schema:text
| - Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact checks doneFOLLOW US
Fact Check
Claim
ಮುಂದಿನ ಜನ್ಮದಲ್ಲಿ ಹುಟ್ಟುವುದಾದರೆ ಮುಸ್ಲಿಂ ಆಗಿಯೇ ಹುಟ್ಟುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ
Fact
ಮಂಡ್ಯದಲ್ಲಿ ನಡೆದ ಗ್ಯಾರೆಂಟಿ ಸಮಾವೇಶದಲ್ಲಿ ಸಿದ್ದರಾಮಯ್ಯನವರು ದೇವೇಗೌಡರನ್ನು ಉದ್ದೇಶಿಸಿ ಹೇಳಿದ ಮಾತುಗಳ ವೀಡಿಯೋವನ್ನು ಕತ್ತರಿಸಿ, ಬಳಸಿರುವುದು ಕಂಡುಬಂದಿದೆ
ಮುಂದಿನ ಜನ್ಮದಲ್ಲಿ ಹುಟ್ಟುವುದಾದರೆ ಮುಸ್ಲಿಂ ಆಗಿಯೇ ಹುಟ್ಟುತ್ತೇನೆ ಎಂದು ಸಿದ್ದರಾಮಯ್ಯ ಹೇಳಿರುವುದಾಗಿ ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೆಗಳು ಹರಿದಾಡುತ್ತಿವೆ.
ಎಕ್ಸ್ ಪೋಸ್ಟ್ ನಲ್ಲಿ ಕಂಡುಬಂದ ಪ್ರಕಾರ “ಬಿಜೆಪಿ ಮೇಲಿನ ಕೋಪಕ್ಕೆ ಮುಂದಿನ ಜನ್ಮದಲ್ಲಿ ಮುಸ್ಲಿಮನಾಗಿ ಹುಟ್ಟುತ್ತೇನೆಂದ ಸಿದ್ದರಾಮಯ್ಯ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಮುಸ್ಲಿಂ ಓಲೈಕೆಯ ತುತ್ತತುದಿಗೇರಿದ ಸಿದ್ದರಾಮಯ್ಯ ಇಂತಹವರು ಮುಂದಿನ ದಿನಗಳಲ್ಲಿ ಓಟಿಗಾಗಿ ಈಗಲೇ ಇಸ್ಲಾಂಗೆ ಮತಾಂತರ ಆಗುತ್ತೇನೆ ಎಂದರೂ ಅಚ್ಚರಿಯಿಲ್ಲ. ಇಂತವನನ್ನು ಚುನಾಯಿಸಿದ ಕನ್ನಡಿಗರಿಗೆ ದೊಡ್ಡ ನಮಸ್ಕಾರ” ಎಂದಿದೆ.
Also Read: ಅಹಮದಾಬಾದ್ನ ರಾಣಿ ಕಾ ಹಜಿರಾದಲ್ಲಿ ದೇಗುಲ ಪತ್ತೆಯಾಗಿದೆಯೇ
ಇದರ ಆರ್ಕೈವ್ ಆವೃತ್ತಿ ಇಲ್ಲಿದೆ.
ಇದೇ ರೀತಿಯ ಪ್ರತಿಪಾದನೆಯುಳ್ಳ ಪೋಸ್ಟ್ ಗಳನ್ನು ನೀವು ಇಲ್ಲಿ, ಇಲ್ಲಿ, ಇಲ್ಲಿ ನೋಡಬಹುದು.
