schema:text
| - ಫ್ಯಾಕ್ಟ್ಚೆಕ್: ಸ್ವಾಮಿ ಅವಿಮುಕ್ತೇಶ್ವರಾನಂದರವರ ಮೇಲೆ ಪೊಲೀಸರು ಲಾಠಿಚಾರ್ಜ್ ನಡೆಸಿದ್ದಾರೆ ಎಂದು 2015ರ ವಿಡಿಯೋ ಹಂಚಿಕೆ
ಸ್ವಾಮಿ ಅವಿಮುಕ್ತೇಶ್ವರಾನಂದರವರ ಮೇಲೆ ಪೊಲೀಸರು ಲಾಠಿಚಾರ್ಜ್ ನಡೆಸಿದ್ದಾರೆ ಎಂದು 2015ರ ವಿಡಿಯೋ ಹಂಚಿಕೆ
Claim :
ಪೊಲೀಸರು ಸ್ವಾಮಿ ಅವಿಮುಕ್ತೀಶ್ವರಾನಂದರವರ ಮೇಲೆ ಲಾಠಿ ಚಾರ್ಜ್ ಮಾಡಿದ್ದಾರೆFact :
ವೈರಲ್ ಆದ ವಿಡಿಯೋ 2015ರದ್ದುಇತ್ತೀಚಿಗೆ ಮಹಾಕುಂಭಮೇಳದಲ್ಲಿ ಸ್ವಾಮಿ ಅವಿಮುಕ್ತೀಶ್ವರಾನಂದರವರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ ಎಂವ ಸುದ್ದಿಯೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ವೈರಲ್ ಆದ ವಿಡಿಯೋವಿನಲ್ಲಿ ಜ್ಯೋತಿರ್ಮಠದ ಶಂಕರಾಚಾರ್ಯ ಶ್ರೀ ಅವಿಮುಕ್ತೇಶ್ವರಾನಂದ ಸರಸ್ವತಿ ಶ್ರೀಗಳನ್ನು ಬೆನ್ನಟ್ಟಿ ಪೊಲೀಸರು ಲಾಠಿ ಚಾರ್ಜ್ ಮಾಡುತ್ತಿರುವುದನ್ನು ನೋಡಬಹುದು. ಅವಿಮುಕ್ತೇಶ್ವರನಂದ ಅವರೇ ʼನನಗೆ ಹೊಡೆಯುವುದಾದರೆ ಹೊಡೆಯಿರಿʼ ಎಂದು ಹೇಳುತ್ತಾರೆ. ಬಿಜೆಪಿ ವಿರುದ್ದ ಮಾತನಾಡಿದವರು ಎಂತಹ ಹಿಂದುವಾದರೂ ಅಥವಾ ಹಿಂದೂತ್ವವಾದಿಯಾದರೂ ಸಹ ಅವರನ್ನು ಬಿಜೆಪಿ ಹಿಂದೂ ವಿರೋಧಿಯನ್ನಾಗಿ ಮಾಡಿಬಿಡುತ್ತದೆ. ಇದೀಗ ಸ್ವಾಮಿ ಅವಿಮುಕೇಶ್ವರಾನಂದರ ಸರದಿ. ʼಬಿಜೆಪಿ ಸರ್ಕಾರದ ವಿರುದ್ಧ ಎರಡು ಮಾತಾಡಿದ ಕಾರಣಕ್ಕೆ ಹಿಂದು ಸಮುದಾಯದ ಒಬ್ಬ ಸ್ವಾಮೀಜಿಯ ಪರಿಸ್ಥಿತಿ ನೋಡಿʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಬಳಕೆದಾರರು ವ್ಯಾಪಕವಾಗಿ ಹಂಚಿಕೊಂಡಿದ್ದಾರೆ.
ʼಮಂಜು ಕಂಬಳೆʼ ಎಂಬ ಫೇಸ್ಬುಕ್ ಖಾತೆದಾರರ ತನ್ನ ಖಾತೆಯಲ್ಲಿ ವಿಡಿಯೋವನ ಕ್ಯಾಪ್ಷನ್ ಆದ ʼಬಿಜೆಪಿ ವಿರುದ್ದ ಮಾತಾಡಿದ್ರೆ ಇದೇ ಪರಿಸ್ಥಿತಿ ದೇಶದಲ್ಲಿ. ಸ್ವಾಮೀಜಿ ಆದ್ರೆ ಏನು, ಇನ್ನೋಬ್ಬರಾದ್ರೆ ಏನು, ದೇಶ ಅಪಾಯದಲ್ಲಿದೆ ಎಂದು ವಿಡಿಯೋದಲ್ಲಿ ಬರೆದಿರುವುದನ್ನು ನೋಡಬಹುದು. ʼಬಿಜೆಪಿ ಸರ್ಕಾರದ ವಿರುದ್ಧ ಎರಡು ಮಾತಾಡಿದ ಕಾರಣಕ್ಕೆ ಹಿಂದು ಸಮುದಾಯದ ಒಬ್ಬ ಸ್ವಾಮೀಜಿಯ ಪರಿಸ್ಥಿತಿ ನೋಡಿʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ವೈರಲ್ ಆದ ವಿಡಿಯೋವಿನ ಸ್ಕ್ರೀನ್ಶಾಟ್ನ್ನು ನೀವಿಲ್ಲಿ ನೋಡಬಹುದು.
ರಾಕೇಶ್ ಭಾರಧ್ವಾಜ್ ಎಂಬ ಎಕ್ಸ್ ಖಾತೆದಾರ ತನ್ನ ಖಾತೆಯಲ್ಲಿ ʼशंकराचार्य पर बर्बर लाठीचार्ज। हिन्दुओं की आस्था पर करारी चोट | हिन्दू-मुस्लिम गाली-गलौज करने वाले बेशर्म सनातन विरोधी सराकार का हिन्दू विरोधी विकराल चेहरा बेनकाब हो रहा है। कहां है प्रपंची RSS? कहां है बजरंग दल? कहां है सडे गले बदबूदार कपडो से पहचान करने वाले किडे!ʼ ಎಂಬ ಶೀರ್ಷಿಕೆಯೊಂದಿಗೆ ವೈರಲ್ ಆದ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಹಿಂದಿಯಲ್ಲಿರುವ ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼ ಶಂಕರಾಚಾರ್ಯರ ಮೇಲೆ ಅಮಾನುಷ ಲಾಠಿ ಪ್ರಹಾರ. ಹಿಂದೂಗಳ ನಂಬಿಕೆಗೆ ಕಟುವಾದ ಹೊಡೆತ. ಹಿಂದೂ-ಮುಸ್ಲಿಂ ನಿಂದನೆಗಳಿಗೆ ಹೆಸರಾಗಿರುವ ನಾಚಿಕೆಗೇಡಿನ ಸನಾತನ ವಿರೋಧಿ ಸರ್ಕಾರವು ತನ್ನ ದೈತ್ಯಾಕಾರದ ಹಿಂದೂ ವಿರೋಧಿ ಮುಖವನ್ನು ಬಹಿರಂಗಪಡಿಸುತ್ತಿದೆ. ವಂಚಕ ಆರ್ಎಸ್ಎಸ್ ಎಲ್ಲಿದೆ? ಬಜರಂಗದಳ ಎಲ್ಲಿದೆ? ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ
ಫೆಬ್ರವರಿ 11,2025ರಂದು ʼರಿತೇಶ್ ಸಿನ್ಹಾʼ ಎಂಬ ಎಕ್ಸ್ ಖಾತೆದಾರ ʼसनातन धर्म का ध्वज लिए| शंकराचार्य जी पर इस कदर लाठीचार्ज। घोर निन्दनीये कर्म है ये। हिन्दू रक्षा के नाम पर राजनीति करनेवालों के मुँह में दही जम गया है क्या। #Sankracharya #KumbhMela2025 #PrayagrajMahakumbh2025ʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಸನಾತನ ಧರ್ಮದ ಧ್ವಜಾರೋಹಣ ಶಂಕರಾಚಾರ್ಯರ ಮೇಲೆ ಲಾಠಿ ಚಾರ್ಜ್ ನಡೆದಿದೆ. ಈ ಕೃತ್ಯ ಅತ್ಯಂತ ಖಂಡನೀಯ. ಹಿಂದೂ ರಕ್ಷಣೆಯ ಹೆಸರಿನಲ್ಲಿ ರಾಜಕೀಯ ಮಾಡುವವರು ಈಗ ಎಲ್ಲಿದ್ದೇರಾ? #ಶಂಕರಾಚಾರ್ಯ #ಕುಂಭಮೇಳ 2025 #ಪ್ರಯಾಗ್ರಾಜ್ ಮಹಾಕುಂಭ 2025 ಎಂಬ ಬರೆದಿರುವುದನ್ನು ನೋಡಬಹುದು
ಮತ್ತಷ್ಟು ವಿಡಿಯೋವನ್ನು ನೀವಿಲ್ಲಿ, ಇಲ್ಲಿ, ಇಲ್ಲಿ ನೋಡಬಹುದು.
ಫ್ಯಾಕ್ಟ್ಚೆಕ್
ವೈರಲ್ ಆದ ಸುದ್ದಿ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವಾಸ್ತವವಾಗಿ ವೈರಲ್ ಆದ ವಿಡಿಯೋ 2015ರದ್ದು. ಸಮಾಜವಾದಿ ಪಕ್ಷದ ಮುಖ್ಯಸ್ಥ ಮತ್ತು ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರ ಅವಧಿಯಲ್ಲಿ ವಾರಣಾಸಿಯ ಗಂಗಾ ನದಿಯಲ್ಲಿ ಗಣೇಶ ಮೂರ್ತಿ ವಿಸರ್ಜನೆಯನ್ನು ನಿಷೇಧಿಸುವ ಯುಪಿ ಸರ್ಕಾರದ ನಿರ್ಧಾರದ ವಿರುದ್ಧ ಸ್ವಾಮಿ ಅವಿಮುಕ್ತೇಶ್ವರಾನಂದ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯ ಮೇಲೆ ಪೊಲೀಸರು ನಡೆಸಿದ ಕಾರ್ಯಾಚರಣೆಯ ಸಮಯದಲ್ಲಿ ರೆಕಾರ್ಡ್ ಮಾಡಲಾದ ವಿಡಿಯೋವದು.
ನಾವು ವೈರಲ್ ಆದ ಸುದ್ದಿಯ ಬಗ್ಗೆ ಸತ್ಯಾಂಶವನ್ನು ತಿಳಿಯಲು ವೈರಲ್ ಆದ ವಿಡಯೋವಿನ ಕೆಲವು ಪ್ರಮುಖ ಕೀಫ್ರೇಮ್ಗಳನ್ನು ಉಪಯೋಗಿಸಿ ಗೂಗಲ್ ರಿವರ್ಸ್ ಇಮೇಜ್ ಮೂಲಕ ಹುಡುಕಾಟ ನಡೆಸಿದೆವು. ಹುಡುಖಾಟದಲ್ಲಿ ನಮಗೆ, ಸೆಪ್ಟಂಬರ್ 23,2015ರಂದು ʼಇಂಡಿಯಾ ಟುಡೆʼ ವೆಬ್ಸೈಟ್ನಲ್ಲಿ ʼSheers, locals lathi-charged in Varanasi over idol immersionʼ ಎಂಬ ಶೀರ್ಷಿಕೆಯೊಂದಿಗೆ ವರದಿ ಮಾಡಿರುವುದನ್ನು ನೋಡಬಹುದು. ವರದಿಯಲ್ಲಿ ʼಗಂಗಾ ನದಿಯಲ್ಲಿ ಗಣೇಶ ಮೂರ್ತಿಯನ್ನು ವಿಸರ್ಜಿಸುವಂತೆ ಒತ್ತಾಯಿಸಿ ಧರಣಿ ನಡೆಸುತ್ತಿದ್ದ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದಾಗ, ಕೆಲವು ಸಂತರು, ಸ್ವಾಮಿ ಅವಿಮುಕ್ತೇಶ್ವರಾನಂದ್ ಸೇರಿದಂತೆ 24ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ವಾರಣಾಸಿಯ ದಶಾಶ್ವಮೇಘ ಘಾಟ್ ಪ್ರದೇಶದಲ್ಲಿ ಬುಧವಾರ ಬೆಳಗಿನ ಜಾವ ಈ ಘಟನೆ ನಡೆದಿದ್ದು, ಕೆಲವು ಸಂತರೊಂದಿಗೆ ಸ್ಥಳೀಯರು ಕಳೆದ 40 ಗಂಟೆಗಳಿಂದ ಮುಖ್ಯ ರಸ್ತೆಯಲ್ಲಿ ಸಂಚಾರಕ್ಕೆ ಅಡ್ಡಿಯುಂಟುಮಾಡುವ ರೀತಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಘರ್ಷಣೆ, ನೂಕು ನುಗ್ಗಲು ಉಂಟಾದ ಕಾರಣ ಮತ್ತು ಅಹಿತಕರ ಘಟನೆಯನ್ನು ತಪ್ಪಿಸಲು ಪೊಲೀಸರು ಲಾಠಿಚಾರ್ಜ್ ಮಾಡಿದ್ದಾರೆ ʼ ಎಂದು ವರದಿಯಾಗಿದೆ.
ಸೆಪ್ಟಂಬರ್ 24, 2015ರಂದು ʼಇಂಡಿಯನ್ ಎಕ್ಸ್ಪ್ರೆಸ್ನಲ್ಲಿ ʼVaranasi stalemate over idol immersion: 30-hr resistance ends with post-midnight lathichargeʼ ಎಂಬ ಶೀರ್ಷಿಕೆಯೊಂದಿಗೆ ವರದಿ ಮಾಡಲಾಗಿದೆ. ʼವಾರಣಾಸಿಯಲ್ಲಿ ವಿಗ್ರಹ ವಿಸರ್ಜನೆ: ಮಧ್ಯರಾತ್ರಿಯ ನಂತರ ಲಾಠಿ ಪ್ರಹಾರದೊಂದಿಗೆ 30 ಗಂಟೆಗಳ ಪ್ರತಿಭಟನೆ ಅಂತ್ಯʼ ಎಂಬ ಹೆಡ್ಲೈನ್ನೊಂಡಿಗೆ ವರದಿ ಮಾಡಲಾಗಿದೆ. ವರದಿಯಲ್ಲಿ ʼವಾರಣಾಸಿಯ ಆಡಳಿತವು ಲಕ್ಷ್ಮಿ ಕುಂಡದಲ್ಲಿ ಗಣೇಶ ಮೂರ್ತಿಗಳನ್ನು ವಿಸರ್ಜಿಸಲು ಜನರಿಗೆ ಅವಕಾಶ ನೀಡಿತ್ತು. ಆದರೆ, ದ್ವಾರಕಾ ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದರ ಶಿಷ್ಯರಾದ ಸ್ವಾಮಿ ಅವಿಮುಕ್ತೇಶ್ವರಾನಂದ ಮತ್ತು