About: http://data.cimple.eu/claim-review/a67730f9b64ea620eb9b3f411bb18ba23e2fe61d99e71dd06359af2b     Goto   Sponge   NotDistinct   Permalink

An Entity of Type : schema:ClaimReview, within Data Space : data.cimple.eu associated with source document(s)

AttributesValues
rdf:type
http://data.cimple...lizedReviewRating
schema:url
schema:text
  • Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check Contact Us: checkthis@newschecker.in Fact checks doneFOLLOW US Fact Check ನಟ ರಾಜ್ಕುಮಾರ್ ಮತ್ತು ಮಾಜಿ ಪ್ರಧಾನಿ ಇಂದಿರಾಗಾಂಧಿಯವರೊಂದಿಗೆ ಪ್ರಧಾನಿ ಮೋದಿಯವರಿದ್ದ ಹಳೆಯ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿದೆ. ವಾಟ್ಸಾಪ್ ನಲ್ಲಿರುವ ಕ್ಲೇಮಿನಲ್ಲಿ, “ಡಾ.ರಾಜ್ಕುಮಾರ್, ಪಾರ್ವತಮ್ಮ ರಾಜ್ ಕುಮಾರ್, ಇಂದಿರಾ ಗಾಂಧಿ ಹಾಗೂ ನರೇಂದ್ರ ಮೋದಿಯವರಿರುವ ಅಪರೂಪದ ಚಿತ್ರ” ಎಂದು ಹೇಳಲಾಗಿದೆ. ಸತ್ಯಶೋಧನೆಗಾಗಿ ಈ ಕ್ಲೇಮ್ ಅನ್ನು ನ್ಯೂಸ್ಚೆಕರ್ ವಾಟ್ಸಾಪ್ ಟಿಪ್ಲೈನ್ಗೆ ಬಳಕೆದಾರರೊಬ್ಬರು ಕಳುಹಿಸಿದ್ದು, ಈ ಕ್ಲೇಮ್ ತಿರುಚಲಾದ ಚಿತ್ರ ಎಂದು ಕಂಡುಬಂದಿದೆ. ಈ ಫೋಟೋದ ಬಗ್ಗೆ ಸತ್ಯಶೋಧನೆಗಾಗಿ ಗೂಗಲ್ ರಿವರ್ಸ್ ಇಮೇಜ್ ಸರ್ಚ್ ನಡೆಸಲಾಗಿದೆ. ಈ ವೇಳೆ ಹಲವು ಫಲಿತಾಂಶಗಳು ಲಭ್ಯವಾಗಿವೆ. ಎಪ್ರಿಲ್ 24, 2019ರಂದು ದಿ ಕ್ವಿಂಟ್ ಪ್ರಕಟಿಸಿದ ದಿ.ಡಾ.ರಾಜ್ಕುಮಾರ್ ಅವರ ಕುರಿತ ಲೇಖನ “Karnataka’s Reluctant Politician: The Life and Times of Annavaru” ದಲ್ಲಿ ರಾಜ್ ಕುಮಾರ್ ಅವರ ಬದುಕು, ರಾಜಕೀಯದ ಬಗ್ಗೆ ಅವರ ಧೋರಣೆಯನ್ನು ಹೇಳಲಾಗಿದೆ. ಇದರಲ್ಲಿ ಸಂಗೀತಾ ಮ್ಯೂಸಿಕ್ನ ಕಾರ್ಯಕ್ರಮವೊಂದರಲ್ಲಿ ಡಾ.ರಾಜ್ಕುಮಾರ್, ಅವರ ಪತ್ನಿ ಪಾರ್ವತಮ್ಮ ಅವರು ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರೊಂದಿಗೆ ತೆಗೆಸಿಕೊಂಡ ಗ್ರೂಪ್ ಫೋಟೋವನ್ನು ಪ್ರಕಟಿಸಲಾಗಿದೆ. ಎಪ್ರಿಲ್ 18, 2018ರಂದು ಮೆಟ್ರೋ ಸಾಗಾ ಪ್ರಕಟಿಸಿದ “16 Life Incidents of Dr. RajKumar Proves that there is no one Like Him and Will Ever Be” ಎಂಬ ಲೇಖನದಲ್ಲಿ ರಾಜ್ ಕುಮಾರ್ ಅವರ ಜೀವನದ ಮಹತ್ವದ ಘಟ್ಟಗಳ ಕುರಿತ ಫೋಟೋಗಳನ್ನು ಪ್ರಕಟಿಸಲಾಗಿದೆ. ಡಾ.