About: http://data.cimple.eu/claim-review/fa33b6692ab9378555059ac3462712e54505043bac222a3cb9b0f6de     Goto   Sponge   NotDistinct   Permalink

An Entity of Type : schema:ClaimReview, within Data Space : data.cimple.eu associated with source document(s)

AttributesValues
rdf:type
http://data.cimple...lizedReviewRating
schema:url
schema:text
  • ಫ್ಯಾಕ್ಟ್ಚೆಕ್: ಭಾರತ್ ಮಾತಾ ಕೀ ಜೈ ಎಂದ ವೃದ್ದನಿಗೆ ಮುಸ್ಲಿಮರು ಹೊಡೆದಿದ್ದಾರೆ ಎಂಬ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ ಭಾರತ್ ಮಾತಾ ಕೀ ಜೈ ಎಂದ ವೃದ್ದನಿಗೆ ಮುಸ್ಲಿಮರು ಹೊಡೆದಿದ್ದಾರೆ ಎಂಬ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ Claim :ಮುಂಬೈನಲ್ಲಿ ʼಭಾರತ್ ಮಾತಾ ಕೀ ಜೈʼ ಎಂದು ಹೇಳಿದಂತಹ ವೃದ್ದನ ಮೇಲೆ ಮುಸ್ಲಿಂ ಗುಂಪೊಂದು ಹಲ್ಲೆ ನಡೆಸಿದೆ Fact :ವಿಡಿಯೋದಲ್ಲಿ ಕಾಣುವ ವೃದ್ದ ನೆರೆದಿದ್ದ ಜನರೊಂದಿಗೆ ಅನುಚಿತವಾಗಿ ವರ್ತಿಸಿದರಿಂದ ಸ್ಥಳೀಯರು ಥಳಿಸಿದ್ದಾರೆ. ಹಾಗೆ ವೈರಲ್ ಆದ ವಿಡಿಯೋ ಮುಂಬೈನದಲ್ಲ, ರಾಜಸ್ಥಾನದ್ದು. ʼಭಾರತ್ ಮಾತಾ ಕಿ ಜೈʼ ಎಂಬ ಘೋಷಣೆಯನ್ನು ರೂಪಿಸಿದ್ದು ಅಜೀಮುಲ್ಲಾ ಖಾನ್ ಎನ್ನುವ ಮುಸಿಂ ವ್ಯಕ್ತಿ. ಅದೇ ರೀತಿ ʼಜೈ ಹಿಂದ್ʼ ಎಂಬ ಘೋಷಣೆಯನ್ನು ಮೊದಲು ಕೂಗಿದ್ದು ರಾಜತಾಂತ್ರಿಕ ಅಧಿಕಾರಿಯಾಗಿದ್ದ ಅಬಿದ್ ಹಸನ್. ಐವತ್ತು ಉಪನಿಷತ್ತುಗಳನ್ನು ಸಂಸ್ಕೃತದಿಂದ ಪರ್ಷಿಕನ್ ಭಾಷೆಗೆ ಅನುವಾದ ಮಾಡಿಸಿ ಅದನದನು ಜಗತ್ತಿನ ಬೇರೆ ಬೇರೆ ಭಾಗ ಮುಟ್ಟಲು ನೆರವಾದವರು ಮೊಘಲ್ ದೊರೆ ಶಹಜಾನ್ ಮಗ ದಾರಾ ಶಿಖೋ. ಇದರ ಜೊತೆಗೆ ಮುಸ್ಲಿಮರು ಸಹ ಸ್ವಾತಂತ್ರ್ಯ ಹೋರಾಟದಲ್ಲಿಯೂ ಪ್ರಮುಖ ಪಾತ್ರವನ್ನು ವಹಿಸಿದ್ದರು. ಇತ್ತೀಚಿನ ದಿನಗಳಲ್ಲಿ ʼಭಾರತ್ ಮಾತಾ ಕಿ ಜೈʼ ಎಂಬ ಘೋಷಣೆ ವಿವಾದಕ್ಕೀಡಾಗಿದೆ. ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗಿದೆ. ವಿಡಿಯೋವಿನಲ್ಲಿ ಕೆಲವು ವ್ಯಕ್ತಿಗಳು ಒಬ್ಬ ವಯೋವೃದ್ದನ ಮೇಲೆ ಹಲ್ಲೆ ನಡೆಸುತ್ತಿರುವುದನ್ನು ನಾವು ನೋಡಬಹುದು. ಈ ವಿಡಿಯೋವನ್ನು ಮುಂಬೈನಲ್ಲಿ ಚಿತ್ರೀಕರಿಸಲಾಗಿದೆ ಎಂದು ಕಿಶೋರ್ ಎಂಬ ಎಕ್ಸ್ ಖಾತೆದಾರ ಆಗಸ್ಟ್ 9,2024ರಂದು ತನ್ನ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋವನ್ನು ಹಂಚಿಕೊಂಡು " ಭಾರತದಲ್ಲಿ ಭಾರತ ಮಾತೆಗೆ ಜೈ ಎನ್ನಲಾಗದ ಪರಿಸ್ಥಿತಿ ಬಂದಿದೆ. ವಿಡಿಯೋದಲ್ಲಿ ಕಾಣುವ ಘಟನೆ ಮುಂಬೈನ ಭಿಂಡಿ ಬಜಾರ್ನಲ್ಲಿ ನಡೆದಿದೆ. ಇದು ಭಾರತದಲ್ಲಿನ ಜಿಹಾದಿ ಮುಸಲ್ಮಾನರ ಒಕ್ಕಲಿಗ ಪ್ರದೇಶಗಳಲ್ಲಿ ಭಾರತ್ ಮಾತಾಕಿ ಜೈ ಎನ್ನುವ ಪರಿಸ್ಥಿತಿ. ಇದು ಇಸ್ಲಾಮಿಕ್ ದೇಶ ಅಲ್ಲ. ಇದು ಭಾರತದ ಮುದುಕನ ಪರಿಸ್ಥಿತಿ. ಈ ವಿಡಿಯೋವನ್ನು ಆದಷ್ಟು ಎಲ್ಲರಿಗೂ ಶೇರ್ ಮಾಡಿ" ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನನು ಹಂಚಿಕೊಂಡಿದ್ದಾರೆ. ಇದೇ ವಿಡಿಯೋವನ್ನು ಒಬ್ಬ ಇನ್ಸ್ಟಾಗ್ರಾಮ್ ಖಾತೆದಾರ ತನ್ನು ಖಾತೆಯಲ್ಲಿ ಆಗಸ್ಟ್ 6,2024ರಂದು ಹಂಚಿಕೊಂಡಿರುವುದನ್ನು ನಾವು ನೋಡಬಹುದು. ವಿಡಿಯೋವಿಗೆ ಶೀರ್ಷಿಕೆಯಾಗಿ "ಭಾರತ ಮಾತೆಗೆ ಜೈ ಎನ್ನಲಾಗದ ಪರಿಸ್ಥಿತಿ*ಘಟನೆ ಮುಂಬೈನ ಭಿಂಡಿ ಬಜಾರ್ನಲ್ಲಿ ನಡೆದಿದೆ. ಇದು ಭಾರತದಲ್ಲಿನ ಜಿಹಾದಿ ಒಕ್ಕಲಿಗ ಪ್ರದೇಶಗಳಲ್ಲಿ *ಭಾರತ್ ಮಾತಾಕಿ ಜೈ* ಎನ್ನುವ ಪರಿಸ್ಥಿತಿ. ಇದು ಇಸ್ಲಾಮಿಕ್ ದೇಶ ಅಲ್ಲ. ಇದು ಭಾರತದ ಮುದುಕನ ಪರಿಸ್ಥಿತಿ. ಈ ವಿಡಿಯೋವನ್ನು ಆದಷ್ಟು ಶೇರ್ ಮಾಡಿ ಸಾಧ್ಯ." ಎಂಬ ಶೀರ್ಷಿಕೆಯೊಂದಿಗೆ ಶೇರ್ ಮಾಡಿದ್ದಾರೆ. ಜುಲೈ,30 2024ರಂದು ಜ್ಯೋತಿರ್ಮಹಿ ಲೋಕೇಶ್ವರಿ ಬ್ರೋ ಎಂಬ ಎಕ್ಸ್ ಖಾತೆಯಲ್ಲಿ ಅನಿ_ಸನಾತನಿ ಎಂಬ ಖಾತೆಯಲ್ಲಿ ಹಂಚಿಕೊಂಡಿದ್ದ ವಿಡಿಯೋವನ್ನು ರೀಪೋಸ್ಟ್ ಮಾಡಿ ವಿಡಿಯೋವಿಗೆ ಶೀರ್ಷಿಕೆಯಾಗಿ "ದಯವಿಟ್ಟು ಈ ಪ್ರಕರಣದಲ್ಲಿ ಕ್ರಮ ಕೈಗೊಳ್ಳಿ. ನಾವು ಭಾರತೀಯರಾಗಿರುವುದಕ್ಕೆ ಹೆಮ್ಮೆಪಡುತ್ತೇವೆ" ಎಂಬ ಬರೆದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಮತ್ತು ಕೇಂದ್ರ ಗೃಹ ಸಚಿವರಾದಂತಹ ಅಮಿತ್ ಶಾರನ್ನು ಟ್ಯಾಗ್ ಮಾಡಿ ಪೋಸ್ಟ್ ಮಾಡಿದ್ದಾರೆ. ಆಗಸ್ಟ್ 22, 2024ರಂದು ಡಿಪಿನ್ ಭಟ್ ಎಂಬ ಎಕ್ಸ್ ಖಾತೆದಾರರ ತನ್ನ ಖಾತೆಯಲ್ಲಿ ವಿಡಿಯೋವನ್ನು ಶೇರ್ ಮಾಡಿ "ऐसी स्थिति जहां आप भारत माता की जय नहीं कह सकते घटना मुंबई के बिंदी बाजार की है, भारत में जिहादी मुस्लिम आक्रमणकारियों