About: http://data.cimple.eu/claim-review/a8c505b82e95c03665523a3e4bbf1adf81462822c7c4cb7d2370d038     Goto   Sponge   NotDistinct   Permalink

An Entity of Type : schema:ClaimReview, within Data Space : data.cimple.eu associated with source document(s)

AttributesValues
rdf:type
http://data.cimple...lizedReviewRating
schema:url
schema:text
  • ಫ್ಯಾಕ್ಟ್ಚೆಕ್: ಟಿಟಿಡಿ ಅಧ್ಯಕ್ಷರಾಗಿ ಕೊನಿಡೇಲ ನಾಗಬಾಬು ನೇಮಕಗೊಂಡಿದ್ದಾರಾ? ಟಿಟಿಡಿ ಅಧ್ಯಕ್ಷರಾಗಿ ಕೊನಿಡೇಲ ನಾಗಬಾಬು ನೇಮಕಗೊಂಡಿದ್ದಾರಾ? Claim :ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ಸಹೋದರರಾದ ಕೊನಿಡೇಲಾ ನಾಗಬಾಬು ಅವರನ್ನು ತಿರುಮಲ ತಿರುಪತಿ ದೇವಸ್ಥಾನದ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. Fact :ಟಿಟಿಡಿ ಯಾವುದೇ ಅಧಿಕೃತವಾಗಿ ಪ್ರಕಟಣೆಯನ್ನು ಮಾಡಿಲ್ಲ. ವೈರಲ್ ಆದ ಸುದ್ದಿ ಸುಳ್ಳು. ಆಂಧ್ರಪ್ರದೇಶದಲ್ಲಿ 2024 ರ ವಿಧಾನಸಭಾ ಚುನಾವಣೆಯಲ್ಲಿ ಮೈತ್ರಿಕೂಟವಾದ ತೆಲುಗು ದೇಶಂ ಪಕ್ಷ, ಜನಸೇನೆ ಮತ್ತು ಭಾರತೀಯ ಜನತಾ ಪಾರ್ಟಿ ಗೆದ್ದಿದೆ. ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ಅವರು ಪಿಠಾಪುರಂ ವಿಧಾನಸಭಾ ಕ್ಷೇತ್ರದಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ಅವರ ಯಶಸ್ಸಿನಲ್ಲಿ ಸಹೋದರ ನಾಗಬಾಬು ಮುಖ್ಯ ಪಾತ್ರವನ್ನು ವಹಿಸಿದ್ದರು ಎಂದು ಹೇಳಲಾಗುತ್ತದೆ. ಪವನ್ ಕಲ್ಯಾಣ್ ತಮ್ಮ ಯಶಸ್ಸನ್ನು ತಮ್ಮ ಸಹೋದರರು ಮತ್ತು ಕುಟುಂಬದೊಂದಿಗೆ ಹಂಚಿಕೊಂಡಿದ್ದರು. ಇದೆಲ್ಲದರ ನಡುವೆ ಶ್ರೀ ವೆಂಕಟೇಶ್ವರನ ಆರಾಧ್ಯ ದೈವವಾದ ತಿರುಮಲ ತಿರುಪತಿ ದೇವಸ್ಥಾನದ ಮುಂದಿನ ಅಧ್ಯಕ್ಷರಾಗಿ ಕೊನಿಡೇಲ ನಾಗಬಾಬು ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ʼಟಿಟಿಡಿಯ ನೂತನ ಅಧ್ಯಕ್ಷ @NagaBabuOffl Garu #Tirumala # Tirupati #TTDChairman #TTD # NagendraBabu #NagaBabu # TirupatiYaaYo ' ಎಂಬ ಶೀರ್ಷಿಕೆಯೊಂದಿಗೆ ನಾಗಬಾಬು ಅವರ ಚಿತ್ರಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. The elder bro #Nagababu & also an actor (bro of @PawanKalyan) has been appointed as chairman of @TTDevasthanams trust.— भारत पुनरुत्थान - श्रीराम श्रीकृष्ण #शिवशक्ती (@punarutthana) June 6, 2024 What is not clear is, which God he is referring to ? pic.twitter.com/gbwbYTutfD Konidela Nagababu garu will be new chairman of TTD ❤️@NagaBabuOffl #Tirumala #TTD pic.twitter.com/peNYq2mf54— MANI💫 (@MANI_jenasena) June 6, 2024 TTD New Chairman @NagaBabuOffl Garu #Tirumala #Tirupati #TTDChairman #TTD#NagendraBabu #NagaBabu #TirupatiYaaYo pic.twitter.com/TKKqoYUyeO— TirupatiYaaYo (@TirupatiYaaYo) June 6, 2024 ಫ್ಯಾಕ್ಟ್ಚೆಕ್ ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ಸ್ಥಳೀಯ ಮತ್ತು ರಾಷ್ಟ್ರೀಯ ಮಾಧ್ಯಮಗಳಲ್ಲೂ ಇದರ ಕುರಿತು ಯಾವುದೇ ಅಧಿಕೃತ ಪ್ರಕಟನೆ ನಮಗೆ ಕಂಡುಬಂದಿಲ್ಲ. ಆಂಧ್ರಪ್ರದೇಶದಲ್ಲಿ ಇನ್ನೂ ಹೊಸ ಸರ್ಕಾರ ರಚನೆಯಾಗದ ಕಾರಣ, ರಾಜ್ಯದಲ್ಲಿ ಯಾವುದೇ ನೇಮಕಾತಿಗಳು ನಡೆದಿಲ್ಲ. ನಾವು ವೈರಲ್ ಆದ ಸುದ್ದಿಯ ಬಗ್ಗೆ ಮತ್ತಷ್ಟು ಮಾಹಿತಿಯನ್ನು ಕಲೆಹಾಕಲು, ನೇಮಕಾತಿಯ ಕುರಿತ ಪ್ರಕಟನೆಗಳು ಮತ್ತು ನಾಗಬಾಬು ಅವರ ಟ್ವೀಟರ್ನಲ್ಲಿ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ನಾಗಬಾಬುರವರ ಟ್ವಿಟರ್ನಲ್ಲಿ "Do not believe any fake news. Trust only information from official party handles or my verified social media accounts. Please do not trust or spread fake news." ಎಂದು ಬರೆದು ಪೋಸ್ಟ್ ಮಾಡಿದ್ದರು. ಟ್ವಿಟ್ನ್ನು ಕನ್ನಡಕ್ಕೆ ಅನುವಾದಿಸಿದಾಗ ನಮಗೆ 'ಯಾವುದೇ ನಕಲಿ ಸುದ್ದಿಗಳನ್ನು ನಂಬಬೇಡಿ, ಅಧಿಕೃತವಾಗಿ ಪಕ್ಷದ ಅಧವಾ ಅಧಿಕೃತ ಖಾತೆಗಳಲ್ಲಿ ಹಂಚಿಕೊಳ್ಳಲಾದ ಮಾಹಿತಿಯನ್ನು ಮಾತ್ರ ನಂಬಿ ಮತ್ತು ಸುಳ್ಳು ಸುದ್ದಿಯನ್ನು ನಂಬಬೇಡಿ" ಎಂದು ಪೋಸ್ಟ್ ಮಾಡಲಾಗಿತ್ತು. Do not believe any fake news. Trust only information from official party handles or my verified social media accounts. Please do not trust or spread fake news.— Naga Babu Konidela (@NagaBabuOffl) June 6, 2024 ಟಿವಿ9ನಲ್ಲಿ ವರದಿಯಾಗಿರುವ ವಿಡಿಯೋವೊಂದು ನಮಗೆ ಕಂಡುಬಂದಿತು. ಅದರಲ್ಲಿ ಟಿಟಿಡಿ ಅಧ್ಯಕ್ಷರ ನೇಮಕದ ಸುದ್ದಿ ಬಗ್ಗೆ ವರದಿಗಾರರು ಕೇಳಿದಾಗ ನಾಗಬಾಬುರವರು ಈ ಸುದ್ದಿ ಸುಳ್ಳು ಎಂದು ಪ್ರತಿಕ್ರಿಯಿಸಿರುವುದನ್ನು ನಾವು ನೋಡಬಹುದು. అది ఫేక్ న్యూస్.. TTD Chairman Post పై Naga Babu రియాక్షన్ - TV9#nagababu #ttd #TV9Telugu pic.twitter.com/2V3g3ByUX9— TV9 Telugu (@TV9Telugu) June 6, 2024 ನಾಗಬಾಬು ಅವರು ಈ ಸುದ್ದಿ ಸುಳ್ಳು ಎಂದು ಈನಾಡು ಪತ್ರಿಕೆಯಲ್ಲಿ ಲೇಖನವನ್ನೂ ಸಹ ಪ್ರಕಟಿಸಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುಳ್ಳು ಸುದ್ದಿಗಳನ್ನು ನಂಬಬೇಡಿ ಎಂದು ಅವರು ಎಲ್ಲರಿಗೂ ಮನವಿ ಮಾಡಿದ್ದಾರೆ ಎಂದು ಲೇಖನದಲ್ಲಿ ಹೇಳಲಾಗಿದೆ. ಅಧಿಕೃತ ಖಾತೆಗಳನ್ನು ಮಾತ್ರ ನಂಬಿ ಎಂದು ಹೇಳಿದ್ದಾರೆಂದು ವರದಿಯಾಗಿದೆ. ಹೀಗಾಗಿ ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ಪವನ್ ಕಲ್ಯಾಣ್ ಅವರ ಸಹೋದರ ನಾಗಬಾಬು ಅವರನ್ನು ತಿರುಮಲ ತಿರುಪತಿ ದೇವಸ್ಥಾನದ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ ಎಂಬ ಸುದ್ದಿ ಸುಳ್ಳು.
schema:mentions
schema:reviewRating
schema:author
schema:datePublished
schema:inLanguage
  • Telugu
schema:itemReviewed
Faceted Search & Find service v1.16.115 as of Oct 09 2023


Alternative Linked Data Documents: ODE     Content Formats:   [cxml] [csv]     RDF   [text] [turtle] [ld+json] [rdf+json] [rdf+xml]     ODATA   [atom+xml] [odata+json]     Microdata   [microdata+json] [html]    About   
This material is Open Knowledge   W3C Semantic Web Technology [RDF Data] Valid XHTML + RDFa
OpenLink Virtuoso version 07.20.3238 as of Jul 16 2024, on Linux (x86_64-pc-linux-musl), Single-Server Edition (126 GB total memory, 2 GB memory in use)
Data on this page belongs to its respective rights holders.
Virtuoso Faceted Browser Copyright © 2009-2025 OpenLink Software