About: http://data.cimple.eu/claim-review/c6b68ff5eee74fa31272025d8ee0bcb3eccaa4491bd9c0b4b4c1a2d9     Goto   Sponge   NotDistinct   Permalink

An Entity of Type : schema:ClaimReview, within Data Space : data.cimple.eu associated with source document(s)

AttributesValues
rdf:type
http://data.cimple...lizedReviewRating
schema:url
schema:text
  • ಫ್ಯಾಕ್ಟ್ಚೆಕ್: ಅಸಾದುದ್ದೀನ್ ಓವೈಸಿ ಕುಂಭಮೇಳದಲ್ಲಿ ಸ್ನಾನ ಮಾಡುತ್ತಿದ್ದಾರೆ ಎಂದು ಎಐ ವಿಡಿಯೋ ಹಂಚಿಕೆ ಅಸಾದುದ್ದೀನ್ ಓವೈಸಿ ಕುಂಭಮೇಳದಲ್ಲಿ ಸ್ನಾನ ಮಾಡುತ್ತಿದ್ದಾರೆ ಎಂದು ಎಐ ವಿಡಿಯೋ ಹಂಚಿಕೆ Claim :ಅಸಾದುದ್ದೀನ್ ಓವೈಸಿ ಪ್ರಯಾಗರಾಜ್ನ ಮಹಾಕುಂಭದಲ್ಲಿ ಕೇಸರಿ ವಸ್ತ್ರವನ್ನು ಧರಿಸಿ ಗಂಗಾನದಿಯಲ್ಲಿ ಸ್ನಾನ ಮಾಡಿದ್ದಾರೆ Fact :ಓವೈಸಿರವರ ವೀಡಿಯೊವನ್ನು ಕೃತಕ ಬುದ್ಧಿಮತ್ತೆ (AI) ಮೂಲಕ ರಚಿಸಲಾಗಿದೆ ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಪವಿತ್ರ ಸಂಗಮವಾದ ತ್ರಿವೇಣಿ ಸಂಗಮವಾದ ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ, ಪ್ರತಿ 12 ವರ್ಷಗಳಿಗೊಮ್ಮೆ ನಡೆಯುವ ಮಹಾಕುಂಭ ಮೇಳಕ್ಕೆ ಅದ್ದೂರಿ ಚಾಲನೆ ದೊರೆತಿದೆ. ಮೊದಲ ದಿನವೇ ಸುಮಾರು 40 ಲಕ್ಷಕ್ಕೂ ಹೆಚ್ಚು ಜನರು ಪವಿತ್ರ ಸ್ನಾನ ಮಾಡಿ ಧನ್ಯತಾ ಭಾವ ಅನುಭವಿಸಿದ್ದಾರೆ. ಈ ಉತ್ಸವದಲ್ಲಿ ಸುಮಾರು 45 ಕೋಟಿ ಜನ ಭಾಗವಹಿಸುವ ನಿರೀಕ್ಷೆ ಇದೆ. ಇದರ ನಡುವೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಪ್ರಯಾಗರಾಜ್ನ ಮಹಾಕುಂಭದಲ್ಲಿ ಕೇಸರಿ ವಸ್ತ್ರವನ್ನು ಧರಿಸಿ ಗಂಗಾನದಿಯಲ್ಲಿ ಸ್ನಾನ ಮಾಡಿದ್ದಾರೆ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವೊಂದನನು ಸಾಮಾಜಿಕ ಜಾಲತಾಣದ ಬಳಕೆದಾರರು ತಮ್ಮ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ವೈರಲ್ ಆದ ವಿಡಿಯೋದಲ್ಲಿ ಅಸಾದುದ್ದೀನ್ ಓವೈಸಿ ಕೇಸರಿ ಬಟ್ಟೆ ಧರಿಸಿರುವುದನ್ನು