ಮಹಾಂತ್ ಬಾಲಕ ದಾಸ್ ನೇತೃತ್ವದ ಪ್ರತಿಭಟನಾಕಾರರು, ಅಲಹಾಬಾದ್ ಹೈಕೋರ್ಟ್ ಆದೇಶವನ್ನು ಧಿಕ್ಕರಿಸಿ ಗಂಗಾ ನದಿಯಲ್ಲಿ ವಿಗ್ರಹವನ್ನು ವಿಸರ್ಜಿಸಲು ದೃಢನಿಶ್ಚಯ ಮಾಡಿದರು. ಈ ಪ್ರತಿಭಟನಾಕಾರರು ದಶಾಶ್ವಮೇಧ ಘಾಟ್ ಬಳಿಯ ಗೊಡೌಲಿಯಾ ಕ್ರಾಸಿಂಗ್ನಲ್ಲಿ ಧರಣಿ ಕುಳಿತಿದ್ದರು. 30 ಗಂಟೆಗಳ ಕಾಲ ನಡೆದ ಘರ್ಷಣೆಯ ನಂತರ, ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರುʼ ಎಂದು ವರದಿಯಾಗಿದೆ
ಸೆಪ್ಟಂಬರ್ 23,2024ರಂದು ʼನ್ಯೂಸ್ 24ʼ ಎಂಬ ಯೂಟ್ಯೂಬ್ ಚಾನೆಲ್ನಲ್ಲಿ ʼVaranasi Police lathicharge devotees trying to immerse Ganesha idolʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಜನವರಿ 2016 ರಲ್ಲಿ ʼವೈಲ್ಡ್ ಫಿಲ್ಮ್ಸ್ ಇಂಡಿಯಾʼ ಯೂಟ್ಯೂಬ್ನಲ್ಲಿ ಅಪ್ಲೋಡ್ ಮಾಡಲಾದ 10.18ನಿಮಿಷದ ಸುದೀರ್ಘ ವಿಡಿಯೋವಿನಲ್ಲಿ ನಾವು 4.34 ನಿಮಿಷದ ಸಮಯದಲ್ಲಿ ವೈರಲ್ ಆದ ವಿಡಿಯೋವನ ತುಣುಕನ್ನು ನೋಡಬಹುದು.
ಮತ್ತಷ್ಟು ವಿಡಿಯೋಗಳನ್ನು ನೀವಿಲ್ಲಿ, ಇಲ್ಲಿ, ಇಲ್ಲಿ ನೋಡಬಹುದು
ಏಪ್ರಿಲ್ 12, 2021ರಂದು ʼಸ್ವರಾಜ್ಯಾಮಾರ್ಗ್ʼ ಎಂಬ ವೆಬ್ಸೈಟ್ನಲ್ಲಿ ʼAkhilesh Yadav Apologises To Shankaracharya For A Lathi Charge On Seers Six Years Ago, Says It Was A 'Mistake': Reportʼ ಎಂಬ ಶೀರ್ಷಿಕೆಯೊಂದಿಗೆ ವರದಿ ಮಾಡಿರುವುದನ್ನು ನೋಡಬಹುದು. ʼಸಂತರ ಮೇಲೆ ಲಾಠಿ ಚಾರ್ಜ್ ಮಾಡಿದ್ದಕ್ಕಾಗಿ ಅಖಿಲೇಶ್ ಯಾದವ್ ಅವರು ಆರು ವರ್ಷಗಳ ಬಳಿಕ ಕ್ಷಮೆಯನ್ನು ಕೂಡ ಕೇಳಿದ್ದಾರೆ. ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ತಮ್ಮ ಆಡಳಿತದ ಅವಧಿಯಲ್ಲಿ ಮಾಡಿದ ತಪ್ಪಿಗೆ ಹಿಂದೂ ಸ್ವಾಮೀಜಿಗಳ ಕ್ಷಮೆಯಾಚಿಸಿದ್ದಾರೆ. 