के क्षेत्रों में यही स्थिति है, भारत माता की जय ये कोई इस्लामिक देश नहीं है जी... ये है भारत के एक बूढ़े आदमी का हाल" ಎಂದು ಬರೆದ ಪೋಸ್ಟ್ ಮಾಡಿದ್ದಾನೆ. ಆತ ಹಂಚಿಕೊಂಡ ಪೋಸ್ಟ್ನ್ನು ನಾವು ಕನ್ನಡಕ್ಕೆ ಅನುವಾದಿಸಿದಾಗ "ಭಾರತ್ ಮಾತಾ ಕೀ ಜೈ ಎಂದು ಹೇಳಲಾಗದ ಪರಿಸ್ಥಿತಿ ಮುಂಬೈನ ಬಿಂದಿ ಬಜಾರ್ನಲ್ಲಿ ನೆಲೆಗೊಂಡಿದೆ. ಇದು ಭಾರತದಲ್ಲಿನ ಜಿಹಾದಿ ಮುಸ್ಲಿಂ ದಾಳಿಕೋರದಿರುವ ಪ್ರದೇಶಗಳ ಪರಿಸ್ಥಿತಿ, ಭಾರತ್ ಮಾತಾ ಕಿ ಜೈ, ಇದು ಇಸ್ಲಾಮಿಕ್ ದೇಶವಲ್ಲ. ಇಲ್ಲಿ ಭಾರತ್ ಮಾತಾ ಕಿ ಜೈ ಎಂದಿದ್ದಕ್ಕೆ ಮುದುಕನ ಸ್ಥಿತಿ ಹೀಗಾಗಿದೆ" ಎಂಬ ಶೀರ್ಷಿಕೆಯನ್ನೀಡಿ ಪೋಸ್ಟ್ ಮಾಡಿದ್ದಾರೆ. ಮತ್ತಷ್ಟು ಪೋಸ್ಟ್ಗಳನ್ನು ಇಲ್ಲಿ ನೋಡಬಹುದು ಫ್ಯಾಕ್ಟ್ಚೆಕ್ ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ವೈರಲ್ ಆದ ವಿಡಿಯೋ ಇತ್ತೀಚಿನದಲ್ಲ, 2019ರಲ್ಲಿ ನಡೆದ ಘಟನೆ. ರಸ್ತೆಯಲ್ಲಿ ಹೋಗುತ್ತಿದ್ದ ಜನರೊಂದಿಗೆ ಅನುಚಿತವಾಗಿ ವರ್ತಿಸಿದ್ದರಿಂದ ಅಲ್ಲಿನ ಜನರು ವೃದ್ದನನ್ನು ಥಳಿಸಿದ್ದರು. ವೈರಲ್ ಆದ ಸುದ್ದಿಯಲ್ಲಿ ಸತ್ಯಾಂಶವನ್ನು ತಿಳಿಯಲು ನಾವು ವಿಡಿಯೋವಿನಲ್ಲಿರುವ ಕೆವು ಪ್ರಮುಖ ಫ್ರೇಮ್ಗಳನ್ನು ಬಳಸಿ ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದೆವು. ಹುಡುಕಾಟದಲ್ಲಿ ನಮಗೆ, ಅಕ್ಟೋಬರ್ 19,2019ರಂದು ಮಂಜೀಂರ್ ಸಿಂಗ್ ಸಿರ್ಸಾ ಎಂಬ ಫೇಸ್ಬುಕ್ ಖಾತೆದಾರ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವೈರಲ್ ಆದ ಪೂರ್ತಿ ವಿಡಿಯೋವನ್ನು ನೋಡಿದರೆ, ವೃದ್ದ ʼಭಾರತ್ ಮಾತಾ ಕಿ ಜೈʼ ಎಂದು ಹೇಳುವ ಮುನ್ನ ಬಿಜೆಪಿ ವಿರುದ್ದ ಕೆವು ಅವಹೇಳನಾಕಾರಿ ಪದಗಳನ್ನು ಹೇಳಿರುವುದನ್ನು ನಾವು ಗಮನಿಸಬಹುದು. ಈ ಹೇಳಿಕೆಯ ನಂತರ "An elderly man was brutally attacked in Rajasthan's Azad Chowk Market Bhilwara! Very poor mentality of those who come to fight over the small thing of the elders and unarmed My request to Rajasthan Police and Chief Minister of Rajasthan - Case should be filed against the youngsters fighting in the video and arrested Rajasthan Police" ಎಂದು ಬರೆದು ಪೋಸ್ಟ್ ಮಾಡಿದ್ದರು. