schema:text
| - Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact checks doneFOLLOW US
Fact Check
Claim
ಸೋನಿಯಾ ಗಾಂಧಿ ಜೊತೆಗೆ ಇಟಲಿ ಉದ್ಯಮಿ ಒಟ್ಟಾವಿಯೊ ಕ್ವಟ್ರೋಕಿ
Fact
ಫೋಟೋದಲ್ಲಿ ಸೋನಿಯಾ ಗಾಂಧಿ ಜೊತೆಗೆ ಇರುವುದು ಇಟಲಿ ಉದ್ಯಮಿ ಒಟ್ಟಾವಿಯೊ ಕ್ವಟ್ರೋಕಿ ಅಲ್ಲ, ಅದು ರಾಹುಲ್ ಗಾಂಧಿವರ ಹಳೆಯ ಚಿತ್ರ.
ಸೋನಿಯಾ ಗಾಂಧಿಯವರೊಂದಿಗೆ ಇಟಲಿ ಉದ್ಯಮಿ ಒಟ್ಟಾವಿಯೊ ಕಟ್ರೋಕಿ ಇದ್ದಾರೆ ಎಂದು ಹೇಳಲಾದ ಫೋಟೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹಬ್ಬಿದೆ.
ವಾಟ್ಸಾಪಿನಲ್ಲಿ ಹರಡುತ್ತಿರುವ ಈ ಕ್ಲೇಮಿನಲ್ಲಿ ಹೀಗಿದೆ. “ಕಾರಣ ಗೊತ್ತಾಯ್ತಾ? 100% ನಿಮ್ಮ ಊಹೆ ತಪ್ಪು? ಸೋನಿಯಾ ಖಾನಂ ಹಿಂದಿರೋದು ಖಂಡಿತಾ ರಾಹುಲ್ ಬಾಬಾ ಅಲ್ಲಾ ? ಅದು ಇಟಲಿ ಬ್ಯುಸಿನೆಸ್ ಮನ್ ಕ್ವಟ್ರೋಚಿ… ನೆನಪಿಸಿಕೊಳ್ಳಿ:- ರಾಜೀವ ಖಾನ್ ಹತ್ಯೆಯಾದಾಗ ಅವಶೇಷ ಕಂಡುಹಿಡಿಯಲು ರಾಹುಲನ ಡಿ ಎನ್ ಎ ಟೆಸ್ಟ್ ಮಾಡಿಸಲು ಸೋನಿಯಾ ಬೇಗಂ ಒಪ್ಪಲಿಲ್ಲ?” ಎಂದಿದೆ.
ಈ ಕ್ಲೇಮಿನ ಸತ್ಯಶೋಧನೆಗಾಗಿ ಬಳಕೆದಾರರೊಬ್ಬರು ನ್ಯೂಸ್ಚೆಕರ್ ವಾಟ್ಸಾಪ್ ಟಿಪ್ಲೈನ್ (+91-9999499044) ಗೆ ದೂರು ಸಲ್ಲಿಸಿದ್ದು, ಸತ್ಯಶೋಧನೆ ವೇಳೆ ಇದು ತಪ್ಪು ಎಂದು ತಿಳಿದುಬಂದಿದೆ.
ಸತ್ಯಶೋಧನೆಗಾಗಿ ವೈರಲ್ ಚಿತ್ರವನ್ನು ರಿವರ್ಸ್ ಇಮೇಜ್ ಸರ್ಚ್ ಮಾಡಲಾಗಿದ್ದು, ಈ ವೇಳೆ ವಿವಿಧ ಫಲಿತಾಂಶಗಳು ಲಭ್ಯವಾಗಿವೆ.