2015 ರಲ್ಲಿ ವಾರಣಾಸಿಯಲ್ಲಿ ಗಣೇಶ ವಿಸರ್ಜನೆ ಕಾರ್ಯಕ್ರಮದ ಸಂದರ್ಭದಲ್ಲಿ ಅವರ ಸರ್ಕಾರವು ಶ್ರೀಗಳ ಮೇಲೆ ಲಾಠಿ ಚಾರ್ಜ್ಗೆ ಆದೇಶಿಸಿತ್ತು. ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸುತ್ತಿದ್ದಾಗ ಮಾಡಿದ ತಪ್ಪನ್ನು ಒಪ್ಪಿಕೊಂಡು ಯಾದವ್ ಶಂಕರಾಚಾರ್ಯರಲ್ಲಿ ಕ್ಷಮೆಯಾಚಿಸಿದರು. ಏಪ್ರಿಲ್ 11 ರಂದು ಯಾದವ್ ಅವರು ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ ಮತ್ತು ಸ್ವಾಮಿ ಅವಿಮುಕ್ತೇಶ್ವರಾನಂದರನ್ನು ಭೇಟಿಯಾಗಿ ಆಶೀರ್ವಾದ ಪಡೆದರು. ಯಾದವ್ ಉಲ್ಲೇಖಿಸುತ್ತಿರುವ ಲಾಠಿ ಚಾರ್ಜ್ 2015 ರಲ್ಲಿ ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದ ನೇತೃತ್ವದ ಆಡಳಿತದ ಅವಧಿಯಲ್ಲಿ ನಡೆದಿತ್ತು. ಗಂಗಾ ನದಿಯಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆಗೆ ಸರ್ಕಾರ ಕಲ್ಲು ಹಾಕುವುದನ್ನು ವಿರೋಧಿಸಿ ಸ್ವಾಮಿ ಅವಿಮುಕ್ತೇಶ್ವರಾನಂದರು ಮತ್ತು ಇತರ ಶ್ರೀಗಳು ಪ್ರತಿಭಟಿಸುತ್ತಿದ್ದರು. ಗಂಗಾ ದಡದಿಂದ ಶ್ರೀಗಳನ್ನು ತೆಗೆದುಹಾಕಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು. ಈ ಪ್ರಕ್ರಿಯೆಯಲ್ಲಿ ಸ್ವಾಮಿ ಅವಿಮುಕ್ತೇಶ್ವರಾನಂದ ಮತ್ತು ಇತರ ಹಲವಾರು ಶ್ರೀಗಳು ಗಾಯಗೊಂಡಿದ್ದರು.’’ ಎಂದು ವರದಿ ಮಾಡಲಾಗಿದೆ
ವೈರಲ್ ಆದ ಸುದ್ದಿ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ಸುಮಾರು 10 ವರ್ಷಗಳ ಹಿಂದೆ ಅಂದರೆ 2015 ರಲ್ಲಿ ನಡೆದ ಘಟನೆಯ ವಿಡಿಯೋವನ್ನು ಇತ್ತೀಚಿಗೆ ಮಹಾಕುಂಭಮೇಳದಲ್ಲಿ ಶಂಕರಾಚಾರ್ಯ ಅವಿಮುಕ್ತೇಶ್ವರಾನಂದರ ಮೇಲೆ ಲಾಠಿಚಾರ್ಜ್ ನಡೆಸಿದ್ದಾರೆ ಎಂದು ಹಂಚಿಕೊಳ್ಳಲಾಗುತ್ತಿದೆ. ಹಾಗೆ ಅವಿಮುಕ್ತೇಶ್ವರಾನಂದರ ಮೇಲೆ ಲಾಠಿಚಾರ್ಜ್ ನಡೆದಿದ್ದು ಬಿಜೆಪಿ ಸರ್ಕಾರದ ಅಡಿಯಲ್ಲಿ ಅಲ್ಲ ಅಖಿಲೇಶ್ ಯಾದವ್ ಸರ್ಕಾರದ ಅವಧಿಯಲ್ಲಿ ಎಂದು ಸಾಭೀತಾಗಿದೆ.
|