About: http://data.cimple.eu/claim-review/9eba91cf2abcfede7c39bbbf94c3be70292feca7d9d4eb2632c4fda8     Goto   Sponge   NotDistinct   Permalink

An Entity of Type : schema:ClaimReview, within Data Space : data.cimple.eu associated with source document(s)

AttributesValues
rdf:type
http://data.cimple...lizedReviewRating
schema:url
schema:text
  • Authors Claim ನೊಬೆಲ್ ಶಾಂತಿ ಪ್ರಶಸ್ತಿಗೆ ಪ್ರಧಾನಿ ನರೇಂದ್ರ ಮೋದಿ ಅವರು ದೊಡ್ಡ ಸ್ಪರ್ಧಿ Fact ನೊಬೆಲ್ ಶಾಂತಿ ಪ್ರಶಸ್ತಿಗೆ ಪ್ರಧಾನಿ ಮೋದಿ ಅವರು ದೊಡ್ಡ ಸ್ಪರ್ಧಿ ಎಂದು ನೊಬೆಲ್ ಪ್ರಶಸ್ತಿ ಸಮತಿಯ ಉಪನಾಯಕ ಆಸ್ಲೆ ತೋಜೆ ಅವರು ಹೇಳಿದ್ದಾರೆ ಎನ್ನುವ ಕ್ಲೇಮ್ ತಪ್ಪಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ನೊಬೆಲ್ ಶಾಂತಿ ಪ್ರಶಸ್ತಿಗೆ ದೊಡ್ಡ ಸ್ಪರ್ಧಿಯಾಗಿದ್ದಾರೆ ಎಂಬಂತೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹರಡಿದೆ. ಈ ಕುರಿತ ಟ್ವಿಟರ್ ಕ್ಲೇಮ್ನಲ್ಲಿ “ಪಿಎಂ ನರೇಂದ್ರ ಮೋದಿ ಅವರು “ನೊಬೆಲ್ ಪೀಸ್ ಪ್ರಶಸ್ತಿ”ಗೆ ದೊಡ್ಡ ಸ್ಪರ್ಧಿಯಾಗಿದ್ದಾರೆ. ಅವರು ವಿಶ್ವ ಶಾಂತಿಗಾಗಿ ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ ಮತ್ತು ವಿಶ್ವ-ಶಾಂತಿ ಕ್ರಮವನ್ನು ಪುನಃಸ್ಥಾಪಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ.: ಆಸ್ಲೆ ತೋಜೆ ನೊಬೆಲ್ ಪ್ರಶಸ್ತಿ ಸಮಿತಿಯ ಉಪ ನಾಯಕ ಬರ್ನೋಲ್ ಟೈಮ್, ಊರ್ಕೊಳ್ಳಿ ಗುಲಾಮರೆ” ಎಂದು ಹೇಳಲಾಗಿದೆ. ಈ ಕ್ಲೇಮ್ ಇಲ್ಲಿದೆ. ಮೋದಿಯವರು ನೊಬೆಲ್ ಶಾಂತಿ ಪ್ರಶಸ್ತಿಗೆ ದೊಡ್ಡ ಸ್ಪರ್ಧಿಯಾಗಿದ್ದಾರೆ ಎಂಬ ಬಗ್ಗೆ ಮುಖ್ಯವಾಹಿನಿಯ ಮಾಧ್ಯಮಗಳೂ ವರದಿ ಮಾಡಿದ್ದವು. ಈ ವರದಿಯಲ್ಲಿ ನೊಬೆಲ್ ಪಸಮಿತಿಯ ಉಪ ನಾಯಕ ಆಸ್ಲೆ ತೋಜೆ ಅವರ ಹೆಸರನ್ನೂ ಪ್ರಸ್ತಾವಿಸಿದ್ದವು. ಟೈಮ್ಸ್ ಆಫ್ ಇಂಡಿಯಾ, ಎಕನಾಮಿಕ್ ಟೈಮ್ಸ್, ಸಿಎನ್ಬಿಸಿ ಟಿವಿ 18, ಒಪಿಐ ಇಂಡಿಯಾ, ಜೊತೆಗೆ ಹಲವು ಸಾಮಾಜಿಕ ಜಾಲತಾಣಗಳಲ್ಲಿ ಬಳಕೆದಾರರಿಂದಲೂ ಈ ಬಗ್ಗೆ ಸುದ್ದಿಯಾಗಿದ್ದವು. ನ್ಯೂಸ್ಚೆಕರ್ ಇಂಗ್ಲಿಷ್ನ ವಾಟ್ಸಾಪ್ ಟಿಪ್ಲೈನ್ (+91-9999499044)ಗೆ ಕೂಡ ಬಳಕೆದಾರರೊಬ್ಬರು ಈ ಕುರಿತ ಕ್ಲೇಮ್ ಅನ್ನು ಸತ್ಯಶೋಧನೆಗೆ ಕಳುಹಿಸಿದ್ದಾರೆ. ಆ ಪ್ರಕಾರ, ನ್ಯೂಸ್ಚೆಕರ್ ಸತ್ಯಶೋಧನೆ ನಡೆಸಿದ್ದು ಇದೊಂದು ತಪ್ಪು ಕ್ಲೇಮ್ ಎಂಬುದನ್ನು ಕಂಡುಕೊಂಡಿದೆ. ಆಸ್ಲೆ ತೋಜೆ ಯಾರು? ಆಸ್ಲೆ ತೋಜೆ ಅವರು ಅವರು ಐವರು ಸದಸ್ಯರ ನಾರ್ವೇಜಿಯನ್ ನೊಬೆಲ್ ಸಮಿತಿಯ ಉಪ ನಾಯಕರಾಗಿದ್ದು ಅದು ನೊಬೆಲ್ ಶಾಂತಿ ಪ್ರಶಸ್ತಿಗೆ ಆಯ್ಕೆ ಮಾಡುತ್ತದೆ. ಅವರು 2024 ರವರೆಗೆ ಅಧಿಕಾರಾವಧಿ ಹೊಂದಿದ್ದಾರೆ. ಮಾರ್ಚ್ 13ರ ಹೊತ್ತಿಗೆ ಇಂಡಿಯಾ ಸೆಂಟರ್ ಫೌಂಡೇಶನ್ (ICF) ಎಂಬ ಸರ್ಕಾರೇತರ ಸಂಸ್ಥೆಯು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಲು ತೋಜೆ ಭಾರತದಲ್ಲಿದ್ದರು. Fact Check/Verification ತೋಜೆ ಅವರು ಇಂಡಿಯಾ ಸೆಂಟರ್ ಫೌಂಡೇಶನ್ ಕಾರ್ಯಕ್ರಮದಲ್ಲಿ ಮಾತನಾಡಿದ ಮಾತುಗಳ ಬಗ್ಗೆ ನಾವು ಪರಿಶೀಲನೆ ನಡೆಸಿದ್ದು, ಅದರಲ್ಲಿ ಅವರು ಪ್ರಧಾನಿ ಮೋದಿ ಅವರು ನೊಬೆಲ್ ಶಾಂತಿ ಪ್ರಶಸ್ತಿಗೆ ದೊಡ್ಡ ಸ್ಪರ್ಧಿಯಾಗಿದ್ದಾರೆ ಎಂದು ಹೇಳುವ ಯಾವ ಅಂಶಗಳೂ ಕಾಣಲಿಲ್ಲ. ಪ್ರಶ್ನೋತ್ತರ ಅವಧಿಯಲ್ಲೂ ಈ ಬಗ್ಗೆ ಏನೂ ಕಾಣಲಿಲ್ಲ. ಅವರ ಭಾಷಣದ ಪೂರ್ಣ ವೀಡಿಯೋ ಚಿತ್ರಿಕೆ ಇಲ್ಲಿದೆ. ಈ ನಂತರ ನಾವು ತೋಜೆ ಅವರು ಭಾರತದ ವಿವಿಧ ಮಾಧ್ಯಮಗಳೊಂದಿಗೆ ಮಾತನಾಡಿದ ದೃಶ್ಯಾವಳಿಗಳಲ್ಲಿ ಪರಿಶೀಲನೆ ನಡೆಸಲಾಗಿದೆ. ಅವರ ಮಾತುಗಳಲ್ಲಿ ಪ್ರಧಾನಿ ಮೋದಿ ಅವರ ಬಗ್ಗೆ ಪ್ರಸ್ತಾವಿಸಿದರೂ, ಅವರೆಲ್ಲಿಯೂ ನೊಬೆಲ್ ಶಾಂತಿ ಪ್ರಶಸ್ತಿಗೆ ದೊಡ್ಡ ಸ್ಪರ್ಧಿ ಎಂದು ಹೇಳಿದ್ದು ಕಂಡುಬಂದಿಲ್ಲ. ಅಲ್ಲದೇ ಈ ಬಗ್ಗೆ ಯಾವುದೇ ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲೂ ವಿಶ್ವಾಸಾರ್ಹ ಮಾಹಿತಿಗಳು ಕಂಡು ಬಂದಿಲ್ಲ. ಸುಳ್ಳು ಸುದ್ದಿ ಎಂದ ಮಾಧ್ಯಮಗಳು ಕೆಲವು ಮಾಧ್ಯಮಗಳು ನೊಬೆಲ್ ಶಾಂತಿ ಪ್ರಶಸ್ತಿಗೆ ಪ್ರಧಾನಿ ಮೋದಿಯವರು ದೊಡ್ಡ ಸ್ಪರ್ಧಿ ಎಂದು ತೋಜೆ ಹೇಳಿದ್ದಾರೆ ಎಂದು ವರದಿ ಮಾಡಿದ ಬೆನ್ನಲ್ಲೇ ಇನ್ನು ಕೆಲವು ಮಾಧ್ಯಮಗಳು ಅದನ್ನು “ಸುಳ್ಳು ಸುದ್ದಿ” ಎಂದು ವರದಿ ಮಾಡಿವೆ. ನ್ಯೂಸ್ ಲ್ಯಾಂಡ್ರಿ ಈ ಕುರಿತು ”Times Now puts out fake news on PM Modi as the biggest contender for the Nobel peace prize” ಶೀರ್ಷಿಕೆಯಡಿಯಲ್ಲಿ ಮಾರ್ಚ್ 16 2023ರಂದು ವರದಿ ಪ್ರಕಟಿಸಿದೆ. ಟೈಮ್ಸ್ ನೌ, ಎಬಿಪಿ, ಎಕನಾಮಿಕ್ ಟೈಮ್ಸ್ನ ಮಾಧ್ಯಮಗಳನ್ನು ಅದು ವಿಶ್ವಲೇಷಣೆ ಮಾಡಿದ್ದು, ನೊಬೆಲ್ ಸಮಿತಿಯ ಸದಸ್ಯರು ನಾಮನಿರ್ದೇಶಿತರನ್ನು ಅಥವಾ ಅವರ ಬಗ್ಗೆ ಸಾರ್ವಜನಿಕವಾಗಿ ಘೋಷಿಸಲು ಸಾಧ್ಯವಿಲ್ಲ ಎಂಬ ಬಗ್ಗೆ ಈ ಯಾವುದೇ ಮಾಧ್ಯಮಗಳು ಪರಿಶೀಲಿಸಲಿಲ್ಲ” ಎಂದು ಹೇಳಿದೆ. ಮಾರ್ಚ್ 16, 2023ರಂದು ಝೀ ನ್ಯೂಸ್ ಪ್ರಕಟಿಸಿದ ವರದಿಯಲ್ಲಿ”ತೋಜೆ ಅವರು ಪ್ರಧಾನಿ ಮೋದಿ ಅವರ ನಾಯಕತ್ವವನ್ನು ಹೊಗಳಿದರೂ, ಪ್ರಧಾನಿ ಮೋದಿ ಅವರು ಶಾಂತಿ ಪ್ರಶಸ್ತಿಗೆ ದೊಡ್ಡ ಸ್ಪರ್ಧಿ ಎಂದು ಘೋಷಿಸಲಿಲ್ಲ, ಈ ವಿಚಾರ “ಸುಳ್ಳು” ಆಗಿದೆ. ಎಂದು ಹೇಳಿದೆ. ಇಂತಹ ವರದಿಗಳನ್ನು ಇಲ್ಲಿ ಇಲ್ಲಿ ಮತ್ತು ಇಲ್ಲಿ ನೋಡಬಹುದು. ಭಾರತೀಯ ಟಿವಿ ಚಾನೆಲ್ ಗಳಿಂದ ತೋಜೆ ಹೇಳಿಕೆ ತಪ್ಪಾಗಿ ಉಲ್ಲೇಖ: ಐಎಫ್ಸಿ ಅಧ್ಯಕ್ಷ ಮಾರ್ಚ್ 16, 2023ರ ವರದಿಯಲ್ಲಿ ದಿ ಪ್ರಿಂಟ್, ಐಸಿಎಫ್ ಅಧ್ಯಕ್ಷ ವೈಭವ್ ಕೆ. ಉಪಾಧ್ಯಾಯ ಅವರ ಮಾತುಗಳನ್ನು ಪ್ರಕಟಿಸಿದ್ದು, “ಭಾರತೀಯ ಟಿವಿ ಚಾನೆಲ್ಗಳು ತೋಜೆ ಅವರನ್ನು ತಪ್ಪಾಗಿ ಉಲ್ಲೇಖಿಸಿದ್ದಾಗಿ ಹೇಳಿದೆ. ಹಾಗೆ ಅವರಂದೂ ಹೇಳಲಿಲ್ಲ. “ಇದು ಬಹುಷ ತಪ್ಪಾಗಿಯೋ ಅಥವಾ ಹೆಚ್ಚುವರಿ ಉತ್ಸಾಹದಿಂದಲೋ ಆಗಿದೆ. ಒಂದು ವೇಳೆ ಅವರು ಹಾಗೆ ಹೇಳಿದ್ದೇ ಆದಲ್ಲಿ ಇದು ಕ್ರಿಮಿನಲ್ ಅಪರಾಧವಾಗುತ್ತದೆ” ಎಂದು ಉಪಾಧ್ಯಾಯ ಅವರು ಹೇಳಿದ್ದಾಗಿ ಹೇಳಲಾಗಿದೆ. ಇದರೊಂದಿಗೆ “ಸಂವೇದನೆಗಳನ್ನು ಹುಟ್ಟುಹಾಕಲು ಭಾರತೀಯ ಮಾಧ್ಯಮಗಳು ಸುಳ್ಳು ಶೀರ್ಷಿಕೆಗಳನ್ನು ಹಾಕುತ್ತಿವೆ” ಎಂದು ಅವರು ಹೇಳಿದ್ದಾಗಿ ವರದಿ ಹೇಳಿದೆ. ಇದಲ್ಲದೆ ಐಸಿಎಫ್, ಕೆಲವೊಂದು “ತಪ್ಪಾದ ವಿಚಾರಗಳನ್ನು” ಟ್ವಿಟರ್ನಲ್ಲಿ ಕೆಲವು ಮಂದಿ ಹರಡುತ್ತಿರುವುದಾಗಿಯೂ ಹೇಳಿದೆ ಈ ಬಗ್ಗೆ ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋ, ಟ್ವಿಟರ್, ದಿಲ್ಲಿ ಪೊಲೀಸ್ ಸೈಬರ್ ಕ್ರೈಂ ಬ್ರ್ಯಾಂಚ್ಗೆ ಮನವಿ ಮಾಡಿ ಈ ಪೋಸ್ಟ್ಗಳನ್ನು ತೆಗೆದು ಹಾಕಲು ಕ್ರಮ ಕೈಗೊಳ್ಳಬೇಕಾಗಿ ಕೇಳಿಕೊಳ್ಳುವುದುದಾಗಿಯೂ ಹೇಳಿದೆ ಎಂದು ವರದಿಯಲ್ಲಿದೆ. ಇದರೊಂದಿಗೆ ತೋಜೆ ಅವರ ಕಾರ್ಯಕ್ರಮವನ್ನು ಆಯೋಜಿಸಿದ ಸಮಿತಿಯಲ್ಲಿದ್ದ ಮನೋಜ್ ಕುಮಾರ್ ಶರ್ಮಾ ಅವರ ಹೇಳಿಕೆಗಳನ್ನು ಬೂಮ್ ಲೈವ್ ವರದಿ ಮಾಡಿದ್ದು, “ಅಂತಹ ಯಾವುದೇ ಹೇಳಿಕೆಗಳನ್ನು ತೋಜೆ ಅವರು ಹೇಳಿದ್ದು ಗಮನಕ್ಕೆ ಬಂದಿಲ್ಲ ಎಂದು ಹೇಳಿದ್ದಾರೆ ಎಂದು ಹೇಳಿದೆ. ಇದರೊಂದಿಗೆ ಶರ್ಮಾ ಅವರು ಪ್ರತಿಕ್ರಿಯಿಸಿ, ನಾನು ನೊಬೆಲ್ ಪ್ರಶಸ್ತಿ ಸಮಿತಿಯ ಉಪನಾಯಕ ಆಸ್ಲೆ ತೋಜೆ ಅವರೊಂದಿಗೆ ಐಐಸಿಯಲ್ಲಿದ್ದು ನಿನ್ನೆ ಐಟಿಸಿ ಮೌರ್ಯ ಶೆರಟಾನ್ ಹೋಟೆಲ್ನಲ್ಲಿದ್ದೆ. ಅಲ್ಲಿ ಟೈಮ್ಸ್ ನೌ ವಾಹಿನಿಯ ಪತ್ರಕರ್ತರು ತೋಜೆ ಅವರ ಸಂದರ್ಶನಕ್ಕೆ ಬಂದಿದ್ದರು. ಐಐಸಿಯ ಮುಖ್ಯ ಭಾಷಣದಲ್ಲಾಗಲಿ ಟೈಮ್ಸ್ ನೌ ಸಂದರ್ಶನದಲ್ಲಾಗಲಿ ಅಂಥದ್ದೇನನ್ನೂ ತೋಜೆ ಅವರು ಹೇಳಿಲ್ಲ” ಎಂಬುದನ್ನು ಅವರು ಹೇಳಿದ್ದಾಗಿ ವರದಿ ಹೇಳಿದೆ. ನಾಮನಿರ್ದೇಶಿತರ ಹೆಸರು 50 ವರ್ಷಗಳವರೆಗೆ ಬಹಿರಂಗವಿಲ್ಲ ನೊಬೆಲ್ ಪ್ರಶಸ್ತಿಯ ಅಧಿಕೃತ ವೆಬ್ಸೈಟ್ ಪ್ರಕಾರ, 2023ನೇ ಸಾಲಿನಲ್ಲಿ ನೊಬೆಲ್ ಶಾಂತಿ ಪ್ರಶಸ್ತಿಗೆ 305ಮಂದಿ ಉಮೇದುವಾರರಿದ್ದು, ಇದರಲ್ಲಿ 2012 ವ್ಯಕ್ತಿಗಳು ಮತ್ತು 93 ಸಂಸ್ಥೆಗಳಿವೆ. ಈ ನಾಮನಿರ್ದೇಶಿತರ ಹೆಸರು ಅಥವಾ ನಾಮನಿರ್ದೇಶನ ಮಾಡಿದವರ ಹೆಸರುಗಳನ್ನು 50 ವರ್ಷಗಳ ವರೆಗೆ ಬಹಿರಂಗಪಡಿಸಲಾಗುವುದಿಲ್ಲ. ಆಸ್ಲೆ ತೋಜೆ ಅವರನ್ನು ಸಂಪರ್ಕಿಸಲು ನ್ಯೂಸ್ಚೆಕರ್ ಯತ್ನಿಸಿದ್ದು, ಈ ಕುರಿತು