schema:text
| - Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact checks doneFOLLOW US
Election Watch
ಟ್ರಾಫಿಕ್ ದಂಡದಿಂದ ಮುಕ್ತಿ, ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ಹಳೆಯ ದರ ಜಾರಿಯಾಗಲಿದೆ ಎಂಬ ಪೋಸ್ಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.
ಫೇಸ್ಬುಕ್ನಲ್ಲಿ ಕಂಡುಬಂದ ಈ ಕ್ಲೇಮ್ ಹೀಗಿದೆ, “ಟ್ರಾಫಿಕ್ ಫೈನ್ನಿಂದ ಮುಕ್ತಿ, ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ಟ್ರಾಫಿಕ್ ಫೈನ್ ಹಳೆಯ ದರ ಜಾರಿ, ಹೆಚ್ಚು ಟ್ರಾಫಿಕ್ ಫೈನ್ನಿಂದ ಪೊಲೀಸರ ಜೇಬು ತುಂಬುತ್ತಿದೆ ಹೊರತು ಸರ್ಕಾರದ ಖಜಾನೆಯಲ್ಲ” ಎಂದು ಹೇಳಲಾಗಿದೆ. ಜೆಡಿಎಸ್ ಕರ್ನಾಟಕ ಎಂಬ ಫೇಸ್ಬುಕ್ ಪೇಜ್ ನಲ್ಲಿ ಈ ಪೋಸ್ಟ್ ಕಂಡುಬಂದಿದೆ.
ಈ ಪೋಸ್ಟ್ನ ಬಗ್ಗೆ ನ್ಯೂಸ್ಚೆಕರ್ ಸತ್ಯಶೋಧನೆ ನಡೆಸಿದ್ದು, ಇದೊಂದು ತಪ್ಪು ಕ್ಲೇಮ್ ಎಂಬುದನ್ನು ಕಂಡುಕೊಂಡಿದೆ.
ಈ ಪೋಸ್ಟ್ನ ಸತ್ಯಾಂಶವನ್ನು ತಿಳಿಯಲು ಗೂಗಲ್ ಮೂಲಕ ಸರ್ಚ್ ನಡೆಸಲಾಗಿದ್ದು, ಈ ವೇಳೆ ಟ್ರಾಫಿಕ್ ದಂಡವನ್ನು ಕಡಿಮೆ ಮಾಡುವ ಕುರಿತಾಗಿ ಜೆಡಿಎಸ್ ನಾಯಕರು ಹೇಳಿದ ಯಾವುದೇ ಘೋಷಣೆಗಳು ಕಂಡುಬಂದಿರುವುದಿಲ್ಲ.
ಈ ಬಗ್ಗೆ ಜೆಡಿಎಸ್ ವಕ್ತಾರರಾದ, ಚೆನ್ನಕೃಷ್ಣ ಅವರನ್ನು ಸಂಪರ್ಕಿಸಿದ್ದು, ಈ ವರೆಗೆ ಅಂತಹ ಯಾವುದೇ ಘೋಷಣೆಗಳನ್ನು ಪಕ್ಷದ ವತಿಯಿಂದ ಮಾಡಿಲ್ಲ ಎಂದು ಹೇಳಿದ್ದಾರೆ. ಜನರಿಗೆ ಹೊರೆಯಾಗುವ ಕೆಲವೊಂದು ದಂಡಗಳನ್ನು ಸರಳ ಗೊಳಿಸಬೇಕು ಎಂಬ ಅಭಿಪ್ರಾಯ ಇದೆ. ಆದರೆ ಈ ಬಗ್ಗೆ ಯಾವುದೇ, ಏನೂ ತೀರ್ಮಾನ ಕೈಗೊಂಡಿಲ್ಲ. ಜೊತೆಗೆ ಕ್ಲೇಮ್ ಕಂಡುಬಂದಿರುವ ಪೇಜ್, ಪಕ್ಷದ ಅಧಿಕೃತ ಪೇಜ್ ಆಗಿರುವುದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
Also Read: ‘ಮಹದಾಯಿ ವಿವಾದ ಬಗೆಹರಿದಿದೆ’: ಅಮಿತ್ ಶಾ ಹೇಳಿಕೆ ಎಷ್ಟು ಸತ್ಯ?
ಇದರೊಂದಿಗೆ ಟ್ರಾಫಿಕ್ ಕುರಿತ ದಂಡಗಳನ್ನು ಬದಲಾಯಿಸುವ, ಹೊಸ ದಂಡದ ಬದಲಿಗೆ ಹಳೆಯ ದಂಡಗಳನ್ನು ಮರು ಜಾರಿಗೊಳಿಸುವ ಅವಕಾಶ ರಾಜ್ಯ ಸರ್ಕಾರಗಳಿಗೆ ಇದೆಯೇ ಎಂಬುದರ ಬಗ್ಗೆ ನ್ಯೂಸ್ ಚೆಕರ್ ಪರಿಶೀಲನೆ ನಡೆಸಿದ್ದು, ಅದು ಸಾಧ್ಯವಿಲ್ಲ ಎಂದು ತಿಳಿದುಬಂದಿದೆ.
1939ರ ಮೋಟಾರು ವಾಹನ ಕಾಯ್ದೆಯನ್ನು ಸಂವಿಧಾನದ 9ನೇ ಪರಿಚ್ಛೇದಕ್ಕೆ ಸೇರಿಸಲಾಗಿದ್ದು, ಈ ಕಾಯ್ದೆಯನ್ನು ಬದಲಾಯಿಸುವ, ಹಿಂತೆಗೆಯುವ ಶಾಸನಬದ್ಧ ಹಕ್ಕು ಶಾಸನ ಸಭೆಯಾದ ಸಂಸತ್ತಿಗೆ ಮಾತ್ರವೇ ಇರುತ್ತದೆ.
ಈ ಕಾಯ್ದೆಗೆ ಕಾಲಕಾಲಕ್ಕೆ ತಿದ್ದುಪಡಿಗಳಾಗಿದ್ದು, 2019ರಲ್ಲಿ ತಂದ ತಿದ್ದುಪಡಿಯ ಪ್ರಕಾರ ಟ್ರಾಫಿಕ್ ನಿಯಮ ಉಲ್ಲಂಘನೆ ವಿಚಾರದಲ್ಲಿ ಹೊಸ ದಂಡವನ್ನು ಜಾರಿ ಮಾಡಲಾಗಿದೆ. ಈ ಕುರಿತು ವಿವಿಧ ಮಾಧ್ಯಮಗಳು ವರದಿ ಮಾಡಿದ್ದು, ಅವುಗಳ ಕುರಿತ ಮಾಹಿತಿ ಇಲ್ಲಿ ಮತ್ತು ಇಲ್ಲಿದೆ.
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ವಕೀಲರಾದ ಶ್ರೀಶ ಅವರನ್ನು ಸಂಪರ್ಕಿಸಲಾಗಿದ್ದು, ಅವರು ಹೇಳುವಂತೆ “ಸಂವಿಧಾನದ 9ನೇ ಶೆಡ್ಯೂಲ್ನಲ್ಲಿ ಸೇರಿಸಲಾದ ಏಕರೂಪದ ವಿಚಾರಗಳನ್ನು ನ್ಯಾಯಾಂಗದ ಪರಿಧಿಯಲ್ಲಿ ಪ್ರಶ್ನೆ ಮಾಡುವುದಾಗಲಿ, ಬದಲಾವಣೆ ಮಾಡುವುದಾಗಲಿ ಸಾಧ್ಯವಿಲ್ಲ. ಹೊಸ ಟ್ರಾಫಿಕ್ ದಂಡ ನಿಯಮಗಳನ್ನು ಅಂದರೆ ಆ ಕುರಿತ ತಿದ್ದುಪಡಿ ಕಾಯ್ದೆ ಇದರ ಅಡಿಯಲ್ಲೇ ಬರೆಯಲಾಗಿದೆ. ಇಲ್ಲಿ ಕಾಯ್ದೆಯನ್ನು ಶಾಸನಸಭೆ ಮಾಡಿದ್ದು, ಇದನ್ನು ಜಾರಿ ಮಾಡುವ ಅಧಿಕಾರವನ್ನು ರಾಜ್ಯಗಳು ಹೊಂದಿರುತ್ತವೆ. ನಿರ್ದಿಷ್ಟ ಕಾಯ್ದೆಯ ಪ್ರಕಾರ ಕಾನೂನು ಕ್ರಮ ಕೈಗೊಳ್ಳುವ ಅರ್ಹತೆ ರಾಜ್ಯಗಳಿದ್ದು, ಅದನ್ನು ಬದಲಾಯಿಸುವ, ಅವಕಾಶ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಸತ್ಯಶೋಧನೆಯ ಪ್ರಕಾರ, ಟ್ರಾಫಿಕ್ ದಂಡ ಕುರಿತಂತೆ ಜೆಡಿಎಸ್ ಪಕ್ಷ ಯಾವುದೇ ಅಧಿಕೃತ ಘೋಷಣೆಗಳನ್ನು ಹೊರಡಿಸಿಲ್ಲ. ಮತ್ತು ಮೋಟಾರು ವಾಹನ ಕಾಯ್ದೆ ಕುರಿತ ಯಾವುದೇ ಬದಲಾವಣೆಗಳನ್ನು ಮಾಡಲು ರಾಜ್ಯಗಳಿಗೆ ಶಾಸನಬದ್ಧ ಅಧಿಕಾರ ಇರುವುದಿಲ್ಲ. ಆದ್ದರಿಂದ ಕ್ಲೇಮಿನಲ್ಲಿ ಹೇಳಿರುವುದು ತಪ್ಪಾಗುತ್ತದೆ.
Our Sources
Conversation with Chennakrishna, JDS party convener, Karnataka
Conversation with Advocate, Shreesha Uppangala
Constitution of India
The Gazette notification on ‘THE MOTOR VEHICLES (AMENDMENT) ACT, 2019’: Dated 9th August 2019
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.
Kushel HM
June 12, 2024
Ishwarachandra B G
April 1, 2024
Vasudha Beri
May 9, 2023
|