schema:text
| - Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact checks doneFOLLOW US
Fact Check
Claim
ಹರಿಯಾಣಾದಲ್ಲಿ ಹಿಂದೂ ಅರ್ಚಕನ ಮೇಲೆ ಬ್ಯಾಟ್ನಿಂದ ದುಷ್ಕರ್ಮಿಗಳ ಹಲ್ಲೆ
Fact
ಅರ್ಚಕನ ಮೇಲೆ ಹಲ್ಲೆ ನಡೆಸುವ ಈ ವೈರಲ್ ವೀಡಿಯೋ, 2020ರದ್ದು ಜೊತೆಗೆ ಹಲ್ಲೆ ನಡೆಸಿದವರು ಅದೇ ಧರ್ಮದವರು
ಅರ್ಚಕನ ಮೇಲೆ ಬ್ಯಾಟಿನಿಂದ ಹಲ್ಲೆ ನಡೆಸುತ್ತಿರುವ ಕುರಿತ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಫೇಸ್ ಬುಕ್ನಲ್ಲಿ ಕಂಡುಬಂದ ಕ್ಲೇಮಿನಲ್ಲಿ “ಹಿಂದುಸ್ಥಾನದಲ್ಲಿ ಹಿಂದುಗಳ ಸ್ಥಿತಿ ನೋಡಿ. ಈ ವೀಡಿಯೊ ಎಲ್ಲಿಂದ ಬಂದಿದೆ ಎಂದು ನನಗೆ ತಿಳಿದಿಲ್ಲ. ದಯವಿಟ್ಟು ಈ ವೀಡಿಯೋ ಮಾಡಿದವರೆಲ್ಲರ ವಿರುದ್ಧ ಕೇಸ್ ಬುಕ್ ಮಾಡಿ ಮತ್ತು ಆತನನ್ನು ಪತ್ತೆ ಹಚ್ಚಿ ನಮ್ಮ ಅರ್ಚಕನನ್ನು ಉಳಿಸುವ ತನಕ ಶೇರ್ ಮಾಡಿ. ಇದು ನಮ್ಮ ಹಿಂದೂ ಜನ್ಮಕ್ಕೆ ನಾವು ನೀಡುವ ಕೊಡುಗೆ. ಅರ್ಚಕನಿಗೆ ಈ ರೀತಿ ಥಳಿಸುತ್ತಿರುವುದನ್ನು ನೋಡಿ, ಈ ವಿಡಿಯೋ ತೆಗೆದವರನ್ನು, ಸಹಾಯ ಮಾಡಿದವರನ್ನು ಸುಮ್ಮನೆ ಬಿಡಬೇಡಿ.” ಎಂದು ಹೇಳಲಾಗಿದೆ.
“ಮೀ ಅವಧಾನುಲ ಶಾಸ್ತ್ರಿ” ಎಂಬವರ ಹೆಸರಿನಲ್ಲಿ ಈ ಬರಹ ಮತ್ತು ವೀಡಿಯೋ ಶೇರ್ ಆಗುತ್ತಿದ್ದು, ತೆಲುಗಿನಿಂದ ಅನುವಾದಿಸಲಾಗಿದೆ ಎಂದಿದೆ.
ಸತ್ಯಶೋಧನೆಗಾಗಿ ಈ ವೀಡಿಯೋದ ಸ್ಕ್ರೀನ್ ಗ್ರ್ಯಾಬ್ಗಳನ್ನು ತೆಗೆದು ಗೂಗಲ್ನಲ್ಲಿ ರಿವರ್ಸ್ ಇಮೇಚ್ ಸರ್ಚ್ ನಡೆಸಲಾಗಿದೆ. ಈ ವೇಳೆ ಹಲವು ಫಲಿತಾಂಶಗಳು ಲಭ್ಯವಾಗಿವೆ. ಜೊತೆಗೆ ಇದೇ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವುದು ತಿಳಿದುಬಂದಿದೆ.