ಅವರ ಪ್ರತಿಕ್ರಿಯೆ ಲಭ್ಯವಾಗಿದ್ದೇ ಆದಲ್ಲಿ ಈ ಲೇಖನದಲ್ಲಿ ಸೇರಿಸಲಾಗುವುದು Conclusion ನೊಬೆಲ್ ಶಾಂತಿ ಪ್ರಶಸ್ತಿಗೆ ಪ್ರಧಾನಿ ಮೋದಿ ಅವರು ದೊಡ್ಡ ಸ್ಪರ್ಧಿ ಎಂದು ನೊಬೆಲ್ ಪ್ರಶಸ್ತಿ ಸಮತಿಯ ಉಪನಾಯಕ ಆಸ್ಲೆ ತೋಜೆ ಅವರು ಹೇಳಿದ್ದಾರೆ ಎನ್ನುವ ಕ್ಲೇಮ್ ತಪ್ಪಾಗಿದೆ. ಈ ಬಗ್ಗೆ ಯಾವದೇ ರೀತಿಯ ವೀಡಿಯೋ ಆಗಲಿ, ಹೇಳಿಕೆಗಳಾಗಲಿ ಲಭ್ಯವಿಲ್ಲ. Results: False Our Sources: Report By News Laundry, Dated March 16, 2023 Report By Zee News, Dated March 16, 2023 Report By The Print, Dated March 16, 2023 Report By BoomLive, Dated March 16, 2023 Nobel Prize Website ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.
schema:mentions
schema:reviewRating
schema:author
schema:datePublished
schema:inLanguage
  • Hindi
schema:itemReviewed
Faceted Search & Find service v1.16.115 as of Oct 09 2023


Alternative Linked Data Documents: ODE     Content Formats:   [cxml] [csv]     RDF   [text] [turtle] [ld+json] [rdf+json] [rdf+xml]     ODATA   [atom+xml] [odata+json]     Microdata   [microdata+json] [html]    About   
This material is Open Knowledge   W3C Semantic Web Technology [RDF Data] Valid XHTML + RDFa
OpenLink Virtuoso version 07.20.3238 as of Jul 16 2024, on Linux (x86_64-pc-linux-musl), Single-Server Edition (126 GB total memory, 11 GB memory in use)
Data on this page belongs to its respective rights holders.
Virtuoso Faceted Browser Copyright © 2009-2025 OpenLink Software