About: http://data.cimple.eu/claim-review/ea462577887e68ecdf64896de9b3e050934f6a9b6314a71bcd86ea82     Goto   Sponge   NotDistinct   Permalink

An Entity of Type : schema:ClaimReview, within Data Space : data.cimple.eu associated with source document(s)

AttributesValues
rdf:type
http://data.cimple...lizedReviewRating
schema:url
schema:text
  • Fact Check Fact Check: ಹಸಿ ಈರುಳ್ಳಿ ಮಜ್ಜಿಗೆ ಅನ್ನದೊಂದಿಗೆ ತಿನ್ನುವುದರಿಂದ ಆರೋಗ್ಯವಂತರಾಗಬಹುದೇ? Claim ಹಸಿ ಈರುಳ್ಳಿ ಮಜ್ಜಿಗೆ ಅನ್ನದೊಂದಿಗೆ ತಿನ್ನುವುದರಿಂದ ಆರೋಗ್ಯವಂತರಾಗಬಹುದು Fact ಈರುಳ್ಳಿ. ಮಜ್ಜಿಗೆ, ಅನ್ನ ಈ ಮೂರು ಉತ್ತಮ ಆಹಾರ ಪದ್ಧತಿಯ ಭಾಗವಾಗಬಹುದು. ಆದರೆ ಇವುಗಳ ಸಂಯೋಜನೆಯಿಂದ ಉತ್ತಮ ಆರೋಗ್ಯ, ವಿವಿಧ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಎನ್ನವುದಕ್ಕೆ ನಿರ್ದಿಷ್ಟ ಪುರಾವೆಗಳಿಲ್ಲ ದಿನಕ್ಕೆರಡು ಬಾರಿ ಮಜ್ಜಿಗೆ ಅನ್ನದೊಂದಿಗೆ ಈರುಳ್ಳಿ ತಿಂದರೆ ಸಾಕಷ್ಟು ಆರೋಗ್ಯ ಪ್ರಯೋಜನಗಳಿವೆ ಎಂದು ಪೋಸ್ಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿದೆ. ಫೇಸ್ಬುಕ್ನಲ್ಲಿ ಕಂಡುಬಂದ ಈ ಹೇಳಿಕೆಯಲ್ಲಿ ಮಜ್ಜಿಗೆ ಅನ್ನದೊಂದಿಗೆ ಈರುಳ್ಳಿಯನ್ನು ತಿನ್ನುವುದರಿಂದಾಗುವ ಪ್ರಯೋಜನವನ್ನು ಹೇಳಲಾಗಿದೆ. ಜೊತೆಗೆ ಹೀಗೆ ತಿನ್ನುವವರಿಗೆ ಆರೋಗ್ಯ ಚೆನ್ನಾಗಿ ಇರುತ್ತದೆ ಎಂದು ಹೇಳಲಾಗಿದೆ. Also Read: ದಿನನಿತ್ಯ ಖಾಲಿ ಹೊಟ್ಟೆಗೆ ಹುರಿದ ಬೆಳ್ಳುಳ್ಳಿ ತಿಂದರೆ ಮಧುಮೇಹ ನಿಯಂತ್ರಣದಲ್ಲಿಡಬಹುದೇ? ಈ ಬಗ್ಗೆ ನಾವು ಸತ್ಯಶೋಧನೆ ನಡೆಸಿದ್ದು, ಇದು ತಪ್ಪಾದ ಸಂದರ್ಭವನ್ನು ಹೊಂದಿದೆ ಎಂದು ತಿಳಿದುಬಂದಿದೆ. Fact Check/Verification ಎರಡೂ ಹೊತ್ತಿನ ಊಟಕ್ಕೆ ಹಸಿ ಈರುಳ್ಳಿ ಮಜ್ಜಿಗೆ ಅನ್ನದೊಂದಿಗೆ ಸೇವಿಸುವವರು ಆರೋಗ್ಯವಂತರಾಗಿ ಮುಂದುವರೆಯುತ್ತಾರೆ ಎಂಬ ಹೇಳಿಕೆಯನ್ನು ಬೆಂಬಲಿಸುವಂತೆ ಪೂರಕ ವೈಜ್ಞಾನಿಕ ಪುರಾವೆಗಳ ಕೊರತೆಯಿದೆ. ಈರುಳ್ಳಿ, ಮಜ್ಜಿಗೆ ಮತ್ತು ಅನ್ನ ಸಮತೋಲಿತ ಆಹಾರಕ್ಕೆ ಕೊಡುಗೆ ನೀಡಬಹುದು. ಈ ನಿರ್ದಿಷ್ಟ ಸಂಯೋಜನೆ ಅಥವಾ ಸೇವನೆಯ ಆವರ್ತನವು ಉತ್ತಮ ಆರೋಗ್ಯವನ್ನು ಖಾತರಿಪಡಿಸುತ್ತದೆ ಎಂದು ಸೂಚಿಸಲು ಯಾವುದೇ ನಿರ್ದಿಷ್ಟ ವೈಜ್ಞಾನಿಕ ಪುರಾವೆಗಳಿಲ್ಲ. ಈರುಳ್ಳಿ ಉರಿಯೂತ ತಡೆ, ಆಂಟಿ ಆಕ್ಸಿಡೆಂಟ್, ಸಕ್ಕರೆ ಕಾಯಿಲೆ ನಿರೋಧಕ, ಕ್ಯಾನ್ಸರ್ ನಿರೋಧಕ, ಅಲರ್ಜಿ ನಿರೋಧಕ, ಹೃದಯ ರಕ್ತನಾಳಗಳ ರಕ್ಷಣಾತ್ಮಕ, ಬ್ಯಾಕ್ಟೀರಿಯಾ ವಿರೋಧಿ ಅಂಶಗಳನ್ನು ಹೊಂದಿದೆ ಎಂಬ ಸಾಕ್ಷ್ಯಗಳಿವೆ ಹೊಂದಿದೆ. Also Read: ಗರ್ಭಿಣಿಯರಿಗೆ ಫೋಲಿಕ್ ಆಸಿಡ್ ಮಾತ್ರೆ ಬದಲಾಗಿ ಬೀಟ್ರೂಟ್, ಸಬ್ಬಸಿಗೆ ಸೊಪ್ಪು ಕೊಡಬಹುದೇ? ಅದೇ ರೀತಿ ಮಜ್ಜಿಗೆ ಅಗತ್ಯವಾದ ಬ್ಯಾಕ್ಟೀರಿಯಾ ಮತ್ತು ಹಾಲಿನ ಸಂಯುಕ್ತಗಳನ್ನು ಹೊಂದಿದ್ದು ಅದು ಒಟ್ಟಾರೆ ಉತ್ತಮ ಆರೋಗ್ಯವನ್ನು ಉತ್ತೇಜಿಸುತ್ತದೆ ಎಂಬ ಕುರಿತು ಸಾಕ್ಷ್ಯಗಳೂ ಇವೆ. ಮಜ್ಜಿಗೆ ಹೃದಯರಕ್ತನಾಳದ ಆರೋಗ್ಯವನ್ನು ಉತ್ತೇಜಿಸುತ್ತದೆ ಎಂಬುದಕ್ಕೆ ಪುರಾವೆ ಇದೆ. ಇನ್ನು ಅಕ್ಕಿ, ಮೆಗ್ನೀಸಿಯಮ್, ರಂಜಕ, ಮ್ಯಾಂಗನೀಸ್, ಸೆಲೆನಿಯಮ್, ಕಬ್ಬಿಣ, ಫೋಲಿಕ್ ಆಮ್ಲ, ಥಯಾಮಿನ್ ಮತ್ತು ನಿಯಾಸಿನ್ಗಳ ಉತ್ತಮ ಮೂಲವಾಗಿದೆ. ಆದರೆ ಇದರಲ್ಲಿ ನಾರಿನಂಶ ಮತ್ತು ಕೊಬ್ಬಿನಂಶ ಕಡಿಮೆ ಇರುತ್ತದೆ. ಆದಾಗ್ಯೂ, ಚಯಾಪಚಯ ಕ್ರಿಯೆಯನ್ನು ಬೆಳ್ತಿಗೆ ಅನ್ನ ಸ್ವಲ್ಪ ಮಟ್ಟಿಗೆ ವ್ಯತ್ಯಾಸಗೊಳಿಸಬಹುದು ಎಂಬುದಕ್ಕೆ ನಾವು ಪುರಾವೆಯನ್ನು ಕಂಡುಕೊಂಡಿದ್ದೇವೆ. ವಿವಿಧ ಅಂಶಗಳು ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ. ಆಹಾರ, ಜೀವನಶೈಲಿ, ತಳಿಶಾಸ್ತ್ರ ಇತ್ಯಾದಿಗಳೂ ಕಾರಣವಾಗುತ್ತವೆ. ಸಮತೋಲಿತ ಮತ್ತು ಪೌಷ್ಟಿಕ ಆಹಾರ ಎಂದರೆ ವಿಟಮಿನ್ಗಳು, ಖನಿಜಗಳು, ಫೈಬರ್ ಮತ್ತು ಪ್ರೋಟೀನ್ ಸೇರಿದಂತೆ ಪೋಷಕಾಂಶಗಳ ಶ್ರೇಣಿಯನ್ನು ತೆಗೆದುಕೊಳ್ಳುವುದನ್ನು ಖಚಿತಪಡಿಸಬೇಕಾಗುತ್ತದೆ. ಒಟ್ಟು ಆರೋಗ್ಯವನ್ನು ಬೆಂಬಲಿಸಲು ವೈವಿಧ್ಯಮಯ ಮತ್ತು ಸಮತೋಲಿತ ಆಹಾರವನ್ನು ಸೇವಿಸುವುದು ಅತ್ಯಗತ್ಯ. ಕೆಲವು ಜನರು ಹಸಿ ಈರುಳ್ಳಿ, ಮಜ್ಜಿಗೆ ಮತ್ತು ಅನ್ನವನ್ನು ತಮ್ಮ ದೈನಂದಿನ ಊಟದಲ್ಲಿ ಸೇರಿಸಿಕೊಳ್ಳಬಹುದು ಮತ್ತು ಉತ್ತಮ ಆರೋಗ್ಯವನ್ನು ಅನುಭವಿಸಬಹುದು. ಈ ಸಂಯೋಜನೆ ಮಾತ್ರ ಉತ್ತಮ ಆರೋಗ್ಯಕ್ಕೆ ಕಾರಣ ಎಂದು ಹೇಳಲು ಸಾಧ್ಯವಿಲ್ಲ. ಅವರ ಆರೋಗ್ಯವನ್ನು ನಿರ್ಣಯಿಸುವಾಗ ವ್ಯಕ್ತಿಯ ಸಂಪೂರ್ಣ ಆಹಾರ ಪದ್ಧತಿ ಮತ್ತು ಜೀವನಶೈಲಿಯ ಆಯ್ಕೆಗಳನ್ನು ಪರಿಗಣಿಸುವುದು ಅತ್ಯಗತ್ಯ. ಇದಲ್ಲದೆ, ಆಹಾರದ ಶಿಫಾರಸುಗಳು ವೈಜ್ಞಾನಿಕ ಸಂಶೋಧನೆಯನ್ನು ಆಧರಿಸಿರಬೇಕು ಮತ್ತು ವ್ಯಕ್ತಿಯ ನಿರ್ದಿಷ್ಟ ಪೌಷ್ಟಿಕಾಂಶದ ಅಗತ್ಯತೆಗಳು ಮತ್ತು ಆದ್ಯತೆಗಳಿಗೆ ಅನುಗುಣವಾಗಿರಬೇಕು. Also Read: ಗರ್ಭಿಣಿಯರು ಪ್ರತಿ ದಿನ ಬಾದಾಮಿ ತಿಂದರೆ ಹುಟ್ಟುವ ಮಕ್ಕಳ ಬುದ್ಧಿ ಚುರುಕಾಗುತ್ತದೆ ಎಂಬುದು ನಿಜವೇ? ನಿಮ್ಮ ಅಗತ್ಯತೆ ಮತ್ತು ಆರೋಗ್ಯ ಗುರಿಗಳಿಗೆ ನಿರ್ದಿಷ್ಟವಾದ ಪುರಾವೆ ಆಧಾರಿತ ಸಲಹೆಯನ್ನು ಒದಗಿಸಲು ಆರೋಗ್ಯ ವೃತ್ತಿಪರ ಅಥವಾ ನೋಂದಾಯಿತ ಆಹಾರ ತಜ್ಞರೊಂದಿಗೆ ಸಮಾಲೋಚಿಸುವುದು ಸೂಕ್ತವಾಗಿದೆ. Conclusion ಈ ಸತ್ಯಶೋಧನೆಯ ಪ್ರಕಾರ, ಹಸಿ ಈರುಳ್ಳಿ ಮಜ್ಜಿಗೆ ಅನ್ನದೊಂದಿಗೆ ತಿನ್ನುವುದರಿಂದ ಆರೋಗ್ಯವಂತರಾಗಬಹುದು ಎನ್ನುವುದಕ್ಕೆ ಸೂಕ್ತವಾದ ವೈಜ್ಞಾನಿಕ ಪುರಾವೆಯಿಲ್ಲ, ಈರುಳ್ಳಿ, ಮಜ್ಜಿಗೆ, ಅನ್ನದಲ್ಲಿ ಪ್ರತ್ಯೇಕವಾಗಿ ಪ್ರಯೋನಕಾರಿ ಅಂಶಗಳಿದ್ದರೂ ಸಂಯೋಜಿತ ಆಹಾರ ಪದ್ಧತಿಯಿಂದ ನಿರ್ದಿಷ್ಟವಾಗಿ ಪರಿಣಾಮವಾಗುತ್ತದೆ ಎನ್ನುವುದಕ್ಕೆ ಸಾಕ್ಷ್ಯಗಳಿಲ್ಲ. Results: Missing Context Our Sources Agriculture | Free Full-Text | Phenolic Components