About: http://data.cimple.eu/claim-review/b775227d20913e7781bc750c01167c5126a277e3eb0f0ba9ea3bdb69     Goto   Sponge   NotDistinct   Permalink

An Entity of Type : schema:ClaimReview, within Data Space : data.cimple.eu associated with source document(s)

AttributesValues
rdf:type
http://data.cimple...lizedReviewRating
schema:url
schema:text
  • ಬಾಂಗ್ಲಾದೇಶದಲ್ಲಿ ಹಿಂದೂ ಮಕ್ಕಳನ್ನು ʼಅಲ್ಲಾ ಹು ಅಕ್ಬರ್ʼ ಎಂದು ಪಠಿಸಲು ಒತ್ತಾಯಿಸಲಿಲ್ಲ ಬಾಂಗ್ಲಾದೇಶದಲ್ಲಿ ಹಿಂದೂ ಮಕ್ಕಳನ್ನು ʼಅಲ್ಲಾ ಹು ಅಕ್ಬರ್ʼ ಎಂದು ಪಠಿಸಲು ಒತ್ತಾಯಿಸಲಿಲ್ಲ Claim :ಬಾಂಗ್ಲಾದೇಶದಲ್ಲಿ ಹಿಂದೂ ಮಕ್ಕಳನ್ನು ʼಅಲ್ಲಾ ಹು ಅಕ್ಬರ್ʼ ಎಂದು ಪಠಿಸಲು ಒತ್ತಾಯಿಸುತ್ತಿದ್ದಾರೆ Fact :ವೈರಲ್ ಆದ ವಿಡಿಯೋ ಭಾರತದ ಮಧ್ಯಪ್ರದೇಶದಲ್ಲಿರುವ ರತ್ಲಾಮ್ನದ್ದು, ಬಾಂಗ್ಲಾದೇಶದಲ್ಲ ಹುಡುಗನೊಬ್ಬ ಇಬ್ಬರು ಮಕ್ಕಳಿಗೆ ಕೆಲ ಮಕ್ಕಳಿಗೆ ಹೊಡೆದು ಬಲವಂತವಾಗಿ ʼಜೈ ಶ್ರೀ ರಾಮ್ʼ ಎಂಬ ಧಾರ್ಮಿಕ ಘೋಷಣೆಯನ್ನು ಕೂಗಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ, ಕೆಲ ಬಳಕೆದಾರರು ಇದಕ್ಕೆ ಬೇರೆಯದೆ ಶೀರ್ಷಿಕೆಯನ್ನೀಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಅಷ್ಟೆ ಅಲ್ಲ ,ಈ ಘಟನೆ ಬಾಂಗ್ಲಾದೇಶದಲ್ಲಿ ನಡೆದಿದೆ ಎಂಬ ಹೇಳಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ, ಕೆಲವು ಮೂಲಭೂತವಾದಿಗಳು ಅಲ್ಪಸಂಖ್ಯಾತ ಹಿಂದೂ ಮಕ್ಕಳಿಗೆ ಹಿಂಸೆಯನ್ನೀಡಿ ‘ಅಲ್ಲಾ ಹು ಅಕ್ಬರ್’ ಎಂದು ಹೇಳುವಂತೆ ಒತ್ತಾಯಿಸುತ್ತಿದ್ದಾರೆ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ. ʼಡ್ರಂಕ್ ಜರ್ನಲಿಸ್ಟ್ʼ ಎಂಬ ಎಕ್ಸ್ ಖಾತೆದಾರರು ತಮ್ಮ ಖಾತೆಯಲ್ಲಿ ʼVideo from Bangladesh. A radical Islamist thrashing and beating ip Bangladeshi Hindu kids and forcing them to chant "Allah Hu Akbar"ʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಈ ವಿಡಿಯೋ ಬಾಂಗ್ಲಾದೇಶದ್ದು. ಒಬ್ಬ ಇಸ್ಲಾಮಿಸ್ಟ್ ಬಾಂಗ್ಲಾದೇಶದ ಹಿಂದೂ ಮಕ್ಕಳನ್ನು ಹೊಡೆದು "ಅಲ್ಲಾ ಹು ಅಕ್ಬರ್" ಎಂದು ಜಪಿಸುವಂತೆ ಒತ್ತಾಯಿಸುತ್ತಾನೆ" ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವೈರಲ್ ವಿಡಿಯೋವಿನ ಸ್ಕ್ರೀನ್ಶಾಟ್ನ್ನು ನೀವಿಲ್ಲಿ ನೋಡಬಹುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋವನ್ನು ಇಲ್ಲಿ ನೋಡಬಹುದು. ಫ್ಯಾಕ್ಟ್ಚೆಕ್ ವೈರಲ್ ಆದ ಸುದ್ದಿ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವಾಸ್ತವವಾಗಿ ವೈರಲ್ ಆದ ವಿಡಿಯೋ ಭಾರತದ ಮಧ್ಯಪ್ರದೇಶದಲ್ಲಿರುವ ರತ್ಲಾಮ್ನದ್ದು, ಬಾಂಗ್ಲಾದೇಶದಲ್ಲ. ನಾವು ವೈರಲ್ ಆದ ಸುದ್ದಿಯ ಬಗ್ಗೆ ಸತ್ಯಾಂಶವನ್ನು ತಿಳಿಯಲು ವಿಡಿಯೋವಿನ ಕೆಲವು ಪ್ರಮುಖ ಫ್ರೇಮ್ಗಳನ್ನು ಉಪಯೋಗಿಸಿ ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ, ಡಿಸಂಬರ್ 06, 2024ರಂದು ಎನ್ಡಿಟಿವಿ ಯೂಟ್ಯೂಬ್ ಚಾನೆಲ್ನಲ್ಲಿ ʼMP Ratlam News | Youth Beats Up 3 Children, Forces Them To Chant 'Jai Shree Ram'" ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿರುವುದನ್ನು ನೋಡಬಹುದು. ಮಧ್ಯಪ್ರದೇಶದಲ್ಲಿ 3 ಮಕ್ಕಳ ಮೇಲೆ ಹಲ್ಲೆ ಮತ್ತು ಧಾರ್ಮಿಕ ಘೋಷಣೆಗಳನ್ನು ಕೂಗಲಾಗಿದೆ ಎಂಬ ವಿಡಿಯೋ ಸಾಮಾಜಿಕ ಮಾದ್ಯಮದಲ್ಲಿ ವೈರಲ್ ಆದ ನಂತರ, ಇಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ವಿಡಿಯೋ ಒಂದು ತಿಂಗಳಿಗಿಂತ ಹಳೆಯದಾಗಿದ್ದು, ಆರೋಪಿಯನ್ನು ಗುರುತಿಸಲಾಗಿದೆ ಹಾಗೆ, ಅಪರಾಧಿಗಳನ್ನು ಹಿಡಿಯಲು ಸೈಬರ್ ತಂಡ ಮತ್ತು ಪೊಲೀಸರು ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ́ಹೆಚ್ ನ್ಯೂಸ್ ಇಂಗ್ಲೀಷ್ʼ ಯೂಟ್ಯೂಬ್ ಚಾನೆಲ್ನಲ್ಲಿ ʼRatlam: Youth Held For Assaulting 3 Minor Boys With Slipper, Forcing Them To Chant 'Jai Shri Ram'" ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಗುರುವಾರ ರಾತ್ರಿ ಒಬ್ಬ ವ್ಯಕ್ತಿ 6, 9 ಮತ್ತು 11 ವರ್ಷ ವಯಸ್ಸಿನ ಮಕ್ಕಳಿಗೆ ಚಪ್ಪಲಿಯಿಂದ ಥಳಿಸುತ್ತಿರುವುದನ್ನು ಮತ್ತು ಮಕ್ಕಳನ್ನು ಬಲವಂತವಾಗಿ ಧಾರ್ಮಿಕ ಘೋಷಣೆಗಳನ್ನು ಪಠಿಸುವಂತೆ ಮಾಡಿದ ವಿಡಿಯೋ ವೈರಲ್ ಆಗಿದೆ. ಇದಾದ ನಂತರ ಮುಸ್ಲಿಂ ಸಮುದಾಯದ ಸದಸ್ಯರು ಮಧ್ಯಪ್ರದೇಶದ ರತ್ಲಾಮ್ ಜಿಲ್ಲೆಯ ಸ್ಥಳೀಯ ಪೊಲೀಸ್ ಠಾಣೆಯ ಹೊರಗೆ ಪ್ರತಿಭಟನೆ ನಡೆಸಿದರು ಎಂದು ವರದಿ ತಿಳಿಸಿದೆ. ಡಿಸಂಬರ್ 07, 2024ರಂದು ʼದಿ ವೋಕಲ್ ನ್ಯೂಸ್ʼ ವೆಬ್ಸೈಟ್ನಲ್ಲಿ ʼChildren Beaten and Forced to Chant “Jai Shri Ram” – Shocking Incident in Modi’s Indiaʼ ಎಂಬ ಶೀರ್ಟಿಕೆಯೊಂದಿಗೆ ವರದಿ ಮಾಡಲಾಗಿದೆ. ವರದಿಯಲ್ಲಿ ʼಇತ್ತೀಚೆಗೆ, ಚಿಕ್ಕ ಮಕ್ಕಳನ್ನು ಚಪ್ಪಲಿಯಿಂದ ಹೊಡೆದು "ಜೈ ಶ್ರೀ ರಾಮ್" ಎಂದು ಹೇಳಲು ಒತ್ತಾಯಿಸುತ್ತಿರುವ ಆಘಾತಕಾರಿ ವೀಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದು ಧರ್ಮದ ದುರುಪಯೋಗದ ಬಗ್ಗೆ ಆಕ್ರೋಶ ಮತ್ತು ಪ್ರಶ್ನೆಗಳಿಗೆ ಕಾರಣವಾಗಿದೆ ಮತ್ತು ಹಿಂದೂ ಧರ್ಮದ ನಿಜವಾದ ಮೌಲ್ಯಗಳಿಂದ ವಿಚಲನಗೊಂಡಿದೆʼ ಎಂದು ವರದಿಯಾಗಿದೆ ಡಿಸಂಬರ್ 07, 2024ರಂದು ʼದಿ ಕರೆಂಟ್ʼ ವೆಬ್ಸೈಟ್ನಲ್ಲಿ "Indian man assaults three Muslim children, forces them to chant ‘Jai Shri Ram’" ಎಂಬ ಶೀರ್ಷಿಕೆಯೊಂದಿಗೆ ವರದಿ ಮಾಡಿರುವುದನ್ನು ನೋಡಬಹುದು. ವರದಿಯಲ್ಲಿ ʼಭಾರತದಲ್ಲಿ ಇಸ್ಲಾಮೋ ಫೋಬಿಯಾ ಮತ್ತು ಮುಸ್ಲಿಂರ ವಿರುದ್ದ ವಿರೋಧಿ ಭಾವನೆಗಳ ಹರಡುವಿಕೆಯನ್ನು ಎತ್ತಿ ತೋರಿಸುವ ಮತ್ತೊಂದು ಘಟನೆ ನಡೆದಿದೆ. ಹಿಂದೂ ಹುಡುಗನೊಬ್ಬ ಮೂರು ಮುಸ್ಲಿಂ ಮಕ್ಕಳನ್ನು "ಜೈ ಶ್ರೀ ರಾಮ್" ಎಂದು ಜಪಿಸುವವರೆಗೂ ಕ್ರೂರವಾಗಿ ಥಳಿಸಿದ್ದಾರೆ. ವೈರಲ್ ವೀಡಿಯೊದಲ್ಲಿ ಹುಡುಗನೊಬ್ಬ ಇಬ್ಬರು ಮಕ್ಕಳಿಗೆ ಹೊಡೆಯುವಾಗ ಒಬ್ಬ ಹುಡುಗ ನೋವಿನಿಂದ "ಅಲ್ಲಾ" ಎಂದು ಕೂಗಿದಾಗ, ಆ ವ್ಯಕ್ತಿ ಅವರನ್ನು ಇನ್ನಷ್ಟು ಜೊರಾಗಿ ಹೊಡೆಯಲು ಪ್ರಾರಂಭಿಸುತ್ತಾನೆ. ಇನ್ನೊಂದಡೆ ಭಯಭೀತರಾಗಿದ್ದ ಮಕ್ಕಳು "ಜೈ ಶ್ರೀ ರಾಮ್" ಎಂದು ಹೇಳಲು ಪ್ರಾರಂಭಿಸಿದರು, "ಅಲ್ಲಾ ಮತ್ತೆ ಹೇಳುವುದಿಲ್ಲ," ಎಂದ ಮೇಲೆ ಈ ಹುಡುಗ ಹೊಡೆಯುವುದನ್ನು ನಿಲ್ಲಿಸುತ್ತಾನೆ. ʼಹಿಂದುತ್ವ ವಾಚಿನ್ʼ ಎಂಬ ಇನ್ಸ್ಟಾಗ್ರಾಮ್ನಲ್ಲಿ ʼLocation: Ratlam, Madhya Pradesh, Two men assaulted and abused three Muslim children, forcing them to chant "Jai Shri Ram." They also threatened to throw the children into the water if they said Allah. The assaulter has been identified as Kailash, while the one recording the video has been identified as Veer. The police have filed an FIR and arrested Kailash" ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ "ಮಧ್ಯಪ್ರದೇಶದ ರತ್ಲಾಮ್ನಲ್ಲಿ ಇಬ್ಬರು ಯುವಕರು, ಮೂರು ಮುಸ್ಲಿಂ ಮಕ್ಕಳ ಮೇಲೆ ಹಲ್ಲೆ ಮತ್ತು ದೌರ್ಜನ್ಯ ಎಸಗಿದ್ದಾರೆ, "ಜೈ ಶ್ರೀ ರಾಮ್" ಎಂದು ಕೂಗುವಂತೆ ಒತ್ತಾಯಿಸಿದ್ದಾರೆ. ಅಲ್ಲಾ ಎಂದು ಹೇಳಿದರೆ ಮಕ್ಕಳನ್ನು ನೀರಿಗೆ ಎಸೆಯುವುದಾಗಿಯೂ ಬೆದರಿಕೆ ಹಾಕಿದ್ದಾರೆ. ಹಲ್ಲೆಕೋರನನ್ನು ಕೈಲಾಶ್, ವಿಡಿಯೋ ರೆಕಾರ್ಡ್ ಮಾಡಿದವರನ್ನು