About: http://data.cimple.eu/claim-review/0824189e6ecc724d666677e3b4a607cba04c7da7a034bfe877b90551     Goto   Sponge   NotDistinct   Permalink

An Entity of Type : schema:ClaimReview, within Data Space : data.cimple.eu associated with source document(s)

AttributesValues
rdf:type
http://data.cimple...lizedReviewRating
schema:url
schema:text
  • Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check Contact Us: checkthis@newschecker.in Fact checks done FOLLOW USFact Check Claim ಪೊಲೀಸರ ಮೇಲೆ ಖಡ್ಗದಿಂದ ಹಲ್ಲೆ ನಡೆಸಿದ ರೈತ ಪ್ರತಿಭಟನಕಾರರು Fact ಪಂಜಾಬ್ ನ ತಾರ್ನ್ ತರಣ್ ನ ಗುರುದ್ವಾರ ಆವರಣದಿಂದ ಸಿಖ್ ಪ್ರತ್ಯೇಕತಾವಾದಿ ಜರ್ನೈಲ್ ಸಿಂಗ್ ಭಿಂದ್ರನ್ವಾಲೆ ಪೋಸ್ಟರ್ ಅನ್ನು ತೆಗೆದುಹಾಕಿದ ನಂತರ ನಡೆದ ಪ್ರತಿಭಟನೆಯ ವೀಡಿಯೋವನ್ನು ರೈತರ ಪ್ರತಿಭಟನೆಯದ್ದು ಎಂದು ಹಂಚಿಕೊಳ್ಳಲಾಗುತ್ತಿದೆ. ಪೇಟ ಧರಿಸಿದ ಪುರುಷರ ಗುಂಪು ಪೊಲೀಸ್ ಅಧಿಕಾರಿಗಳೊಂದಿಗೆ ಘರ್ಷಣೆ ನಡೆಸುತ್ತಿರುವುದನ್ನು ಮತ್ತು ಕಾರನ್ನು ಧ್ವಂಸಗೊಳಿಸುವ ವೀಡಿಯೋವೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಹದಿನೈದು ಸೆಕೆಂಡುಗಳ ಈ ವೀಡಿಯೋದಲ್ಲಿ ಖಡ್ಗ ಹಿಡಿದ ವ್ಯಕ್ತಿಯೊಬ್ಬ ಪೊಲೀಸರ ಮೇಲೆ ದಾಳಿ ನಡೆಸುತ್ತಿರುವುದನ್ನು ಕಾಣಬಹುದು. ವೀಡಿಯೋ ಹಂಚಿಕೊಂಡ ಅನೇಕ ಬಳಕೆದಾರರು ಇದನ್ನು ಈಗ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಲಿಂಕ್ ಮಾಡಿದ್ದಾರೆ ಮತ್ತು “ಧಾರ್ಮಿಕ ಉದ್ದೇಶಕ್ಕಾಗಿ ಮಾತ್ರ ಖಡ್ಗ ಹಿಡಿಯಲು ಅನುಮತಿ ಇದ್ದರೂ ಅದನ್ನು ಬಳಕೆ ಮಾಡಿದ ರೈತ ಎಂದು ಹೇಳಿಕೊಳ್ಳಲಾದ ವ್ಯಕ್ತಿಯನ್ನು ಅವರು ಪ್ರಶ್ನಿಸಿದ್ದಾರೆ. Also Read: ರೈತರ ಅನ್ನದ ಪಾತ್ರೆಗೆ ಗುಂಡೇಟು ಬಿದ್ದಿದೆ ಎಂಬುದು ನಿಜವೇ? ಆದರೆ ಈ ವೀಡಿಯೋ ರೈತರ ಪ್ರತಿಭಟನೆಗೆ ಮೊದಲೇ ನಡೆದಿದ್ದು, ಬೇರೆ ಘಟನೆಗೆ ಸಂಬಂಧಿಸಿದ್ದಾಗಿದೆ. ಇದನ್ನೀಗ ಸುಳ್ಳು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ ಎಂದು ನ್ಯೂಸ್ಚೆಕರ್ ಕಂಡುಕೊಂಡಿದೆ. ಎಕ್ಸ್ ಮತ್ತು ಫೇಸ್ಬುಕ್ ತಾಣಗಳ ಹೊರತಾಗಿ, ಈ ವೀಡಿಯೋ ಯೂಟ್ಯೂಬ್ನಲ್ಲಿಯೂ ಕಾಣಿಸಿಕೊಂಡಿದೆ. ಈ ರೀತಿಯ ಪೋಸ್ಟ್ ಗಳನ್ನು ಇಲ್ಲಿ, ಇಲ್ಲಿ, ಇಲ್ಲಿ, ಇಲ್ಲಿ, ಇಲ್ಲಿ ಮತ್ತು ಇಲ್ಲಿ ಕಾಣಬಹುದು. ವೈರಲ್ ವೀಡಿಯೊದ ಕೀಫ್ರೇಮ್ ಗಳನ್ನು ತೆಗೆದು, ನಾವು ಗೂಗಲ್ ಲೆನ್ಸ್ ಮೂಲಕ ಹುಡುಕಾಟ ನಡೆಸಿದ್ದೇವೆ. ಈ ವೇಳೆ ಜನವರಿ 31, 2024 ರ @_majhe_wale_bhau1984 ಅವರ ಇನ್ಸ್ಟಾಗ್ರಾಮ್ ಪೋಸ್ಟ್ ಕಂಡುಬಂದಿದೆ. ಇದರಲ್ಲಿ ವೈರಲ್ ಆಗಿರುವ ಕ್ಲಿಪ್ ಕೂಡ ಇದೆ. ಇನ್ನೊಬ್ಬರು ಇನ್ಸ್ಟಾಗ್ರಾಮ್ ಬಳಕೆದಾರರು ಅದೇ ದಿನ ವೀಡಿಯೋ ತುಣುಕನ್ನು ಹಂಚಿಕೊಂಡಿದ್ದರು. ಆದ್ದರಿಂದ ಈ ವೀಡಿಯೋ ಫೆಬ್ರವರಿ 13 ರಂದು ಶುರುವಾದ ರೈತರ ದೆಹಲಿ ಚಲೋ ಆರಂಭಕ್ಕೆ ಮೊದಲಿನದ್ದು ಎಂದು ತೀರ್ಮಾನಿಸಲು ಕಾರಣವಾಗಿದೆ. ಅನಂತರ, ಕ್ಲಿಪ್ ಹೊಂದಿರುವ ಪೋಸ್ಟ್ಗಳ ಕಾಮೆಂಟ್ ವಿಭಾಗವನ್ನು ನಾವು ನೋಡಿದ್ದೇವೆ ಮತ್ತು ಅನೇಕ ಬಳಕೆದಾರರು ಇದು ಹಳೆಯ ವೀಡಿಯೋ ಮತ್ತು ರೈತರ ಪ್ರತಿಭಟನೆಗೆ ಸಂಬಂಧಿಸಿದ್ದಲ್ಲ ಎಂದು ಗಮನಸೆಳೆದಿದ್ದಾರೆ. ಅಂತಹ ಒಬ್ಬ ಬಳಕೆದಾರರು ಈ ತುಣುಕು ಪಂಜಾಬ್ನ ಪಹುವಿಂಡ್ ನಿಂದ ಬಂದಿದೆ ಎಂದು ಬರೆದುಕೊಂಡಿದ್ದಾರೆ. Also Read: ರಾಷ್ಟ್ರಧ್ವಜ ಅವಮಾನಿಸಿದ ರೈತರು ಎಂದು ಕೆನಡಾ ವೀಡಿಯೋ ವೈರಲ್ ಆ ಪ್ರಕಾರ ನಾವು ಗೂಗಲ್ ನಲ್ಲಿ ಕೀವರ್ಡ್ ಸರ್ಚ್ ನಡೆಸಿದ್ದು, ಜನವರಿ 29, 2024 ರ ಜಾಗರಣ್ ವರದಿ ಲಭ್ಯವಾಗಿದೆ. “ಸಿಖ್ ಪ್ರತ್ಯೇಕತಾವಾದಿ ಜರ್ನೈಲ್ ಸಿಂಗ್ ಭಿಂದ್ರನ್ ವಾಲೆ ಪೋಸ್ಟರ್ ತೆಗೆದುಹಾಕಲಾಗಿದೆ ಎಂದು ಆರೋಪಿಸಿ ಪಂಜಾಬ್ ನ ತಾರ್ನ್ ತರಣ್ ನಲ್ಲಿರುವ ಗುರುದ್ವಾರ ನಿರ್ವಹಣಾ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರ ಮೇಲೆ ಗುಂಪೊಂದು ಹಲ್ಲೆ ನಡೆಸಿದೆ” ಎಂದು ಅದು