ಈ ವೀಡಿಯೋ ಬಗ್ಗೆ ನಾವು ಸತ್ಯಶೋಧನೆ ನಡೆಸಿದ್ದು, ಸಿದ್ದರಾಮಯ್ಯನವರು ಜೆಡಿಎಸ್ ಪರಮೋಚ್ಛ ನಾಯಕ ಎಚ್ ಡಿ ದೇವೇಗೌಡ ಬಗ್ಗೆ ಹೇಳಿದ ಹೇಳಿಕೆಯ ವೀಡಿಯೋವನ್ನು ಎಡಿಟ್ ಮಾಡಿ ಮಾಡಿ ಸಿದ್ದರಾಮಯ್ಯ ಅವರು ಹೇಳಿದ್ದಾಗಿ ಹಂಚಿಕೊಳ್ಳಲಾಗುತ್ತಿದೆ ಎಂದು ನಾವು ತನಿಖೆಯಲ್ಲಿ ಕಂಡುಕೊಂಡಿದ್ದೇವೆ.
ಸತ್ಯಶೋಧನೆಗಾಗಿ ನಾವು ಕೀವರ್ಡ್ ಸರ್ಚ್ ನಡೆಸಿದ್ದೇವೆ. ಈ ವೇಳೆ ಮಾಧ್ಯಮ ವರದಿಗಳು ಲಭ್ಯವಾಗಿವೆ.
ಮಾರ್ಚ್ 10, 2024ರ ಡೆಕ್ಕನ್ ಹೆರಾಲ್ಡ್ ನ “ಮಂಡ್ಯದಲ್ಲಿ ಗ್ಯಾರೆಂಟಿ ಸಮಾವೇಶ, ಕಾಂಗ್ರೆಸ್ ಶಕ್ತಿ ಪ್ರದರ್ಶನ” ವರದಿಯಲ್ಲಿ ಹೇಳಿರುವಂತೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡ್ಯ ವಿಶ್ವವಿದ್ಯಾಲಯ ಮೈದಾನದಲ್ಲಿ ನಡೆದ ಗ್ಯಾರೆಂಟಿ ಸಮಾವೇಶದಲ್ಲಿ ಮಾತನಾಡಿ ಒಂದೊಮ್ಮೆ ದೇವೇಗೌಡರು ನಾನು ಮುಂದಿನ ಜನ್ಮದಲ್ಲಿ ಮುಸ್ಲಿಮನಾಗಿ ಹುಟ್ಟಲು ಬಯಸುತ್ತೇನೆ ಎಂದು ಹೇಳಿದ್ದರು. ಈಗ ಅವರು ಕೋಮುವಾದಿ ಬಿಜೆಪಿಯೊಂದಿಗೆ ಕೈ ಜೋಡಿದ್ದಾರೆ ಎಂದು ಟೀಕಿಸಿದರು ಎಂದಿದೆ.
ಇದರೊಂದಿಗೆ ನಾವು ಮಾರ್ಚ್ 11, 2024ರ ಕನ್ನಡಪ್ರಭ ಮಂಡ್ಯ ಆವೃತ್ತಿಯನ್ನು ಗಮನಿಸಿದ್ದೇವೆ. ಈ ವರದಿಯಲ್ಲೂ “ದೇವೇಗೌಡರು ಯಾವುದೇ ಕಾರಣಕ್ಕೂ ನಾನು ಬಿಜೆಪಿ ಜೊತೆ ಹೋಗುವುದಿಲ್ಲ. ಮುಂದಿನ ಜನ್ಮ ಅಂತಾ ಇದ್ದರೆ ಮುಸ್ಲಿಂ ಆಗಿ ಹುಟ್ಟುತ್ತೇನೆ. ಬಿಜೆಪಿಯನ್ನು ಕೋಮುವಾದಿ ಪಕ್ಷ ಎಂದು ಟೀಕಿಸಿದ್ದ ದೇವೇಗೌಡರೇ ಇಂದು ಬಿಜೆಪಿಯನ್ನು ಅಪ್ಪಿಕೊಂಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ” ಎಂದಿದೆ.
Also Read: ಬೆಂಗಳೂರಲ್ಲಿ ಕುಡಿಯಲು ನೀರಿಲ್ಲದಿದ್ದರೂ ತಮಿಳುನಾಡಿಗೆ ಕಾವೇರಿ ನೀರು ಹರಿಸಲಾಗುತ್ತಿದೆಯೇ?