ನೋಡಬಹುದು ಹಾಗೆ, ಕೊರಳಲ್ಲಿ ಎರಡು ರುದ್ರಾಕ್ಷಿ ಮಾಲೆಗಳನ್ನೂ ಸಹ ಧರಿಸಿದ್ದಾರೆ. ಕೆಲವು ಸಂತರು ಮತ್ತು ಋಷಿಗಳು ಗಂಗಾನದಿಯಲ್ಲಿ ಅವನ ಸುತ್ತಲೂ ನಿಂತಿದ್ದಾರೆ. ಓವೈಸಿ ಕೈಮುಗಿದು ಗಂಗೆಗೆ ನಮಸ್ಕಾರ ಮಾಡುತ್ತಿರುವು ದೃಶ್ಯಗಳನ್ನು ನಾವು ವಿಡಿಯೋದಲ್ಲಿ ನೋಡಬಹುದು. ಜನವರಿ 18, 2025ರಂದು ʼಇಂಡಿಯನ್ʼ ಎಂಬ ಯೂಟ್ಯೂಬ್ ಖಾತೆದಾರರು ತಮ್ಮ ಖಾತೆಯಲ್ಲಿ ʼWhen Secularism takes a Holy dipʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋಗೆ ಕ್ಯಾಪ್ಷನ್ ಆಗಿ ʼ“When secularism takes a holy dip! Owaisi ji embracing Sanatan sanskar or just testing the waters?ʼ ಎಂಬ ಬರೆದು ಹಂಚಿಕೊಂಡಿದ್ದಾರೆ. ಶೀರ್ಷಿಕೆಯನ್ನು ಮತ್ತು ಕ್ಯಾಪ್ಷನ್ನ್ನು ನಾವು ಕನ್ನಡಕ್ಕೆ ಅನುವಾದಿಸಿದೆವು. ʼಜಾತ್ಯತೀತತೆ ಪವಿತ್ರ ಸ್ನಾನ ಮಾಡಿದಾಗʼ ಎಂಬ ಶೀರ್ಷಿಕೆಯೊಂದಿಗೆ ʼ“ಜಾತ್ಯತೀತತೆ ಪವಿತ್ರ ಸ್ನಾನ ಮಾಡಿದಾಗ! ಓವೈಸಿ ಜೀ ಸನಾತನ ಸಂಸ್ಕಾರವನ್ನು ಸ್ವೀಕರಿಸುತ್ತಾರೋ ಅಥವಾ ನೀರನ್ನು ಪರೀಕ್ಷಿಸುತ್ತಾರೋ? ಎಂಬ ಕ್ಯಾಪ್ಷನ್ನ್ನು ನೀಡಿ ವಿಡಿಯೋವನ್ನು ಹಂಚಿಕೊಂಡಿರುವುದನ್ನು ನಾವಿಲ್ಲಿ ನೋಡಬಹುದು. ವೈರಲ್ ಅದ ವಿಡಿಯೋವಿನ ಸ್ಕ್ರೀನ್ಶಾಟ್ನ್ನು ನೀವಿಲ್ಲಿ ನೋಡಬಹುದು. ಜನವರಿ 17, 2025ರಂದು ʼಕ್ರಾಟ್ಲೀ.ಇನ್ʼ ಎಂಬ ಎಕ್ಸ್ ಖಾತೆದಾರ ತಮ್ಮ ಖಾತೆಯಲ್ಲಿ ʼमत करो मत करो, यह सब मत करो सबको पाप लगेगा ʼ ಎಂಬ ಶೀರ್ಷಿಕೆಯೊಂದಿಗೆ ಅಸಾದುದ್ದೀನ್ ಓವೈಸಿಯ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇದೇ ವಿಡಿಯೋವನ್ನು ಹಿಂದೂ ತನವಾಲಾ ಯೋಗೇಶ್ ಎಂಬ ಎಕ್ಸ್ ಖಾತೆದಾರ ತನ್ನ ಆಖತೆಯಲ್ಲಿ ʼआओ अपने वंशजों के पाप धोने महाकुम्भʼ ಎಂಬ ಶಿರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼನಿಮ್ಮ ವಂಶಸ್ಥರ ಪಾಪಗಳನ್ನು ತೊಳೆಯಲು ಮಹಾಕುಂಭಕ್ಕೆ ಬನ್ನಿʼ ಎಂಬ ಶೀರ್ಷಿಕೆಯೊMದಿಗೆ ವಿಡಿಯೋವನ್ನು ಹಂಚಿಕೊಂಡಿರುವುದನ್ನು ನಾವಿಲ್ಲಿ ನೋಡಬಹುದು ಜನವರಿ 19, 2025ರಂದು ಮತ್ತೋಬ್ಬ ಎಕ್ಸ್ ಖಾತೆದಾರ ತನ್ನ ಎಕ್ಸ್ ಖಾತೆಯಲ್ಲಿ ʼLooks like they want Asaduddin Owaisi's leadership for Maha Kumbh? Poor mentality, even their religious festivals are not complete without mocking and provoking Indian Muslimsʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಮಹಾ ಕುಂಭಮೇಳಕ್ಕೆ ಅಸಾದುದ್ದೀನ್ ಓವೈಸಿಯನ್ನು ಬಯಸುತ್ತಿರುವಂತೆ ಕಾಣುತ್ತಿದೆ. ಅವರ ಮನಸ್ಥಿತಿ ಎಷ್ಟು ಕೆಟ್ಟದಾಗಿದೆ ಎಂದರೆ, ಅವರ ಧಾರ್ಮಿಕ ಹಬ್ಬಗಳು ಸಹ ಭಾರತೀಯ ಮುಸ್ಲಿಮರನ್ನು ಅಪಹಾಸ್ಯ ಮಾಡದೆ ಅಥವಾ ಪ್ರಚೋದಿಸದೆ ಪೂರ್ಣಗೊಳ್ಳುವುದಿಲ್ಲʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಜನವರಿ 18, 2025ರಂದು ʼಇಂಡಿಯನ್ʼ ಎಂಬ ಯೂಟ್ಯೂಬ್ ಖಾತೆದಾರರು ತಮ್ಮ ಖಾತೆಯಲ್ಲಿ ʼWhen Secularism takes a Holy dipʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋಗೆ ಕ್ಯಾಪ್ಷನ್ ಆಗಿ ʼ“When secularism takes a holy dip! Owaisi ji embracing Sanatan sanskar or just testing the waters?ʼ ಎಂಬ ಬರೆದು ಹಂಚಿಕೊಂಡಿದ್ದಾರೆ. ಶೀರ್ಷಿಕೆಯನ್ನು ಮತ್ತು ಕ್ಯಾಪ್ಷನ್ನ್ನು ನಾವು ಕನ್ನಡಕ್ಕೆ ಅನುವಾದಿಸಿದೆವು. ʼಜಾತ್ಯತೀತತೆ ಪವಿತ್ರ ಸ್ನಾನ ಮಾಡಿದಾಗʼ ಎಂಬ ಶೀರ್ಷಿಕೆಯೊಂದಿಗೆ ʼ“ಜಾತ್ಯತೀತತೆ ಪವಿತ್ರ ಸ್ನಾನ ಮಾಡಿದಾಗ! ಓವೈಸಿ ಜೀ ಸನಾತನ ಸಂಸ್ಕಾರವನ್ನು ಸ್ವೀಕರಿಸುತ್ತಾರೋ ಅಥವಾ ನೀರನ್ನು ಪರೀಕ್ಷಿಸುತ್ತಾರೋ? ಎಂಬ ಕ್ಯಾಪ್ಷನ್ನ್ನು ನೀಡಿ ವಿಡಿಯೋವನ್ನು ಹಂಚಿಕೊಂಡಿರುವುದನ್ನು ನಾವಿಲ್ಲಿ ನೋಡಬಹುದು. ಮತ್ತಷ್ಟು ವೈರಲ್ ಆದ ವಿಡಿಯೋಗಳನ್ನು ನೀವಿಲ್ಲಿ, ಇಲ್ಲಿ, ಇಲ್ಲಿ ನೋಡಬಹುದು. ಫ್ಯಾಕ್ಟ್ಚೆಕ್ ವೈರಲ್ ಆದ ವಿಡಿಯೋ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವೈರಲ್ ಆದ ವಿಡಿಯೋವನ್ನು ಎಐ ಮೂಲಕ ರಚಿಸಲಾಗಿದೆ. ಪ್ರಯಾಗರಾಜ್ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಓವೈಸಿ ಗಂಗಾ ಸ್ನಾನ ಮಾಡಿಲ್ಲ. ನಾವು ವೈರಲ್ ಆದ ವಿಡಿಯೋವಿನಲ್ಲಿರುವ ಸತ್ಯಾಂಶವನ್ನು ತಿಳಿಯಲು ವಿಡಿಯೋವಿನ ಕೆಲವು ಪ್ರಮುಖ ಫ್ರೇಮ್ಗಳನ್ನು ಉಪಯೋಗಿಸಿ ಗೂಗಲ್ ಲೆನ್ಸ್ ಮೂಲಕ ಹುಡುಕಾಟ ನಡೆಸಿದೆವು ಹುಡುಕಾಟದಲ್ಲಿ ಓವೈಸಿಯ ಅಧಿಕೃತ ಸಾಮಾಜಿಕ ಮಾಧ್ಯಮಗಳಲ್ಲಿ ನಮಗೆ ಮಹಾ ಕುಂಭಮೇಳ ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೂ ಕುಂಭಮೇಳಕ್ಕೆ ಸಂಬಂಧಿಸಿದ ಮಾಹಿತಿ ಏನಾದರೂ ಹಂಚಿಕೊಂಡಿದ್ದಾರೆ ಎಂದು ಹುಡುಕಾಟ ನಡೆಸಿದಾಗ ನಮಗೆ ಅಂತಹ ಯಾವುದೇ ವರದಿಯೂ ಕಂಡುಬಂದಿಲ್ಲ. ನಂತರ ನಾವು ವಿಡಿಯೋಗೆ ಸಂಬಂಧಿಸಿದ ಕೆಲವು ಪ್ರಮುಖ ಕೀವರ್ಡ್ಗಳನ್ನು ಉಪಯೋಗಿಸಿ ಹುಡುಕಾಟ ನಡೆಸಿದೆವು. ಇಲ್ಲಿಯೂ ನಮಗೆ ಯಾವುದೇ ಮಾಹಿತಿ ತಿಳಿದು ಬಂದಿಲ್ಲ. ಜನವರಿ 18, 2025ರಂದು ನಮಗೆ ʼಪ್ರಿನ್ಸ್ ಷಾʼ ಎಂಬ ಯೂಟ್ಯೂಬ್ ಖಾತೆದಾರರು ತಮ್ಮ ಖಾತೆಯಲ್ಲಿ ʼAsaduddin owaisi Mahakumbh Mela Video viral. AIMIM Owaisi Hindu Viral Video❌ AI generateʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿರುವುದನ್ನು ನಾವಿಲ್ಲಿ ನೋಡಬಹುದು. ಮನಿ ಕಂಟ್ರೋಲ್ ತನ್ನ ವೆಬ್ಸೈಟ್ನಲ್ಲಿ ʼMaha Kumbh 2025: Fake video showing Asaduddin Owaisi taking a dip at Sangam surfaces onlineʼ ಎಂಬ ಶೀರ್ಷಿಕೆಯೊಂದಿಗೆ ವರದಿ ಮಾಡಿರುವುದನ್ನು ನಾವಿಲ್ಲಿ ನೋಡಬಹುದು. ವರದಿಯಲ್ಲಿ ಓವೈಸಿಯವರ ವಿಡಿಯೋ ಶೇ. 98.65%ರಷ್ಟು ಕೃತಕ ಬುದ್ದಿಮತ್ತೆಯಿಂದ ರಚಿಸಲಾಗಿದೆ ಎಂದು ವರದಿ ಮಾಡಿರುವುದನ್ನು ನೋಡಬಹುದು. ನಾವು ವೈರಲ್ ಆದ ವಿಡಿಯೋವಿನು ಸೂಕ್ಷ್ಮವಾಗಿ ಗಮನಿಸಿದೆವು. ವೈರಲ್ ಆದ ವಿಡಿಯೋವಿನ ಹಲವು ಫ್ರೇಮ್ಗಳಲ್ಲಿ ಜರ್ಕ್ ಮೋಷನ್ ಆಗುವುದು ನಾವು ಕಾಣಬಹುದು, ಅಷ್ಟೇ ಅಲ್ಲ ವಿಡಿಯೋವಿನಲ್ಲಿ ಓವೈಸಿಯ ಮುಖ ಭಾವನೆಗಳು ಸಹ ಆನಿಮೇಟ್ ಮಾಡಿದ ಹಾಗೆ ಕಾಣುತ್ತದೆ. ಹೀಗಾಗಿ ನಾವು ವೈರಲ್ ಆದ ವಿಡಿಯೋವಿನ ಕೆಲವು ಪ್ರಮುಖ ಕೀಫ್ರೇಮ್ಗಳನ್ನು ಉಪಯೋಗಿಸಿ ಎಐ ಡಿಟೆಕ್ಟಿವ್ ಟೂಲ್ಗಳ ಮೂಲಕ ಹುಡುಕಾಟ ನಡೆಸಿದೆವು. ಮಾಹಿತಿಯನ್ನು ಮತ್ತಷ್ಟು