ನವೆಂಬರ್ 3, 2020ರಂದು ದೈನಿಕ್ ಭಾಸ್ಕರ್ ಪ್ರಕಟಿಸಿದ ವರದಿಯಲ್ಲಿ, “ದೇಗುಲದಲ್ಲಿ ಬ್ಯಾಟ್ ಇಡಲು ಅಡ್ಡಿಪಡಿಸಿದ ಆರೋಪದ ಮೇಲೆ ಪೂಜಾರಿ ಮೇಲೆ ಬ್ಯಾಟಿನಲ್ಲಿ ಹಲ್ಲೆ ನಡೆಸಿದ ನಾಲ್ವರು ಯುವಕರನ್ನು ಬಂಧಿಸಲಾಗಿದೆ ಎಂದಿದೆ. ಘಟನೆ ಬಗ್ಗೆ ಹಲ್ಲೆ ನಡೆಸಿದ ತಂಡದಲ್ಲಿದ್ದ ಓರ್ವ ವೀಡಿಯೋ ಮಾಡಿ ಹರಿಯ ಬಿಟ್ಟಿದ್ದು, ಆನಂತರ ಪೊಲೀಸರು ಕೇಸು ದಾಖಲಿಸಿದ್ದರು. ಪ್ರಾಥಮಿಕ ತನಿಖೆಯಲ್ಲಿ ಅರ್ಚಕ ಮಹಿಳೆಯೊಬ್ಬರೊಂದಿಗೆ ಅನುಚಿತವಾಗಿ ವರ್ತಿಸಿದ್ದು, ಈ ಹಲ್ಲೆಗೆ ಕಾರಣ ಎಂದು ಹೇಳಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಫತೇಹಾಬಾದ್ನ ಭಟ್ಟು ಕಲನ್ ಠಾಣೆ ಪೊಲೀಸರು ಹಲ್ಲೆನಡೆಸಿದವರ ಬಗ್ಗೆ ಹುಡುಕಾಟ ನಡೆಸಿದ್ದು ನಾಲ್ವರನ್ನು ಬಂಧಿಸಿದ್ದಾರೆ” ಎಂದು ವರದಿ ಹೇಳಿದೆ.
ನವೆಂಬರ್ 3 2020ರಂದು ನ್ಯೂಸ್ 18 ಪ್ರಕಟಿಸಿದ ವರದಿಯೊಂದರಲ್ಲಿ “ಯುವಕನೊಬ್ಬ ಕಿರುಕುಳ ನೋಡಿದ ಆರೋಪದ ಮೇಲೆ ದೇಗುಲದ ಪೂಜಾರಿಗೆ ಹಲ್ಲೆ ನಡೆಸಿದ ಘಟನೆ ಹರಿಯಾಣಾದ ಫತೇಹಾಬಾದ್ನಲ್ಲಿ ನಡೆದಿದೆ ಎಂದು ಹೇಳಲಾಗಿದೆ. ಇಲ್ಲಿನ ಧಾಬಿಕಾಲನ್ ಪ್ರದೇಶದಲ್ಲಿ ನಡೆದ ಈ ಘಟನೆಯಲ್ಲಿ ಮಹಿಳೆಯೊಬ್ಬರಿಗೆ ಕಿರುಕುಳ ನೀಡಿದ ಆರೋಪದಲ್ಲಿ ಅರ್ಚಕನ ಮೇಲೆ ಹಲ್ಲೆ ನಡೆಸಲಾಗಿದೆ, ಈ ಕುರಿತು ಪ್ರಕರಣ ದಾಖಲಿಸಲಾಗಿದೆ” ಎಂದಿದೆ.
