schema:text
| - Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact checks doneFOLLOW US
Fact Check
ಅಂಜೂರದ ಹಣ್ಣು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ಉಸಿರಾಟ ತೊಂದರೆಗಳು ನಿವಾರಣೆಯಾಗುತ್ತದೆ ಮತ್ತು ಕಫ ಕರಗುತ್ತದೆ ಎಂದು ಹೇಳಿಕೆಯೊಂದರಲ್ಲಿ ಹೇಳಲಾಗಿದೆ.
ಫೇಸ್ಬುಕ್ನಲ್ಲಿ ಕಂಡುಬಂದಿರುವ ಈ ಹೇಳಿಕೆಯಲ್ಲಿ “ಒಣಗಿದ ಅಂಜೂರದ ಹಣ್ಣುಗಳನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿ ಮತ್ತು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನಿರಿ ಜೊತೆಗೆ ಅಂಜೂರ ನೆನೆಸಿಟ್ಟ ನೀರನ್ನು ಕುಡಿಯಿರಿ ಅಂಜೂರ ಉಸಿರಾಟದ ಸಮಸ್ಯೆಗಳನ್ನು ನಿವಾರಿಸುತ್ತದೆ ಮತ್ತು ಕಫವನ್ನು ಕರಗಿಸುತ್ತದೆ” ಎಂದಿದೆ.
Also Read: ಗರ್ಭಿಣಿಯರು ಪ್ರತಿ ದಿನ ಬಾದಾಮಿ ತಿಂದರೆ ಹುಟ್ಟುವ ಮಕ್ಕಳ ಬುದ್ಧಿ ಚುರುಕಾಗುತ್ತದೆ ಎಂಬುದು ನಿಜವೇ?
ಸತ್ಯಶೋಧನೆಯಲ್ಲಿ ಕಂಡುಬಂದ ಅಂಶವೆಂದರೆ, ಒಣ ಅಂಜೂರದ ಹಣ್ಣುಗಳನ್ನು ನೆನೆಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ಉಸಿರಾಟದ ತೊಂದರೆಗಳನ್ನು ನಿವಾರಿಸಲು ಮತ್ತು ಕಫವನ್ನು ಕರಗಿಸಲು ಸಾಧ್ಯವಿಲ್ಲ. ಅಂಜೂರದ ಹಣ್ಣುಗಳನ್ನು ನೆನೆಸಿ ಖಾಲಿ ಹೊಟ್ಟೆಯಲ್ಲಿ ಸೇವಿಸುವ ವಿಚಾರವು ಸಾಂಪ್ರದಾಯಿಕ ಪರಿಹಾರದ ಕಲ್ಪನೆಯಾಗಿರಬಹುದು. ಆದಾಗ್ಯೂ, ಈ ಹೇಳಿಕೆಗಳನ್ನು ಬೆಂಬಲಿಸುವ ರೀತಿಯ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ ಎಂದು ಒತ್ತಿಹೇಳುವುದು ಅತ್ಯಗತ್ಯವಾಗಿದೆ.
ಅಂಜೂರ ನಿಜಕ್ಕೂ ಪೌಷ್ಟಿಕ ಹಣ್ಣು. ಸಾಕಷ್ಟು ನಾರಿನಂಶ, ಜೀವಸತ್ವಗಳು ಮತ್ತು ಖನಿಜಗಳನ್ನು ಒಳಗೊಂಡಿರುವ ಇದು ಒಟ್ಟಾರೆ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ನಾರಿನಂಶ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ಅಂಜೂರದ ಹಣ್ಣುಗಳು ಪೊಟ್ಯಾಸಿಯಂನ ಉತ್ತಮ ಮೂಲವಾಗಿದೆ, ಇದು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಆದಾಗ್ಯೂ, ನೆನೆಸಿದ ಒಣ ಅಂಜೂರದ ಹಣ್ಣುಗಳನ್ನು ಸೇವಿಸುವುದರಿಂದ ಉಸಿರಾಟದ ತೊಂದರೆಗಳನ್ನು ನಿವಾರಿಸಬಹುದು ಅಥವಾ ಕಫವನ್ನು ಕರಗಿಸಬಹುದು ಎಂಬ ನಿರ್ದಿಷ್ಟ ಸಮರ್ಥನೆಗೆ ಯಾವುದೇ ವೈಜ್ಞಾನಿಕ ಸಾಕ್ಷ್ಯವಿಲ್ಲ.
Also Read: ಕಲ್ಲು ಸಕ್ಕರೆಯೊಂದಿಗೆ ಕಾಮಕಸ್ತೂರಿ ಬೀಜ ಸೇರಿಸಿ ಕುಡಿದರೆ ಪೈಲ್ಸ್ ಗುಣವಾಗುತ್ತಾ?
ಕಫವು ಶ್ವಾಸನಾಳದಲ್ಲಿ ಉತ್ಪತ್ತಿಯಾಗುವ ದಪ್ಪ ಲೋಳೆ. ಇದು ಶ್ವಾಸಕೋಶಕ್ಕೆ ಹೊರಗಿನಿಂದ ಬಂದ ಕಣಗಳನ್ನು ಸಿಲುಕಿಸಲು ಮತ್ತು ಹೊರಹಾಕಲು ನೆರವು ನೀಡುತ್ತದೆ. ಅತಿಯಾದ ಕಫ ಉತ್ಪಾದನೆಯಾಗಲು ಅಲರ್ಜಿ, ಆಸ್ತಮಾ ಅಥವಾ ಬ್ರಾಂಕೈಟಿಸ್ನಂತಹ ವಿವಿಧ ಅಂಶಗಳು ಕಾರಣವೆಂದು ಹೇಳಬಹುದು. ಈ ಕಾರಣಗಳಿಂದಾಗಿ ಅಂಜೂರದ ಹಣ್ಣುಗಳು ಕಫದ ಉತ್ಪಾದನೆಯನ್ನು ಗುಣಪಡಿಸಬಹುದು ಎಂದು ಯಾವುದೇ ಪುರಾವೆಗಳು ದೃಢೀಕರಿಸುವುದಿಲ್ಲ.
ನಿರಂತರ ಉಸಿರಾಟದ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಅಥವಾ ಅತಿಯಾದ ಕಫಸಮಸ್ಯೆ ಇದ್ದರೆ ಹೊಂದಿದ್ದರೆ, ವೈದ್ಯರಿಂದ/ವೈದ್ಯಕೀಯ ಸಲಹೆ ಪಡೆಯುವುದು ಬಹಳ ಮುಖ್ಯ.
ಈ ಪರಿಶೀಲನೆ ಪ್ರಕಾರ, ಅಂಜೂರದ ಹಣ್ಣುಗಳನ್ನು ನೆನೆಸಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ಉಸಿರಾಟ ತೊಂದರೆ ಮತ್ತು ಕಫ ಕರಗಿಸಲು ಸಾಧ್ಯವಿಲ್ಲ. ಆದ್ದರಿಂದ ಈ ಹೇಳಿಕೆ ತಪ್ಪಾಗಿದೆ.
Our Sources
Phytochemical Composition and Health Benefits of Figs (Fresh and Dried): A Review of Literature from 2000 to 2022 – PMC (nih.gov)
Airway Mucus Function and Dysfunction – PMC (nih.gov)
(This article has been published in collaboration with THIP Media)
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.
|