ಡಿಸೆಂಬರ್ 4, 2017ರಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಹುಟ್ಟುಹಬ್ಬದ ಸಂದರ್ಭದಲ್ಲಿ ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ “Happy Birthday Rahul Gandhi: From mourning son to political heir, here are rare moments from Congress chief’s life“ ಶೀರ್ಷಿಕೆಯಡಿಯಲ್ಲಿ ಪ್ರಕಟಿಸಿದ ಹಳೆಯ ಫೋಟೋಗಳಲ್ಲಿ ವೈರಲ್ ಆಗಿರುವ ಫೋಟೋ ಲಭ್ಯವಾಗಿದೆ. ಈ ಫೋಟೋವನ್ನು ಎಪ್ರಿಲ್ 8, 1996ರಂದು ಸ್ಪೆಷಲ್ ಪ್ರೊಟೆಕ್ಷನ್ ಗ್ರೂಪ್ (ಎಸ್ಪಿಜಿ)ಯ ಕಾರ್ಯಕ್ರಮವೊಂದರಲ್ಲಿ ತೆಗೆಯಲಾಗಿದ್ದು, ಸೋನಿಯಾ ಗಾಂಧಿಯವರೊಂದಿಗೆ ರಾಹುಲ್ ಅವರ ಫೋಟೋ ಎಂದು ಬರೆಯಲಾಗಿದೆ. ‘ಪ್ರೆಸ್ಟ್ರಸ್ಟ್ ಆಫ್ ಇಂಡಿಯಾ’ಕ್ಕೆ ಈ ಫೋಟೋ ಚಿತ್ರಕೃಪೆಯನ್ನೂ ಕೊಡಲಾಗಿದೆ
ಡಿಸೆಂಬರ್ 9 2019ರಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯವರ ಹುಟ್ಟುಹಬ್ಬದ ಸಂದರ್ಭದಲ್ಲೂ ಮತ್ತೆ ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ಈ ಫೊಟೋವನ್ನು ಪ್ರಕಟಿಸಿದೆ. “Happy birthday Sonia Gandhi: Check out some rare photos of the veteran Congress leader” ಶೀರ್ಷಿಕೆಯಡಿಯಲ್ಲಿ ವಿವಿಧ ಫೋಟೋಗಳೊಂದಿಗೆ ಈ ಫೋಟೋ ಕೂಡ ಇದೆ.
Also Read: ಹರಿಯಾಣಾದಲ್ಲಿ ಅರ್ಚಕನಿಗೆ ಬ್ಯಾಟ್ನಿಂದ ಹಲ್ಲೆ ನಡೆಸಿದ 2 ವರ್ಷ ಹಳೆಯ ಘಟನೆಗೆ ಕೋಮು ಬಣ್ಣ!
ಜೂನ್ 19, 2020ರಲ್ಲಿ ರಾಹುಲ್ ಗಾಂಧಿಯವರಿಗೆ 50 ವರ್ಷ ತುಂಬಿದ ವೇಳೆ ಲೇಟೆಸ್ಟ್ಲಿ “Rahul Gandhi Turns 50: Lesser-Seen Childhood and Family Photos of the Congress Leader to View On His Birthday” ಶೀರ್ಷಿಕೆಯಡಿಯಲ್ಲಿ ಪ್ರಕಟಿಸಿದ ಫೋಟೋಗಳಲ್ಲೂ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿಯವರಿರುವ ಫೋಟೋ ಇದೆ. ಇಲ್ಲೂ ಎಸ್ಪಿಜಿ ಕಾರ್ಯಕ್ರಮದಲ್ಲಿ ಸೋನಿಯಾ ಮತ್ತು ರಾಹುಲ್ ಗಾಂಧಿಯವರು ಎಂದು ಕ್ಯಾಪ್ಷನ್ ಹಾಕಲಾಗಿದೆ.
ಒಟ್ಟಾವಿಯೊ ಕ್ವಟ್ರೋಕಿ ಯಾರು?
