About: http://data.cimple.eu/claim-review/af2169b5dd57c4630b34527348c4eb4c124b351d1ffcf6800c3fcdf1     Goto   Sponge   NotDistinct   Permalink

An Entity of Type : schema:ClaimReview, within Data Space : data.cimple.eu associated with source document(s)

AttributesValues
rdf:type
http://data.cimple...lizedReviewRating
schema:url
schema:text
  • Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check Contact Us: checkthis@newschecker.in Fact checks doneFOLLOW US Fact Check Claim ಬಾದಾಮಿ ತಿನ್ನುವುದರಿಂದ ಹೊಟ್ಟೆಯ ಕೊಬ್ಬು ಕಡಿಮೆ ಮಾಡಬಹುದು Fact ಬಾದಾಮಿ ತಿನ್ನುವುದರಿಂದ ಹೊಟ್ಟೆ ಕೊಬ್ಬು ಕಡಿಮೆಯಾಗುತ್ತದೆ ಎನ್ನುವುದಕ್ಕೆ ವೈಜ್ಞಾನಿಕ ಪುರಾವೆಗಳಿಲ್ಲ. ಆದರೆ ಬಾದಾಮಿ ಸಮತೋಲಿತ ಆಹಾರದ ಭಾಗವಾಗಿ ತಿನ್ನುವುದು ಉತ್ತಮ ಬಾದಾಮಿ ತಿನ್ನುವುದರಿಂದ ಹೊಟ್ಟೆಯ ಬೊಜ್ಜು ಬರುವುದಿಲ್ಲ ಎಂದು ಕ್ಲೇಮ್ ಒಂದು ಹರಿದಾಡಿದೆ. ಇನ್ಸ್ಟಾಗ್ರಾಂನಲ್ಲಿ ಕಂಡುಬಂದ ಕ್ಲೇಮಿನ ಪ್ರಕಾರ, “ಹೊಟ್ಟೆ ಕರಗಿಸಲು ಬಾದಾಮಿಯನ್ನು ತಿನ್ನಿ, ಬಾದಾಮಿಯಲ್ಲಿ ವಿಟಮಿನ್ ಇ, ಫೈಬರ್ ಮತ್ತು ಪ್ರೋಟೀನ್ ಅಂಶಗಳು ಜಾಸ್ತಿ ಇರುತ್ತವೆ. ಇದರಿಂದ ವ್ಯಕ್ತಿಯ ಹೊಟ್ಟೆ ತುಂಬುತ್ತದೆ ಆದ್ರೆ ಬೊಜ್ಜು ಬರುವುದಿಲ್ಲ” ಎಂದು ಹೇಳಲಾಗಿದೆ. Also Read: ಚಾಕೊಲೆಟ್ ಐಸ್ಕ್ರೀಂ ತಿನ್ನುವುದರಿಂದ ಭಾವನಾತ್ಮಕ, ದೈಹಿಕ ನೋವು ಕಡಿಮೆಯಾಗುತ್ತದೆಯೇ? ಇದನ್ನು ನಾವು ಸತ್ಯಪರಿಶೀಲನೆ ಮಾಡಿದ್ದು ಇದು ತಪ್ಪಾದ ಸಂದರ್ಭ ಎಂದು ಕಂಡುಕೊಂಡಿದ್ದೇವೆ. ಬಾದಾಮಿಯು ಪೌಷ್ಟಿಕ ಆಹಾರವಾಗಿದ್ದು ಅದು ಆರೋಗ್ಯಕರ ಆಹಾರದ ಭಾಗವಾಗಿದೆ. ಆದಾಗ್ಯೂ, ಬಾದಾಮಿ ತಿನ್ನುವುದು ನಿರ್ದಿಷ್ಟವಾಗಿ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡುತ್ತದೆ ಎಂಬ ಹೇಳಿಕೆಯನ್ನು ಎಚ್ಚರಿಕೆಯಿಂದ ನೋಡಬೇಕು. ವಿಟಮಿನ್ ಇ, ಫೈಬರ್ ಮತ್ತು ಪ್ರೋಟೀನ್ ಬಾದಾಮಿಯಲ್ಲಿ ಸಮೃದ್ಧವಾಗಿದೆ. ಪ್ರೋಟೀನ್ ಮತ್ತು ಫೈಬರ್ ಅಂಶದಿಂದಾಗಿ ಹೊಟ್ಟೆ ತುಂಬಿದಂತೆ ಇದು ಭಾವನೆ ಹುಟ್ಟಿಸುತ್ತದೆ. ಆರೆ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡುತ್ತದೆ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ಆದಾಗ್ಯೂ, ಬಾದಾಮಿಯು ಪೌಷ್ಟಿಕಾಂಶ-ಭರಿತ ಆಹಾರವಾಗಿದ್ದು ಅದು ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಬಾದಾಮಿಯಲ್ಲಿರುವ ಪೌಷ್ಟಿಕಾಂಶದ ಅಂಶಗಳು ಮತ್ತು ತೂಕ ನಿರ್ವಹಣೆಯಲ್ಲಿ ಅದರ ಸಂಭಾವ್ಯ ಪಾತ್ರವನ್ನು ನೋಡೋಣ. Also Read: ದಾಲ್ಚಿನ್ನಿ ತಿನ್ನುವುದರಿಂದ ಮಧುಮೇಹ ನಿಯಂತ್ರಿಸಬಹುದೇ? ಬಾದಾಮಿ ಆರೋಗ್ಯಕರ ಕೊಬ್ಬಿನ ಉತ್ತಮ ಮೂಲ: ವಿಶೇಷವಾಗಿ ಮೊನೊಸಾಚುರೇಟೆಡ್ ಕೊಬ್ಬುಗಳು, ಇದು ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿ. ಅದರಲ್ಲಿ ಪ್ರೋಟೀನ್, ಫೈಬರ್, ವಿಟಮಿನ್ ಇ, ಮೆಗ್ನೀಸಿಯಮ್ ಮತ್ತು ಇತರ ವಿವಿಧ ಜೀವಸತ್ವಗಳು ಮತ್ತು ಖನಿಜಗಳು ಸಮೃದ್ಧವಾಗಿವೆ. ಹಿರಾನಂದನಿ ಆಸ್ಪತ್ರೆಯ ಜನರಲ್ ಮೆಡಿಸಿನ್ ವೈದ್ಯರಾದ ಡಾ. ಸುಜಾತಾ ಚಕ್ರವರ್ತಿ, ಅವರು ಹೇಳುವ ಪ್ರಕಾರ, “ಬಾದಾಮಿ ಆರೋಗ್ಯಕರ. ಅವುಗಳಲ್ಲಿ ಪ್ರೋಟೀನ್ ಮತ್ತು ಕೊಬ್ಬುಗಳು ಅಧಿಕವಾಗಿವೆ. ಅಲ್ಲದೆ, ಬಾದಾಮಿಯು ಸಣ್ಣ ಪ್ರಮಾಣದಲ್ಲಿ ಕಬ್ಬಿಣ, ಕ್ಯಾಲ್ಸಿಯಂ, ರಂಜಕ, ವಿಟಮಿನ್ ಎ, ಬಿ ಕಾಂಪ್ಲೆಕ್ಸ್ ಮತ್ತು ಇ ಅನ್ನು ಕೂಡ ಒದಗಿಸುತ್ತದೆ. ಪೂರ್ಣತೆಯ ಭಾವನೆ: ಬಾದಾಮಿ ಪ್ರೋಟೀನ್ ಮತ್ತು ಫೈಬರ್ ಅನ್ನು ಹೊಂದಿರುತ್ತದೆ, ಇದು ಹಸಿವನ್ನು ಕಡಿಮೆ ಮಾಡಿ ಪೂರ್ಣ ಸಂತೃಪ್ತಿ ಭಾವನೆಗೆ ಕಾರಣವಾಗುತ್ತದೆ. ಒಟ್ಟಾರೆ ಕ್ಯಾಲೋರಿ ಸೇವನೆಯನ್ನು ನಿರ್ವಹಿಸಲು ಇದು ಸಹಾಯ ಮಾಡುತ್ತದೆ. ತೂಕ ನಿರ್ವಹಣೆ: ಅಧ್ಯಯನ ಪ್ರಕಾರ ಬಾದಾಮಿಯನ್ನು ಸಮತೋಲಿತ ಆಹಾರದಲ್ಲಿ ಸೇರಿಸುವುದರಿಂದ ಅವುಗಳ ಪೋಷಕಾಂಶಗಳ ಸಾಂದ್ರತೆ ಮತ್ತು ಪೂರ್ಣ ಸಂತೃಪ್ತಿ ಉತ್ತೇಜಿಸುವ ಸಾಮರ್ಥ್ಯದಿಂದಾಗಿ ತೂಕ ನಿರ್ವಹಣೆಗೆ ಸಹಾಯ ಮಾಡಬಹುದು ಆದಾಗ್ಯೂ, ಇದು ನಿರ್ದಿಷ್ಟವಾಗಿ ಹೊಟ್ಟೆಯ ಕೊಬ್ಬನ್ನು ಕರಗಿಸುವುದಿಲ್ಲ. ಆದರೆ ಒಟ್ಟಾರೆ ತೂಕ ನಿಯಂತ್ರಣಕ್ಕೆ ಕೊಡುಗೆ ನೀಡುತ್ತದೆ. ನಿರ್ದಿಷ್ಟ ಸ್ಥಳದಲ್ಲಿ ಮತ್ತು ಹೊಟ್ಟೆಯ ಬೊಜ್ಜು ಕಡಿತ: ನಿರ್ದಿಷ್ಟ ಆಹಾರವನ್ನು ಸೇವಿಸುವ ಮೂಲಕ ನಿರ್ದಿಷ್ಟ ಪ್ರದೇಶಗಳಲ್ಲಿ (ಹೊಟ್ಟೆಯಂತಹ) ಕೊಬನ್ನು ಕಡಿಮೆಗೊಳಿಸಬಹುದು ಎನ್ನುವುದನ್ನು ವೈಜ್ಞಾನಿಕವಾಗಿ ಹೇಳಿಲ್ಲ ದೇಹದ ಯಾವುದೇ ನಿರ್ದಿಷ್ಟ ಪ್ರದೇಶದಲ್ಲಿ ಕೊಬ್ಬನ್ನು ಕಡಿಮೆ ಕಳೆದುಕೊಳ್ಳುವುದು ಆಹಾರ, ವ್ಯಾಯಾಮ ಮತ್ತು ತಳಿಶಾಸ್ತ್ರದ ಸಂಯೋಜನೆಯ ಮೂಲಕ ಒಟ್ಟಾರೆ ದೇಹದ ಕೊಬ್ಬಿನಾಂಶ ಕಡಿಮೆ ಮಾಡುವುದನ್ನು ಒಳಗೊಂಡಿರುತ್ತದೆ. ಆರೋಗ್ಯಕರ ಆಹಾರದಲ್ಲಿ ಬಾದಾಮಿ: ಮಿತವಾಗಿ ಸೇವಿಸಿದಾಗ ಬಾದಾಮಿ ಆರೋಗ್ಯಕರ ಆಹಾರದ ಪ್ರಯೋಜನಕಾರಿ ಅಂಶವಾಗಿರುತ್ತದೆ. ಆದಾಗ್ಯೂ, ಅತಿಯಾದ ಸೇವನೆಯಿಂದ ಕ್ಯಾಲೋರಿ ಹೆಚ್ಚಳ, ತೂಕ ನಿರ್ವಹಣೆಯ ಗುರಿಗಳನ್ನು ತಡೆಯುತ್ತದೆ. ಹಾರ್ವರ್ಡ್ ಟಿ.ಎಚ್. ಚಾನ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ಪ್ರಕಾರ ಒಂದು ಔನ್ಸ್ ಬಾದಾಮಿ, ಇದು 20-24 ಪೂರ್ಣ ಬಾದಾಮಿಗೆ ಸಮಾನ. ಇದು ಸುಮಾರು 165 ಕ್ಯಾಲೊರಿಗಳನ್ನು ಹೊಂದಿರುತ್ತದೆ. ಬಾದಾಮಿಯ ಅತಿಯಾದ ಸೇವನೆಯಿಂದ ಏನಾಗುತ್ತದೆ?: ಕೆಲವು ಸಂದರ್ಭಗಳಲ್ಲಿ ಹಾನಿಕಾರಕವಾಗಬಹುದು ಮತ್ತು ವಿಷತ್ವವನ್ನು ಉಂಟುಮಾಡಬಹುದು. ಬಾದಾಮಿಯಲ್ಲಿ ನಾರಿನಶಂಶ ಸಮೃದ್ಧವಾಗಿರುವುದರಿಂದ, ಅತಿಯಾದ ಸೇವನೆ ಜಠರ, ಕರುಳಿನ ಸಮಸ್ಯೆಗಳಿಗೆ ಕಾರಣವಾಗಬಹುದು, ಉದಾಹರಣೆಗೆ ಮಲಬದ್ಧತೆ (ಸಾಕಷ್ಟು ನೀರು ತೆಗೆದುಕೊಳ್ಳದಿದ್ದರೆ). ಇದು ಕ್ಯಾಲ್ಸಿಯಂ, ಮೆಗ್ನೀಸಿಯಮ್, ಇತ್ಯಾದಿ ಇತರ ಖನಿಜಗಳ ಹೀರಿಕೊಳ್ಳುವಿಕೆಗೆ ಅಡ್ಡಿಪಡಿಸುತ್ತದೆ. ಇತರ ಹಾನಿಕಾರಕ ಪರಿಣಾಮಗಳಿಂದ ತೂಕ ಹೆಚ್ಚಾಗುವುದು, ವಿಟಮಿನ್ ಇ ಮಿತಿಮೀರಿದ ಕಾರಣಕ್ಕೆ (ಅಪರೂಪಕ್ಕೆ), ಮೂತ್ರಪಿಂಡದ ಕಲ್ಲುಗಳಿಗೆ ವಿಷಕಾರಿಯಾಗಬಹುದು. ಇನ್ನು ಬಾದಾಮಿ ಅಲರ್ಜಿ ಅಪರೂಪವಾಗಿದ್ದರೂ, ಕೆಲವು ಜನರು ಬಳಲುತ್ತಿದ್ದಾರೆ. ಆದ್ದರಿಂದ, ಬಾದಾಮಿ ಪೌಷ್ಟಿಕಾಂಶದ ಶಕ್ತಿ ಕೇಂದ್ರವಾಗಿದ್ದರೂ, ಅವುಗಳ ಸೇವನೆಯು 1-ಔನ್ಸ್ನಿಂದ 1.5-ಔನ್ಸ್ ಸೇವೆಯನ್ನು (20-23 ಬಾದಾಮಿ) ಮೀರಬಾರದು ಏಕೆಂದರೆ ಇದು ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು. ಆಹಾರ ತಜ್ಞರಾದ ಕಾಮ್ನಾ ಟ್ಯಾಂಕ್ ಅವರು ಹೇಳುವುದೇನೆಂದರೆ “ಅತಿಯಾದ ಯಾವುದನ್ನಾದರೂ ಸೇವಿಸುವುದರಿಂದ ಅಪಾಯಕ್ಕೆ ಕಾರಣವಾಗುತ್ತದೆ. ಬಾದಾಮಿ ಆರೋಗ್ಯಕರ ಅಂಶವಾಗಿದ್ದುಅನೇಕ ಪ್ರಯೋಜನಗಳನ್ನು ಹೊಂದಿದೆ. ಆದರೆ ದೊಡ್ಡ ಪ್ರಮಾಣದಲ್ಲಿ ಸೇವಿಸಿದರೆ ಇದು ಸಾಕಷ್ಟು ಅಡ್ಡಪರಿಣಾಮ ಬೀರುತ್ತದೆ. ಹಾಗಾಗಿ ಅವುಗಳನ್ನು ಎಷ್ಟು ತಿನ್ನಬೇಕು ಎಂದು ನಾವು ತಿಳಿದುಕೊಳ್ಳಬೇಕು. ಬಾದಾಮಿಯನ್ನು ಹೆಚ್ಚು ತಿನ್ನುವುದರಿಂದ ಮಲಬದ್ಧತೆ ಮತ್ತು ಅಲರ್ಜಿಯಂತಹ ಅನೇಕ ಅಡ್ಡಪರಿಣಾಮ ಆಗುತ್ತದೆ, ಏಕೆಂದರೆ ಬಾದಾಮಿಯು ಅಮಾಂಡಿನ್ ಎಂಬ ಪ್ರೋಟೀನ್ ಅನ್ನು ಹೊಂದಿರುತ್ತದೆ, ಇದು ಅಲರ್ಜಿ ಆಗಬಹುದು. ಇದು ತೂಕವನ್ನೂ ಕಡಿಮೆ ಮಾಡುತ್ತದೆ. ಹೆಚ್ಚು ತಿನ್ನುವುದರಿಂದ ಮಿತಿ ಮೀರಿದ ವಿಟಮಿನ್ ಇ ದೇಹಕ್ಕೆ ಸೇರುತ್ತದೆ. ಹೆಚ್ಚುವರಿ ವಿಟಮಿನ್ ಇ ರಕ್ತ ಹೆಪ್ಪುಗಟ್ಟುವಿಕೆಗೆ ಅಡ್ಡಿಪಡಿಸುತ್ತದೆ ಮತ್ತು ರಕ್ತಸ್ರಾವವನ್ನು ಉಂಟುಮಾಡುತ್ತದೆ; ಇದು ಸೈನೈಡ್ ವಿಷವನ್ನು ಉಂಟುಮಾಡಬಹುದು; ಇದು ದೇಹದಲ್ಲಿ ಪೋಷಕಾಂಶಗಳ ಹೀರಿಕೊಳ್ಳುವಿಕೆಯನ್ನು ಕಡಿಮೆ ಮಾಡುತ್ತದೆ ಮತ್ತು ಮೂತ್ರಪಿಂಡದ ಕಲ್ಲುಗಳಿಗೆ ಕಾರಣವಾಗಬಹುದು. ತೂಕ ನಿರ್ವಹಣೆ ತಂತ್ರಗಳು: ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡುವುದು ಸೇರಿದಂತೆ ತೂಕ ನಿರ್ವಹಣೆಗೆ ಸಮತೋಲಿತ ಆಹಾರ, ನಿಯಮಿತ ದೈಹಿಕ ಚಟುವಟಿಕೆ ಮತ್ತು ಜೀವನಶೈಲಿಯ ಬದಲಾವಣೆಗಳನ್ನು ಒಳಗೊಂಡಿರುವ ಸಮಗ್ರ ವಿಧಾನದ ಅಗತ್ಯವಿದೆ. Also Read: ಕೊಬ್ಬರಿ ತಿನ್ನುವುದರಿಂದ ಹಲವು ಆರೋಗ್ಯ ಪ್ರಯೋಜನಗಳಿವೆಯೇ? ಸಂಕ್ಷಿಪ್ತವಾಗಿ ಹೇಳುವುದಾದರೆ, ಬಾದಾಮಿಯು ಪೌಷ್ಟಿಕಾಂಶದ ಆಹಾರವಾಗಿದೆ ಮತ್ತು ಆರೋಗ್ಯಕರ ಆಹಾರದ ಭಾಗವಾಗಿದ್ದರೂ, ನೇರವಾಗಿ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡುತ್ತದೆ ಎನ್ನುವುದನ್ನು ಎಚ್ಚರಿಕೆಯಿಂದ ಪರಿಶೀಲಿಸಬೇಕು. ಸಮತೋಲಿತ ಆಹಾರ ಮತ್ತು ಆರೋಗ್ಯಕರ ಜೀವನಶೈಲಿಯ ಭಾಗವಾಗಿ ಸೇವಿಸಿದಾಗ ಅವರು ಒಟ್ಟಾರೆ ಆರೋಗ್ಯ ಮತ್ತು ತೂಕ ನಿರ್ವಹಣೆಗೆ ಕೊಡುಗೆ ನೀಡಬಹುದು. ಕೊನೆಯದಾಗಿ, ಬಾದಾಮಿಯು ವಿವಿಧ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ ಮತ್ತು ಪೌಷ್ಟಿಕಾಂಶದ ಆಹಾರದ ಭಾಗವಾಗಿರಬಹುದು, ಕೇವಲ ಬಾದಾಮಿ ಸೇವಿಸುವುದರಿಂದ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡುತ್ತದೆ ಎಂಬ ನೇರ ಹೇಳಿಕೆಯನ್ನು ಬೆಂಬಲಿಸಲು ಸಾಕಷ್ಟು ಪುರಾವೆಗಳಿಲ್ಲ. ತೂಕ ನಿರ್ವಹಣೆ ಮತ್ತು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡುವುದು ಬಹುಮುಖ್ಯವಾಗಿದೆ. ಒಂದೇ ಆಹಾರ ಪದಾರ್ಥದ ಪರಿಣಾಮಗಳ ಮೇಲೆ ಅವಲಂಬಿತವಾಗುವುದಕ್ಕಿಂತ ಹೆಚ್ಚಾಗಿ ಸಮಗ್ರ ವಿಧಾನದ ಅಗತ್ಯವಿರುತ್ತದೆ. ಬಾದಾಮಿಯೂ ಸೇರಿದಂತೆ ಸಮತೋಲಿತ ಆಹಾರ ಮತ್ತು ಆರೋಗ್ಯಕರ ಜೀವನಶೈಲಿಯು ಒಟ್ಟಾರೆ ಆರೋಗ್ಯ ಮತ್ತು ತೂಕ ನಿರ್ವಹಣೆಗೆ ಧನಾತ್ಮಕವಾಗಿ ಕೊಡುಗೆ ನೀಡುತ್ತದೆ. Our Sources Almonds (Prunus Dulcis Mill. D. A. Webb): A Source of Nutrients and Health-Promoting Compounds – PMC (nih.gov) A mid-morning snack of almonds generates satiety and appropriate adjustment of subsequent food intake in healthy women – PMC (nih.gov) A Comprehensive Review of Almond Clinical Trials on Weight Measures, Metabolic Health Biomarkers and Outcomes, and the Gut Microbiota – PMC (nih.gov) Spot reduction: why targeting weight loss to a specific area is a myth – The University of Sydney Effect of Almond Consumption on Metabolic Risk Factors—Glucose Metabolism, Hyperinsulinemia, Selected Markers of Inflammation: A Randomized Controlled Trial in Adolescents and Young Adults – PMC (nih.gov) Almonds | The Nutrition Source | Harvard T.H. Chan School of Public Health Potential Toxic