ರಾಜ್ಕುಮಾರ್ ಅವರು ತಮ್ಮ ಪತ್ನಿ ಪಾರ್ವತಮ್ಮ ಜೊತೆಗೆ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರೊಂದಿಗೆ ತೆಗೆಸಿಕೊಂಡ ಗ್ರೂಪ್ ಪೋಟೋ ಇದಾಗಿದೆ. ಈ ಎರಡೂ ಫೋಟೋಗಳನ್ನು ಮತ್ತು ವೈರಲ್ ಆಗಿರುವ ಫೋಟೋವನ್ನು ತುಲನೆ ಮಾಡಿದಾಗ, ಮೋದಿ ಫೋಟೋವನ್ನು ಇನ್ನೊಬ್ಬರ ಮುಖಕ್ಕೆ ಎಡಿಟ್ ಮಾಡಲಾಗಿರುವುದು ಕಂಡು ಬಂದಿದೆ. Also Read: ಏರ್ಶೋದಲ್ಲಿ ಸುಖೋಯ್ ವಿಮಾನದ ಈ ಪ್ರದರ್ಶನ ನಿಜವೇ; ವೈರಲ್ ವೀಡಿಯೋ ಹಿಂದಿನ ಸತ್ಯ ಏನು? ಇನ್ನು ತಿರುಚಿದ ಚಿತ್ರವನ್ನು ಕೂಲಂಕಷವಾಗಿ ಪರಿಶೀಲನೆ ನಡೆಸಲಾಗಿದೆ. ಜೊತೆಗೆ ಇದನ್ನು ರಿವರ್ಸ್ ಇಮೇಜ್ ಸರ್ಚ್ ನಡೆಸಿದಾಗ ಇದು ಕೂಡ ತಿರುಚಿದ ಚಿತ್ರದ ಭಾಗ ಎಂದು ಕಂಡುಬಂದಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಹಿಂದೆ ಪಕ್ಷದ ಕಚೇರಿಯಲ್ಲಿ, ಆರೆಸ್ಸೆಸ್ ಕಚೇರಿಯಲ್ಲಿ ಕಸಗುಡಿಸುವ ಕೆಲಸವನ್ನೂ ಮಾಡಿದ್ದರು ಎಂದು ಹೇಳಲಾದ ನಕಲಿ ಚಿತ್ರದಲ್ಲಿ ಕಸ ಗುಡಿಸುತ್ತಿದ್ದ ಬೇರೊಬ್ಬ ವ್ಯಕ್ತಿಯ ಶಿರಕ್ಕೆ ಎಡಿಟ್ ಮಾಡಲಾದ ಮೋದಿ ತಲೆಯ ಚಿತ್ರವನ್ನೇ ಡಾ.ರಾಜ್ ಕುಮಾರ್-ಇಂದಿರಾ ಗಾಂಧಿ ಗ್ರೂಪ್ ಫೋಟೋಕ್ಕೂ ಎಡಿಟ್ ಮಾಡಿರುವುದು ಗೊತ್ತಾಗಿದೆ. ಪ್ರಧಾನಿ ಮೋದಿ ಅವರ ಕಸ ಗುಡಿಸುವ ಚಿತ್ರ ಎನ್ನಲಾದ ಚಿತ್ರದ ಕುರಿತ ವರದಿಗಳು ಇಲ್ಲಿ ಮತ್ತು ಇಲ್ಲಿವೆ. ಈ ಸತ್ಯಶೋಧನೆಯ ಪ್ರಕಾರ, ಡಾ.ರಾಜ್ಕುಮಾರ್ ಮತ್ತು ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರೊಂದಿಗೆ ನರೇಂದ್ರ ಮೋದಿಯವರು ಇರುವ ಚಿತ್ರ ತಿರುಚಿದ ಚಿತ್ರ ಎಂದು ಕಂಡುಬಂದಿದೆ. Our Sources: Article by The Quint, Dated: April 24, 2019 Article by Metro Saga, Dated: April 18, 2018 ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು. Ishwarachandra B G December 18, 2024 Prasad Prabhu November 29, 2024 Kushel HM October 29, 2024
schema:mentions
schema:reviewRating
schema:author
schema:datePublished
schema:inLanguage
  • Hindi
schema:itemReviewed
Faceted Search & Find service v1.16.115 as of Oct 09 2023


Alternative Linked Data Documents: ODE     Content Formats:   [cxml] [csv]     RDF   [text] [turtle] [ld+json] [rdf+json] [rdf+xml]     ODATA   [atom+xml] [odata+json]     Microdata   [microdata+json] [html]    About   
This material is Open Knowledge   W3C Semantic Web Technology [RDF Data] Valid XHTML + RDFa
OpenLink Virtuoso version 07.20.3238 as of Jul 16 2024, on Linux (x86_64-pc-linux-musl), Single-Server Edition (126 GB total memory, 11 GB memory in use)
Data on this page belongs to its respective rights holders.
Virtuoso Faceted Browser Copyright © 2009-2025 OpenLink Software