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ "ರಾಜಸ್ಥಾನದಲ್ಲಿನ ಭಿಲ್ವಾರದ ಆಜಾದ್ ಚೌಕ್ ಮಾರ್ಕೆಟ್ನಲ್ಲಿ ವೃದ್ಧೆಯೊಬ್ಬರ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಲಾಗಿದೆ! ವಿಡಿಯೋದಲ್ಲಿ ಹಲ್ಲೆ ಮಾಡುತ್ತಿರುವ ಜನರನ್ನು ಕೂಡಲೇ ಬಂಧಿಸಬೇಕೆಂದು ರಾಜಸ್ಥಾನ ಪೊಲೀಸರು ಮತ್ತು ರಾಜಸ್ಥಾನದ ಮುಖ್ಯಮಂತ್ರಿಗಳಿಗೆ ನನ್ನ ಮನವಿ ಎಂದು ಬರೆದು ಪೋಸ್ಟ್ ಮಾಡಿರುವುದನ್ನು ನಾವು ನೋಡಬಹುದು. https://www.facebook.com/share/v/Zj3r5XLFMxqMauBL/ ಸಾಮ್ ಎಂಬ ಎಕ್ಸ್ ಖಾತೆದಾರ ತನ್ನ ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಂಡು "yeh video bhilwara Rajasthan ke azad chowk ki h aur ye iske baad ki video " ಎಂಬ ಶೀರ್ಷಿಕೆಯನ್ನು ನೀಡಿ ಪೋಸ್ಟ್ ಮಾಡಿದ್ದನ್ನು ನಾವು ಕಂಡುಕೊಂಡೆವು ಇದನ್ನೇ ಸುಳಿವಾಗಿ ಬಳಸಿ ನಾವು ಗೂಗಲ್ ಮ್ಯಾಪ್ನಲ್ಲಿ "Lady Bag Shopee, Rajastanʼ" ಎಂದು ಹುಡುಕಿದೆವು. ಹುಡುಕಾಟದಲ್ಲಿ ನಮಗೆ ರಾಜಸ್ಥಾನದ ಭಿಲ್ವಾರದಲ್ಲಿರುವ ಆಜಾದ್ ಚೌಕ್ ಮಾರ್ಕೆಟ್ನಲ್ಲಿ ಈ ಅಂಗಡಿಯ ಹೆಸರಿರುವುದು ಖಚಿತವಾಯಿತು. ವೈರಲ್ ಆದ ವಿಡಿಯೋವಿನಲ್ಲಿ ಕಾಣುವ ಅಂಗಡಿಯ ಹೆಸರು ಮತ್ತು ಹಾಗೂ ಗೂಗಲ್ ಮ್ಯಾಪ್ನಲ್ಲಿ ಇರುವ ಅಂಗಡಿಯ ಹೆಸರು ಒಂದೇ ಇರುವುದನ್ನು ನಾವು ಈ ಚಿತ್ರದಲ್ಲಿ ಗಮನಿಸಬಹುದು. ಮತ್ತಷ್ಟು ಮಾಹಿತಿಯನ್ನು ಕಲೆಹಾಕಲು ನಾವು ಗೂಗಲ್ನಲ್ಲಿ ಹುಡುಕಾಟ ನಡೆಸಿದೆವು. ಅಕ್ಟೋಬರ್ 21, 2019ರಂದು ಮಂಜಿಂದರ್ ಸಿಂಗ್ ತನ್ನ ಎಕ್ಸ್ ಖಾತೆಯಲ್ಲಿ ಈ ಘಟನೆಗೆ ಸಂಬಂಧಿಸಿದ ವರದಿಯೊಂದನ್ನು ಹಂಚಿಕೊಂಡಿದ್ದನ್ನು ನಾವು ಕಂಡುಕೊಂಡೆವು. ಆ ವರದಿಯಲ್ಲಿ " ವೈರಲ್ ಆದ ವಿಡಿಯೋ ಅಕ್ಟೋಬರ್15, 2019ರಂದು ನಡೆದ ಘಟನೆ. ಜನರೊಂದಿಗೆ ಹೊಡೆಸಿಕೊಂಡ ವೃದ್ದನ ಹೆಸರು ಹಾಟ್ಮಂಡ್ ಸಿಂಧಿ, ಆತನ ಮಾನಸಿಕ ಸ್ಥಿತಿ ಸರಿಯಿರಲಿಲ್ಲ, ಆತ ದಾರಿಯಲ್ಲಿ ಹೋಗಿ ಬರುತ್ತಿದ್ದವರಿಗೆ ಕಿರುಕುಳ ನೀಡಿ ಬೈಯುತ್ತಿದ್ದನು. ಹೀಗಾಗಿ ಸ್ಥಳೀಯರು ಆತನನ್ನು ಹೊಡೆದಿದ್ದಾರೆ" ಎಂದು ವರದಿ ಮಾಡಿರುವುದನನು ನಾವು