Levels of Cyanide in Almonds (Prunus amygdalus), Apricot Kernels (Prunus armeniaca), and Almond Syrup – PMC (nih.gov) Almond Allergy: An Overview on Prevalence, Thresholds, Regulations and Allergen Detection – PMC (nih.gov) Conversation with Dr. Sujata Chakravarti, Consultant-General Medicine, Hiranandani Hospital, Vashi Conversation with Kamna Tank, Dietician (This article has been published in collaboration with THIP Media) ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು. Newschecker and THIP Media November 29, 2024 Ishwarachandra B G September 23, 2023 Newschecker and THIP Media September 22, 2023
schema:mentions
schema:reviewRating
schema:author
schema:datePublished
schema:inLanguage
  • Hindi
schema:itemReviewed
Faceted Search & Find service v1.16.115 as of Oct 09 2023


Alternative Linked Data Documents: ODE     Content Formats:   [cxml] [csv]     RDF   [text] [turtle] [ld+json] [rdf+json] [rdf+xml]     ODATA   [atom+xml] [odata+json]     Microdata   [microdata+json] [html]    About   
This material is Open Knowledge   W3C Semantic Web Technology [RDF Data] Valid XHTML + RDFa
OpenLink Virtuoso version 07.20.3238 as of Jul 16 2024, on Linux (x86_64-pc-linux-musl), Single-Server Edition (126 GB total memory, 5 GB memory in use)
Data on this page belongs to its respective rights holders.
Virtuoso Faceted Browser Copyright © 2009-2025 OpenLink Software