schema:text
| - Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact checks doneFOLLOW US
Fact Check
Claim
ರಕ್ತದ ಸಹಾಯವಾಣಿ 104 ನ್ನು ದೇಶಾದ್ಯಂತ ಪರಿಚಯಿಸಲಾಗಿದೆ
Fact
ರಕ್ತದ ಸಹಾಯವಾಣಿ ಮಹಾರಾಷ್ಟ್ರದಲ್ಲಿದ್ದು, ದೇಶದ ಬೇರೆ ಕಡೆಗಳಲ್ಲಿಲ್ಲ. ಕರ್ನಾಟಕದಲ್ಲಿ 104 ಸಹಾಯವಾಣಿ ಕೋವಿಡ್ ಕುರಿತಾಗಿ ಬಳಕೆಯಲ್ಲಿದೆ
ರಕ್ತದ ಸಹಾಯವಾಣಿ 104 ನ್ನು ದೇಶಾದ್ಯಂತ ಪರಿಚಯಿಸಲಾಗಿದೆ ಎಂದು ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ವಾಟ್ಸಾಪ್ ನಲ್ಲಿ ಕಂಡುಬಂದ ಈ ಸಂದೇಶದಲ್ಲಿ “ಸರ್ಕಾರದ ಹೊಸ ಯೋಜನೆ.. ಇಂದಿನಿಂದ “104” ಭಾರತದಲ್ಲಿ ರಕ್ತದ ಬೇಡಿಕೆಯ ವಿಶೇಷ ಸಂಖ್ಯೆಯಾಗಲಿದೆ”. “Blood On Call” ಎಂಬುದು ಸೇವೆಯ ಹೆಸರು. ಈ ಸಂಖ್ಯೆಗೆ ಕರೆ ಮಾಡಿದ ನಂತರ, 40 ಕಿಮೀ ವ್ಯಾಪ್ತಿಯೊಳಗೆ, ರಕ್ತವನ್ನು ನಾಲ್ಕು ಗಂಟೆಗಳ ಒಳಗೆ ತಲುಪಿಸಲಾಗುತ್ತದೆ.. ಪ್ರತಿ ಬಾಟಲಿಗೆ ರೂ. 450/- ಮತ್ತು ಸಾಗಣೆಗೆ ರೂ. 100/-. ದಯವಿಟ್ಟು ಈ ಸಂದೇಶವನ್ನು ನೀವು ಸಂಪರ್ಕದಲ್ಲಿರುವ ಇತರ ಸ್ನೇಹಿತರು, ಸಂಬಂಧಿಕರು ಮತ್ತು ಗುಂಪಿಗೆ ಫಾರ್ವರ್ಡ್ ಮಾಡಿ. ಈ ಸೌಲಭ್ಯದ ಮೂಲಕ ಅನೇಕ ಜೀವಗಳನ್ನು ಉಳಿಸಬಹುದು” ಎಂದಿದೆ.
Also Read : ಅಯೋಧ್ಯೆ ರಾಮ ಮಂದಿರ ಉದ್ಘಾಟನೆಗೆ 25 ಸಾವಿರ ಹೋಮ ಕುಂಡಗಳು ಸಿದ್ಧವಾಗಿವೆಯೇ?
ಇದರ ಬಗ್ಗೆ ಸತ್ಯಶೋಧನೆಗಾಗಿ ಬಳಕೆದಾರರೊಬ್ಬರು ನ್ಯೂಸ್ ಚೆಕರ್ ಟಿಪ್ ಲೈನ್ಗೆ ದೂರನ್ನು ಸಲ್ಲಿಸಿದ್ದು ಅದನ್ನು ಅಂಗೀಕರಿಸಲಾಗಿದೆ.
ಸತ್ಯಶೋಧನೆಗಾಗಿ ನಾವು ಕರ್ನಾಟಕದಲ್ಲಿ ಆ ರೀತಿಯ ಯೋಜನೆಯಿದೆಯೇ ಎಂಬ ಬಗ್ಗೆ ಹುಡುಕಾಟ ನಡೆಸಿದ್ದೇವೆ. ಈ ವೇಳೆ ಕಂಡುಬಂದಿದ್ದೇನೆಂದರೆ, 104 ಹೆಸರಲ್ಲಿ ಕೋವಿಡ್ ಸಹಾಯವಾಣಿ ಇದೆ ಎಂದು ಗೊತ್ತಾಗಿದೆ. 104 (ಆರೋಗ್ಯ ಸಹಾಯ- ಹೆಲ್ತ್ ಹೆಲ್ಪ್ ಲೈನ್) ಹೆಸರಲ್ಲಿದೆ.
ಇದು ಹೊರತಾಗಿ, ತಮಿಳುನಾಡು, ತೆಲಂಗಾಣ, ಬಿಹಾರ, ಛತ್ತೀಸ್ಗಢ, ಗೋವಾ, ಗುಜರಾತ್, ಹಿಮಾಚಲ ಪ್ರದೇಶ, ಜಾರ್ಖಂಡ್, ಮಧ್ಯಪ್ರದೇಶ, ಪಂಜಾಬ್, ಸಿಕ್ಕಿಂ, ಉತ್ತರಾಖಂಡ ಮತ್ತು ಪುದುಚೇರಿ, ಲಕ್ಷದ್ವೀಪ, ದಾದ್ರಾ, ನಗರ್ ಹವೇಲಿ ಮತ್ತು ದಿಯು ಮತ್ತು ದಮನ್ ಸೇರಿದಂತೆ ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೋವಿಡ್ ಸಹಾಯವಾಣಿ ಸಂಖ್ಯೆಯಾಗಿ 104ನ್ನು ಬಳಸಲಾಗುತ್ತಿದೆ.