ಒಟ್ಟಾವಿಯೊ ಕ್ವಟ್ರೋಕಿ ಇಟಲಿಯ ಉದ್ಯಮಿ. ಇಟಲಿಯವರೇ ಆದ, ಸೋನಿಯಾ ಗಾಂಧಿ ಅವರ ಜತೆ ಇದ್ದ ಸ್ನೇಹ ಬಳಸಿಕೊಂಡು ಅಂದಿನ ಪ್ರಧಾನಿ ರಾಜೀವ್ ಅವರಿಗೆ ಹತ್ತಿರವಾಗಿದ್ದ ಕ್ವಟ್ರೋಕಿ, ಬೊಫೋರ್ಸ್ ಫಿರಂಗಿ ಒಪ್ಪಂದದಲ್ಲಿ ಮಧ್ಯವರ್ತಿಯಾಗಿದ್ದರು. ಸ್ವಿಜರ್ಲೆಂಡ್ ಮೂಲದ ಬೊಫೋರ್ಸ್ ಕಂಪನಿ, ತನ್ನ 155 ಎಂಎಂ ಫಿರಂಗಿಯನ್ನು ಮಾರಾಟ ಮಾಡುವ ಒಪ್ಪಂದವನ್ನು ಕುದುರಿಸಿಕೊಳ್ಳಲು ಭಾರತೀಯ ರಾಜಕಾರಣಿಗಳಿಗೆ ಸುಮಾರು 11 ಲಕ್ಷ ಡಾಲರ್ ಕಿಕ್ಬ್ಯಾಕ್ ನೀಡಿತ್ತು. ಈ ಹಣವನ್ನು ಮಧ್ಯವರ್ತಿ ಕ್ವಟ್ರೋಕಿ ಮೂಲಕ ರಾಜಕಾರಣಿಗಳಿಗೆ ತಲುಪಿಸಲಾಗಿದೆ ಎನ್ನಲಾಗಿತ್ತು. ಈ ಹಗರಣದ ಕಾರಣ 1989ರ ಲೋಕಸಭೆ ಚುನಾವಣೆಯಲ್ಲಿ ರಾಜೀವ್ ನೇತೃತ್ವದ ಕಾಂಗ್ರೆಸ್ ಸರಕಾರ ಸೋಲು ಕಂಡಿತ್ತು.ಬಳಿಕ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಲಾಗಿದ್ದು, ಚಾರ್ಜ್ಶೀಟ್ನಲ್ಲಿ ಕ್ವಟ್ರೋಕಿಯನ್ನು ಹೆಸರಿಸಲಾಗಿತ್ತು.
ಇನ್ನು ಕ್ಲೇಮಿನಲ್ಲಿ ಹೇಳಿರುವಂತೆ ರಾಜೀವ್ ಗಾಂಧಿ ಹತ್ಯೆಯಾದಾಗ ಡಿಎನ್ಎ ಟೆಸ್ಟ್ಗೆ ರಾಹುಲ್ ಅವರ ರಕ್ತದ ಮಾದರಿಯನ್ನು ಕೊಡಲು ಸೋನಿಯಾ ಗಾಂಧಿ ನಿರಾಕರಿಸಿದ್ದರೇ ಎಂಬ ಬಗ್ಗೆ ಗೂಗಲ್ ಕೀವರ್ಡ್ ಸರ್ಚ್ ನಡೆಸಲಾಗಿದ್ದು, ಅಂತಹ ವಿದ್ಯಮಾನವನ್ನು ಖಚಿತಪಡಿಸುವ ಯಾವುದೇ ಮಾಹಿತಿಗಳು ಕಂಡುಬಂದಿಲ್ಲ.
ಈ ಸತ್ಯಶೋಧನೆಯ ಪ್ರಕಾರ, ಸೋನಿಯಾ ಕ್ವಟ್ರೋಕಿ ಅವರೊಂದಿಗೆ ತೆಗೆಸಿಕೊಂಡ ಫೋಟೋ ಎನ್ನುವುದು ತಪ್ಪು ಕ್ಲೇಮ್ ಆಗಿದೆ.
Our Sources:
Report by The new Indian Express, Dated: December 4, 2017
Report by Latestly, Dated: June 19, 2020
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.
Ishwarachandra B G
November 16, 2024
Vasudha Beri
November 12, 2024
Ishwarachandra B G
August 24, 2024
|