ಕಾಣಬಹುದು. ಇದೇ ವಿಡಿಯೋವನ್ನು ಕೆಲವರು "ಭಾರತ್ ಮಾತಾ ಕಿ ಜೈ" ಎಂದು ಹೇಳಿದ್ದಕ್ಕೆ ಮುಸ್ಲಿಂ ಯುವಕರು ಸಿಖ್ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ್ದರು ಎಂದು ಶೀರ್ಷಿಕೆಯೊಂದಿಗೆ 2019ರಲ್ಲಿ ಹಂಚಿಕೊಂಡಿದ್ದರು. ವಿಶ್ವಾಸ್ ನ್ಯೂಸ್ ತನ್ನ ಫ್ಯಾಕ್ಟ್ಚೆಕ್ ವರದಿಯಲ್ಲಿ ವೈರಲ್ ಆದ ಘಟನೆಗೆ ಸಂಬಂಧಿಸಿದ ಎಫ್ಐಆರ್ ಕಾಪಿಯನ್ನು ಹಂಚಿಕೊಂಡಿತ್ತು. ಆರೋಪಿಗಳಾದ ಮನೋಜ್, ಹೇಮಂತ್ ನಥಾನಿ, ಭಗವಾನ್ ದಾಸ್, ಮೇಜೂರ್ ಶೇಖ್ ಮತ್ತು ಇರ್ಫಾನ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿ ಮಾಡಿದ್ದನ್ನು ನಾವು ಇಲ್ಲಿ ನೋಡಬಹುದು ಹೀಗಾಗಿ ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲವೆಂದು ಸಾಭೀತಾಗಿದೆ. ವೈರಲ್ ಆದ ವಿಡಿಯೋ ಇತ್ತೀಚಿನದಲ್ಲ, 2019ರದ್ದು. ಅಷ್ಟೇ ಅಲ್ಲ ರಸ್ತೆಯಲ್ಲಿ ಹೋಗುತ್ತಿದ್ದ ಜನರೊಂದಿಗೆ ಅನುಚಿತವಾಗಿ ವರ್ತಿಸಿದ್ದ ಕಾರಣ ರಾಜಸ್ಥಾನದ ಆಜಾದ್ ಚೌಕ್ ಮಾರ್ಕೆಟ್ನ ಜನರು ವೃದ್ದನನ್ನು ಥಳಿಸಿದ್ದರು.
schema:mentions
schema:reviewRating
schema:author
schema:datePublished
schema:inLanguage
  • Telugu
schema:itemReviewed
Faceted Search & Find service v1.16.115 as of Oct 09 2023


Alternative Linked Data Documents: ODE     Content Formats:   [cxml] [csv]     RDF   [text] [turtle] [ld+json] [rdf+json] [rdf+xml]     ODATA   [atom+xml] [odata+json]     Microdata   [microdata+json] [html]    About   
This material is Open Knowledge   W3C Semantic Web Technology [RDF Data] Valid XHTML + RDFa
OpenLink Virtuoso version 07.20.3238 as of Jul 16 2024, on Linux (x86_64-pc-linux-musl), Single-Server Edition (126 GB total memory, 11 GB memory in use)
Data on this page belongs to its respective rights holders.
Virtuoso Faceted Browser Copyright © 2009-2025 OpenLink Software