schema:text
| - Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact checks doneFOLLOW US
Fact Check
Claim
ನೀಟ್ ಪರೀಕ್ಷೆ ಅಕ್ರಮ ಆರೋಪಿಗಳು ದಿಯೋಘರ್ ಕಾಂಗ್ರೆಸ್ ಕಚೇರಿಯಲ್ಲೇ ತಲೆಮರೆಸಿದ್ದರು
Fact
ನೀಟ್ ಪರೀಕ್ಷೆ ಅಕ್ರಮ ಆರೋಪಿಗಳು ದಿಯೋಘರ್ ಕಾಂಗ್ರೆಸ್ ಕಚೇರಿಯಲ್ಲಿ ತಲೆಮರೆಸಿದ್ದು, ಅವರನ್ನು ಬಂಧಿಸಲಾಗಿದೆ ಎನ್ನುವುದು ಸುಳ್ಳಾಗಿದೆ. ಆರೋಪಿಗಳನ್ನು ದೇವಿಪುರದ ಏಮ್ಸ್ ಬಳಿಯ ಮನೆಯೊಂದರಿಂದ ಬಂಧಿಲಾಗಿದೆ
ನೀಟ್ ಪರೀಕ್ಷೆ ಅಕ್ರಮದ ಆರೋಪಿಗಳು ಕಾಂಗ್ರೆಸ್ ಕಚೇರಿಯಲ್ಲೇ ತಲೆ ಮರೆಸಿದ್ದರು ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹೇಳಿಕೆಗಳು ಹರಿದಾಡುತ್ತಿವೆ.
ಎಕ್ಸ್ ನಲ್ಲಿ ಕಂಡುಬಂದ ಹೇಳಿಕೆಯಲ್ಲಿ “ಆರು ಜನ ನೀಟ್ ಆರೋಪಿಗಳು ಜಾರ್ಖಂಡ್ನ ದಿಯೋಘರ್ನಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ತಲೆಮರೆಸಿಕೊಂಡಿದ್ದರು. ನೀಟ್ ಅಕ್ರಮವನ್ನು ಆಡಳಿತ ಪಕ್ಷದ ತಲೆಗೆ ಕಟ್ಟಲು ಹೊರಟ ಕಾಂಗ್ರೆಸ್… ತನ್ನ ಕಚೇರಿಯಲ್ಲೇ ಆರೋಪಿಗಳ ತಲೆಮರೆಸಿಟ್ಟಿದೆ.” ಎಂದಿದೆ.
Also Read: ಕರ್ನಾಟಕದಲ್ಲಿ ಜೈನ ಸನ್ಯಾಸಿಗೆ ಮುಸ್ಲಿಮರು ಥಳಿಸಿ ಕಾಂಗ್ರೆಸ್ ಜಿಂದಾಬಾದ್ ಘೋಷಣೆ ಕೂಗಿದ್ದಾರೆಯೇ, ಸತ್ಯ ಏನು?
ಆದಾಗ್ಯೂ, ನಮ್ಮ ತನಿಖೆಯಲ್ಲಿ ವೈರಲ್ ಹಕ್ಕು ಸಂಪೂರ್ಣವಾಗಿ ಸುಳ್ಳು ಎಂದು ನಾವು ಕಂಡುಕೊಂಡಿದ್ದೇವೆ. ದಿಯೋಘರ್ ಪೊಲೀಸರು ಮತ್ತು ದಿಯೋಘರ್ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಈ ಹೇಳಿಕೆಯನ್ನು ನಿರಾಕರಿಸಿದ್ದಾರೆ.
ನೀಟ್ ಪೇಪರ್ ಸೋರಿಕೆ ಪ್ರಕರಣದಲ್ಲಿ ಇದುವರೆಗೆ 5 ರಾಜ್ಯಗಳಿಂದ 27 ಜನರನ್ನು ಬಂಧಿಸಲಾಗಿದೆ. ಈ ಪೈಕಿ 13 ಮಂದಿಯನ್ನು ಬಿಹಾರದಿಂದ ಬಂಧಿಸಲಾಗಿದೆ. ಇದಲ್ಲದೆ ಗುಜರಾತ್ನಿಂದ 5 ಜನರನ್ನು ಬಂಧಿಸಲಾಗಿದೆ. ಮಹಾರಾಷ್ಟ್ರದಿಂದ ಇಬ್ಬರು, ಜಾರ್ಖಂಡ್ನಿಂದ 6 ಮತ್ತು ಪಶ್ಚಿಮ ಬಂಗಾಳದಿಂದ ಒಬ್ಬರನ್ನು ಬಂಧಿಸಲಾಗಿದೆ.
ಈ ವೀಡಿಯೋ 1 ನಿಮಿಷ 23 ಸೆಕೆಂಡ್ನದ್ದಾಗಿದ್ದು, ಇದರಲ್ಲಿ ಪೊಲೀಸರು ಕೆಲವರನ್ನು ಕರೆದುಕೊಂಡು ಹೋಗುತ್ತಿರುವುದು ಕಂಡುಬಂದಿದೆ. ಈ ವೇಳೆ ಕೆಲ ಮಾಧ್ಯಮದವರು ಆ ವ್ಯಕ್ತಿಗಳಿಗೆ ಪ್ರಶ್ನೆ ಕೇಳುವುದನ್ನೂ ಕಾಣಬಹುದು. ಸುದ್ದಿ ಸಂಸ್ಥೆ ANI ಯ ಲೋಗೋ ಮತ್ತು ಇಂಗ್ಲಿಷ್ನಲ್ಲಿ ಬರೆಯಲಾದ ಪಠ್ಯವೂ ವೀಡಿಯೋದಲ್ಲಿದೆ, “ನೀಟ್ ಪ್ರಕರಣದ ಆರು ಆರೋಪಿಗಳು ಜಾರ್ಖಂಡ್ನ ದಿಯೋಘರ್ ಕಾಂಗ್ರೆಸ್ ಕಚೇರಿಯಲ್ಲಿ ಅಡಗಿಕೊಂಡಿದ್ದರು.” ಎಂದು ವೀಡಿಯೋದ ಮೇಲೆ ಹಾಕಲಾದ ಇಂಗ್ಲಿಷ್ ಶೀರ್ಷಿಕೆಯಲ್ಲಿದೆ.
ವೈರಲ್ ವೀಡಿಯೊವನ್ನು ತನಿಖೆ ಮಾಡಲು ನ್ಯೂಸ್ಚೆಕರ್ ಮೊದಲು ANI ನ ಎಕ್ಸ್ ಖಾತೆಯನ್ನು ಹುಡುಕಿದೆ, ಏಕೆಂದರೆ ವೀಡಿಯೊದಲ್ಲಿ ANI ನ ಲೋಗೋ ಕಂಡುಬಂದಿದೆ. ಈ ವೇಳೆ ಜೂನ್ 23 ರಂದು ಪೋಸ್ಟ್ ಮಾಡಲಾದ ಈ ವೀಡಿಯೋವನ್ನು ನಾವು ಕಂಡುಕೊಂಡಿದ್ದೇವೆ .
ಈ ವೀಡಿಯೋದೊಂದಿಗೆ ಇಂಗ್ಲಿಷ್ ಶೀರ್ಷಿಕೆಯಲ್ಲಿ, “ಯುಜಿ ನೀಟ್ ಪ್ರಕರಣದಲ್ಲಿ ಬಂಧಿತರಾದ 6 ಆರೋಪಿಗಳನ್ನು ವೈದ್ಯಕೀಯ ಪರೀಕ್ಷೆಯ ನಂತರ ಪಾಟ್ನಾದ ಎಲ್ಎನ್ಜೆಪಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಬಿಹಾರ ಪೊಲೀಸರು ಜೂನ್ 21 ರಂದು ಜಾರ್ಖಂಡ್ನ ದಿಯೋಘರ್ನಲ್ಲಿ ಈ ಆರೋಪಿಗಳನ್ನು ಬಂಧಿಸಿದ್ದರು. ಆದರೆ, ಈ ಅವಧಿಯಲ್ಲಿ ಎಲ್ಲಿಯೂ ದಿಯೋಘರ್ ಕಾಂಗ್ರೆಸ್ ಕಚೇರಿಯ ಪ್ರಸ್ತಾಪ ಇರಲಿಲ್ಲ.
