schema:text
| - Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact checks doneFOLLOW US
Fact Check
Claim
ಯಾದಗಿರಿ ಶಾಬಾದ್ ಗ್ರಾಮದಲ್ಲಿ ವಕ್ಫ್ ಬೋರ್ಡ್ ರೈತನ ಭೂಮಿಯನ್ನು ಕಸಿದುಕೊಂಡಿದೆ
Fact
ಯಾದಗಿರಿ ಶಾಬಾದ್ ಗ್ರಾಮದಲ್ಲಿ ವಕ್ಫ್ ಬೋರ್ಡ್ ರೈತನ ಭೂಮಿಯನ್ನು ಕಸಿದುಕೊಂಡಿದೆ ಎನ್ನುವುದು ಸುಳ್ಳು. ಯಾದಗಿರಿಯಲ್ಲಿ ಶಾಬಾದ್ ಹೆಸರಿನ ಗ್ರಾಮವಿಲ್ಲ.
ಯಾದಗಿರಿ ಜಿಲ್ಲೆಯ ಶಾಬಾದ್ ಗ್ರಾಮದಲ್ಲಿ ವಕ್ಫ್ ಬೋರ್ಡ್ ರೈತರೊಬ್ಬರ ಭೂಮಿಯನ್ನು ಕಸಿದುಕೊಂಡಿದೆ ಎಂದು ಹೇಳಿಕೆಯೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.
ಎಕ್ಸ್ ನಲ್ಲಿ ಈ ಹೇಳಿಕೆ ವೈರಲ್ ಆಗಿದ್ದು, “ರೈತನ ಜಮೀನಿನಲ್ಲಿ ದರ್ಗಾ ಒಂದನ್ನು ಕಟ್ಟಲಾಗಿದ್ದು, ಮಗಳ ಮದುವೆಗೆ ಆತ ಅದನ್ನು ಮಾರಾಟಕ್ಕೆ ಹೊರಟಾಗ ಅಧಿಕಾರಿಗಳು ಇದು ವಕ್ಫ್ ಬೋರ್ಡ್ ಗೆ ಸೇರಿದ್ದು ಮಾರಾಟ ಮಾಡುವಂತಿಲ್ಲ, ಜಾಗದ ಮೇಲೆ ಯಾವುದೇ ಹಕ್ಕು ಇಲ್ಲ” ಎಂದು ಹೇಳಿದ್ದಾಗಿ ಇದೆ.
Also Read: ಮಹಾವಿಕಾಸ್ ಅಘಾಡಿ ವಿಜಯದ ವೇಳೆ ಶ್ರೀರಾಂಪುರದಲ್ಲಿ ಪಾಕಿಸ್ತಾನ ಧ್ವಜ ಹಾರಿಸಲಾಗಿದೆಯೇ?
ಇದೇ ರೀತಿಯ ಹೇಳಿಕೆ ಇಲ್ಲಿ ಕಂಡುಬಂದಿದೆ.
ಈ ಹೇಳಿಕೆಯ ಕುರಿತು ನಾವು ಸತ್ಯಶೋಧನೆ ನಡೆಸಿದ್ದು, ಇದು ಸುಳ್ಳು ಎಂದು ಕಂಡುಬಂದಿದೆ.
ಸತ್ಯಶೋಧನೆಗಾಗಿ ನಾವು ವಕ್ಫ್ ಬೋರ್ಡ್ ಇತ್ತೀಚಿಗೆ ಯಾದಗಿರಿಯಲ್ಲಿ ಎಲ್ಲಿಯಾದರೂ ತನ್ನ ಜಾಗದ ಹಕ್ಕನ್ನು ಸ್ಥಾಪಿಸಿದ್ದರ ಕುರಿತಾದ ಸುದ್ದಿ ಇದೆಯೇ ಎಂಬ ಕುರಿತು ಸುದ್ದಿಗಳನ್ನು ಹುಡುಕಾಡಿದ್ದೇವೆ. ಆದರೆ ಅಂತಹ ಯಾವುದೇ ಸುಳಿವುಗಳು ಕಂಡುಬಂದಿಲ್ಲ.
ಯಾದಗಿರಿ ಜಿಲ್ಲೆಯಲ್ಲಿ ಶಾಬಾದ್ ಎಂಬ ಗ್ರಾಮ ಇದೆಯೇ ಎಂಬ ಬಗ್ಗೆ ಶೋಧ ನಡೆಸಿದ್ದೇವೆ. ಇದಕ್ಕಾಗಿ ಯಾದಗಿರಿ ಜಿಲ್ಲಾ ವೆಬ್ ಸೈಟ್ ಪರಿಶೀಲಿಸಿದ್ದೇವೆ. ಇದರಲ್ಲಿ “ಶಾಬಾದ್” ಹೆಸರಿನ ಗ್ರಾಮ ಯಾವುದೂ ಇಲ್ಲ ಎಂದು ತಿಳಿದುಬಂದಿದೆ.
