schema:text
| - ಫ್ಯಾಕ್ಟ್ಚೆಕ್: ಪಶ್ಚಿಮ ಬಂಗಾಳದ ವಿಡಿಯೋವನ್ನು ಮಹಾ ಕುಂಭಮೇಳಕ್ಕೆ ತೆರಳುತ್ತಿದ್ದ ರೈಲಿಗೆ ಕಲ್ಲು ಎಸೆದವರ ಮೇಲೆ ಲಾಠಿಚಾರ್ಜ್ ಎಂದು ಹಂಚಿಕೆ
ಪಶ್ಚಿಮ ಬಂಗಾಳದ ವಿಡಿಯೋವನ್ನು ಮಹಾ ಕುಂಭಮೇಳಕ್ಕೆ ತೆರಳುತ್ತಿದ್ದ ರೈಲಿಗೆ ಕಲ್ಲು ಎಸೆದವರ ಮೇಲೆ ಲಾಠಿಚಾರ್ಜ್ ಎಂದು ಹಂಚಿಕೆ
Claim :
ಮಹಾ ಕುಂಭಮೇಳಕ್ಕೆ ತೆರಳುತ್ತಿದ್ದ ರೈಲಿನ ಮೇಲೆ ಕಲ್ಲು ಎಸೆದ ಜನರ ಗುಂಪಿನ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆFact :
ಪಶ್ಚಿಮ ಬಂಗಾಳದ ಬರ್ಭೂಮ್ ಎಂಬ ಗ್ರಾಮದಲ್ಲಿ ನಡೆದ ಜಮೀನಿನ ವಿವಾದಕ್ಕೆ ಸಂಬಂಧಿಸಿದ ವಿಡಿಯೋವದುಭಾರತದ ಭವ್ಯ ಸಂಸ್ಕೃತಿಯನ್ನು 'ಕುಂಭಮೇಳ' ಇಡೀ ಜಗತ್ತಿಗೇ ಸಾರಿ ಸಾರಿ ಹೇಳುತ್ತದೆ. ಇದೇ ಕಾರಣಕ್ಕೆ 'ಕುಂಭಮೇಳ'ಕ್ಕೆ ದೊಡ್ಡ ಮಟ್ಟದಲ್ಲೇ ತಯಾರಿ ಮಾಡಿಕೊಳ್ಳಲಾಗುತ್ತಿದ್ದು, ಪ್ರತಿಬಾರಿ ನಡೆಯುವ 'ಕುಂಭಮೇಳ' ಸಂಭ್ರಮದ ರೀತಿಯೇ ಈ ಬಾರಿ ಕೂಡ ಅದ್ಧೂರಿಯಾಗಿ ಧಾರ್ಮಿಕ ಕಾರ್ಯಕ್ರಮ ನಡೆಸಲು ಸಿದ್ಧತೆ ನಡೆಸಲಾಗಿದೆ. ಪ್ರಯಾಣಿಕರಿಗೆ ಪ್ರಯಾಗರಾಜ್ಗೆ ತಲುಪಲು ಯಾವುದೇ ತೊಂದರೆಯಾಗದಂತೆ ಹಲವಾರು ವಿಶೇಷ ರೈಲುಗಳನ್ನು ಓಡಿಸಲು ರೈಲ್ವೆ ಇಲಾಖೆ ಘೋಷಿಸಿದೆ.
ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಯಾಗ್ರಾಜ್ಗೆ ಹೋಗುತ್ತಿರುವ ರೈಲಿನ ಮೇಲೆ ಕೆಲವು ಪುಂಡರು ಕಲ್ಲು ತೂರಾಟ ಮಾಡಿದ್ದಾರೆ ಎಂದು ವರದಿಯಾಗಿದೆ. ಇದರ ನಡುವೆ ಪೊಲೀಸರು ರಸ್ತೆಯಲ್ಲಿದ್ದ ಕೆಲವು ಯುವಕರ ಮೇಲೆ ಲಾಠಿ ಚಾರ್ಜ್ ಮಾಡುತ್ತಿರುವ ದೃಶ್ಯವೊಂದು ವೈರಲ್ ಆಗುತ್ತಿದೆ.