ಸಂಬಂಧಿತ ಕೀವರ್ಡ್ಗಳೊಂದಿಗೆ Google ಅನ್ನು ಹುಡುಕಿದಾಗ, ಜೂನ್ 23, 2024 ರಂದು ಲೈವ್ ಹಿಂದೂಸ್ತಾನ್ ವೆಬ್ಸೈಟ್ನಲ್ಲಿ ಪ್ರಕಟವಾದ ವರದಿಯನ್ನು ನಾವು ಕಂಡುಕೊಂಡಿದ್ದೇವೆ.
Also Read: ಶ್ರೀಲಂಕಾದ ಮುಸ್ಲಿಂ ವೈದ್ಯ 4 ಸಾವಿರ ಹಿಂದೂ-ಬೌದ್ಧ ಮಹಿಳೆಯರಿಗೆ ಮೋಸದ ಸಂತಾನಹರಣ ಮಾಡಿದ್ದು ನಿಜವೇ?
ಹಿಂದೂಸ್ತಾನ್ ವರದಿಯ ಪ್ರಕಾರ, ಬಿಹಾರ ಪೊಲೀಸ್ನ ಆರ್ಥಿಕ ಅಪರಾಧಗಳ ಘಟಕವು ನೀಟ್ ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿ ಡಿಯೋಘರ್ನ ದೇವಿಪುರ ಪೊಲೀಸ್ ಠಾಣೆ ವ್ಯಾಪ್ತಿಯ ಏಮ್ಸ್ ಬಳಿ ಇರುವ ಜುನ್ನು ಸಿಂಗ್ ಅವರ ಮನೆಯಿಂದ ಪ್ರಶಾಂತ್ ಕುಮಾರ್, ಅಜಿತ್ ಕುಮಾರ್, ಬಲದೇವ್ ಕುಮಾರ್, ಪಂಕು ಕುಮಾರ್, ಪರಮ್ಜಿತ್ ಸಿಂಗ್ ಮತ್ತು ರಾಜೀವ್ ಕುಮಾರ್ ಅವರನ್ನು ಬಂಧಿಸಿದೆ. ಆದರೆ, ಪ್ರಶಾಂತ್ ಕುಮಾರ್ ಮತ್ತು ಅಜಿತ್ ಕುಮಾರ್ ಕೃತ್ಯದಲ್ಲಿ ಭಾಗಿಯಾಗದ ಹಿನ್ನೆಲೆಯಲ್ಲಿ ಇಬ್ಬರನ್ನೂ ಜೈಲಿಗೆ ಕಳುಹಿಸಲಿಲ್ಲ ಮತ್ತು ವೈದ್ಯಕೀಯ ತಪಾಸಣೆಯ ನಂತರ ಉಳಿದ ನಾಲ್ವರು ಆರೋಪಿಗಳನ್ನು ಜೈಲಿಗೆ ಕಳುಹಿಸಲಾಗಿದೆ.
ಇದಲ್ಲದೆ, ಈ ವಿಷಯಕ್ಕೆ ಸಂಬಂಧಿಸಿದಂತೆ ದೈನಿಕ್ ಭಾಸ್ಕರ್ ವೆಬ್ಸೈಟ್ನಲ್ಲಿ ಪ್ರಕಟವಾದ ವರದಿಯನ್ನು ಸಹ ನಾವು ಕಂಡುಕೊಂಡಿದ್ದೇವೆ . ಈ ವರದಿಯಲ್ಲಿ ದಿಯೋಘರ್ ಸದರ್ ಎಸ್ಡಿಪಿಒ ರಿತ್ವಿಕ್ ಶ್ರೀವಾಸ್ತವ ಅವರ ಹೇಳಿಕೆ ಇದೆ. ರಿತ್ವಿಕ್ ಶ್ರೀವಾಸ್ತವ ಅವರ ಪ್ರಕಾರ, ಪೇಪರ್ ಸೋರಿಕೆ ಪ್ರಕರಣದಲ್ಲಿ ಪೊಲೀಸರು ಆರೋಪಿಯ ಮನೆಯಿಂದ ಆರು ಜನರನ್ನು ಬಂಧಿಸಿದ್ದರು. ಇದರಲ್ಲಿ ಬಿಹಾರದ ನಳಂದ ಜಿಲ್ಲೆಯ ನಿವಾಸಿಗಳಾದ ಪರಮ್ಜಿತ್ ಸಿಂಗ್ ಅಲಿಯಾಸ್ ಬಿಟ್ಟು, ಚಿಂಟು ಅಲಿಯಾಸ್ ಬಲದೇವ್ ಕುಮಾರ್, ಕಾಜು ಅಲಿಯಾಸ್ ಪ್ರಶಾಂತ್ ಕುಮಾರ್, ಅಜಿತ್ ಕುಮಾರ್, ರಾಜೀವ್ ಕುಮಾರ್ ಅಲಿಯಾಸ್ ಕರು ಮತ್ತು ಪಿಂಕು ಕುಮಾರ್ ಇದ್ದಾರೆ.
ಈ ಸಮಯದಲ್ಲಿ, NDTV ಯ ವೆಬ್ಸೈಟ್ನಲ್ಲಿ ಪ್ರಕಟವಾದ ವರದಿಯನ್ನೂ ಕಂಡುಕೊಂಡಿದ್ದೇವೆ . ಬಿಹಾರ ಪೊಲೀಸರ ಮಾಹಿತಿಯ ಮೇರೆಗೆ ದಿಯೋಘರ್ ಪೊಲೀಸರು ದೇವಿಪುರದ ಏಮ್ಸ್ ದಿಯೋಘರ್ ಬಳಿಯ ಮನೆಯೊಂದರಲ್ಲಿ ಆರು ಜನರನ್ನು ಬಂಧಿಸಿದ್ದಾರೆ ಎಂದು ಈ ವರದಿಯಲ್ಲಿದೆ. ಈ ವರದಿಗಳಲ್ಲಿ ದಿಯೋಘರ್ ಕಾಂಗ್ರೆಸ್ ಕಚೇರಿಯಿಂದ ಆರೋಪಿಗಳನ್ನು ಬಂಧಿಸಿರುವ ಬಗ್ಗೆ ಯಾವುದೇ ಉಲ್ಲೇಖವಿಲ್ಲ.
ನಮ್ಮ ತನಿಖೆಯ ಭಾಗವಾಗಿ ನಾವು ದಿಯೋಘರ್ನ ಸ್ಥಳೀಯ ಪತ್ರಕರ್ತರನ್ನು ಸಹ ಸಂಪರ್ಕಿಸಿದ್ದೇವೆ. ಬಿಹಾರ ಪೊಲೀಸರು ಮತ್ತು ದಿಯೋಘರ್ ಪೊಲೀಸರ ಜಂಟಿ ತಂಡವು ದೇವಿಪುರದ ಏಮ್ಸ್ ದಿಯೋಘರ್ ಬಳಿಯ ಅರ್ಧ ನಿರ್ಮಾಣವಾದ ಮನೆಯಿಂದ ನೀಟ್ ಪ್ರಕರಣದ ಸುಮಾರು 6 ಆರೋಪಿಗಳನ್ನು ಬಂಧಿಸಿದೆ ಎಂದು ಅವರು ಹೇಳಿದರು. ಆ ಮನೆ ಕಾಂಗ್ರೆಸ್ ಕಚೇರಿ ಅಲ್ಲ. ಬದಲಿಗೆ, ಅದು ಆರೋಪಿಗೆ ತಿಳಿದಿರುವ ವ್ಯಕ್ತಿಗೆ ಸೇರಿದೆ ಎಂದು ತಿಳಿಸಿದ್ದಾರೆ.