ಆ ಬಳಿಕ ನಾವು ಗೂಗಲ್ ನಲ್ಲಿ ಸರ್ಚ್ ನಡೆಸಿದ್ದು, ಬ್ಲಡ್ ಆನ್ ಕಾಲ್ ಸೇವೆ ಮಹಾರಾಷ್ಟ್ರದಲ್ಲಿ ಲಭ್ಯವಿದೆ ಎಂಬ ಬಗ್ಗೆ ತಿಳಿದುಕೊಂಡಿದ್ದೇವೆ. ಜನವರಿ 7, 2014ರ ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಬ್ಲಡ್ ಆನ್ ಕಾಲ್ ಸೇವೆಯನ್ನು ಮಹಾರಾಷ್ಟ್ರದಲ್ಲಿ ಪರಿಚಯಿಸಲಾಗಿದೆ. ಇದಕ್ಕಾಗಿ ಪುಣೆಯ ಔಂಧ್ ಸಿವಿಲ್ ಆಸ್ಪತ್ರೆಯಲ್ಲಿ ಕಾಲ್ ಸೆಂಟರ್ ತೆರೆಯಲಾಗಿದ್ದು, ಜನರು 104ಕ್ಕೆ ಡಯಲ್ ಮಾಡಿ ರಕ್ತಕ್ಕೆ ಬೇಡಿಕೆ ಸಲ್ಲಿಸಬಹುದು. ಅವರ ಬೇಡಿಕೆಯನ್ನು ಆಯಾ ಜಿಲ್ಲಾ ಬ್ಲಡ್ ಬ್ಯಾಂಕ್ಗಳಿಗೆ ನೀಡಲಾಗುತ್ತದೆ ಎಂದಿದೆ.
Also Read: ವಿಮಾನ ನಿಲ್ದಾಣ ಸಿಬ್ಬಂದಿ ಪ್ರಯಾಣಿಕರ ಹಣ ಕದಿಯುವ ವೀಡಿಯೋ, ಸತ್ಯ ಏನು?
ಮಹಾರಾಷ್ಟ್ರದಲ್ಲಿ ಈ ಸೇವೆ ಜಾರಿಯಲ್ಲಿದೆ ಎಂಬುದನ್ನು ನಾವು ಮಹಾರಾಷ್ಟ್ರದ ಅಧಿಕೃತ ವೆಬ್ಸೈಟ್ ನೋಡಿ ಖಚಿತಪಡಿಸಿಕೊಂಡಿದ್ದೇವೆ.
ಹೆಚ್ಚಿನ ಶೋಧ ನಡೆಸಿದಾಗ, ಎಕ್ಸ್ ತಾಣದಲ್ಲಿ ಪಿಐಬಿ ಫ್ಯಾಕ್ಟ್ ಚೆಕ್ ಬ್ಲಡ್ ಆನ್ ಕಾಲ್ ಸೇವೆಯ ಕುರಿತ ಸಂದೇಶ ಸುಳ್ಳು ಎಂಬುದರ ಬಗ್ಗೆ ಮಾಡಿದ ಪೋಸ್ಟ್ ಅನ್ನೂ ನಾವು ಗಮನಸಿದ್ದೇವೆ. ಅದು ಇಲ್ಲಿದೆ.
ಈ ಪ್ರಕಾರ, 104 ಹೆಸರಲ್ಲಿ ಮಹಾರಷ್ಟ್ರ ಹೊರತು ಪಡಿಸಿ ರಕ್ತದ ಸಹಾಯವಾಣಿಗಳು ಚಾಲ್ತಿಯಲ್ಲಿಲ್ಲ ಎಂದು ಗೊತ್ತಾಗಿದೆ. ಆದ್ದರಿಂದ ದೇಶದಲ್ಲಿ ರಕ್ತದ ಸಹಾಯವಾಣಿಯಾಗಿ 104 ಚಾಲ್ತಿಗೆ ಬಂದಿದೆ ಎನ್ನುವುದು ತಪ್ಪಾಗುತ್ತದೆ.
Also Read: ಗ್ಯಾರೆಂಟಿ ಯೋಜನೆಗಳಿಗೆ ದುಡ್ಡು ಎಲ್ಲಿಂದ ತರಲಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆಯೇ?
Our Sources:
Government of Karnataka Covid Helpline numbers
Government of Maharashtra Health Department Helpline numbers
Report By Times of India, Dated: January 7, 2014
Tweet By PIB Fact Check, Dated: August 26, 2023
(ಈ ಲೇಖನವನ್ನು ಮೊದಲು ನ್ಯೂಸ್ ಚೆಕರ್ ತಮಿಳಿನಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ.)
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.
|