schema:text
| - Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact checks doneFOLLOW US
Fact Check
Fact
ಹಿಂದೂಗಳ ಬಹಿಷ್ಕಾರಕ್ಕೆ ಬಕ್ರೀದ್ ಸಂದರ್ಭ ಬೆಂಗಳೂರಿನಲ್ಲಿ ಮುಸ್ಲಿಂ ಮೌಲ್ವಿ ಕರೆ
Claim
ಇದು ಬೆಂಗಳೂರಿನ ವೀಡಿಯೋ ಅಲ್ಲ, 2019ರಲ್ಲಿ ರಾಜಸ್ಥಾನದ ಬಾರ್ಮೇರ್ನಲ್ಲಿ ಅಪಘಾತ ಪ್ರಕರಣವೊಂದರ ಸಂದರ್ಭ ಪ್ರತಿಭಟನೆ ವೇಳೆ ಮೃತರ ಸಂಬಂಧಿಕರು ಆಕ್ರೋಶ ಭರಿತರಾಗಿ ಮಾತನಾಡಿದ ವೀಡಿಯೋ ಆಗಿದೆ.
ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಹಿಂದೂಗಳನ್ನು ಬಹಿಷ್ಕರಿಸಬೇಕು ಎಂದು ಮುಸ್ಲಿಂ ಧರ್ಮಗುರುವೊಬ್ಬರು ಕರೆ ನೀಡಿದ್ದಾರೆ ಎಂಬ ವೀಡಿಯೋ ವೈರಲ್ ಆಗಿದೆ.
ಹಿಂದೂಗಳನ್ನು ಬಹುಷ್ಕರಿಸಿದರೆ ಅಲ್ಲಾಹನು ನಮ್ಮನ್ನು ಜನ್ನತ್ ಗೆ ಅನುಮತಿಸುತ್ತಾನೆ ಎಂದು ಹೇಳಲಾಗಿದೆ. ಬಕ್ರೀದ್ ವೇಳೆ ಪ್ರಾರ್ಥನೆ ಬಳಿಕ ಹಿಂದೂಗಳಿಗೆ ಸಂಪೂರ್ಣ ಬಹಿಷ್ಕಾರ ಹಾಕಲು ಅವರು ಕರೆ ನೀಡಿದ್ದಾರೆ ಎಂದು ಹೇಳಲಾಗಿದೆ.
Also Read: ಮೋದಿ ಸರ್ಕಾರ ಸ್ತನ ಕ್ಯಾನ್ಸರ್ ಔಷಧ ಬೆಲೆಯನ್ನು ₹95 ಸಾವಿರದಿಂದ ₹5 ಸಾವಿರಕ್ಕೆ ಇಳಿಸಿದೆಯೇ?
ಈ ಕುರಿತ ಹೇಳಿಕೆಯನ್ನು ವಾಟ್ಸಪ್ ಬಳಕೆದಾರರೊಬ್ಬರು ನ್ಯೂಸ್ಚೆಕರ್ ವಾಟ್ಸಾಪ್ ಟಿಪ್ಲೈನ್ (+91-9999499044) ಗೆ ಕಳಿಸಿದ್ದು ಸತ್ಯಶೋಧನೆಗೆ ವಿನಂತಿಸಿದ್ದಾರೆ.
ಸತ್ಯಶೋಧನೆಗಾಗಿ ನಾವು ವೈರಲ್ ವೀಡಿಯೋದ ಕೀಫ್ರೇಂಗಳನ್ನು ತೆಗೆದು ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದೇವೆ. ಈ ವೇಳೆ ಫಲಿತಾಂಶಗಳು ಲಭ್ಯವಾಗಿದೆ.
ವಿ ದಿ ಪೀಪಲ್ ಹೆಸರಿನ ಟ್ವಿಟರ್ ಖಾತೆಯಿಂದ ಮಾರ್ಚ್ 14, 2023ರಂದು ಟ್ವೀಟ್ ಮಾಡಲಾಗಿದ್ದು, ಅದರಲ್ಲಿ “ಇಂದು ರಾಜಸ್ಥಾನದ ಬಾರ್ಮೆರ್ನಲ್ಲಿ ಮೌಲನಾ ಒಬ್ಬರು ಫತ್ವಾ ಹೊರಡಿಸಿದ್ದಾರೆ. ಆ ಪ್ರಕಾರ, ಜಾಟರು, ಗುರ್ಜಾರ್, ಚೌಧರ್ಯಾ ಮತ್ತಿರರ ವಾಹನಗಳಲ್ಲಿ ಕೂರಬಾರದು ಎಂದು ಹೇಳುತ್ತಾರೆ.” ಎಂದಿದೆ.
Also Read: ಫಾಸ್ಟ್ ಅಂಡ್ ಫ್ಯೂರಿಯಸ್ 8 ವೀಡಿಯೋಕ್ಕೆ ಫ್ರಾನ್ಸ್ ಹಿಂಸಾಚಾರದ ಲಿಂಕ್!