and Health Beneficial Properties of Onions (mdpi.com) (PDF) Buttermilk: Much more than a source of milk phospholipids (researchgate.net) Rice: Importance for Global Nutrition – PubMed (nih.gov) Is white rice consumption a risk for metabolic and cardiovascular outcomes? A systematic review and meta-analysis – PMC (nih.gov) Determinants of health (who.int) (This article has been published in collaboration with THIP Media) ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.
schema:mentions
schema:reviewRating
schema:author
schema:datePublished
schema:inLanguage
  • Hindi
schema:itemReviewed
Faceted Search & Find service v1.16.115 as of Oct 09 2023


Alternative Linked Data Documents: ODE     Content Formats:   [cxml] [csv]     RDF   [text] [turtle] [ld+json] [rdf+json] [rdf+xml]     ODATA   [atom+xml] [odata+json]     Microdata   [microdata+json] [html]    About   
This material is Open Knowledge   W3C Semantic Web Technology [RDF Data] Valid XHTML + RDFa
OpenLink Virtuoso version 07.20.3238 as of Jul 16 2024, on Linux (x86_64-pc-linux-musl), Single-Server Edition (126 GB total memory, 3 GB memory in use)
Data on this page belongs to its respective rights holders.
Virtuoso Faceted Browser Copyright © 2009-2025 OpenLink Software