ಖಚಿತ ಪಡಿಸಿಕೊಳ್ಳಲು ನಾವು ಎಐ ಇಮೇಜ್ ಡಿಟೆಕ್ಷನ್ ಟೂಲ್ ʼಹೈವ್ ಮಾಡರೇಶನ್ʼ ನಲ್ಲಿ ಫೊಟೋವನ್ನು ಪರಿಶೀಲಿಸಿದೆವು. ಪರಿಶೀಲನೆಯಲ್ಲಿ ನಮಗೆ ಈ ಚಿತ್ರ 99.3 ಪ್ರತಿಶಾತದಷ್ಟು ಎಐ ಮೂಲಕ ರಚಿಸಲಾಗಿದೆ ಎಂದು ತಿಳಿದುಬಂದಿತು. ಮತ್ತೋಂದು ಎಐ ಡಿಟೆಕ್ಟರ್ ಟೂಲ್ ಮೂಲಕ ಹುಡುಕಾಟ ನಡೆಸಿದೆವು. ಎಐ ಡಿಟೆಕ್ಟರ್ ಟೂಲ್ ʼವಾಸ್ ಇಟ್ ಎಐʼ ಟೂಲ್ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ವೈರಲ್ ಆದ ವಿಡಿಯೋವನ್ನು ಎಐ ಮೂಲಕ ರಚಿಸಲಾಗಿದೆ ಎಂದು ಸಾಭೀತಾಗಿದೆ. ಇದರಿಂದ ಸಾಭೀತಾಗಿದ್ದೇನೆಂದರೆ, ವೈರಲ್ ಆದ ವಿಡಿಯೋ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವಾಸ್ತವಾಗಿ ವೈರಲ್ ಆದ ವಿಡಿಯೋವನ್ನು ಎಐ ಮೂಲಕ ರಚಿಸಲಾಗಿದೆ. ಪ್ರಯಾಗರಾಜ್ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಓವೈಸಿ ಗಂಗಾ ಸ್ನಾನ ಮಾಡಿಲ್ಲ.
schema:mentions
schema:reviewRating
schema:author
schema:datePublished
schema:inLanguage
  • Telugu
schema:itemReviewed
Faceted Search & Find service v1.16.115 as of Oct 09 2023


Alternative Linked Data Documents: ODE     Content Formats:   [cxml] [csv]     RDF   [text] [turtle] [ld+json] [rdf+json] [rdf+xml]     ODATA   [atom+xml] [odata+json]     Microdata   [microdata+json] [html]    About   
This material is Open Knowledge   W3C Semantic Web Technology [RDF Data] Valid XHTML + RDFa
OpenLink Virtuoso version 07.20.3238 as of Jul 16 2024, on Linux (x86_64-pc-linux-musl), Single-Server Edition (126 GB total memory, 3 GB memory in use)
Data on this page belongs to its respective rights holders.
Virtuoso Faceted Browser Copyright © 2009-2025 OpenLink Software