About: http://data.cimple.eu/claim-review/bada777e43a36ee570aaf1e1f59f9cc6dac00080e0626903b8681956     Goto   Sponge   NotDistinct   Permalink

An Entity of Type : schema:ClaimReview, within Data Space : data.cimple.eu associated with source document(s)

AttributesValues
rdf:type
http://data.cimple...lizedReviewRating
schema:url
schema:text
  • ಫ್ಯಾಕ್ಟ್ಚೆಕ್: ‘ಬಾಂಗ್ಲಾದೇಶಿ ಹಿಂದೂಗಳನ್ನು ಉಳಿಸಿ’ ಎಂದು ಮಕ್ಕಳು ಪೋಸ್ಟರ್ ಹಿಡಿದಿರುವ ಈ ಫೋಟೋ ಎಐ ಮೂಲಕ ರಚಿಸಲಾಗಿದೆ ‘ಬಾಂಗ್ಲಾದೇಶಿ ಹಿಂದೂಗಳನ್ನು ಉಳಿಸಿ’ ಎಂದು ಮಕ್ಕಳು ಪೋಸ್ಟರ್ ಹಿಡಿದಿರುವ ಈ ಫೋಟೋ ಎಐ ಮೂಲಕ ರಚಿಸಲಾಗಿದೆ Claim :ಇಬ್ಬರು ಮಕ್ಕಳು ʼಬಾಂಗ್ಲಾದೇಶದಲ್ಲಿ ಹಿಂದೂಗಳನ್ನು ಉಳಿಸಿʼ ಎಂದು ಬರೆದಿರುವ ಫಲಕವನ್ನು ಹಿಡಿದಿದ್ದಾರೆ Fact :ವೈರಲ್ ಆದ ಚಿತ್ರವನ್ನು ಎಐ ಮೂಲಕ ರಚಿಸಲಾಗಿದೆ ಇತ್ತೀಚಿಗೆ ಬಾಂಗ್ಲಾದೇಶದಲ್ಲಿ ಹಿಂದೂ ಅಲ್ಪಸಂಖ್ಯಾತ ಸಮುದಾಯದವರ ಮೇಲೆ ಶೋಷಣೆ ಮತ್ತು ಹಿಂಸಾಚಾರ ನಡೆಯುತ್ತಿರುವ ಬೆನ್ನಲ್ಲೇ ಬಾಂಗ್ಲಾದೇಶದಲ್ಲಿ ಹಿಂದೂ ಅರ್ಚಕ ಚಿನ್ಮೋಯ್ ಕೃಷ್ಣ ದಾಸ್ ಬಂಧನದಿಂದಾಗಿ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಇಬ್ಬರು ಮಕ್ಕಳು ಫಲಕವನ್ನು ಹಿಡಿದು ಅಳುತ್ತಿರುವ ದೃಶ್ಯವೊಂದು ಹರಿದಾಡುತ್ತಿದೆ. ಆ ಫಲಕದಲ್ಲಿ ʼಬಾಂಗ್ಲಿಯಾದೇಶಿ ಹಿಂದೂಗಳನ್ನು ಉಳಿಸಿʼ ಎಂದು ಬರೆದಿರುವುದನ್ನು ನಾವು ಕಾಣಬಹುದು ʼಕುಮಾರ್ ರಿಷಿದ್ʼ ಎಂಬ ಎಕ್ಸ್ ಖಾತೆದಾರ ತನ್ನ ಖಾತೆಯಲ್ಲಿ ಚಿತ್ರವನ್ನು ಹಂಚಿಕೊಂಡು ʼWe eagerly await a tweet or a statement from these, addressing the plight of Hindus in Bangladesh & condemning the BD Illegal Govtʼ ಎಂಬ ಶೀರ್ಷಿಕೆಯೊಂದಿಗೆ ಚಿತ್ರವನ್ನು ಹಂಚಿಕೊಂಡಿದ್ದಾರೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಬಾಂಗ್ಲಾದೇಶದಲ್ಲಿ ಹಿಂದೂಗಳ ದುಃಸ್ಥಿತಿಯನ್ನು ತಿಳಿಸುವ ಮತ್ತು ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಅಕ್ರಮ ಸರ್ಕಾರವನ್ನು ಖಂಡಿಸುವ ಟ್ವೀಟ್ಗಾಗಿ ನಾವು ಕುತೂಹಲದಿಂದ ಕಾಯುತ್ತಿದ್ದೇವೆʼ ಎಂಬ ಶೀರ್ಷಿಕೆಯನ್ನಿಡಿ ಫೋಟೋವನ್ನು