ಹೇಳಿದೆ. “ತಾರ್ನ್ ತರಣ್ ನ ಪಹುವಿಂಡ್ ಗ್ರಾಮದಲ್ಲಿ ಭಿಂದ್ರನ್ ವಾಲೆ ಪೋಸ್ಟರ್ ಹೊಂದಿರುವ ಟೆಂಟ್ ಅನ್ನು ತೆಗೆದುಹಾಕುವುದನ್ನು ತೋರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಈ ಘಟನೆ ಬೆಳಕಿಗೆ ಬಂದಿದೆ” ಎಂದು ಅವರು ಹೇಳಿದರು. ಇದರೊಂದಿಗೆ ನಾವು ಜಾಗರಣ್ ವರದಿಯಲ್ಲಿರುವ ಫೋಟೋವನ್ನು ಮತ್ತು ವೈರಲ್ ವೀಡಿಯೋದ ಕೀಫ್ರೇಂಗಳನ್ನು ಗಮನಿಸಿದ್ದೇವೆ. ಇವುಗಳಿಗೂ ಸಾಮ್ಯತೆ ಇರುವುದನ್ನು ಗುರುತಿಸಿದ್ದೇವೆ.ವರದಿಗಳ ಪ್ರಕಾರ, ಭಿಂದ್ರನ್ ವಾಲೆ ಅವರ ಪೋಸ್ಟರ್ ಅನ್ನು ತೆಗೆದುಹಾಕುವ ವೀಡಿಯೋ ವೈರಲ್ ಆದ ನಂತರ, ಅನೇಕ ಸಿಖ್ ಮುಖಂಡರು ಗುರುದ್ವಾರವನ್ನು ತಲುಪಿ ಆಡಳಿತ ಮಂಡಳಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಅವರು ಗುರುದ್ವಾರ ಸಮಿತಿ ಅಧ್ಯಕ್ಷ ಕರ್ನಲ್ ಹರ್ಸಿಮ್ರನ್ ಸಿಂಗ್ (ನಿವೃತ್ತ) ಅವರ ಕಾರನ್ನು ಧ್ವಂಸಗೊಳಿಸಿದರು. ಈ ವಿಷಯವನ್ನು ಸೌಹಾರ್ದಯುತವಾಗಿ ಪರಿಹರಿಸಲಾಗಿದೆ ಎಂದು ತಾರ್ನ್ ತರಣ್ ನ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್ಪಿ) ಪ್ರೀತ್ ಇಂದರ್ ಸಿಂಗ್ ಹೇಳಿದ್ದಾರೆ. ಇದಲ್ಲದೆ, ಗೂಗಲ್ನಲ್ಲಿ ” “Bhindranwale poster” ಮತ್ತು ” Tarn Taran clash” ಬಗ್ಗೆ ಕೀವರ್ಡ್ ಹುಡುಕಾಟದಲ್ಲಿ ನ್ಯೂಸ್ 18 ಪಂಜಾಬ್ / ಹರಿಯಾಣ / ಹಿಮಾಚಲದ ಜನವರಿ 29, 2024 ರ ಘಟನೆಯ ವೀಡಿಯೋ ವರದಿ ಲಭ್ಯವಾಗಿದೆ. ನ್ಯೂಸ್ 18 ಪಂಜಾಬ್ / ಹರಿಯಾಣ / ಹಿಮಾಚಲ ವರದಿಯಲ್ಲಿ ಕಾಣಿಸಿಕೊಂಡಿರುವ ವೀಡಿಯೋ ಮತ್ತು ವೈರಲ್ ವೀಡಿಯೋದ ಕೀಫ್ರೇಮ್ಗಳನ್ನು ಹೋಲಿಸಿದಾಗ, ಎರಡೂ ಒಂದೇ ಘಟನೆಯದ್ದು ಎಂದು ನಾವು ತೀರ್ಮಾನಿಸಬಹುದು. ಪಂಜಾಬ್ ನ ತಾರ್ನ್ ತರಣ್ ನ ಗುರುದ್ವಾರ ಆವರಣದಿಂದ ಸಿಖ್ ಪ್ರತ್ಯೇಕತಾವಾದಿ ಜರ್ನೈಲ್ ಸಿಂಗ್ ಭಿಂದ್ರನ್ವಾಲೆ ಪೋಸ್ಟರ್ ಅನ್ನು ತೆಗೆದುಹಾಕಿದ ನಂತರ ನಡೆದ ಪ್ರತಿಭಟನೆಯ ವೀಡಿಯೋವನ್ನು ರೈತರ ಪ್ರತಿಭಟನೆಗೆ ತಪ್ಪಾಗಿ ಲಿಂಕ್ ಮಾಡಲಾಗಿದೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ. Also