ಫೆಬ್ರವರಿ 02, 2025ರಂದು ʼನಾಗೇಶ್ ಪ್ರೀತಮ್ʼ ಎಂಬ ಎಕ್ಸ್ ಖಾತೆದಾರ ತನ್ನ ಖಾತೆಯಲ್ಲಿ ʼ ಕುಂಭಮೇಳಕ್ಕೆ ಹೋಗುವ ರೈಲುಗಳ ಮೇಲೆ ಕಲ್ಲು ತೂರಾಟ ನಡೆಸಿದವರನ್ನು ಹಂದಿಗಳಂತೆ ಮನೆಗಳಿಂದ ಹೊರಗೆ ಎಳೆದು ತರಲಾಗುತ್ತಿದೆ. ಯೋಗಿ ಜೀʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ
ವೈರಲ್ ಆದ ಸುದ್ದಿ ಸ್ಕ್ರೀನ್ಶಾಟ್ನ್ನು ನೀವಿಲ್ಲಿ ನೋಡಬಹುದು
ಫೆಬ್ರವರಿ 02, 2025ರಂದು ʼಕರ್ನಾಟಕ ಹಿಂದೂಸ್ʼ ಎಂಬ ಇನ್ಸ್ಟಾಗ್ರಾಮ್ ಖಾತೆದಾರ ವೈರಲ್ ಆದ ವಿಡಿಯOೌನ್ನು ಹಂಚಿಕೊಂಡು ʼಯೋಗಿಜೀʼ ಎಂಬ ಕ್ಯಾಪ್ಷನ್ನೊಂಡಗೆ ಹಂಚಿಕೊಂಡಿದ್ದಾರೆ
ಉಮ್ಮಿದ್ ಸಿಂಗ್ ಎಂಬ ಯೂಟ್ಯೂಬ್ ಖಾತೆದಾರ ತನ್ನ ಖಾತೆಯಲ್ಲಿ ʼमहाकुम्भ के श्रद्धालुओं को ले जा रही ट्रेन पर हुई पत्थर बाजीʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಮಹಾಕುಂಭಮೇಳಕ್ಕೆ ಭಕ್ತರನ್ನು ಕರೆದೊಯ್ಯುತ್ತಿದ್ದ ರೈಲಿನ ಮೇಲೆ ಕಲ್ಲು ತೂರಾಟʼ ಎಂಬ ಬರೆದಿರುವುದನ್ನು ನೋಡಬಹುದು
ಧರ್ಮೇಂದ್ರ ಗುಜ್ಜಾರ್ ರಿಯಾನಾ ಎಂಬ ಎಕ್ಸ್ ಖಾತೆದಾರ ತನ್ನ ಖಾತೆಯಲ್ಲಿ ʼएको "योगी" द्वितीयो नास्तिन भूतो न भविष्यती. कुंभ जाने वाली ट्रेनों पर पत्थरबाजी करने वालों को सूअरों की तरह खींच खींच कर घरों से निकाल रहे हैं.. !!ʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಒಬ್ಬನೇ ಯೋಗಿ ಬೇರೆಯಾರು ಇಲ್ಲ. ಭೂತ ಕಾಲದಲ್ಲಿ ಅಥವಾ ಮುಂದಿನ ಭವಿಷ್ಯತ್ತಿನಲ್ಲೂ ಕಾಣಸಿಗುವುದಿಲ್ಲ, ಕುಂಭಮೇಳಕ್ಕೆ ಹೋಗುವ ರೈಲುಗಳ ಮೇಲೆ ಕಲ್ಲು ತೂರಾಟ ನಡೆಸಿದ ಜನರನ್ನು ಹಂದಿಗಳಂತೆ ಮನೆಗಳಿಂದ ಹೊರಗೆ ಎಳೆದುಕೊಂಡು ಬಂದರುʼ ಎಂಬ ಶೀರ್ಷಿಕೆಯನ್ನೀಡಿರುವುದನ್ನು ನೋಡಬಹುದು
