About: http://data.cimple.eu/claim-review/c5beb4fdeb29aa1805d1d1fc35aa26db04731aa0454437b50dddc85b     Goto   Sponge   NotDistinct   Permalink

An Entity of Type : schema:ClaimReview, within Data Space : data.cimple.eu associated with source document(s)

AttributesValues
rdf:type
http://data.cimple...lizedReviewRating
schema:url
schema:text
  • ಫ್ಯಾಕ್ಟ್ಚೆಕ್: ಓಪಿಯಂ ಎಂಬ ಪಕ್ಷಿ ಮನುಷ್ಯರನ್ನು ಕೊಲ್ಲುವ ಸಾಮರ್ಥ್ಯವನ್ನು ಹೊಂದಿದೆ ಎಂಬ ವೈರಲ್ ಪೋಸ್ಟ್ನ ಅಸಲಿಯತ್ತೇನು? ಓಪಿಯಂ ಎಂಬ ಪಕ್ಷಿ ಮನುಷ್ಯರನ್ನು ಕೊಲ್ಲುವ ಸಾಮರ್ಥ್ಯವನ್ನು ಹೊಂದಿದೆ ಎಂಬ ವೈರಲ್ ಪೋಸ್ಟ್ನ ಅಸಲಿಯತ್ತೇನು? Claim :ಓಪಿಯಂ ಪಕ್ಷಿಗೆ ಮನುಷ್ಯರನ್ನು ಕೊಲ್ಲಬಲ್ಲ ಶಕ್ತಿಯಿದೆ Fact :ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ವೈರಲ್ ಆದ ವಿಡಿಯೋದಲ್ಲಿ ಕಂಡುಬರುವ ಕಾಣಿಸುವ ಪಕ್ಷಿಯನ್ನು ವಿಎಫ್ಎಕ್ಸ್ನ ಮೂಲಕ ರಚಿಸಲಾಗಿದೆ ಅಂಟಾರ್ಟಿಕಾದಲ್ಲಿ ಅರ್ಥ ಭಾಗ ಮನುಷ್ಯ ಮತ್ತು ಅರ್ಥ ಭಾಗ ಪಕ್ಷಿಯಂತಹ ಜೀವಿಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು ಚಿತ್ರೀಕರಿಸಿರುವುದು ಅಂಟಾರ್ಟಿಕಾದಲ್ಲಿ, ಈ ಪಕ್ಷಿ ಸುಮಾರು 20 ಅಡಿ ಉದ್ದವಷ್ಟೇ ಅಲ್ಲ, ನೋಡಲು ಬಿಳಿ ಗರಿಗಳೊಂದಿಗಿದೆ. ನೋಡಲು ಮಾನವನಂತೆಯೇ ಭಾಸವಾಗುತ್ತದೆ. ಈ ಹಕ್ಕಿಗೆ ಸಂಬಂಧಿಸಿದ ಮೀಮ್ಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ. ಈ ಹಕ್ಕಿ ತನ್ನ ಬಳಿ ಬಂದವರನ್ನು ಸಮ್ಮೋಹನಗೊಳಿಸಿ ಕೊಲ್ಲುತ್ತದೆ, ಈ ಪಕ್ಷಿ ತುಂಬಾ ಅಪಾಯಕಾರಿ ರಂಬ ಕಥೆಗಳೋಂದಿಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ಗಳು ವೈರಲ್ ಆಗಿದೆ. ಇನ್ನು ವೈರಲ್ ಆದ ವಿಡಿಯೋದಲ್ಲಿ ನಾವು ಹಿಮಭರಿತ ಪ್ರದೇಶದಲ್ಲಿರುವ ಪಕ್ಷಿಯನ್ನು ನಾವು ನೋಡಬಹುದು. “Do you know Opium Bird? It can kill within a second if you move closer.” ಎಂಬ ಶೀರ್ಷಿಕೆಯೊಂದಿಗೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಫ್ಯಾಕ್ಟ್ಚೆಕ್ ವೈರಲ್ ಆದ ವಿಡಿಯೋದಲ್ಲಿ ಯಾವುದೇ ಸತ್ಯಾಂಶವಿಲ್ಲ. ಜನರನ್ನು ಕೊಲ್ಲಬಲ್ಲ ಹಕ್ಕಿ ಎಂಬ ಸುದ್ದಿಯಲ್ಲಿ ಯಾವುದೇ ನಿಜಾಂಶವಿಲ್ಲ. ನಾವು ಸಾಮಾಜಿಕ ಮಾಧ್ಯಮಗಳಲ್ಲಿ ಅಫೀಮಾ ಪಕ್ಷಿಯ ಬಗ್ಗೆ ಹುಡುಕಿದಾಗ ನಮಗೆ ಯಾವುದೇ ಫಲಿತಾಂಶ ಸಿಗಲಿಲ್ಲ. ಯಾಕೆಂದರೆ ಈ ಪಕ್ಷಿ ವಾಸ್ತವವಾಗಿ ಇಲ್ಲವೇ ಇಲ್ಲ. ವೈರಲ್ ಆದ ವಿಡಿಯೋವಿನಲ್ಲಿ ಬರುವ ಕೆಲವು ಪ್ರಮುಖ ಫ್ರೇಮಾಗಳನ್ನು ಉಪಯೋಗಿಸಿ ನಾವು ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ಸ್ಟ್ರಕ್ಚರ್ಡ್ಮ್ಯಾಗ್ ಎಂಬ ಇನ್ಸ್ಟಾಗ್ರಾಮ್ ಖಾತೆದಾರರು ವಿಡಿಯೋವನ್ನು ಹಂಚಿಕೊಂಡಿದ್ದರು. @official_spiritwalker ಖಾತೆಯಲ್ಲಿ “Opium bird came to life” ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಳ್ಳಲಾಗಿತ್ತು. ಮತ್ತಷ್ಟು ಮಾಹಿತಿ ಶೇಖರಿಸಲು ನಾವು @official_spiritwalker ಖಾತೆಯನ್ನು ಪರಿಶೀಲಿಸಿದಾಗ ನಮಗೆ ನವಂಬರ್ 1, 2023ರಂದು ತನ್ನ ಖಾತೆಯಲ್ಲಿ ವಿಡಿಯೋವನ್ನು ಪೋಸ್ಟ್ ಮಾಡಿದ್ದರು. “Opium bird came to life #opiumbird #spiritwalker” ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಪೋಸ್ಟ್ ಮಾಡಿದ್ದರು. ಇನ್ಸ್ಟಾಗ್ರಾಮ್ ಖಾತೆದಾರರನ ಬಯೋವಿನಲ್ಲಿ "ಬ್ರಾಂಡನ್ ಜಾನ್ಸನ್ ಕಾಸ್ಟ್ಯೂಮ್ ಬಿಲ್ಡರ್, ಇನ್ವೆಂಟರ್, ಆಡಿಯೋ ಇಂಜಿನಿಯರ್, ಬಿಜಿನೆಸ್ ಓನರ್" ಎಂದು ವಿವರಿಸಿದ್ದಾರೆ. ಓಪಿಯಂ ಬರ್ಡ್ ಕಾಸ್ಟ್ಯೂಮ್ ತಯಾರು ಮಾಡುತ್ತಿರುವ ವಿಡಿಯೋವನ್ನು ಸಹ ನಾವು ಗಮನಿಸಿದೆವು. “I gave it a shot. 7.5ft tall opium bird home made. #spiritwalker #opiumbird” ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಅಪ್ಲೋಡ್ ಮಾಡಿದ್ದರು. ಆತ ಕಾಸ್ಟ್ಯೂಮ್ ಡಿಸೈನರ್, ಇಂಜಿನಿಯರ್, ಪಪ್ಪೆಟಿರ್ ಎಂದು ತನ್ನ ಯೂಟ್ಯೂಬ್ ಖಾತೆಯಲ್ಲಿ ತನ್ನ ಬಯೋವಿನಲ್ಲಿ ಬರೆದಿದ್ದರು. ನಾವು ಓಪಿಯಂ ಹಕ್ಕಿಯ ಬಗ್ಗೆ ಮತ್ತಷ್ಟು ಹುಡುಕಾಡಿದಾಗ ನಮಗೆ drefx ಎಂಬ ಖಾತದಾರ ತನ್ನ ಟಿಕ್ಟಾಕ್ ಖಾತೆಯಲ್ಲಿ ಈ ವಿಡಿಯೋವನ್ನು ಅಪ್ಲೋಡ್ ಮಾಡಿದ್ದರು. ಯೂಟ್ಯೂಬ್ ಮತ್ತು ಇನ್ಸ್ಟಾಗ್ರಾಮ್ನಲ್ಲಿ ಓಪಿಯಂ ಪಕ್ಷಿಯ ಸೃಷ್ಟಿಕರ್ತ ತಾನು ಎಂದು ಬರೆದುಜೊಂಡಿದ್ದರು. ಗ್ರಾಫಕ್ಸ್ ಬಳಸಿ ಈ ಪಕ್ಷಿಯನ್ನು ವಿಎಫ್ಎಕ್ಸ್ ರಚಿಸಿರುವುದಾಗಿ ಹೇಳಿಕೊಂಡಿದ್ದಾರೆ. “Meme from 2027 I Opium bird meme” ಎಂಬ ಟೈಟಲ್ನೊಂದಿಗೆ ಸಾಕಷ್ಟು ಪಕ್ಷಿಗಳ ವಿಡಿಯೋವಿರುವುದನ್ನು ನಾವು ಕಂಡುಕೊಂಡೆವು. thirdeyefacts.com ಲೇಖನದ ಪ್ರಕಾರ vfx ಕಲಾವಿದ ಟಿಕ್ ಟಾಕ್ ಹ್ಯಾಂಡಲ್ನಲ್ಲಿ #AIart #deepfake ನಂತಹ ಹ್ಯಾಶ್ಟ್ಯಾಗ್ಗಳೊಂದಿಗೆ ಚಿತ್ರಗಳನ್ನು ಹಂಚಿಕೊಂಡಿದ್ದರು. ಮೀಡಿಯಂ.ಕಾಮ್ನಲ್ಲಿ ಪ್ರಕಟವಾದ ಮತ್ತೊಂದು ಲೇಖನವು ಎಐ ಮೂಲಕ ಈ ಜೀವಿಯನ್ನು ರಚಿಸಲಾಗಿದೆ ಎಂದು ಹೇಳಿಕೊಂಡಿದ್ದಾರೆ. ವೈರಲ್ ಆದ ವಿಡಿಯೋದಲ್ಲಿ ಯಾವುದೇ ಸತ್ಯಾಂಶವಿಲ್ಲ. ವೈರಲ್ ಆದ ವಿಡಿಯೋದಲ್ಲಿ ಕಂಡುಬರುವ ಓಪಿಯಂ ಹಕ್ಕಿಯನ್ನು ಎಐ ಮೂಲಕ ರಚಿಸಲಾಗಿದೆ. ಹೀಗಾಗಿ ವೈರಲ್ ಆದ ವಿಡಿಯೋದಲ್ಲಿ ಮತ್ತು ಸುದ್ದಿಯಲ್ಲಿ ಯಾವದೇ ಸತ್ಯಾಂಶವಿಲ್ಲ
schema:mentions
schema:reviewRating
schema:author
schema:datePublished
schema:inLanguage
  • Telugu
schema:itemReviewed
Faceted Search & Find service v1.16.115 as of Oct 09 2023


Alternative Linked Data Documents: ODE     Content Formats:   [cxml] [csv]     RDF   [text] [turtle] [ld+json] [rdf+json] [rdf+xml]     ODATA   [atom+xml] [odata+json]     Microdata   [microdata+json] [html]    About   
This material is Open Knowledge   W3C Semantic Web Technology [RDF Data] Valid XHTML + RDFa
OpenLink Virtuoso version 07.20.3238 as of Jul 16 2024, on Linux (x86_64-pc-linux-musl), Single-Server Edition (126 GB total memory, 3 GB memory in use)
Data on this page belongs to its respective rights holders.
Virtuoso Faceted Browser Copyright © 2009-2025 OpenLink Software