Read: ಡಿಎಂಕೆ ಶಾಸಕ ಮನ್ಸೂರ್ ಮೊಹಮ್ಮದ್ ದಿಮಿರ್ ಅವರಿಂದ ಪೊಲೀಸ್ ಮೇಲೆ ಹಲ್ಲೆ ಎನ್ನುವುದು ನಿಜವೇ? Our Sources: Instagram post by @_majhe_wale_bhau1984, Dated: January 31, 2024 Report By Jagran, Dated: January 29, 2024 YouTube Video By News18 Punjab/Haryana/Himachal, Dated: January 29, 2024. (ಈ ಲೇಖನವನ್ನು ಮೊದಲು ನ್ಯೂಸ್ಚೆಕರ್ ಇಂಗ್ಲಿಷ್ ನಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ) ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು. Ishwarachandra B G March 2, 2024 Ishwarachandra B G February 27, 2024 Ishwarachandra B G February 24, 2024
schema:mentions
schema:reviewRating
schema:author
schema:datePublished
schema:inLanguage
  • Hindi
schema:itemReviewed
Faceted Search & Find service v1.16.115 as of Oct 09 2023


Alternative Linked Data Documents: ODE     Content Formats:   [cxml] [csv]     RDF   [text] [turtle] [ld+json] [rdf+json] [rdf+xml]     ODATA   [atom+xml] [odata+json]     Microdata   [microdata+json] [html]    About   
This material is Open Knowledge   W3C Semantic Web Technology [RDF Data] Valid XHTML + RDFa
OpenLink Virtuoso version 07.20.3238 as of Jul 16 2024, on Linux (x86_64-pc-linux-musl), Single-Server Edition (126 GB total memory, 11 GB memory in use)
Data on this page belongs to its respective rights holders.
Virtuoso Faceted Browser Copyright © 2009-2025 OpenLink Software