ಮತ್ತಷ್ಟು ವೈರಲ್ ಕ್ಲೇಮ್ಗಳನ್ನು ನಾವಿಲ್ಲಿ, ಇಲ್ಲಿ, ಇಲ್ಲಿ ನೋಡಬಹುದು
ಫ್ಯಾಕ್ಟ್ಚೆಕ್
ವೈರಲ್ ಆದ ಸುದ್ದಿ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವೈರಲ್ ಆದ ವಿಡಿಯೋ ಪಶ್ಚಿಮ ಬಂಗಾಳದ ಬರ್ಭೂಮ್ ಎಂಬ ಗ್ರಾಮದಲ್ಲಿ ನಡೆದ ಜಮೀನಿನ ವಿವಾದಕ್ಕೆ ಸಂಬಂಧಿಸಿದ್ದ ವಿಡಿಯೋವದು
ನಾವು ವೈರಲ್ ಆದ ಸುದ್ದಿಯ ಬಗ್ಗೆ ಸತ್ಯಾಂಶವನ್ನು ತಿಳಿಯಲು ವಿಡಿಯೋವಿನಲ್ಲಿರುವ ಕೆಲವು ಪ್ರಮುಖ ಕೀಫ್ರೇಮ್ಗಳನ್ನು ಬಳಸಿ ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ, ಜನವರಿ 28, 2025ರಂದು ʼ20 held in Birbhum for attacking copsʼ ಎಂಬ ಹೆಡ್ಲೈನ್ನೊಂದಿಗೆ ಟೈಮ್ಸ್ ಆಫ್ ಇಂಡಿಯಾ ವೆಬ್ಸೈಟ್ನಲ್ಲಿ ವರದಿ ಮಾಡಿರುವುದನ್ನು ನಾವಿಲ್ಲಿ ನೋಡಬಹುದು. ವರದಿಯಲ್ಲಿ ʼಪಶ್ಚಿಮ ಬಂಗಾಳದ ಬಿರ್ಭುಮ್ ಜಿಲ್ಲೆಯ ಸೂರಿಯಲ್ಲಿ ಮಂಗಳವಾರ ಜಮೀನಿನ ವಿವಾದಕ್ಕೆ ಸಂಬಂಧಿಸಿದಂತೆ ಘರ್ಷಣೆ ನಡೆದಿದೆ. ಜಿಲ್ಲಾ ಕೇಂದ್ರ ಪಟ್ಟಣವಾದ ಸೂರಿ ಬಳಿಯ ಮಲ್ಲಿಕ್ಪುರ ಗ್ರಾಮಕ್ಕೆ ಈ ಗ್ಯಾಂಗ್ ಪ್ರವೇಶಿಸಿ, ಸ್ಥಳೀಯರನ್ನು ಬೆದರಿಸಲು ಪ್ರಾರಂಭಿಸಿದಾಗ, ಘರ್ಷಣೆ ನಡೆಯಿತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಶಸ್ತ್ರಸಜ್ಜಿತ ಗುಂಪೊಂದು ಪೊಲೀಸ್ ಅಧಿಕಾರಿಯೊಬ್ಬರ ಮೇಲೆ ಹಲ್ಲೆ ನಡೆಸಿದ ನಂತರ ಇಪ್ಪತ್ತು ಜನರನ್ನು ಬಂಧಿಸಿ, ಅವರಿಂದ ಮೂರು ಬಂದೂಕುಗಳನ್ನು ವಶಪಡಿಸಿಕೊಳ್ಳಲಾಗಿದೆ. ಪೊಲೀಸರು ಗಲಭೆಯ ನಿಯಂತ್ರಣಕ್ಕಾಗಿ ಗ್ರಾಮಸ್ಥರ ಮೇಲೆ ಲಾಠಿ ಚಾರ್ಜ್ ಮಾಡಿದ್ದರು, ಪರಿಸ್ಥಿತಿ ಕೈ ಮೀರಿದಾಗ ರ್ಯಾಪಿಡ್ ಆಕ್ಷನ್ ಫೋರ್ಸ್ (ಆರ್ಎಎಫ್) ಜೊತೆಗೆ ಗ್ರಾಮಕ್ಕೆ ದೌಡಾಯಿಸಿದ ಪೊಲೀಸರು ಘರ್ಷಣೆಗೆ ಕಾರಣರಾದವರನ್ನೂ ಬಂಧಿಸಿದ್ದಾರೆʼ ಎಂದು ವರದಿಯಾಗಿದೆ.