ನವೆಂಬರ್ 3 2020ರಂದು ಜಾಗರಣ್ ಪ್ರಕಟಿಸಿದ ವರದಿ ಪ್ರಕಾರ ಈ ಘಟನೆ ಧಾಬಿ ಕಲನ್ ಪ್ರದೇಶದಲ್ಲಿ ನಡೆದಿದೆ. ಈ ವರದಿಯಲ್ಲಿ ಹೇಳಿದ ಪ್ರಕಾರ “ಪೂಜಾರಿಗೆ ಬ್ಯಾಟಿನಲ್ಲಿ ವ್ಯಕ್ತಿಯೊಬ್ಬ ಹೊಡೆಯುತ್ತಿರುವ ದೃಶ್ಯ ವೈರಲ್ ಆಗಿದೆ. ಪೂಜಾರಿ ಹೆಸರು ಕೈಲಾಶ್ ಶರ್ಮಾ ಎಂದಿದ್ದು, ಕಳೆದ ಆರು ತಿಂಗಳಿಂದ ಈತ ದೇಗುಲವೊಂದರಲ್ಲಿ ಪೂಜಾರಿಯಾಗಿ ಕೆಲಸ ಮಾಡುತ್ತಿದ್ದ. ಸ್ಥಳೀಯ ಮಹಿಳೆಯೊಂದಿಗೆ ಈತ ಅನುಚಿತವಾಗಿ ಮಾತನಾಡಿದ ಕಾರಣಕ್ಕೆ ಈತನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಹೇಳಲಾಗಿದೆ ಈ ಬಗ್ಗೆ ಪೊಲೀಸರು ಇನ್ನೂ ಪ್ರಕರಣ ದಾಖಲಿಸಿಕೊಂಡಿಲ್ಲ, ಆದರೆ ವೀಡಿಯೋ ಆಧಾರದ ಮೇಲೆ ತನಿಖೆ ನಡೆಸುತ್ತಿದ್ದಾರೆ” ಎಂದು ಹೇಳಿದೆ.
Also Read: ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರ ಎಲ್ಲ ಕುಟುಂಬಗಳಿಗೆ 500 ರೂ.ಗೆ ಎಲ್ಪಿಜಿ ಸಿಲಿಂಡರ್ ಕೊಡುವುದು ಸತ್ಯವೇ?
ಈ ವರದಿಗಳನ್ನು ಸಾಕ್ಷ್ಯವಾಗಿರಿಸಿ ಎಫ್ಐಆರ್ ಬಗ್ಗೆ ಶೋಧಿಸಲಾಗಿದೆ. ಅದರಂತೆ ಹರಿಯಾಣಾ ಪೊಲೀಸ್ ಸಿಟಿಜನ್ ಸರ್ವೀಸ್ನಲ್ಲಿ ಎಫ್ಐಆರ್ (ಸಂಖ್ಯೆ 0204) ಲಭ್ಯವಾಗಿದೆ. ಅದರಂತೆ ನವೆಂಬರ್ 3, 2020ರಂದು ಭಟ್ಟು ಕಲನ್ ಪೊಲೀಸ್ ಠಾಣೆಯಲ್ಲಿ ದಾಖಲಾದ ಎಫ್ಐಆರ್ನಲ್ಲಿ ಅಮಿತ್ ಉರುಫ್ ದಾಕಲ, ಕೃಷ್ಣ, ಪ್ರದೀಪ್ ಉರುಫ್ ಪೀಟರ್ ಎಂಬವರ ವಿರುದ್ಧ ಐಪಿಸಿ ಸೆಕ್ಷನ್ 323, 34, 342 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಈ ಪ್ರಕಾರ, ವರದಿಗಳಲ್ಲಿ ಕಂಡುಬಂದ ರೀತಿ ಯಾವುದೇ ಆರೋಪಗಳನ್ನು ಮಾಡಲಾಗಿರುವುದು ಕಂಡುಬಂದಿರುವುದಿಲ್ಲ.
ಈ ಸತ್ಯಶೋಧನೆಯ ಪ್ರಕಾರ, ಪೂಜಾರಿಗೆ ಅದೇ ಧರ್ಮದ ದುಷ್ಕರ್ಮಿಗಳು ಬ್ಯಾಟಿನಲ್ಲಿ ಹೊಡೆದಿರುವುದು ತಿಳಿದುಬಂದಿದೆ. ಆದ್ದರಿಂದ ಈ ಕ್ಲೇಮ್ ತಪ್ಪಾಗಿದೆ.
Our Sources
Report published by News 18, Dated: November 3, 2020
Report published by Jagaran, Dated: November 3, 2020
Report published by Dainik Bhaskar, Dated: November 3, 2020
FIR Report by Bhattu Kalan (No:0204), Dated: November3, 2020
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.
Prasad Prabhu
July 11, 2024
Ishwarachandra B G
June 26, 2024
Kushel HM
January 9, 2024
|