schema:text
| - Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact checks doneFOLLOW US
Fact Check
Claim
ಅಯೋಧ್ಯೆ ರಾಮ ಮಂದಿರ ಉದ್ಘಾಟನೆಗೆ 25 ಸಾವಿರ ಹೋಮ ಕುಂಡಗಳು ಸಿದ್ಧವಾಗಿವೆ
Fact
ಇದು ಅಯೋಧ್ಯೆಯಲ್ಲಿ ನಿರ್ಮಾಣ ಮಾಡಿದ ಹೋಮಕುಂಡಗಳಲ್ಲ, ವಾರಾಣಸಿಯಲ್ಲಿ ಸ್ವರವೇದ ಜ್ಞಾನ ಮಹಾಯಜ್ಞಕ್ಕಾಗಿ ನಿರ್ಮಿಸಿದ 25 ಸಾವಿರ ಹೋಮ ಕುಂಡಗಳಾಗಿವೆ
ರಾಮ ಮಂದಿರ ಉದ್ಘಾಟನೆಯ ಸಂದರ್ಭಕ್ಕಾಗಿ ಅಯೋಧ್ಯೆಯಲ್ಲಿ 25 ಸಾವಿರ ಹೋಮ ಕುಂಡವನ್ನು ತಯಾರು ಮಾಡಲಾಗಿದೆ ಎಂದು ವೀಡಿಯೋ ಒಂದು ವೈರಲ್ ಆಗಿದೆ.
ಇನ್ಸ್ಟಾಗ್ರಾಂನಲ್ಲಿ ಕಂಡುಬಂದ ಈ ಕ್ಲೇಮಿನಲ್ಲಿ “ರಾಮ ಮಂದಿರ ಉದ್ಘಾಟನೆ ಪ್ರಯುಕ್ತ ಅಯೋಧ್ಯೆಯಲ್ಲಿ 25 ಸಾವಿರ ಹೋಮ ಕುಂಡ ತಯಾರು ಮಾಡಲಾಗಿದೆ” ಎಂದಿದೆ.
Also Read: ವಿಮಾನ ನಿಲ್ದಾಣ ಸಿಬ್ಬಂದಿ ಪ್ರಯಾಣಿಕರ ಹಣ ಕದಿಯುವ ವೀಡಿಯೋ, ಸತ್ಯ ಏನು?
ಈ ಬಗ್ಗೆ ನ್ಯೂಸ್ಚೆಕರ್ ಸತ್ಯಶೋಧನೆ ನಡೆಸಿದ್ದು, ಇದು ಸುಳ್ಳು ಎಂದು ಕಂಡುಬಂದಿದೆ.
ಸತ್ಯಶೋಧನೆಗಾಗಿ ನಾವು ವೈರಲ್ ವೀಡಿಯೋದ ಕೀಫ್ರೇಮ್ಗಳನ್ನು ತೆಗೆದು ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದೇವೆ.
ಈ ವೇಳೆ ಫಲಿತಾಂಶಗಳು ಲಭ್ಯವಾಗಿವೆ. ಡಿಸೆಂಬರ್ 18, 2023ರ ರಿಂಕೂ ರೈ ವ್ಲಾಗ್ಸ್ ಯೂಟ್ಯೂಬ್ ಚಾನೆಲ್ನಲ್ಲಿ ಈ ಹೋಮ ಕುಂಡಗಳು ವಾರಣಾಸಿಯ ಸ್ವರವೇದ ಮಹಾಮಂದಿರ ಧಾಮದ ಮಹಾಯಜ್ಞ ಕುಂಡಗಳು ಎಂದಿದೆ.
ಇದನ್ನು ಸಾಕ್ಷ್ಯವಾಗಿ ಪರಿಗಣಿಸಿ ನಾವು ಯೂಟ್ಯೂಬ್ನಲ್ಲಿ ಇನ್ನಷ್ಟು ಹುಡುಕಾಟ ನಡೆಸಿದ್ದೇವೆ. ಈ ವೇಳೆ ಡಿಸೆಂಬರ್ 12, 2023ರಂದು ಡಿಸ್ಕವರ್ ಬ್ರಾಜ್ ಚಾನೆಲ್ ನಲ್ಲಿ ಲಭ್ಯವಾದ ವೀಡಿಯೋ ವೈರಲ್ ವೀಡಿಯೋವನ್ನು ಹೋಲುತ್ತಿರುವುದನ್ನು ಕಂಡಿದ್ದೇವೆ.
