About: http://data.cimple.eu/claim-review/b21a1f452f3947666e58745180951b9d6c3517e82917e4c8121def7e     Goto   Sponge   NotDistinct   Permalink

An Entity of Type : schema:ClaimReview, within Data Space : data.cimple.eu associated with source document(s)

AttributesValues
rdf:type
http://data.cimple...lizedReviewRating
schema:url
schema:text
  • ಫ್ಯಾಕ್ಟ್ಚೆಕ್: ಭಾರತದಲ್ಲಿ ನಡೆಯುತ್ತಿರುವ ಸಾರ್ವತ್ರಿಕ ಚುನಾವಣೆಯ ಕುರಿತು ಅಮುಲ್ ಬ್ರಾಂಡ್ ಪ್ರಚಾರವನ್ನು ನಡೆಸಿದೆ ಎಂಬ ಸುದ್ದಿಯ ಅಸಲಿಯತ್ತೇನು? ಭಾರತದಲ್ಲಿ ನಡೆಯುತ್ತಿರುವ ಸಾರ್ವತ್ರಿಕ ಚುನಾವಣೆಯ ಕುರಿತು ಅಮುಲ್ ಬ್ರಾಂಡ್ ಪ್ರಚಾರವನ್ನು ನಡೆಸಿದೆ ಎಂಬ ಸುದ್ದಿಯ ಅಸಲಿಯತ್ತೇನು? Claim :"ನಿಮ್ಮ ಮತ ಅತ್ಯಮೂಲ್ಯವಾದದ್ದು. ಸರಿಯಾದ ನಿರ್ಧಾರ ತೆಗೆದುಕೊಂಡು ಮತದಾನ ಮಾಡಿ ಅಥವಾ ಮತದಾನ ಚಲಾಯಿಸಬೇಡಿ" ಎಂದು ಸಾರ್ವತ್ರಿಕ ಚುನಾವಣೆಗಳ ಕುರಿತು ಅಮುಲ್ ಜಾಹೀರಾತು ಪ್ರಚಾರ ಮಾಡಿದೆ. Fact :ಸಾರ್ವತ್ರಿಕ ಚುನಾವಣೆಗಳಲ್ಲಿ ಅಮುಲ್ ಯಾವುದೇ ಜಾಹೀರಾತು ಪ್ರಚಾರ ಮಾಡಿಲ್ಲ ಭಾರತೀಯರಾದ ನಾವು ಬೆಣ್ಣೆ ಮತ್ತು ಹಾಲಿನ ಬಗ್ಗೆ ಯೋಚಿಸಿದಾಗ ನಮಗೆ ನೆನಪಾಗೋದು ಅಮುಲ್ ಬ್ರಾಂಡ್. ಅಮುಲ್ ಬ್ರ್ಯಾಂಡ್ ಬಗ್ಗೆ ಮಾತನಾಡುವಾಗ ನಾವು ಪ್ಯಾಕೆಟ್ ಮೇಲಿರುವ, ಮ್ಯಾಸ್ಕಾಟ್ ಹುಡುಗಿಯನ್ನು ಕಡಗಣಿಸಲಾಗುವುದಿಲ್ಲ. ಹಿಂದಿ ಪಠ್ಯದೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ದಿನಕ್ಕೊಂದು ಚಿತ್ರ ಚಲಾವಣೆಯಲ್ಲಿದೆ" ಹಿಂದಿಯಲ್ಲಿ “मत दो या मत दो , सही फ़ैसला लो.आपका वोट अमूलya है” ಎಂಬ ಶೀರ್ಷಿಕೆಯೊಂದಿಗೆ ಫೋಸ್ಟ್ವೊಂದನ್ನು ಹಂಚಿಕೊಂಡಿದ್ದರು ಇದನ್ನು ಕನ್ನಡಕ್ಕೆ ಅನುವಾದಿಸಿದಾಗ, "ಸರಿಯಾದ ನಿರ್ಧಾರ ತೆಗೆದುಕೊಂಡು ಮತದಾನ ಮಾಡಿ ಅಥವಾ ಮತದಾನ ಚಲಾಯಿಸಬೇಡಿ, ನಿಮ್ಮ ಮತ ಅಮೂಲ್ಯವಾಗಿದೆ" ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿರುವುದನ್ನು ನಾವು ಕಂಡುಕೊಂಡೆವು. ಈಗ ಇದೇ ಅಮುಲ್ ಮ್ಯಾಸ್ಕಾಟ್ ಹುಡುಗಿಯ ಚಿತ್ರವನ್ನು ಒಳಗೊಂಡಿರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹಲವು ಸಾಮಾಜಿಕ ಮಾಧ್ಯಮದ ಖಾತೆದಾರರು ತಮ್ಮ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಫ್ಯಾಕ್ಟ್ಚೆಕ್ ವೈರಲ್ ಆದ ಚಿತ್ರದಲ್ಲಿ ಯಾವುದೇ ಸತ್ಯಾಂಶವಿಲ್ಲ. ಸಾರ್ವತ್ರಿಕ ಚುನಾವಣೆಗಳಲ್ಲಿ ಅಮುಲ್ ಯಾವುದೇ ಜಾಹೀರಾತು ಪ್ರಚಾರ ಮಾಡಿಲ್ಲ ನಾವು ವೈರಲ್ ಆದ ಚಿತ್ರದ ಬಗ್ಗೆ ನಾವು ಗೂಗಲ್ನಲ್ಲಿ ಹುಡುಕಾಟ ನಡೆಸಿದಾಗ ನಮಗೆ ಮೇ.06.2024 ರಂದು ಅಮುಲ್ ತನ್ನ ಅಧಿಕೃತ ಸಾಮಾಜಿಕ ಮಾಧ್ಯಮ ಹ್ಯಾಂಡಲ್ನಲ್ಲಿ ವೈರಲ್ ಚಿತ್ರವನ್ನು ಹಂಚಿಕೊಂಡಿರುವುದನ್ನು ನಾವು ಕಂಡುಕೊಂಡೆವು. “We wish to inform you that a fake message featuring the Amul Girl is being shared on WhatsApp and social media. This advertisement has not been created by Amul.” ಎಂಬ ಶೀರ್ಷಿಕೆಯೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿತ್ತು. ಅಮುಲ್ ಹಂಚಿಕೊಂಡ ಪೋಸಟ್ನ್ನು ಕನ್ನಡಕ್ಕೆ ಅನುವಾದಿಸಿದಾಗ, "ಅಮುಲ್ ಹುಡುಗಿಯನ್ನು ಒಳಗೊಂಡಿರುವ ನಕಲಿ ಪೋಸ್ಟ್ವೊಂದು ಸಾಮಾಜಿಕ ಜಾಲತಾಣದಲ್ಲಿ ನಕಲಿ ಸಂದೇಶದೊಂದಿಗೆ, ವಾಟ್ಸ್ಪ್ ಮತ್ತು ಇತರ ಮಾಧ್ಯಮಗಳಲ್ಲಿ ಸಂದೇಶವನ್ನು ವೈರಲ್ ಮಾಡಲಾಗಿದೆ , ಆದರೆ ವೈರಲ್ ಆದ ಪೋಸ್ಟ್ಗೂ, ಅಮುಲ್ಗೂ ಯಾವುದೂ ಸಂಬಂಧವಿಲ್ಲ" ಎಂದು ಬರೆದು ಹಂಚಿಕೊಂಡಿದ್ದನ್ನು ನಾವು ಕಂಡುಕೊಂಡೆವು. ಅಮುಲ್ "we strongly urge all voters to vote in the ongoing elections and strengthen our democracy” ಎಂದು ಬರೆದು ಪೋಸ್ಟ್ ಮಾಡಲಾಗಿತ್ತು. 2024ರಲ್ಲಿ ಸಾರ್ವತ್ರಿಕ ಚುನಾವಣೆಗಳಿಗೆ ಸಂಬಂಧಿಸಿದ 3 ಜಾಹೀರಾತುಗಳನ್ನು ನಾವು ಕಂಡುಕೊಂಡೆವು. ಈ ಎಲ್ಲಾ ಜಾಹೀರಾತು ಪ್ರಚಾರಗಳನ್ನು ಗಮನಿಸಿ ಬೇರೆ ಪೋಸ್ಟ್ಗಳೊಂದಿಗೆ ಹೋಲಿಸಿದಾಗ " ಅಮಲ್ನಲ್ಲಿರುವ ಟೇಸ್ಟ್ ಆಫ್ ಇಂಡಿಯಾ" ಲೋಗೋ ಕಾಣೆಯಾಗಿರುವುದನ್ನು ನಾವು ಗಮನಿಸಬಹುದು. ಇದರಿಂದ ಸಾಭೀತಾಗಿದ್ದೇನೆಂದರೆ, ವೈರಲ್ ಆದ ಚಿತ್ರದಲ್ಲಿ ಯಾವುದೇ ಸತ್ಯಾಂಶವಿಲ್ಲ. ಸಾರ್ವತ್ರಿಕ ಚುನಾವಣೆಗಳಲ್ಲಿ ಅಮುಲ್ ಯಾವುದೇ ಜಾಹೀರಾತು ಪ್ರಚಾರ ಮಾಡಿಲ್ಲ
schema:mentions
schema:reviewRating
schema:author
schema:datePublished
schema:inLanguage
  • Telugu
schema:itemReviewed
Faceted Search & Find service v1.16.115 as of Oct 09 2023


Alternative Linked Data Documents: ODE     Content Formats:   [cxml] [csv]     RDF   [text] [turtle] [ld+json] [rdf+json] [rdf+xml]     ODATA   [atom+xml] [odata+json]     Microdata   [microdata+json] [html]    About   
This material is Open Knowledge   W3C Semantic Web Technology [RDF Data] Valid XHTML + RDFa
OpenLink Virtuoso version 07.20.3238 as of Jul 16 2024, on Linux (x86_64-pc-linux-musl), Single-Server Edition (126 GB total memory, 11 GB memory in use)
Data on this page belongs to its respective rights holders.
Virtuoso Faceted Browser Copyright © 2009-2025 OpenLink Software