About: http://data.cimple.eu/claim-review/0c99433f3bf1ac48d2c9245b3cbe93e45dd101eacbed163c85bdf139     Goto   Sponge   NotDistinct   Permalink

An Entity of Type : schema:ClaimReview, within Data Space : data.cimple.eu associated with source document(s)

AttributesValues
rdf:type
http://data.cimple...lizedReviewRating
schema:url
schema:text
  • ಫ್ಯಾಕ್ಟ್ಚೆಕ್: 2025ರ ಮಹಾ ಕುಂಭಮೇಳದಲ್ಲಿ ಬಿಲ್ಗೇಟ್ಸ್ ಕಾಣಿಸಿಕೊಂಡಿಲ್ಲ 2025ರ ಮಹಾ ಕುಂಭಮೇಳದಲ್ಲಿ ಬಿಲ್ಗೇಟ್ಸ್ ಕಾಣಿಸಿಕೊಂಡಿಲ್ಲ Claim :ಮಹಾಕುಂಭ ಮೇಳದ ಸಮಯದಲ್ಲಿ ಕಾಶಿ ವಿಶ್ವನಾಥ ಮಂದಿರದಲ್ಲಿ ಕಾಣಿಸಿಕೊಂಡ ಬಿಲ್ ಗೇಟ್ಸ್ Fact :ವೈರಲ್ ವಿಡಿಯೋದಲ್ಲಿ ಕಾಣುವ ವ್ಯಕ್ತಿ ಬಿಲ್ಗೇಟ್ಸ್ರನ್ನು ಹೋಲುವ ವ್ಯಕ್ತಿ ಅಷ್ಟೇ ಕುಂಭಮೇಳ ಎನ್ನುವುದು ಜಗತ್ತಿನಲ್ಲೇ ಅತೀ ದೊಡ್ಡ ಸಂಖ್ಯೆಯಲ್ಲಿ ಜನ ಸೇರುವ ಧಾರ್ಮಿಕ ಹಾಗೂ ಸಾಂಸ್ಕೃತಿಕ ಮೇಳವಾಗಿದೆ. ಉತ್ತರಪ್ರದೇಶದ 9 ಪ್ರಯಾಗ್ ರಾಜ್ನಲ್ಲಿ ಪ್ರತಿ 12ವರ್ಷಗಳಿಗೊಮ್ಮೆ ಕುಂಭಮೇಳ ನಡೆಯುತ್ತದೆ. ಹೀಗೆ ಭಾರತದಲ್ಲಿ ಕುಂಭಮೇಳ ನಡೆಯುವ ನಾಲ್ಕು ಪವಿತ್ರ ಸ್ಥಳಗಳಿವೆ. ಅವು ಯಾವುದೆಂದರೆ ಪ್ರಯಾಗ್ ರಾಜ್, ಹರಿದ್ವಾರ, ಉಜೈನ್ ಹಾಗೂ ನಾಸಿಕ್. ಈ ವರ್ಷ ಪ್ರಯಾಗ್ ರಾಜ್ ನಲ್ಲಿ ಕುಂಭಮೇಳ ನಡೆಯುತ್ತಿದೆ. ಕುಂಭಮೇಳ ಜಗತ್ತಿನಲ್ಲೇ ಅತೀ ದೊಡ್ಡ ಸಂಖ್ಯೆಯಲ್ಲಿ ಜನ ಸೇರುವ ಧಾರ್ಮಿಕ ಹಾಗೂ ಸಾಂಸ್ಕೃತಿಕ ಮೇಳವಾಗಿದೆ. ಈ ವರ್ಷ ಪ್ರಯಾಗ್ ರಾಜ್ನಲ್ಲಿ ಕುಂಭಮೇಳ ನಡೆಯುತ್ತಿದೆ. ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಲು ಭಾರತದ ಮೂಲೆ ಮೂಲೆಯ ಭಕ್ತರು ಮಾತ್ರವಲ್ಲದೇ, ಬ್ರೆಜಿಲ್, ಜರ್ಮನಿ, ಜಪಾನ್, ಇಂಗ್ಲೆಂಡ್, ಅಮೇರಿಕಾ ಮತ್ತು ಸ್ಪೇನ್ನಂತಹ ದೇಶದ ನಿವಾಸಿಗಳು ಕೂಡ ಆಗಮಿಸುತ್ತಿದ್ದಾರೆ. ವಿದೇಶಿ ಗಣ್ಯರು ಕೂಡ ಮಹಾ ಕುಂಭಮೇಳದಲ್ಲಿ ಭಾಗಿಯಾಗುತ್ತಿದ್ದು, ಮಹಾ ಕುಂಭ ಮೇಳ ಪ್ರಪಂಚದಾದ್ಯಂತ ಸದ್ದು ಮಾಡುತ್ತಿದೆ. ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಕೂಡಾ ಭಾಗಿಯಾಗಿದ್ದಾರೆ ಎಂಬ ಶೀರ್ಷಿಕೆಯೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗಿದೆ. 2025ರ ಮಹಾ ಕುಂಭಮೇಳ ನಡೆಯುವ ಈ ಸಂದರ್ಭದಲ್ಲಿ ವಾರಣಾಸಿಯಲ್ಲಿರುವ ಕಾಶಿ ವಿಶ್ವನಾಥ ಮಂದಿರಕ್ಕೆ ಅವರು ಭೇಟಿ ನೀಡಿದ್ದಾರೆ ಎಂದು ಈ ವಿಡಿಯೊ ಹೇಳಿಕೊಳ್ಳುತ್ತವೆ. ಜನವರಿ 14, 2025ರಂದು ʼಡೈನಾಮೈಟ್ ನ್ಯೂಸ್ʼ ಎಂಬ ಯೂಟ್ಯೂಬ್ ಖಾತೆದಾರ ತನ್ನ ಆಖತೆಯಲ್ಲಿ ;बाबा की शरण में पहुंचे दुनिया के सबसे अमीर आदमी | Bill Gates | Maha Kumbh 2025|; ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ ವೈರಲ್ ಆದ ವಿಡಿಯೋವಿನ ಸ್ಕ್ರೀನ್ಶಾಟ್ನ್ನು ನೀವಿಲ್ಲಿ ನೋಡಬಹುದು ಜನವರಿ 16, 2025ರಂದು ʼಟಿಎಲ್ಜೆ ಜರ್ನಲಿಸ್ಟ್ʼ ಎಂಬ ಫೇಸ್ಬುಕ್ ಖಾತೆಯಲ್ಲಿ ʼYesterday Bill Gates came to Varanasi & visited Maha Kumbh Mela for the first time. #TLJSHORTSʼ ಎಂಬ ಶೀರ್ಷಿಕೆಯನ್ನೀಡಿ ಪೋಸ್ಟ್ ಮಾಡಿದ್ದಾರೆ. ನಿನ್ನೆ ಬಿಲ್ ಗೇಟ್ಸ್ ವಾರಣಾಸಿಗೆ ಬಂದರು ಮತ್ತು ಮೊದಲ ಬಾರಿಗೆ ಮಹಾ ಕುಂಭಮೇಳಕ್ಕೆ ಭೇಟಿ ನೀಡಿದರು. #TLJSHORTS ಎಂಬ ಹ್ಯಾಷ್ಟ್ಯಾಗ್ನ್ನೀಡಿ ಪೋಸ್ಟ್ ಮಾಡಿದ್ದಾರೆ. ಜನವರಿ 15, 2025ರಂದು ʼಪಿಂಕ್ವಿಲ್ಲಾʼ ಎಂಬ ಫೇಸ್ಬುಕ್ ಖಾತೆಯಲ್ಲಿ ʼA global icon at a spiritual landmark. Bill Gates was spotted at the Kashi Vishwanath Mandir during the Maha Kumbh, adding an international touch to this sacred occasionʼ ಎಂಬ ಕ್ಯಾಪ್ಷನ್ ನೀಡಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಆಧ್ಯಾತ್ಮಿಕ ಹೆಗ್ಗುರುತಾಗಿ ಜಾಗತಿಕ ಐಕಾನ್! ಮಹಾಕುಂಭ ಮೇಳದ ಸಮಯದಲ್ಲಿ ಕಾಶಿ ವಿಶ್ವನಾಥ ಮಂದಿರದಲ್ಲಿ ಬಿಲ್ ಗೇಟ್ಸ್ ಕಾಣಿಸಿಕೊಂಡರು, ಈ ಪವಿತ್ರ ಸಂದರ್ಭಕ್ಕೆ ಅಂತರರಾಷ್ಟ್ರೀಯ ಸ್ಪರ್ಶವನ್ನು ಸೇರಿಸಿದರುʼ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಇದೇ ವಿಡಿಯೋವನ್ನು ʼಕರ್ಲೀ ಟೇಲ್ಸ್ʼ ಎಂಬ ಫೇಸ್ಬುಕ್ ಖಾತೆಯಲ್ಲಿ ʼWorld’s Richest Man Bill Gates Explores Spirituality At Kashi Vishwanath Mandir During The Maha Kumbh Melaʼ ಎಂಬ ಶೀರ್ಷಿಕೆಯನ್ನೀಡಿ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಮಹಾಕುಂಭಮೇಳದ ಸಂದರ್ಭದಲ್ಲಿ ಕಾಶಿ ವಿಶ್ವನಾಥ ಮಂದಿರದಲ್ಲಿ ಆಧ್ಯಾತ್ಮಿಕತೆಯನ್ನು ಅನ್ವೇಷಿಸಿದ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಬಿಲ್ ಗೇಟ್ಸ್ʼ ಎಂದು ಬರೆದಿರುವುದನ್ನು ನೋಡಬಹುದು. ಮತ್ತಷ್ಟು ವಿಡಿಯೋಗಳನ್ನು ನೀವಿಲ್ಲಿ, ಇಲ್ಲಿ ನೋಡಬಹುದು ಫ್ಯಾಕ್ಟ್ಚೆಕ್ ವೈರಲ್ ಆದ ಸುದ್ದಿ ಸಾಮಾಜಿಕ ಜಾಲತಾಣದ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. 2025ರ ಮಹಾ ಕುಂಭಮೇಳ ನಡೆಯುವ ಈ ಸಂದರ್ಭದಲ್ಲಿ ಬಿಲ್ಗೇಟ್ಸ್ ವಾರಣಾಸಿಯಲ್ಲಿರುವ ಕಾಶಿ ವಿಶ್ವನಾಥ ಮಂದಿರಕ್ಕೆ ಭೇಟಿ ನೀಡಿದ್ದಾರೆ ಎಂಬ ಹೇಳಿಕೆಯಲ್ಲಿ ಯಾವುದೇ ಸತ್ಯಾಂಶವಿಲ್ಲ. ವಾಸ್ತವವಾಗಿ ವೈರಲ್ ಆದ ವಿಡಿಯೋದಲ್ಲಿ ಕಾಣುವ ವ್ಯಕ್ತಿ ಬಿಲ್ಗೇಟ್ಸ್ರನ್ನು ಹೋಲುವ ವ್ಯಕ್ತಿ ಅಷ್ಟೇ. ನಾವು ವೈರಲ್ ಆದ ಸುದ್ದಿಯಲ್ಲಿನ ಸತ್ಯಾಂಶವನ್ನು ತಿಳಿಯಲು ವಿಡಿಯೋವಿನ ಕೆಲವು ಪ್ರಮುಖ ಕೀಫ್ರೇಮ್ಗಳನ್ನು ಬಳಸಿ ಗೂಗಲ್ ರಿವರ್ಸ್ ಇಮೇಜ್ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ಟಿಲ್ಗೇಟ್ಸ್ ಭಾರತಕ್ಕೆ ಬಂದಿರುವುದಾಗಲೀ ಮಹಾ ಕುಂಭಮೇಳದ ಸ್ಥಳಕ್ಕೆ ಭೇಟಿ ನೀಡಿರುವ ಬಗ್ಗೆ ಯಾವುದೇ ವರದಿಗಳು ಕಂಡುಬಂದಿಲ್ಲ. ಬದಲಿಗೆ ನಮಗೆ ಡಿಸಂಬರ್ 24, 2024ರಂದು ʼಗುಲ್ಲಕ್ʼ ಎಂಬ ಯೂಟ್ಯೂಬ್ ಖಾತೆಯಲ್ಲಿ ʼA man look like bill gates #worldrichestman #duplicatebillgates#billgates #Americanʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದರೆ, ʼಬಿಲ್ಗೇಟ್ಸ್ನಂತೆ ಹೋಲುವ ವ್ಯಕ್ತಿʼ ಎಂಬ ಶೀರ್ಷಿಕೆಯನ್ನೀಡಿ ವಿಡಿಯೋವನ್ನು ಹಂಚಿಕೊಂಡಿರುವುದನ್ನು ನೋಡಬಹುದು. ಮತ್ತೊಂದು ನಾವಿಲ್ಲಿ ಗಮನಿಸ ಬಹುದಾಗಿದ್ದೇನೆಂದರೆ ವೈರಲ್ ಆದ ವಿಡಿಯೋ ಕಳೆದ ವರ್ಷ ಡಿಸಂಬರ್ನಲ್ಲಿ ಹಂಚಿಕೊಳ್ಳಲಾಗಿದೆ ಆದರೆ ಪ್ರಯಾಗ್ರಾಜ್ನಲ್ಲಿ ಮಹಾ ಕುಂಭಮೇಳ ಜನವರಿ 14ರಂದು ಆರಂಭವಾಗಿದೆ. ಇದರಿಂದ ಸಾಭೀತಾಗಿದ್ದೇನೆಂದರೆ ವೈರಲ್ ಆದ ವಿಡಿಯೋ ಕುಂಭಮೇಳ ಆಯೋಜನೆಗೂ ಮುನ್ನವೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ. ಗುಲ್ಲಕ್ ಚಾನೆಲ್ನಲ್ಲಿ ರೆಕಾರ್ಡ್ ಮಾಡುತ್ತಿದ್ದ ವ್ಯಕ್ತಿ ಮಾತನಾಡುವುದನ್ನು ಕೇಳಬಹುದು ʼಈ ವ್ಯಕ್ತಿ ಯಾರೆಂದು ಕಂಡುಹಿಡಿಯಿರಿ, ಈತ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಭೇಟಿ ನೀಡಿದ್ದಾನೆ ಎಂದು ಹೇಳಿ ತನ್ನ ಸ್ನೇಹಿತನಿಗೆ ಕಡೆ ಕ್ಯಾಮರಾವನ್ನು ತಿರುಗಿಸಿದಾಗ ಆತ ನಗುವುದನ್ನು ನೋಡಬಹುದು. ಇದರಿಂದ ತಿಳಿಯುವುದೇನೆಂದರೆ, ಈ ವಿಡಿಯೋವನ್ನು ಕೇವಲ ಮನರಂಜನೆಗಾಗಿ ಮಾಡಲಾಗಿದೆ ಎಂದು ಸ್ಪಷ್ಟವಾಗಿದೆ. ಇನ್ನಷ್ಟು ಮಾಹಿತಿಯನ್ನು ಕಲೆಹಾಕಲು ನಾವು ಗೂಗಲ್ ರಿವರ್ಸ್ ಇಮೇಜ್ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ನಾವು ಗೂಗಲ್ ಮ್ಯಾಪ್ನ ಸಹಾಯದಿಂದ ವೈರಲ್ ವೀಡಿಯೊದಲ್ಲಿ ಕಂಡುಬರುವ ದೇವಾಲಯವನ್ನು ಜಿಯೋಲೊಕೇಟ್ನ್ನು ಉಪಯೋಗಿಸಿ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ವೈರಲ್ ಆದ ವೀಡಿಯೊದಲ್ಲಿ ಕಂಡುಬರುವ ದೇವಾಲಯವು ವಾರಣಾಸಿಯ ಮಣಿಕರ್ಣಿಕಾ ಘಾಟ್ನದ್ದು ಎಂದು ಸಾಭಿತಾಯಿತು ಹಾಗೆ ನಾವು ಬಿಲ್ಗೇಟ್ಸ್ನ ಮೂಲ ಚಿತ್ರವನ್ನು ಹಾಗೂ ವೈರಲ್ ಆದ ವಿಡಿಯೋವಿನಲ್ಲಿ ಕಾಣುವ ವ್ಯಕ್ತಿಯ ಚಿತ್ರವನ್ನು ಹೋಲಿಸಿದೆವು. ಹೋಲಿಕೆಯಲ್ಲಿ ಸ್ವಲ್ಪ ಸಮನಾಗಿದ್ದರೂ ಅವರು ಬಿಲ್ಗೇಟ್ಸ್ ಅಲ್ಲ ಎಂದು ಹಂಡು ಹಿಡಿಯಬಹುದು ಇದರಿಂದ ಸಾಭೀತಾಗಿದ್ದೇನೆಂದರೆ, ವೈರಲ್ ಆದ ಸುದ್ದಿ ಸಾಮಾಜಿಕ ಜಾಲತಾಣದ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. 2025ರ ಮಹಾ ಕುಂಭಮೇಳ ನಡೆಯುವ ಈ ಸಂದರ್ಭದಲ್ಲಿ ಬಿಲ್ಗೇಟ್ಸ್ ವಾರಣಾಸಿಯಲ್ಲಿರುವ ಕಾಶಿ ವಿಶ್ವನಾಥ ಮಂದಿರಕ್ಕೆ ಭೇಟಿ ನೀಡಿದ್ದಾರೆ ಎಂಬ ಹೇಳಿಕೆಯಲ್ಲಿ ಯಾವುದೇ ಸತ್ಯಾಂಶವಿಲ್ಲ. ವಾಸ್ತವವಾಗಿ ವೈರಲ್ ಆದ ವಿಡಿಯೋದಲ್ಲಿ ಕಾಣುವ ವ್ಯಕ್ತಿ ಬಿಲ್ಗೇಟ್ಸ್ರನ್ನು ಹೋಲುವ ವ್ಯಕ್ತಿ ಅಷ್ಟೇ.
schema:mentions
schema:reviewRating
schema:author
schema:datePublished
schema:inLanguage
  • Telugu
schema:itemReviewed
Faceted Search & Find service v1.16.115 as of Oct 09 2023


Alternative Linked Data Documents: ODE     Content Formats:   [cxml] [csv]     RDF   [text] [turtle] [ld+json] [rdf+json] [rdf+xml]     ODATA   [atom+xml] [odata+json]     Microdata   [microdata+json] [html]    About   
This material is Open Knowledge   W3C Semantic Web Technology [RDF Data] Valid XHTML + RDFa
OpenLink Virtuoso version 07.20.3238 as of Jul 16 2024, on Linux (x86_64-pc-linux-musl), Single-Server Edition (126 GB total memory, 11 GB memory in use)
Data on this page belongs to its respective rights holders.
Virtuoso Faceted Browser Copyright © 2009-2025 OpenLink Software