ಆ ಬಳಿಕ ನಾವು ವೈರಲ್ ಹೇಳಿಕೆಯೊಂದಿಗೆ ಇರುವ ಮುಸ್ಲಿಂ ಧಾರ್ಮಿಕ ಕೇಂದ್ರದ ಫೋಟೋದ ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದು, ಈ ವೇಳೆ ಈ ಧಾರ್ಮಿಕ ಕೇಂದ್ರ, ನಾಗ್ಪುರದಲ್ಲಿರುವ ದರ್ಗಾ ಬಾಬಾ ಆಶಿಕ್ ಶಾಲ ಮಶೂಕ್ ಶಾ ರಹ್ಮತುಲ್ಲಾ ಅಲಾಹ್ ಇಸಾಸನಿ ತೆಕ್ಡಿ ಹೆಸರಿನ ಒಂದು ದರ್ಗಾ ಎಂದು ಕಂಡುಬಂದಿದೆ. ಈ ಕುರಿತು ನಾವು ಫೇಸ್ಬುಕ್ ಪೇಜನ್ನೂ ಕಂಡುಕೊಂಡಿದ್ದೇವೆ.
Also Read: ಹಿಂದೂ ವಿಭಜನೆ, ಮುಸ್ಲಿಂ ಸಂಘಟನೆ ಮಾಡುವುದಾಗಿ ಸೋನಿಯಾ ಗಾಂಧಿಗೆ ಎಂ.ಬಿ. ಪಾಟೀಲ್ ಬರೆದ ಪತ್ರ ಸತ್ಯವೇ?
ಗೂಗಲ್ ನಲ್ಲಿಯೂ ಸರ್ಚ್ ನಡೆಸಿದಾಗ, ನಾಗ್ಪುರದ, ಇಸಸಾನಿಯಲ್ಲಿ ಈ ದರ್ಗಾ ಇದೆ ಎಂದು ಕಂಡುಕೊಂಡಿದ್ದೇವೆ.
ವೈರಲ್ ಚಿತ್ರ ಮತ್ತು ಫೇಸ್ಬುಕ್ ಪೇಜ್ ಹಾಗೂ ಗೂಗಲ್ ಮ್ಯಾಪ್ ಎರಡನ್ನೂ ಪರಿಶೀಲಿಸಿದ ವೇಳೆ ವೈರಲ್ ಚಿತ್ರಕ್ಕೂ, ಅದರಲ್ಲಿ ಹಾಕಲಾದ ಚಿತ್ರಗಳಿಗೂ ಸಾಮ್ಯತೆ ಇರುವುದು ಕಂಡುಬಂದಿದೆ.
ತನಿಖೆಯ ಭಾಗವಾಗಿ ನಾವು ಯಾದಗಿರಿ ಟಿವಿ9 ಜಿಲ್ಲಾ ವರದಿಗಾರ ಅಮೀನ್ ಹೊಸೂರ್ ಅವರನ್ನು ಸಂಪರ್ಕಿಸಿದ್ದೇವೆ. ಅವರು ನ್ಯೂಸ್ಚೆಕರ್ ನೊಂದಿಗೆ ಮಾತನಾಡಿ, ಜಿಲ್ಲೆಯಲ್ಲಿ ವಕ್ಫ್ ಕುರಿತಾಗಿ ಅಂತಹ ಯಾವುದೇ ಘಟನೆಗಳು ನಡೆದಿಲ್ಲ ಮತ್ತು ಶಾಬಾದ್ ಎಂಬ ಗ್ರಾಮದ ಹೆಸರೂ ಇಲ್ಲ ಎಂದು ಹೇಳಿದ್ದಾರೆ.
ಈ ಸತ್ಯಶೋಧನೆಯ ಪ್ರಕಾರ, ಯಾದಗಿರಿಯ ಶಾಬಾದ್ ಗ್ರಾಮದಲ್ಲಿ ವಕ್ಫ್ ಬೋರ್ಡ್ ರೈತರೊಬ್ಬರ ಭೂಮಿಯನ್ನು ಕಸಿದುಕೊಂಡಿದೆ ಎನ್ನುವ ಹೇಳಿಕೆ ಸುಳ್ಳಾಗಿದೆ. ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿರುವ ಚಿತ್ರ ನಾಗ್ಪುರದ್ದಾಗಿದೆ ಮತ್ತು ಅಂತಹ ಘಟನೆಗಳು ವರದಿಯಾಗಿಲ್ಲ ಎಂದು
Also Read: ಕೇರಳ ಪೊಲೀಸರು ಅಬಕಾರಿ ಮಂತ್ರಿಯನ್ನು ಬಲಾತ್ಕಾರವಾಗಿ ಬಂಧಿಸಿದ್ದಾರೆ ಎನ್ನುವ ವೀಡಿಯೋ ಹಿಂದಿನ ಸತ್ಯವೇನು?
Our Sources
Yadagir District portal
Facebook Page of Darga Baba Ashique Shah Mashooque Shah Rahmatullh Alaih Isasani Tekdi
Google Map
Conversation with Ameen Hosoor, Tv9 Kannada reporter, Yadagir
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.
|