಿಗಳು ಇಲ್ಲಿ, ಇಲ್ಲಿ ನೋಡಬಹುದು. ನಾವು ವೈರಲ್ ಆದ ವಿಡಿಯೋವಿನ ಒಂದು ಕೀಫ್ರೇಮ್ನ್ನು ಉಪಯೋಗಿಸಿ ಗೂಗಲ್ ಲೆನ್ಸ್ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ 15 ಸೆಪ್ಟಂಬರ್ 2024ರಂದು ʼಪ್ರಿನ್ಸ್ ಹಮದ್ʼ ಎಂಬ ಫೇಸ್ಬುಕ್ ಖಾತೆದಾರರೊಬ್ಬರು ʼMy Dad is very sick, i need your prayers fan send me a message request with your prayers i will Appreciateʼ ಎಂಬ ಶೀರ್ಷಿಕೆಯೊಂದಿಗೆ ಫೋಟೋವನ್ನು ಹಂಚಿಕೊಂಡಿದ್ದರು. ಇದೇ ಚಿತ್ರಕ್ಕೆ ಶಾರುಖ್ ಖಾನ್ರ ಮುಖವನ್ನು ಎಡಿಟ್ ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. ವೈರಲ್ ಆದ ಚಿತ್ರ ಮತ್ತು ಮೂಲ ಚಿತ್ರದ ಹೋಲಿಕೆಯನ್ನು ನೀವಿಲ್ಲಿ ನೋಡಬಹುದು ಇದರಿಂದ ಸಾಭಿತಾಗಿದ್ದೇನೆಂದರೆ, ವೈರಲ್ ಆದ ಸುದ್ದಿ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ ಎಂದು ಸ್ಪಷ್ಟವಾಗಿದೆ. ವಾಸ್ತವವಾಗಿ ನಟ ಶಾರುಖ್ ಖಾನ್ ಇತ್ತೀಚಿಕೆ ಯಾವುದೇ ಆಸ್ಪತ್ರೆಗೂ ದಾಖಲಾಗಿಲ್ಲ. ಯಾರದೂ ಫೋಟೋವನ್ನು ಎಡಿಟ್ ಮಾಡಿ ಶಾರುಖ್ ಖಾನ್ರ ಚಿತ್ರವೆಂದು ಸುಳ್ಳು ಹೇಳಿಕೆಯೊಂದಿಗೆ ಸಾಮಾಜಿಕ ಬಳಕೆದಾರರು ಹಂಚಿಕೊಂಡಿದ್ದಾರೆ.
schema:mentions
schema:reviewRating
schema:author
schema:datePublished
schema:inLanguage
  • Telugu
schema:itemReviewed
Faceted Search & Find service v1.16.115 as of Oct 09 2023


Alternative Linked Data Documents: ODE     Content Formats:   [cxml] [csv]     RDF   [text] [turtle] [ld+json] [rdf+json] [rdf+xml]     ODATA   [atom+xml] [odata+json]     Microdata   [microdata+json] [html]    About   
This material is Open Knowledge   W3C Semantic Web Technology [RDF Data] Valid XHTML + RDFa
OpenLink Virtuoso version 07.20.3238 as of Jul 16 2024, on Linux (x86_64-pc-linux-musl), Single-Server Edition (126 GB total memory, 3 GB memory in use)
Data on this page belongs to its respective rights holders.
Virtuoso Faceted Browser Copyright © 2009-2025 OpenLink Software