ನಾವು ದಿಯೋಘರ್ ಸದರ್ನ ಎಸ್ಡಿಪಿಒ, ರಿತ್ವಿಕ್ ಶ್ರೀವಾಸ್ತವ ಅವರನ್ನು ಸಹ ಸಂಪರ್ಕಿಸಿದ್ದೇವೆ. ನೀಟ್ ಪೇಪರ್ ಸೋರಿಕೆ ಪ್ರಕರಣದಲ್ಲಿ ದಿಯೋಘರ್ನಿಂದ ಬಂಧಿತರಾದ 6 ಜನರನ್ನು ದೇವಿಪುರದ ಏಮ್ಸ್ ಬಳಿಯ ಮನೆಯೊಂದರಿಂದ ಬಂಧಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಆರೋಪಿಗಳನ್ನು ಕಾಂಗ್ರೆಸ್ ಕಚೇರಿಯಿಂದಲೇ ಬಂಧಿಸಲಾಗಿದೆ ಎಂಬ ಮಾತು ಸಂಪೂರ್ಣ ಸುಳ್ಳು ಎಂದು ತಿಳಿಸಿದ್ದಾರೆ.
ನಮ್ಮ ತನಿಖೆಯನ್ನು ಖಚಿತಪಡಿಸಲು ನಾವು ದಿಯೋಘರ್ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪ್ರೊ.ಉದಯ್ ಪ್ರಕಾಶ್ ಅವರನ್ನೂ ಸಂಪರ್ಕಿಸಿದ್ದೇವೆ. ನೀಟ್ ಪ್ರಕರಣದಲ್ಲಿ ದಿಯೋಘರ್ ಕಾಂಗ್ರೆಸ್ ಕಚೇರಿಯಿಂದ ಯಾರನ್ನೂ ಬಂಧಿಸಲಾಗಿಲ್ಲ ಎಂದು ಅವರು ಹೇಳಿದರು. ಇದು ಸಂಪೂರ್ಣ ಸುಳ್ಳು ಸುದ್ದಿ, ಆರೋಪಿಗಳನ್ನು ದೇವಿಪುರದಿಂದ ಬಂಧಿಸಲಾಗಿದೆ ಎಂದು ಹೇಳಿದ್ದಾರೆ.
ದಿಯೋಘರ್ ಕಾಂಗ್ರೆಸ್ ಕಚೇರಿಯಿಂದ ನೀಟ್ ಪೇಪರ್ ಸೋರಿಕೆ ಆರೋಪಿಗಳನ್ನು ಬಂಧಿಸಲಾಗಿದೆ ಎಂಬ ಹೇಳಿಕೆಯು ಸುಳ್ಳು ಎಂದು ನಮ್ಮ ತನಿಖೆಯಲ್ಲಿ ದೊರೆತ ಸಾಕ್ಷ್ಯಗಳಿಂದ ಸ್ಪಷ್ಟವಾಗಿದೆ.
Also Read: ಇಂದೋರ್ ನಲ್ಲಿ ಈದ್ ದಿನ ಹಿಂದೂ ಮನೆಗಳ ಮೇಲೆ ಮುಸ್ಲಿಂ ಗುಂಪು ಕಲ್ಲೆಸೆದಿದೆ ಎಂದ ವೈರಲ್ ವೀಡಿಯೋ ಸತ್ಯವೇ?
Our Sources
Article Published by Live Hindustan Dated: 23rd June 2024
Article Published by Dainik Bhaskar Dated: 22nd June 2024
Article Published by NDTV Dated: 22nd June 2024
Conversation with Local Journalist from Deoghar
Conversation with Deoghar Sadar SDPO
Conversation with Deoghar Congress Head
(ಈ ಲೇಖನವನ್ನು ಮೊದಲು ನ್ಯೂಸ್ಚೆಕರ್ ಹಿಂದಿಯಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.
Ishwarachandra B G
November 30, 2024
Prasad Prabhu
November 29, 2024
Prasad Prabhu
November 27, 2024
|