About: http://data.cimple.eu/claim-review/e52180fdc59e6b1f539f8f1c45aa52a1dfc8631343cbae08ef079c5a     Goto   Sponge   NotDistinct   Permalink

An Entity of Type : schema:ClaimReview, within Data Space : data.cimple.eu associated with source document(s)

AttributesValues
rdf:type
http://data.cimple...lizedReviewRating
schema:url
schema:text
  • ಫ್ಯಾಕ್ಟ್ಚೆಕ್ :ಲೈಂಗಿಕ ಹಗರಣ ಆರೋಪಿ ಎಪ್ಸ್ಟೀನ್ ಜೊತೆ ಡೊನಾಲ್ಡ್ ಟ್ರಂಪ್ ಕಾಣಿಸುವ ಚಿತ್ರದ ಅಸಲಿಯತ್ತೇನು? ಲೈಂಗಿಕ ಹಗರಣ ಆರೋಪಿ ಎಪ್ಸ್ಟೀನ್ ಜೊತೆ ಡೊನಾಲ್ಡ್ ಟ್ರಂಪ್ ಕಾಣಿಸುವ ಚಿತ್ರದ ಅಸಲಿಯತ್ತೇನು? Claim :ಎಪ್ಸ್ಟೀನ್ ಜೊತೆ ಡೊನಾಲ್ಡ್ ಟ್ರಂಪ್ ಇರುವ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ Fact :ವೈರಲ್ ಆದ ಚಿತ್ರದಲ್ಲಿ ಯಾವುದೇ ಸತ್ಯಾಂಶವಿಲ್ಲ. ಎಪ್ಸ್ಟೀನ್ ಜೊತೆ ಡೊನಾಲ್ಡ್ ಟ್ರಂಪ್ ಇರುವ ಚಿತ್ರವನ್ನು ಎಐ ಮೂಲಕ ರಚಿಸಲಾಗಿದೆ. ಅಮೆರಿಕಾ ರಾಜಕೀಯದಲ್ಲಿ ಇದೀಗ ಸೆಕ್ಸ್ ಹಗರಣದಲ್ಲಿ ಜೆಫ್ರೀ ಎಪ್ಸ್ಟೀನ್ ಹೆಸರು ಎಲ್ಲೆಡೆ ಕೇಳಿಬರುತ್ತಿದೆ. ಈ ಹಗರಣದಲ್ಲಿ ಅಮೇರಿಕಾದ ಸಾಕಷ್ಟು ದೊಡ್ಡ ದೊಡ್ಡ ರಾಜಕೀಯ ನಾಯಕರ ಹೆಸರು ಬೆಳಕಿಗೆ ಬರುತ್ತಿದೆ. ಈಗಾಗಲೇ ಈ ಸೆಕ್ಸ್ ಹಗರಣದಲ್ಲಿ ಬಿಲ್ ಕ್ವಿಂಟನ್, ಡೊನಾಲ್ಡ್ ಡ್ರಂಪ್ ಹೆಸರುಗಳು ಬೆಳಕಿಗೆ ಬಂದಿವೆ. 2005ರಲ್ಲಿ ಅಪ್ರಾಪ್ತ ಬಾಲಕೀಯರನ್ನು ಬಳಸಿಕೊಂಡು ಸೆಕ್ಸ್ ವರ್ಕ್ ಮಾಡಿಸುತ್ತಿರುವುದು ಬೆಳಕಿಗೆ ಬಂದು ಆತನನ್ನು ಬಂಧಿಸಿ ಶಿಕ್ಷೆಯನ್ನೂ ಸಹ ವಿಧಿಸಲಾಗಿತ್ತು. ಶಿಕ್ಷೆ ಅನುಭವಿಸುವಾಗಲೇ ಆತ ಆತ್ಮಹತ್ಯೆ ಮಾಡಿಕೊಂಡು ಜೈಲಿನಲ್ಲೇ ಪ್ರಾಣ ಕಳೆದುಕೊಂಡನು ಎಂದು ಅಧಿಕಾರಿಗಳು ಖಚಿತಪಡಿಸಿದರು. ಕೊರ್ಟ್ಗೆ ಸಲ್ಲಿಸಿರುವ ದಾಖಲೆಗಳಲ್ಲಿ ಜೆಫ್ರೀ ಎಪ್ಸ್ಟೀನ್ನ ಗ್ರಾಹಕರಾಗಿ ಬಿಲ್ ಕ್ಲಿಂಟನ್, ಡೊನಾಲ್ಡ್ ಟ್ರಂಪ್, ಲಿಯೊನಾರ್ಡೊ ಡಿಕಾಪ್ರಿಯೊ, ಕ್ಯಾಮೆರಾನ್ ಡಯಾಜ್ ಇನ್ನಿತರ ನಟರ ಹೆಸರನ್ನು ವರದಿಯಲ್ಲಿ ಹೇಳಲಾಗಿದೆ.ಇದೀಗ ಮತ್ತೆ ಎಪ್ಸ್ಟೀನ್ ಹೆಸರು ಬೆಳಕಿಗೆ ಬಂದಿದೆ ಇದಕ್ಕೆ ಕಾರಣ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಎಪ್ಸ್ಟೀನ್ ಮತ್ತು ಡೊನಾಲ್ಡ್ ಟ್ರಂಪ್ ಜೊತೆಗಿರುವ ಚಿತ್ರಗಳು. ವೈರಲ್ ಚಿತ್ರದಲ್ಲಿ ಎಪ್ಸ್ಟೀನ್ ಮತ್ತು ಯುಎಸ್ನ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆಗಿರುವ ಚಿತ್ರ ತೋರಿಸಿದರೆ, ಇನ್ನೊಂದು ಚಿತ್ರ ಎಪ್ಸ್ಟೀನ್, ಟ್ರಂಪ್ ಜೊತೆಗೆ ಮಹಿಳೆಯರು ಇರುವುದನ್ನು ನೋಡಬಹುದು. ದೃಶ್ಯ-01 “Both legends Trump and Epstein in the Lolita express #EpsteinClientList” ಎನ್ನುವ ಕ್ಯಾಪ್ಷನೊಂದಿಗೆ ಚಿತ್ರವನ್ನು ಪ್ರಕಟಿಸಲಾಗಿದೆ. Donald Judas Trump was a regular on flights to Epstein Island and his name appears on the #EpsteinClientList and the MAGAt’s can’t fucking deal with the truth of that. pic.twitter.com/yoWcbEZLWR— Liberal Lisa in Oklahoma (@lisa_liberal) January 2, 2024 President Trump should sue every single deceitful liberal who claimed he went to Epstein's island.— Brigitte Gabriel (@ACTBrigitte) January 4, 2024 The President has been exonerated again!! ದೃಶ್ಯ-02 ಎರಡನೇ ದೃಶ್ಯದಲ್ಲಿ ಡೊನಾಲ್ಡ್ ಟ್ರಂಪ್ ಮತ್ತು ಎಪ್ಸ್ಟೀನ್ ಜೊತೆ ಹುಡುಗಿಯರು ಕೌಚ್ ಮೇಲೆ ಕುಳಿತಿರುವುದನ್ನು ನೋಡಬಹುದು. ಈ ಚಿತ್ರಕ್ಕೆ ಶೀರ್ಷಿಕೆಯಾಗಿ "ಟ್ರಂಪ್ ಎಪ್ಸ್ಟೀನ್ ಲೆಟ್ಸ್ ಗೆಟ್ ದಿ ರೆಕಾರ್ಡ್ ಸ್ಟ್ರೈಟ್" ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ವೈರಲ್ ಚಿತ್ರವನ್ನು ಹಂಚಿಕೊಂಡು ಟ್ರಂಪ್ ಸುಳ್ಳು ಹೇಳಿದರೂ ಚಿತ್ರಗಳು ಸುಳ್ಳು ಹೇಳುವುದಿಲ್ಲ ಎಂದು ಕಮೆಂಟ್ ಮಾಡುತ್ತಿದ್ದಾರೆ. ಫ್ಯಾಕ್ಟ್ಚೆಕ್ ವೈರಲ್ ಆದ ಚಿತ್ರದಲ್ಲಿ ಯಾವುದೇ ಸತ್ಯಾಂಶವಿಲ್ಲ. ವೈರಲ್ ಆದ ಚಿತ್ರಗಳನ್ನು ಎಐ ಮೂಲಕ ರಚಿಸಲಾಗಿದೆ. ವೈರಲ್ ಚಿತ್ರದಲ್ಲಿರುವ ನಿಜಾಂಶವನ್ನು ಹುಡುಕಲು ನಾವು ಗೂಗಲ್ನ ಮೂಲಕ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ನಮಗೆ ಈ ಕುರಿತು ಯಾವುದೇ ವರದಿಗಳಾಗಲಿ, ಸುದ್ದಿಗಳಾಗಲಿ ಕಂಡುಬಂದಿಲ್ಲ. ನಂತರ ನಾವು ಈ ಚಿತ್ರವನ್ನು ಇಸ್ಇಟ್ಎಐ, ಹೈವ್ ಡಿಟೆಕ್ಟರ್ ಹಾಗೆ ಮತ್ತಷ್ಟು ಎಐ ಇಮೇಜ್ ಡಿಟೆಕ್ಷನ್ ಟೂಲ್ನ ಮೂಲಕ ಹುಡುಕಾಡಿದಾಗ ನಮಗೆ ಈ ಚಿತ್ರ ಎಐ ಮೂಲಕ ಸೃಷ್ಟಿಸಲಾಗಿರುವುದು ನಮಗೆ ತಿಳಿದು ಬಂದಿತು. ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಗೂ ಸೆಕ್ಸ್ ಕೇಸ್ನಲ್ಲಿ ಅಪರಾಧಿಯಾಗಿ ಜೈಲಿಗೆ ಹೋಗಿದ್ದ ಅಪರಾಧಿ ಎಪ್ಸ್ಟೀನ್ಗೂ ಯಾವುದೇ ಸಂಬಂಧವಿಲ್ಲ ಎಂದು ಕಂಡುಕೊಂಡೆವು. ವೈರಲ್ ಆದ ಚಿತ್ರ ಎಐ ಮೂಲಕ ರಚಿಸಲಾಗಿದೆ ಎಂಬ ಹಲವಾರು ಸುಳಿವು ನಮಗೆ ಸಿಕ್ಕಿತು. ಈ ಚಿತ್ರದಲ್ಲಿ ಎಪ್ಸ್ಟೀನ್ಗೆ ಕಾಲುಗಳಿಲ್ಲ ಹಾಗೆ ಹಲವಾರು ತೋಳುಗಳು ಎಪ್ಸ್ಟೀನ್ನ ಭುಜದ ಸುತ್ತಲೂ ಸುತ್ತಿಕೊಂಡಿವೆ. ಟ್ರಂಪ್ನ ಒಂದು ಕೈಯಲ್ಲಿ ಆರು ಬೆರಳುಗಳಿವೆ. ಹೀಗಾಗಿ ಇದರಿಂದ ಸಾಭೀತಾಗಿರುವುದೇನೆಂದರೆ ವೈರಲ್ ಆದ ಚಿತ್ರದಲ್ಲಿ ಯಾವುದೇ ಸತ್ಯಾಂಶವಿಲ್ಲ. ಎಪ್ಸ್ಟೀನ್ ಜೊತೆ ಡೊನಾಲ್ಡ್ ಟ್ರಂಪ್ ಇರುವ ಚಿತ್ರವನ್ನು ಎಐ ಮೂಲಕ ರಚಿಸಲಾಗಿದೆ.
schema:mentions
schema:reviewRating
schema:author
schema:datePublished
schema:inLanguage
  • Telugu
schema:itemReviewed
Faceted Search & Find service v1.16.115 as of Oct 09 2023


Alternative Linked Data Documents: ODE     Content Formats:   [cxml] [csv]     RDF   [text] [turtle] [ld+json] [rdf+json] [rdf+xml]     ODATA   [atom+xml] [odata+json]     Microdata   [microdata+json] [html]    About   
This material is Open Knowledge   W3C Semantic Web Technology [RDF Data] Valid XHTML + RDFa
OpenLink Virtuoso version 07.20.3238 as of Jul 16 2024, on Linux (x86_64-pc-linux-musl), Single-Server Edition (126 GB total memory, 3 GB memory in use)
Data on this page belongs to its respective rights holders.
Virtuoso Faceted Browser Copyright © 2009-2025 OpenLink Software