ವೀರ್ ಎಂದು ಗುರುತಿಸಲಾಗಿದೆ. ಪೊಲೀಸರು ಇವರಿಬ್ಬರ ವಿರುದ್ದ ಎಫ್ಐಆರ್ ದಾಖಲಿಸಿ ಕೈಲಾಶ್ನನ್ನು ಬಂಧಿಸಿದ್ದಾರೆʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ʼಆಸಿಫ್ ಮುಜ್ತಾಬಾʼ ಎಂಬ ಜರ್ನಲಿಸ್ಟ್ ವಿಡಿಯೋವನ್ನು ಹಂಚಿಕೊಂಡು ʼಮಧ್ಯಪ್ರದೇಶದ #ರತ್ಲಾಮ್ನಲ್ಲಿ 3 ಮುಸ್ಲಿಂ ಮಕ್ಕಳನ್ನು ಥಳಿಸಿ ಹಿಂದೂ ಧಾರ್ಮಿಕ ಘೋಷಣೆಗಳನ್ನು ಪಠಿಸುವಂತೆ ಒತ್ತಾಯಿಸಲಾಯಿತು. ಭಾರತದಲ್ಲಿ ಮುಸ್ಲಿಮರ ವಿರುದ್ಧ ದ್ವೇಷ ಸಾಧಿಸುತ್ತಿದ್ದಾರೆ. ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವದಲ್ಲಿ ಮುಸ್ಲಿಮನಾಗುವ ನೋವನ್ನು ಕಲ್ಪಿಸಿಕೊಳ್ಳಿ. ಮನೆಗಳು ಮತ್ತು ಮಸೀದಿಯನ್ನು ಬುಲ್ಡೋಜರ್ ಮಾಡಲಾಗಿದೆ, ಯಾವುದೇ ಅಪರಾಧ ಮಾಡಿಲ್ಲದಿದ್ದರೂ ಸಹ ಜೈಲಿನಲ್ಲಿ ಇರಿಸಲಾಗಿದೆ, ಹಿಂದುತ್ವದ ಜನಸಮೂಹ ಈಗ ಮಕ್ಕಳನ್ನೂ ಸಹ ಉಳಿಸುತ್ತಿಲ್ಲ. ನಾವು ಯಾವ ರೀತಿಯ ರಾಷ್ಟ್ರವಾಗಿ ಮುನ್ನಡೆಯುತ್ತಿದ್ದೇವೆ? ಎಂದು ಪ್ರಶ್ನಿಸಿರುವುದನ್ನು ನಾವು ಈ ಪೊಸ್ಟ್ನಲ್ಲಿ ನೋಡಬಹುದು. ಇನ್ನಷ್ಟು ಪೋಸ್ಟ್ಗಳನ್ನು ನೀವಿಲ್ಲಿ, ಇಲ್ಲಿ ನೋಡಬಹುದು. ವೈರಲ್ ಆದ ಸುದ್ದಿ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವಾಸ್ತವವಾಗಿ ವೈರಲ್ ಆದ ವಿಡಿಯೋ ಭಾರತದ ಮಧ್ಯಪ್ರದೇಶದಲ್ಲಿರುವ ರತ್ಲಾಮ್ನದ್ದು, ಬಾಂಗ್ಲಾದೇಶದಲ್ಲ.
schema:mentions
schema:reviewRating
schema:author
schema:datePublished
schema:inLanguage
  • Telugu
schema:itemReviewed
Faceted Search & Find service v1.16.115 as of Oct 09 2023


Alternative Linked Data Documents: ODE     Content Formats:   [cxml] [csv]     RDF   [text] [turtle] [ld+json] [rdf+json] [rdf+xml]     ODATA   [atom+xml] [odata+json]     Microdata   [microdata+json] [html]    About   
This material is Open Knowledge   W3C Semantic Web Technology [RDF Data] Valid XHTML + RDFa
OpenLink Virtuoso version 07.20.3238 as of Jul 16 2024, on Linux (x86_64-pc-linux-musl), Single-Server Edition (126 GB total memory, 3 GB memory in use)
Data on this page belongs to its respective rights holders.
Virtuoso Faceted Browser Copyright © 2009-2025 OpenLink Software