ʼಮಿಲೇನಿಯಮ್ ಪೋಸ್ಟ್ 29ʼ ಎಂಬ ವೆಬ್ಸೈಟ್ನಲ್ಲಿ ʼPolice detain 10 persons in Suri clashʼ ಎಂಬ ಹೆಡ್ಲೈನ್ನೊಂಡಿಗೆ ವರದಿ ಮಾಡಿದ್ದಾರೆ. ವರದಿಯಲ್ಲಿ ʼಬಿರ್ಭುಮ್ ಜಿಲ್ಲೆಯ ಸೂರಿಯಲ್ಲಿ ಮಂಗಳವಾರ ಭೂ ವಿವಾದಕ್ಕೆ ಸಂಬಂಧಿಸಿದಂತೆ ಘರ್ಷಣೆ ಭುಗಿಲೆದ್ದಿದ್ದು, ಪರಿಸ್ಥಿತಿಯನ್ನು ನಿಯಂತ್ರಿಸಲು ಯತ್ನಿಸುತ್ತಿದ್ದ ಪೊಲೀಸ್ ಅಧಿಕಾರಿಯ ಮೇಲೆ ಹಲ್ಲೆ ನಡೆಸಲಾದ, ಹತ್ತಕ್ಕೂ ಕ್ಕೂ ಹೆಚ್ಚು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಮಂಗಳವಾರ ಬೆಳಿಗ್ಗೆ, ಬೇರೆ ಪ್ರದೇಶದ ಇಬ್ಬರು ಯುವಕರು ಸೂರಿಯ ಮಿನಿಸ್ಟಿಲ್ ಗ್ರಾಮಕ್ಕೆ ಬಂದೂಕುಗಳೊಂದಿಗೆ ಪ್ರವೇಶಿಸಿದ್ದರು. ಗ್ರಾಮಸ್ಥರಲ್ಲಿ ಭಯಭೀತರಾಗಲು ಈ ಇಬ್ಬರು ಬಂದೂಕುಗಳನ್ನು ಝಳಪಿಸುತ್ತಿದ್ದರು ಎನ್ನಲಾಗಿದೆ. ಆದರೆ, ಗ್ರಾಮಸ್ಥರು ಆರೋಪಿಗಳಿಬ್ಬರನ್ನು ಹಿಡಿಯುವಲ್ಲಿ ಯಶಸ್ವಿಯಾದರು. ಅವರು ಗ್ರಾಮಸ್ಥರು ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಪೊಲೀಸರು ಇಬ್ಬರನ್ನು ಬಂಧಿಸಲು ಪ್ರಯತ್ನಿಸಿದಾಗ, ಗ್ರಾಮಸ್ಥರು ಪೊಲೀಸರನ್ನು ಸುತ್ತುವರೆದು ಇಬ್ಬರನ್ನು ತಮಗೆ ಒಪ್ಪಿಸಬೇಕೆಂದು ಒತ್ತಾಯಿಸಿದರು. ಪೊಲೀಸರು ಯುವಕರ ಮೇಲೆ ಹಲ್ಲೆ ನಡೆಸದಂತೆ ತಡೆಯಲು ಪ್ರಯತ್ನಿಸಿದಾಗ, ಗ್ರಾಮಸ್ಥರು ಪೊಲೀಸರ ಮೇಲೆ ಹಲ್ಲೆ ಮಾಡಲು ಪ್ರಾರಂಭಿಸಿದರು. ಸೂರಿ ಪೊಲೀಸ್ ಠಾಣೆಯ ಉಸ್ತುವಾರಿ ಇನ್ಸ್ಪೆಕ್ಟರ್ (ಐಸಿ) ಅವರ ಕಾಲರ್ ಅನ್ನು ಎಳೆದೊಯ್ದರು. ನಂತರ, ಕ್ಷಿಪ್ರ ಕಾರ್ಯ ಪಡೆ (ಆರ್ಎಎಫ್) ಜೊತೆಗೆ ಪೊಲೀಸ್ ಪಡೆಯ ದೊಡ್ಡ ತುಕಡಿ ಗ್ರಾಮಕ್ಕೆ ಆಗಮಿಸಿ 10 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಯಿತು.