ಆ ಬಳಿಕ ನಾವು ಟಿವಿ 9 ಕನ್ನಡ ಯೂಟ್ಯೂಬ್ನಲ್ಲಿ ಮಾರ್ಚ್ 10, 2024ರಂದು ಪೋಸ್ಟ್ ಮಾಡಿದ ವೀಡಿಯೋವನ್ನು ಕಂಡುಕೊಂಡಿದ್ದೇವೆ. ಮಂಡ್ಯ ಗ್ಯಾರೆಂಟಿ ಸಮಾವೇಶದ ವೀಡಿಯೋ ಇದಾಗಿದ್ದು, ಈ ವೀಡಿಯೋ ಕ್ಲಿಪ್ಪಿಂಗ್ (18.35 ರಿಂದ 18.55) ಸಮಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಜೆಡಿಎಸ್ ನಾಯಕ ಎಚ್.ಡಿ.ದೇವೇಗೌಡರನ್ನು ಟೀಕಿಸಿರುವುದನ್ನು ಕಾಣಬಹುದು. “ಇದೇ ದೇವೇಗೌಡರು ನಾನು ಯಾವುದೇ ಕಾರಣಕ್ಕೂ ಬಿಜೆಪಿ ಜೊತೆಗೆ ಹೋಗುವುದಿಲ್ಲ, ಏನಾರೂ ಇನ್ನೊಂದು ಜನ್ಮ ಇದೆ ಅಂದರೆ, ಮುಂದಿನ ಜನ್ಮದಲ್ಲಿ ನಾನು ಮುಸ್ಲಿಮನಾಗಿ ಹುಟ್ಟುತ್ತೇನೆ ಎಂದಿದ್ದರು. ಯಾಕೆಂದರೆ, ಬಿಜೆಪಿ ಕೋಮುವಾದಿ ಪಕ್ಷ, ನೀವ್ಯಾವತ್ತೂ ಬಿಜೆಪಿಯನ್ನು ಬೆಂಬಲಿಸಲ್ಲ ಎಂದಿದ್ದೀರಿ” ಎಂದು ಎಂದು ಟೀಕಿಸಿದ್ದಾರೆ.
ಈ ಸತ್ಯಶೋಧನೆಯ ಪ್ರಕಾರ, ಮಂಡ್ಯದ ಗ್ಯಾರೆಂಟಿ ಸಮಾವೇಶದಲ್ಲಿ, ಸಿದ್ದರಾಮಯ್ಯನವರು ದೇವೇಗೌಡರನ್ನು ಉದ್ದೇಶಿಸಿ ಮಾತನಾಡಿದ ವೀಡಿಯೋವನ್ನು ಕತ್ತರಿಸಿ, ಅರ್ಧ ಭಾಗವನ್ನು ಮಾತ್ರ ಹಾಕಿರುವುದು ಕಂಡುಬಂದಿದೆ. ಆದ್ದರಿಂದ ಸಿದ್ದರಾಮಯ್ಯನವರು ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಹುಟ್ಟುತ್ತೇನೆ ಎಂದು ಹೇಳಿದ್ದಾರೆ ಎನ್ನುವ ಪ್ರತಿಪಾದನೆ ತಪ್ಪಾಗಿದೆ.
Also Read: ರಂಜಾನ್ ಪ್ರಯುಕ್ತ ಶಾಲೆಗಳ ಸಮಯವನ್ನು ರಾಜ್ಯ ಸರ್ಕಾರ ಬದಲಾಯಿಸಿದೆಯೇ?
Our Sources
Report By Deccan Herald, Dated: March 10, 2024
Report By Kannadaprabha, Dated: March 11, 2024
YouTube Video By Tv9 Kannada, Dated: March 10, 2024
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.
Ishwarachandra B G
December 21, 2024
Ishwarachandra B G
December 20, 2024
Ishwarachandra B G
December 14, 2024
|