ಇದನ್ನು ಸಾಕ್ಷ್ಯವಾಗಿ ಪರಿಗಣಿಸಿ ನಾವು ಇನ್ನಷ್ಟು ಹುಡುಕಾಟ ನಡೆಸಿದ್ದು, ಈ ವೇಳೆ ವಾರಾಣಸಿಯ ಸ್ವರವೇದ್ ಮಹಾ ಮಂದಿರದಲ್ಲಿ 25 ಸಾವಿರ ಹೋಮ ಕುಂಡಗಳಲ್ಲಿ ಮಹಾಯಜ್ಞ ನಡೆದಿರುವುದು ತಿಳಿದುಬಂದಿದೆ. ಮೇಲಿನ ವೀಡಿಯೋದ ದೃಶ್ಯಗಳು ಮತ್ತು ವೈರಲ್ ವೀಡಿಯೋದ ದೃಶ್ಯಗಳಿಗೆ ಸಾಮ್ಯತೆಗಳಿರುವುದನ್ನು ನಾವು ಗುರುತಿಸಿದ್ದೇವೆ. ಅವುಗಳನ್ನು ಇಲ್ಲಿ ನೋಡಬಹುದು.
Also Read: ಗ್ಯಾರೆಂಟಿ ಯೋಜನೆಗಳಿಗೆ ದುಡ್ಡು ಎಲ್ಲಿಂದ ತರಲಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆಯೇ?
ಡಿಸೆಂಬರ್ 17, 2023ರ ಜಾಗರಣ್ ವರದಿ ಪ್ರಕಾರ, “ಇಂದಿನಿಂದ ವಾರಾಣಸಿ ಸವರವೇದ ಮಹಾ ಮಂದಿರ ವಿಹಂಗಮ ಯೋಗ ಸಂತ ಸಮಾಜದ ಶತಮಾನೋತ್ಸವ ಸಮಾರಂಭ ನಡೆಯಲಿದೆ. ಈ ಸಂದರ್ಭ ದೇಶ-ವಿದೇಶದ ಭಕ್ತರು 25 ಸಾವಿರ ಕುಂಡೀಯ ಮಹಾಯಾಗವನ್ನು ಮಾಡಲಿದ್ದಾರೆ” ಎಂದಿದೆ.
ಡಿಸೆಂಬರ್ 19, 2023ರ ಅಮರ್ ಉಜಾಲಾ ವರದಿಯ ಪ್ರಕಾರ, “25000 ಕುಂಡೀಯ ಸ್ವರವೇದ ಜ್ಞಾನ ಮಹಾ ಯಜ್ಞ ಮುಕ್ತಾಯಗೊಂಡಿತು, ದೇಶ-ವಿದೇಶಗಳ ಭಕ್ತರು ಪಾಲ್ಗೊಂಡಿದ್ದರು” ಎಂದಿದೆ.
ಈ ಸಾಕ್ಷ್ಯಗಳ ಪ್ರಕಾರ, ವೈರಲ್ ಆಗಿರುವ ವೀಡಿಯೋ ವಾರಾಣಸಿಯಲ್ಲಿ ನಡೆದ ಸ್ವರವೇದ ಜ್ಞಾನ ಮಹಾಯಜ್ಞದ ಹೋಮ ಕುಂಡಗಳಾಗಿವೆ. ಇದು ಅಯೋಧ್ಯೆಯಲ್ಲಿ ರಾಮ ಮಂದಿರ ಸಮರ್ಪಣಾ ಕಾರ್ಯಕ್ರಮಕ್ಕೆ ನಿರ್ಮಾಣವಾದ್ದಲ್ಲ ಎಂದು ಗೊತ್ತಾಗಿದೆ.
Also Read: ರಾಜೀವ್ ಗಾಂಧಿ-ಸೋನಿಯಾ ನಿಖಾ ಮಾಡಿಕೊಂಡಿದ್ದಾರೆಯೇ?
Our Sources
YouTube Video By Rinkoo Rai Vlogs, Dated: December 18, 2023
YouTube Video By, Discover Braj, Dated: December 12, 2023
Report By Jagaran, Dated: December 17, 2023
Report By Amar Ujala, Dated: December 19, 20223
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.
Kushel HM
May 13, 2024
Ishwarachandra B G
February 3, 2024
Ishwarachandra B G
January 27, 2024
|