ಹಂಚಿಕೊಂಡಿದ್ದಾರೆ ವೈರಲ್ ಆದ ಸುದ್ದಿಯ ಸ್ಕ್ರೀನ್ಶಾಟ್ನ್ನು ನೀವಿಲ್ಲಿ ನೋಡಬಹುದು ಮತ್ತಷ್ಟು ವೈರಲ್ ಪೊಸ್ಟ್ಗಳನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು. ಫ್ಯಾಕ್ಟ್ಚೆಕ್ ವೈರಲ್ ಆದ ಸುದ್ದಿ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವೈರಲ್ ಆದ ಫೋಟೋವನ್ನು ಎಐ ಟೂಲ್ನ ಮೂಲಕ ರಚಿಸಲಾಗಿದೆ. ವೈರಲ್ ಆದ ಸುಸ್ಸಿಯಲ್ಲಿರುವ ಸತ್ಯಾಂಶವನ್ನು ತಿಳಿಯಲು ನಾವು ಚಿತ್ರವನ್ನು ಸೂಕ್ಷ್ಮವಾಗಿ ಪರಿಶೀಲಿಸಿದೆವು. ಪರೀಶಿಲಿಸಿದಾಗ ಈ ಫೋಟೋದಲ್ಲಿ ಕಾಣುವ ಮಗುವಿಗೆ ಆರು ಬೆರಳುಗಳಿರುವುದನ್ನು ನಾವು ನೋಡಬಹುದು. ಅಷ್ಟೇ ಅಲ್ಲ ಮಕ್ಕಳು ಹಿಡಿದಿರುವ ಫಲಕದಲ್ಲಿ ಕಾಣುವ ಅಕ್ಷರಗಲು ತಪ್ಪುತಪ್ಪಾಗಿವೆ. ಇದರೊಂದಿಗೆ ಮಕ್ಕಳ ಮುಖವೂ ಸಹ ಸಹಜವಾಗಿಲ್ಲ, ಕೃತಕವಾಗಿರುವುದನ್ನು ನಾವು ನೋಡಬಹುದು. ಇದರಿಂದ ನಮಗೆ ಈ ಚಿತ್ರಬನ್ನು ಎಐ ಮೂಲಕ ರಚಿಸಲಾಗಿದೆ ಎಂದು ಅನುಮಾನ ಬಂದಿತು. ಹೀಗಾಗಿ ನಾವು ಚಿತ್ರವನ್ನು ಎಐ ಇಮೇಜ್ ಡಿಟೆಕ್ಷನ್ ಟೂಲ್ ʼಹೈವ್ ಮಾಡರೇಶನ್ʼ ನಲ್ಲಿ ಫೊಟೋವನ್ನು ಪರಿಶೀಲಿಸಿದೆವು. ಪರಿಶೀಲನೆಯಲ್ಲಿ ನಮಗೆ ಈ ಚಿತ್ರ 99.9 ಪ್ರತಿಶಾತದಷ್ಟು ಎಐ ಮೂಲಕ ರಚಿಸಲಾಗಿದೆ ಎಂದು ತಿಳಿದುಬಂದಿತು. Wasitai.com ನಲ್ಲಿ ಚಿತ್ರವನ್ನು ಪರೀಶಿಲಿಸಿದಾಗ ಅಲ್ಲಿಯೂ ಸಹ ಈ ಚಿತ್ರ ಎಐ ಬಳಸಿ ರಚಿಸಿರುವುದು ಎಂದು ಸಾಭಿತಾಯಿತು. ಮತ್ತಷ್ಟು ನಿಜಾಂಶವನ್ನು ತಿಳಿಯಲು ಎಐ ಇಮೇಜ್ ಡಿಟೆಕ್ಷನ್ ಟೂಲ್ ́ಸೈಟ್ ಇಂಜಿನ್́ನೊಂದಿಗೆ ನಾವು ಈ ಫೋಟೋವನ್ನು ಪರಿಶೀಲಿಸಿದ್ದೇವೆ. ಇಲ್ಲಿಯೂ ಸಹ ಈ ಚತ್ರ ಎಐ ಮೂಲಕ ರಚಿಸುವ ಸಂಭವನೀಯತೆ 99 ಪ್ರತಿಶತ ಎಂದು ಫಲಿತಾಂಶ ನೀಡಿದೆ. ಖಾಸಗಿ ವೆಬ್ಸೈಟ್ ಕೂಡ ಈ ಕುರಿತು ವರದಿ ಮಾಡಿದ್ದು, ಎಐ ತಜ್ಞ ಅಂಶ್ ಮೆಹ್ರಾ ಹತ್ತಿರ ಈ ಚಿತ್ರದ ಬಗ್ಗೆ ಪಡೆದ ಮಾಹಿತಿಯನ್ನು ಹಂಚಿಕೊಂಡಿದೆ. ಅಂಶ್ ಮೆಹ್ರಾ ಕೂಡ ಈ ವೈರಲ್ ಫೋಟೋವನ್ನು ಎಐ ರಚಿಸಿರಬಹುದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರದ ನಡುವೆ ಮಕ್ಕಳ ಈ ಫೋಟೋವನ್ನು ಎಐನಿಂದ ರಚಿಸಲಾಗಿದೆ ಎಂದು ನಾವು ಖಚಿತವಾಗಿದೆ ಹೇಳುತ್ತೇವೆ. ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲಿನ ದಾಳಿಗಳ ಕುರಿತು ಭಾರತದ ಕಳವಳವನ್ನು ಢಾಕಾಗೆ ತಿಳಿಸಿರುವುದಾಗಿ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಹೇಳಿದ್ದಾರೆ. ಬಾಂಗ್ಲಾದೇಶದ ವಿದೇಶಾಂಗ ಸಲಹೆಗಾರ ಮೊಹಮ್ಮದ್ ತೌಹಿದ್ ಹೊಸೈನ್ ಅವರೊಂದಿಗಿನ ಸಭೆಯಲ್ಲಿ ಮಿಶ್ರಿ ಅವರು ಬಾಂಗ್ಲಾದಲ್ಲಿನ ಧಾರ್ಮಿಕ ಸಂಸ್ಥೆಗಳು ಮತ್ತು ಪೂಜಾ ಸ್ಥಳಗಳ ಮೇಲಿನ ದಾಳಿಗಳು ವಿಷಾದನೀಯ ಎಂದು ಹೇಳಿದ್ದಾರೆ. ಧನಾತ್ಮಕ, ರಚನಾತ್ಮಕ ಮತ್ತು ಪರಸ್ಪರ ಲಾಭದಾಯಕ ಪಾಲುದಾರಿಕೆಯನ್ನು ನಿರ್ಮಿಸಲು ಭಾರತದ ಬದ್ಧತೆಯ ಬಗ್ಗೆ ಮಿಶ್ರಿ ಬಾಂಗ್ಲಾದೇಶದ ಮಧ್ಯಂತರ ಸರ್ಕಾರಕ್ಕೆ ಭರವಸೆ ನೀಡಿದ್ದಾರೆ. ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಬಾಂಗ್ಲಾದೇಶದೊಂದಿಗಿನ ಸಭೆಯಲ್ಲಿ ಬಾಂಗ್ಲಾದೇಶದಲ್ಲಿ ಹಿಂದೂ ಅಲ್ಪಸಂಖ್ಯಾತರ ಮೇಲಿನ ಇತ್ತೀಚಿನ ದಾಳಿಗಳ ಬಗ್ಗೆ ಕಳವಳ ವ್ಯಕ್ತಪಡಿಸಿದರು ಎಂದು ʼಟಿವಿ9 ಕನ್ನಡʼ ವರದಿ ಮಾಡಿದೆ. ವೈರಲ್ ಆದ ಸುದ್ದಿ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವೈರಲ್ ಆದ ಫೋಟೋವನ್ನು ಎಐ ಟೂಲ್ನ ಮೂಲಕ ರಚಿಸಲಾಗಿದೆ. ఇప్పుడు Desh Telugu Keyboard యాప్ సహాయంతో మీ ప్రియమైన వారికి తెలుగులో సులభంగా మెసేజ్ చెయ్యండి. Download The App Now
schema:mentions
schema:reviewRating
schema:author
schema:datePublished
schema:inLanguage
  • Telugu
schema:itemReviewed
Faceted Search & Find service v1.16.115 as of Oct 09 2023


Alternative Linked Data Documents: ODE     Content Formats:   [cxml] [csv]     RDF   [text] [turtle] [ld+json] [rdf+json] [rdf+xml]     ODATA   [atom+xml] [odata+json]     Microdata   [microdata+json] [html]    About   
This material is Open Knowledge   W3C Semantic Web Technology [RDF Data] Valid XHTML + RDFa
OpenLink Virtuoso version 07.20.3238 as of Jul 16 2024, on Linux (x86_64-pc-linux-musl), Single-Server Edition (126 GB total memory, 11 GB memory in use)
Data on this page belongs to its respective rights holders.
Virtuoso Faceted Browser Copyright © 2009-2025 OpenLink Software