ದಿ ಪ್ರಿಂಟ್, ಝೀ ನ್ಯೂಸ್ ಮತ್ತು ಪಿಟಿಐನಲ್ಲಿ ವೆಬ್ಸೈಟ್ನಲ್ಲಿ ಬಂದಂತಹ ವರದಿಯನ್ನು ನೀವಿಲ್ಲಿ ನೋಡಬಹುದು
ಜನವರಿ 28, 2025ರಂದು ʼರಿಪಬ್ಲಿಕ್ ಬಾಂಗ್ಲಾʼ ಎಂಬ ಯೂಟ್ಯೂಬ್ ಚಾನೆಲ್ನಲ್ಲಿ ʼSuri News| সিউড়িতে আ গ্নেয়া স্ত্র নিয়ে দাপাদাপি। গ্রামবাসীদের হাতে পাকড়াও ২ যুবকʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿರುವುದನ್ನು ನೋಡಬಹುದು. ʼಸೂರಿಯಲ್ಲಿ ಬಂದೂಕುಗಳೊಂದಿಗೆ ಬಂದ ಇಬ್ಬರು ಯುವಕರನ್ನು ಗ್ರಾಮಸ್ಥರು ಹಿಡಿದಿದ್ದಾರೆ. ಪೊಲೀಸರನ್ನು ಸುತ್ತುವರೆದ ಬೃಹತ್ ಪ್ರತಿಭಟನೆಗಳು ನಡೆದಿವೆ. ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ. ಅಪರಾಧಿಗಳು ಆಸ್ಪತ್ರೆಗೆ ದಾಖಲಾಗಿದ್ದಾರೆʼ ಎಂದು ವರದಿಯಾಗಿರುವುದನ್ನು ನೋಡಬಹುದು.
ಇದರಿಂದ ಸಾಭಿತಾಗಿದ್ದೇನೆಂದರೆ, ವೈರಲ್ ಆದ ಸುದ್ದಿ ಸಾಮಾಜಿಕ ಜಾಲತಾಣದ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವಾಸ್ತವವಾಗಿ ವೈರಲ್ ಆದ ವಿಡಿಯೋ ಮಹಾ ಕುಂಭಮೇಳಕ್ಕೆ ತೆರಳುತ್ತಿದ್ದ ರೈಲಿನ ಮೇಲೆ ಕಲ್ಲು ಎಸೆದ ಜನರ ಗುಂಪಿನ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿದ ವಿಡಿಯೋವಲ್ಲ, ಈ ವಿಡಿಯೋ ಪಶ್ಚಿಮ ಬಂಗಾಳದ ಬರ್ಭೂಮ್ ಎಂಬ ಗ್ರಾಮದಲ್ಲಿ ನಡೆದ ಜಮೀನಿನ ವಿವಾದಕ್ಕೆ ಸಂಬಂಧಿಸಿದ್ದು.
|