ಈ ಟ್ವೀಟ್ ಅನ್ನು ಕೂಲಂಕಷವಾಗಿ ಪರಿಶೀಲಿಸಿದಾಗ ಈ ಟ್ವೀಟ್ಗೆ ಬಾರ್ಮೆರ್ ಪೊಲೀಸರು ನೀಡಿದ ಪ್ರತಿಕ್ರಿಯೆ ಲಭ್ಯವಾಗಿದೆ. “ಮಾರ್ಚ್ 15, 2023ರಂದು ಬಾರ್ಮೆರ್ ಪೊಲೀಸರು ಮಾಡಿದ ಟ್ವೀಟ್ನಲ್ಲಿ “ಜೂನ್ 28 2019ರಂದು ರಾಜಸ್ಥಾನದ ಭೋಜರಿಯಾದ ನಿಜರದ್ ಪೊಲೀಸ್ ಠಾಣಾ ವ್ಯಾಪ್ತಿಯ ಗಾಗರಿಯಾ ಹಳ್ಳಿಯ ಪೆಟ್ರೋಲ್ ಪಂಪ್ ಎದುರು ಬಸ್ ಅಪಘಾತದಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು ಘಟನೆ ಹಿನ್ನೆಲೆಯಲ್ಲಿ ಮೃತರ ಸಂಬಂಧಿಕರು ಅಂತ್ಯಕ್ರಿಯೆ ಸಂದರ್ಭ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಮೃತರ ಸಂಬಂಧಿಕರೊಬ್ಬರು ಹೀಗೆ ಭಾಷಣ ಮಾಡಿದ್ದಾರೆ. ಈ ಬಗ್ಗೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗಿದೆ.” ಎಂದು ಹೇಳಲಾಗಿದೆ. ಈ ಟ್ವೀಟ್ ಇಲ್ಲಿದೆ.
ಈ ಟ್ವೀಟ್ ಲಭ್ಯತೆಯೊಂದಿಗೆ ನಾವು ಇನ್ನಷ್ಟು ಕೀವರ್ಡ್ ಸರ್ಚ್ ನಡೆಸಿದ್ದೇವೆ. ಈ ವೇಳೆ ಕರ್ನಾಟಕ ಪೊಲೀಸರು ಮಾಡಿದ ಟ್ವೀಟ್ ಲಭ್ಯವಾಗಿದೆ. ಕರ್ನಾಟಕ ರಾಜ್ಯ ಪೊಲೀಸ್ ಫ್ಯಾಕ್ಟ್ ಚೆಕ್ ಜೂನ್ 30, 2023ರಂದು ಟ್ವೀಟ್ ಮಾಡಿದ್ದು “ಹಿಂದೂಗಳಿಂದ ಸರಕುಗಳನ್ನು ಖರೀದಿಸದಂತೆ ಮುಸ್ಲಿಂ ವ್ಯಕ್ತಿಯೊಬ್ಬರು ಭಾಷಣ ಮಾಡುತ್ತಿರುವ ವಿಡಿಯೋ ಒಂದು ಇತ್ತೀಚೆಗೆ ವೈರಲ್ ಆಗಿರುವ ಕುರಿತು ಸತ್ಯ ಸಂಗತಿಗಳು” ಎಂದು ಹೇಳಿದೆ.
ಈ ಪೋಸ್ಟ್ ನಲ್ಲಿರುವ ಲಿಂಕ್ ನಮ್ಮನ್ನು ಕರ್ನಾಟಕ ಪೊಲೀಸ್ ಫ್ಯಾಕ್ಟ್ ಚೆಕ್ ವೆಬ್ಸೈಟ್ಗೆ ಕರೆದೊಯ್ದಿದೆ.
ಕರ್ನಾಟಕ ಸ್ಟೇಟ್ ಪೊಲೀಸ್ ಫ್ಯಾಕ್ಟ್ ಚೆಕ್ ಜೂನ್ 30, 2023ರಂದು ಪ್ರಕಟಿಸಿದ ವರದಿಯ ಪ್ರಕಾರ, “ಈ ವೀಡಿಯೋ ಟ್ವಿಟರ್ನಲ್ಲಿ ಮಾರ್ಚ್ 15, 2023ರಂದು ಶೇರ್ ಮಾಡಲಾಗಿದ್ದು, ಆದರೆ ನಿಜವಾಗಿ ಈ ವೀಡಿಯೋ 2019ರದ್ದು ಎಂದು ರಾಜಸ್ಥಾನದ ಬಾರ್ಮೆರ್ ಪೊಲೀಸರು ಟ್ವಿಟರ್ನಲ್ಲಿ ಉತ್ತರಿಸಿದ್ದಾರೆ.” ಎಂದಿದೆ.
ಆ ಪ್ರಕಾರ ನಾವು ಟ್ವೀಟರ್ನಲ್ಲಿ ಬಾರ್ಮೆರ್ ಪೊಲೀಸರ ಟ್ವೀಟ್ ಅನ್ನು ಪತ್ತೆ ಮಾಡಿದ್ದು, ವೈರಲ್ ವೀಡಿಯೋ ಕುರಿತಾಗಿ ನೀಡಿದ ಸ್ಪಷ್ಟೀಕರಣ ಲಭ್ಯವಾಗಿದೆ.
Also Read: ಸರ್ಕಾರಕ್ಕೆ ಒಂದು ತಿಂಗಳು, ಐದು ಗ್ಯಾರೆಂಟಿಗಳಲ್ಲಿ ಕಾಂಗ್ರೆಸ್ ಈಡೇರಿಸಿದ್ದೆಷ್ಟು?
ಈ ಸತ್ಯಶೋಧನೆಯ ಪ್ರಕಾರ, ಇದು ಬೆಂಗಳೂರಿನಲ್ಲಿ ಬಕ್ರೀದ್ ಸಂದರ್ಭ ಮಾಡಿದ ದ್ವೇಷ ಭಾಷಣವಲ್ಲ ಮತ್ತು ಈ ಕುರಿತ ಹೇಳಿಕೆ ತಪ್ಪಾಗಿದೆ.
Our Sources
Tweet By Barmer Police, Dated: March 15, 2023
Tweet By Karnataka state police Fact check, Dated: June 30, 2023
Report By Karnataka state police Fact Check, Dated: June 30, 2023
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.
Ishwarachandra B G
December 21, 2024
Ishwarachandra B G
December 20, 2024
Ishwarachandra B G
December 14, 2024
|