About: http://data.cimple.eu/claim-review/a95590137d892a50d1e8c7825b252f1977a4390757770c83db176acf     Goto   Sponge   NotDistinct   Permalink

An Entity of Type : schema:ClaimReview, within Data Space : data.cimple.eu associated with source document(s)

AttributesValues
rdf:type
http://data.cimple...lizedReviewRating
schema:url
schema:text
  • ಫ್ಯಾಕ್ಟ್ಚೆಕ್: ವಿಜಯವಾಡದಲ್ಲಿರುವ ಕನಕದುರ್ಗಮ್ಮ ದೇವಸ್ಥಾನದ ಬಳಿ ಸಿಂಹ ತಿರುಗುತ್ತಿರುವ ವಿಡಿಯೋ ವೈರಲ್ ವಿಜಯವಾಡದಲ್ಲಿರುವ ಕನಕದುರ್ಗಮ್ಮ ದೇವಸ್ಥಾನದ ಬಳಿ ಸಿಂಹ ತಿರುಗುತ್ತಿರುವ ವಿಡಿಯೋ ವೈರಲ್ Claim :ವಿಜಯವಾಡದ ಪ್ರಸಿದ್ಧ ದುರ್ಗಾ ಮಲ್ಲೇಶ್ವರ ಸ್ವಾಮಿ ದೇವಸ್ಥಾನದ ಬಳಿ ಸಿಂಹ ತಿರುಗುತ್ತಿರುವ ವಿಡಿಯೋ ವೈರಲ್ ಆಗಿದೆ Fact :ಸಿಂಹವೊಂದು ಅಲೆದಾಡುತ್ತಿರುವ ವೈರಲ್ ಆದ ವಿಡಿಯೋ ಗುಜರಾತ್ನ ರಾಜುಲಾದಲ್ಲಿರುವ ಲಕ್ಷ್ಮೀನಾರಾಯಣ ದೇವಸ್ಥಾನದ ಬಳಿ ಕಂಡುಬಂದಿದೆ. ಶ್ರೀ ದುರ್ಗಾ ಮಲ್ಲೇಶ್ವರ ಸ್ವಾಮಿ ವರ್ಲ ದೇವಸ್ಥಾನದಲ್ಲಿ ಮೂರು ದಿನಗಳ ಕಾಲ ನಡೆದ ಶಾಕಾಂಬರಿ ದೇವಿ ಉತ್ಸವ ಜುಲೈ 22, 2024 ರಂದು ಮುಕ್ತಾಯಗೊಂಡಿತು. ಪ್ರತಿವರ್ಷ ನಡೆಯುವ ಉತ್ಸವದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ದೇವಾಲಯಕ್ಕೆ ಆಗಮಿಸುತ್ತಾರೆ. ದೇವಿಯ ದರ್ಶನ ಪಡೆಯಲು ಭಕ್ತರು ಗಂಟೆಗಟ್ಟಲೆ ಕಾಯಬೇಕಾಗುತ್ತದೆ. ಶಾಕಂಬರಿ ದೇವಿಯನ್ನು ವಿವಿಧ ರೀತಿಯ ಹಣ್ಣುಗಳು ಮತ್ತು ತರಕಾರಿಗಳಿಂದ ಉತ್ಸವದ ದಿನ ಅಲಂಕರಿಸಲಾಗಿತ್ತು. ಆದರೆ ದೇವಸ್ಥಾನದ ಬಳಿ ಸಿಂಹ ತಿರುಗುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಜಯವಾಡದ ದೇವಸ್ಥಾನದ ಬಳಿ ದುರ್ಗಾದೇವಿಯ ವಾಹನವಾದ ಸಿಂಹವು ತಿರುಗಾಡುತ್ತಿದೆ ಎಂದು ಯೂಟ್ಯೂಬ್ನಲ್ಲಿನ ಕೆಲವು ವೀಡಿಯೊಗಳನ್ನು ಹಂಚಿಕೊಳ್ಳಲಾಗಿದೆ. ಇದೇ ವಿಡಿಯೋವನ್ನು ಇನ್ಸ್ಟಾಗ್ರಾಮ್ನ ಬಳಕೆದಾರರು ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ತಾಯಿಯ ದರ್ಶನವನ್ನು ಪಡೆಯಲು ಸಿಂಹವು ದೇವಸ್ಥಾನಕ್ಕೆ ಬಂದಿದೆ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಫ್ಯಾಕ್ಟ್ಚೆಕ್ ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ವೈರಲ್ ವಿಡಿಯೋದಲ್ಲಿ ಕಾಣಿಸಿಕೊಂಡಿರುವ ಸಿಂಹವು ಗುಜರಾತ್ನ ರಾಜುಲಾದಲ್ಲಿರುವ ಲಕ್ಷ್ಮೀನಾರಾಯಣ ದೇವಸ್ಥಾನದ ಬಳಿ ಕಾಣಿಸಿಕೊಂಡಿತ್ತು. ವೈರಲ್ ವಿಡಿಯೋವಿನಲ್ಲಿರುವ ಸತ್ಯಾಂಶವನ್ನು ತಿಳಿಯಲು ನಾವು ವೀಡಿಯೊದಿಂದ ಹೊರತೆಗೆಯಲಾದ ಕೀಫ್ರೇಮ್ಗಳನ್ನು ತೆಗೆದುಕೊಂಡು ಗೂಗಲ್ ರಿವರ್ಸ್ ಇಮೇಜ್ ಹುಡುಕಾಟವನ್ನು ಮಾಡಿದಾಗ. ಮಾರ್ಚ್ 2024 ರಲ್ಲಿ X ಬಳಕೆದಾರರಿಂದ ಅದೇ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಬಳಕೆದಾರರು ಹಂಚಿಕೊಂಡಿದ್ದರು. ವೈರಲ್ ಆದ ವಿಡಿಯೋದಲ್ಲಿ ಬರುವ ಸಿಂಹವನ್ನು ಚಿತ್ರೀಕರಿಸಿದ್ದು ಗುಜರಾತ್ನ ರಾಜುಲಾ, ಲಕ್ಷ್ಮಿ ನಾರಾಯಣ ಮಂದಿರದ ಆವರಣದಲ್ಲಿ ಎಂದು ನಾವು ಕಂಡುಕೊಂಡಿದ್ದೇವೆ. Lioness roaming in the premises of Laxmi Narayan Mandir at Kovaya in Rajula, Gujarat pic.twitter.com/f1mMgMSPL1— Amitabh Chaudhary (@MithilaWaala) March 26, 2024 Laxmi Narayan Temple at Kovaya in Rajula, Gujarat pic.twitter.com/7thXXmptYv— Kreately.in (@KreatelyMedia) March 26, 2024 ಮತ್ತಷ್ಟು ಹುಡುಕಾಟದಲ್ಲಿ ನಮಗೆ ಟಿವಿ9 ಗುಜರಾತಿ ಯೂಟ್ಯೂಬ್ ಚಾಲೆನ್ನಲ್ಲಿ ಮಾರ್ಚ್ 9,2024ರಂದು “Lion spotted near Laxminarayan Temple, Rajula | Amreli | Gujarat | TV9Gujarati” ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದರು. ದಿವ್ಯಭಾಸ್ಕರ್ ವರದಿ ಪ್ರಕಾರ ರಾಜುಲಾ-ಜಾಫರಾಬಾದ್ ಪ್ರದೇಶದಲ್ಲಿ ಸಿಂಹಗಳ ಓಡಾಟ ಗಣನೀಯವಾಗಿ ಹೆಚ್ಚಾಗಿದೆ. ಕೋವಾಯಮ ಲಕ್ಷ್ಮೀನಾರಾಯಣ ದೇವಸ್ಥಾನದ ಬಳಿ ಸಿಂಹಗಳು ತಿರುಗಾಡುತ್ತಿರುವುದು ಕಂಡುಬರುತ್ತದೆ. ವೈರಲ್ ಆಗಿರುವ ವಿಡಿಯೋ ಆಂಧ್ರಪ್ರದೇಶದ ವಿಜಯವಾಡದಲ್ಲ. ಗುಜರಾತ್ನ ರಾಜುಲಾ ಲಕ್ಷ್ಮೀನಾರಾಯಣ ದೇವಸ್ಥಾನದ ಬಳಿ ಈ ಘಟನೆ ನಡೆದಿದೆ. ಹೀಗಾಗಿ ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲವೆಂದು ನಾವು ಕಂಡುಕೊಂಡಿದ್ದೇವೆ.
schema:mentions
schema:reviewRating
schema:author
schema:datePublished
schema:inLanguage
  • Telugu
schema:itemReviewed
Faceted Search & Find service v1.16.115 as of Oct 09 2023


Alternative Linked Data Documents: ODE     Content Formats:   [cxml] [csv]     RDF   [text] [turtle] [ld+json] [rdf+json] [rdf+xml]     ODATA   [atom+xml] [odata+json]     Microdata   [microdata+json] [html]    About   
This material is Open Knowledge   W3C Semantic Web Technology [RDF Data] Valid XHTML + RDFa
OpenLink Virtuoso version 07.20.3238 as of Jul 16 2024, on Linux (x86_64-pc-linux-musl), Single-Server Edition (126 GB total memory, 5 GB memory in use)
Data on this page belongs to its respective rights holders.
Virtuoso Faceted Browser Copyright © 2009-2025 OpenLink Software