About: http://data.cimple.eu/claim-review/97a924db9cfc59e849156a45133376ff477b08f6fd05f984c7e08ccc     Goto   Sponge   NotDistinct   Permalink

An Entity of Type : schema:ClaimReview, within Data Space : data.cimple.eu associated with source document(s)

AttributesValues
rdf:type
http://data.cimple...lizedReviewRating
schema:url
schema:text
  • ಫ್ಯಾಕ್ಟ್ಚೆಕ್: ಬೆಂಗಳೂರಿನಲ್ಲಿ ಶಾಟ್ ಸರ್ಕ್ಯೂಟ್ ಸಂಭವಿಸಿದೆ ಎಂದು ವಿಯೆಟ್ನಂನ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ. ಬೆಂಗಳೂರಿನಲ್ಲಿ ಶಾಟ್ ಸರ್ಕ್ಯೂಟ್ ಸಂಭವಿಸಿದೆ ಎಂದು ವಿಯೆಟ್ನಂನ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ. Claim :ಮಳೆಯಿಂದಾಗಿ ಬೆಂಗಳೂರಿನ ರಸ್ತೆಯಲ್ಲಿ ಶಾಟ್ ಸರ್ಕ್ಯೂಟ್ ಸಂಭವಿಸಿದೆ. Fact :ಶಾಟ್ ಸರ್ಕ್ಯೂಟ್ ಸಂಭವಿಸಿದ ಘಟನೆ ಬೆಂಗಳೂರಿನದ್ದಲ್ಲ, ವಿಯೆಟ್ನೆಂನದ್ದು. ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿನ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗುತ್ತಿದ್ದು, ಮುಂದಿನ ಒಂದು ವಾರಗಳ ಕಾಲ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಲವೆಡೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಹಲವೆಡೆ ರಸ್ತೆಗಳು ಜಲಾವೃತಗೊಂಡಿದ್ದು, ಮಳೆಯಿಂದ ಹಲವು ಅವಾಂತರಗಳು ಸೃಷ್ಟಿಯಾಗಿದೆ. ಬಂಗಾಳಕೊಲ್ಲಿಯಲ್ಲಿ ಡಾನಾ ಚಂಡಮಾರುತದಿಂದಾಗಿ, ವಾಯುಭಾರ ಕುಸಿತದಿಂದ ಹಲವು ರಾಜ್ಯಗಳಲ್ಲಿ ಮಳೆಯಾಗುತ್ತಿದೆ. ಮಳೆಯಿಂದಾಗಿ ವಾಹನ ಸವಾರರು ಪರದಾಡುವ ಪರಿಸ್ಥಿತಿ ಎದುರಾಗಿದೆ. ಧಾರಾಕಾರ ಮಳೆಯಿಂದಾಗಿ ಉದ್ಯಾನ ನಗರಿಯ ಅರ್ಧದಷ್ಟು ಭಾಗ ಮಳೆ ನೀರು ತುಂಬಿ ಹೋಗಿದೆ. ಇತ್ತೀಚಿಗೆ ಬೆಂಗಳೂರಿನಲ್ಲಿ ಸುರಿದ ಮಳೆಯ ವಿಡಿಯೋ ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ಹರಿದಾಡುತ್ತಿದೆ. ಅಕ್ಟೋಬರ್, 20,2024ರಂದು ʼಯತ್ನಾಳ್ ಹಿಂದೂ ಸೇನೆʼ ಎಂಬ ಎಕ್ಸ್ ಖಾತೆದಾರ ತನ್ನ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡು "ಬ್ರಾಂಡ್ ಬೆಂಗಳೂರು ಬಿಸಿ ನೀರು ಭಾಗ್ಯ ಅಷ್ಟೇ. ಯಾರಿಗೆ ಏನಾದ್ರೆ ನಮಗೇನು ಅಂತಿದೆ ಕಾಸಿಲ್ಲದ ಸರ್ಕಾರ" ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವಿಡಿಯೋವಿನಲ್ಲಿ "ಜನರ ಪ್ರಾಣಕ್ಕೆ ಹೊಣೆ ಯಾರು ಬ್ರಾಂಡ್ ಬೆಂಗಳೂರು ಮಂತ್ರಿಗಳೇ" ಎಂಬ ಕ್ಯಾಪ್ಷನ್ನೊಂದಿಗೆ ರಸ್ತೆಯಲ್ಲಿ ಶಾರ್ಟ್ ಸರ್ಕ್ಯೂಟ್ ಆಗುತ್ತಿದ್ದ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವಿಟಿಸಿ ಚೇಂಜಸ್ ಚಾನೆಲ್ ಎಂಬ ಯೂಟ್ಯೂಬ್ ಖಾತೆಯಲ್ಲಿ "News in Bangalore janara pranakke onee yaru branded mantrigale in news for karnataka" ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ""ಬೆಂಗಳೂರಿನ ಸುದ್ದಿ: ಜನರ ಪ್ರಾಣಕ್ಕೆ ಹೊಣೆ ಯಾರು? ಬ್ರಾಂಡೆಡ್ ಮಂತ್ರಿಗಳೇ ಕರ್ನಾಟಕದ ಸುದ್ದಿ" ಎಂದು ಬರೆದು ಹಂಚಿಕೊಂಡಿರುವುದನ್ನು ನಾವು ನೋಡಬಹುದು. ಫ್ಯಾಕ್ಟ್ಚೆಕ್ವೈರಲ್ ಆದ ಸುದ್ದಿ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಪ್ರಯತ್ನ ಮಾಡುತ್ತಿದೆ. ಮಳೆಯಿಂದಾಗಿ ಬೆಂಗಳೂರಿನ ರಸ್ತೆಯಲ್ಲಿ ವಿದ್ಯುತ್ ತಂತಿ ಬಿದ್ದು ಶಾಟ್ ಸರ್ಕ್ಯೂಟ್ ಸಂಭವಿಸಿದೆ ಎಂದು ಹರಿದಾಡುತ್ತಿರುವ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ವೈರಲ್ ಆದ ವಿಡಿಯೋ ಬೆಂಗಳೂರಿನದಲ್ಲ ಬದಲಿಗೆ ವಿಯೆಟ್ನೆಂನದ್ದು. ನಾವು ವೈರಲ್ ಆದ ಸುದ್ದಿಯಲ್ಲಿ ಸತ್ಯಾಂಶವನ್ನು ತಿಳಿಯಲು ವೈರಲ್ ಆದ ವಿಡಿಯೋವಿನಲ್ಲಿರುವ ಕೆಲವು ಪ್ರಮುಖ ಫ್ರೇಮ್ಗಳನ್ನು ಉಪಯೋಗಿಸಿ ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ, ವೈರಲ್ ಆದ ವಿಡಿಯೋ ವಿಯೆಟ್ನೆಂನದ್ದು ಎಂದು ಹೇಳುವ ಕೆಲವು ವರದಿಗಳು ಕಂಡುಬಂದವು. ಅಕ್ಟೋಬರ್, 16, 2024ರಂದು "ವಿಯೆಟ್ನಂ ಪ್ಲಸ್" ಎಂಬ ವೆಬ್ಸೈಟ್ನಲ್ಲಿ ಪ್ರಕಟಿಸಿರುವ ವರದಿಯಲ್ಲಿ "Cảnh tượng gây sốc khi dây điện đứt rơi xuống đường đang ngập nước ở Cần Thơ" ಎಂದು ವಿಯಟ್ನಿಂಸೀ ಭಾಷೆಯಲ್ಲಿ ವರದಿಯೊಂದನ್ನು ನಾವು ಕಂಡುಕೊಂಡೆವು. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ "ಕ್ಯಾನ್ ಥೋನಿಯಲ್ಲಿ ವಿದ್ಯುತ್ ತಂತಿಗಳು ಜಲಾವೃತಗೊಂಡ ರಸ್ತೆಯ ಮೇಲೆ ಬಿದ್ದಾಗ ಸಂಭವಿಸಿದ ಆಘಾತಿಕಾರಿ ದೃಶ್ಯ" ಎಂಬ ಹೆಡ್ಲೈನೊಂದಿಗೆ ವರದಿಯಾಗಿರುವುದನ್ನು ನೋಡಬಹುದು. ವರದಿಯಲ್ಲಿ "ರಸ್ತೆಯಲ್ಲಿ ನಿಂತಿರುವ ನೀರಿನ ಮೇಲ್ಮೈನಲ್ಲಿ ಅಪಾಯಕಾರಿಯಾಗಿ ಮತ್ತು ವಿಚಿತ್ರವಾಗಿರುವ ಕಾಣುವ ಬೆಂಕಿಯ ಕಿಡಿಗಳನ್ನು ನೋಡಿ ಜನರು ಭಯಭೀತರಾಗಿದ್ದರು" ಎಂದು ಬರೆದು ಹಂಚಿಕೊಂಡಿದ್ದಾರೆ. ವಿಟಿಸಿ14 ಎಂಬ ಯೂಟ್ಯೂಬ್ ಚಾನೆಲ್ನಲ್ಲಿ ವೈರಲ್ ಆದ ವಿಡಿಯೋವನ್ನು "Hãi hùng cảnh dây điện đứt rơi xuống đường ngập, bắn tia lửa tung tóe | VTC14" ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿ ವರದಿಯನ್ನು ನೋಡಿದಾಗ "ತುಂಡಾದ ವಿದ್ಯುತ್ ತಂತಿಗಳು ಜಲಾವೃತಗೊಂಡ ರಸ್ತೆಗೆ ಬೀಳುವ ಭಯಾನಕ ದೃಶ್ಯ, ಇದರಿಂದ ಎಲ್ಲೆಡೆ ಕಿಡಿಗಳು ಹಾರಿವೆ” (ವಿಯೆಟ್ನಾಮೀಸ್ ನಿಂದ ಅನುವಾದಿಸಲಾಗಿದೆ) ಶೀರ್ಷಿಕೆ ನೀಡಲಾಗಿದೆ. ಜೊತೆಗೆ ವೀಡಿಯೋದ ವಿವರಣೆಯಲ್ಲಿ “ಅಕ್ಟೋಬರ್ 14ರಂದು, ಸುಮಾರು 2 ಗಂಟೆಗಳ ಕಾಲ ಸುರಿದ ಭಾರಿ ಮಳೆಯಿಂದಾಗಿ ಕ್ಯಾನ್ ಥೋ ನಗರದ ಬೀದಿಗಳಲ್ಲಿ ಮಳೆಯ ನೀರು ಪ್ರವಾಹಕ್ಕೆ ಕಾರಣವಾಗಿತ್ತು. ಕೆಲವು ಸ್ಥಳಗಳಲ್ಲಿ ವಾಹನಗಲ ಟೈರ್ಗಳು ಅರ್ಥಕ್ಕಿನ ಮೇಲ್ಪಟ್ಟು ನೀರು ನಿಂತಿರುವುದನ್ನು ನೋಡಬಹುದು. ಈ ಮಳೆಯಿಂದಾಗಿ ಜನರ ಜೀವನ ಅಸ್ಥವ್ಯಸ್ಥವಾಗಿದೆ" ಎಂದು ವರದಿಯಾಗಿರುವುದನ್ನು ನಾವು ನೋಡಬಹುದು.
schema:mentions
schema:reviewRating
schema:author
schema:datePublished
schema:inLanguage
  • Telugu
schema:itemReviewed
Faceted Search & Find service v1.16.115 as of Oct 09 2023


Alternative Linked Data Documents: ODE     Content Formats:   [cxml] [csv]     RDF   [text] [turtle] [ld+json] [rdf+json] [rdf+xml]     ODATA   [atom+xml] [odata+json]     Microdata   [microdata+json] [html]    About   
This material is Open Knowledge   W3C Semantic Web Technology [RDF Data] Valid XHTML + RDFa
OpenLink Virtuoso version 07.20.3238 as of Jul 16 2024, on Linux (x86_64-pc-linux-musl), Single-Server Edition (126 GB total memory, 3 GB memory in use)
Data on this page belongs to its respective rights holders.
Virtuoso Faceted Browser Copyright © 2009-2025 OpenLink Software