About: http://data.cimple.eu/claim-review/151c5baced871f01e177f26a97d6eb441a3a0a433c8ea2896b5c2b2f     Goto   Sponge   NotDistinct   Permalink

An Entity of Type : schema:ClaimReview, within Data Space : data.cimple.eu associated with source document(s)

AttributesValues
rdf:type
http://data.cimple...lizedReviewRating
schema:url
schema:text
  • Authors Claim ಮೊಳಕೆ ಕಾಳುಗಳನ್ನು ತಿನ್ನುವುದರಿಂದ ದೇಹಕ್ಕೆ ಇಡೀ ದಿನ ಶಕ್ತಿ ಸಿಗುತ್ತದೆ Fact ಮೊಳಕೆ ಕಾಳುಗಳೊಂದಿಗೆ ಸಮತೋಲಿತ,ವಿಭಿನ್ನ ಆಹಾರಗಳನ್ನು ತೆಗೆದುಕೊಂಡಾಗ ದೇಹಕ್ಕೆ ಇಡೀ ದಿನ ಶಕ್ತಿ ಸಿಗುತ್ತದೆ ಮೊಳಕೆ ಕಾಳುಗಳನ್ನು ತಿನ್ನುವುದರಿಂದ ದೇಹಕ್ಕೆ ಇಡೀ ದಿನ ಶಕ್ತಿ ಸಿಗುತ್ತದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದು ಹರಿದಾಡುತ್ತಿದೆ. ಫೇಸ್ಬುಕ್ನಲ್ಲಿ ಕಂಡುಬಂದ ಈ ಫೇಸ್ಬುಕ್ ಪೋಸ್ಟ್ ನಲ್ಲಿ “ದೇಹದ ಬಲವನ್ನು ಹೆಚ್ಚಿಸಲು ಮೊಳಕೆಯೊಡೆದ ಕಾಳುಗಳ ಜೊತೆ ನಿಂಬೆ, ಶುಂಠಿ ತುಂಡುಗಳು, ಸ್ವಲ್ಪ ಉಪ್ಪು ಮತ್ತು ಮೆಣಸು ಸೇರಿಸಿ ಮತ್ತು ಬೆಳಗ್ಗೆ ಉಪಾಹಾರದಲ್ಲಿ ಸೇವಿಸಿ. ನೀವು ಇಡೀದ ದಿನ ಶಕ್ತಿಯನ್ನು ಪಡೆಯುತ್ತೀರಿ” ಎಂದಿದೆ. Also Read: ನೀರಿನಲ್ಲಿ ನೆನೆಸಿದ ಒಣದ್ರಾಕ್ಷಿ ತಿನ್ನುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆಯೇ? ಈ ಬಗ್ಗೆ ನ್ಯೂಸ್ಚೆಕರ್ ಮತ್ತು ಥಿಪ್ ಸತ್ಯಶೋಧನೆಯನ್ನು ನಡೆಸಿದ್ದು, ಇದು ಭಾಗಶಃ ಸುಳ್ಳು ಎಂದು ಕಂಡುಬಂದಿದೆ. Fact Check/Verification ಬೆಳಗಿನ ಉಪಾಹಾರವನ್ನು ಸಾಮಾನ್ಯವಾಗಿ ದಿನದ ಪ್ರಮುಖ ಆಹಾರ ಎಂದು ಪರಿಗಣಿಸಲಾಗುತ್ತದೆ ದಿನವನ್ನು ಶುರುಮಾಡಲು ಅಗತ್ಯವಾದ ಪೋಷಕಾಂಶಗಳು ಮತ್ತು ಶಕ್ತಿಯನ್ನು ಇದು ದೇಹಕ್ಕೆ ಒದಗಿಸುತ್ತದೆ. ಅಗತ್ಯ ಪೋಷಕಾಂಶಗಳನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ನಾವು ಸಮತೋಲಿತವಾದ, ವಿಭಿನ್ನ ಆಹಾರಗಳ ಮಿಶ್ರಣಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಮೊಳಕೆ ಕಾಳುಗಳು: ಇದು ವಿವಿಧ ಧಾನ್ಯ ಅಥವಾ ಕಾಳುಗಳ ಮೊಳಕೆಗಳು ಇವು ಪ್ರೋಟೀನ್, ನಾರಿನ ಅಂಶ, ಜೀವಸತ್ವಗಳು ಮತ್ತು ಖನಿಜಗಳಂತಹ ಪೋಷಕಾಂಶಗಳಿಂದ ತುಂಬಿರುತ್ತವೆ. ಪ್ರೋಟೀನ್ ಮತ್ತು ನಾರಿನಂಶಗಳು, ಪೂರ್ಣ ತೃಪ್ತಿಯ ಭಾವನೆಯನ್ನು ನೀಡುತ್ತದೆ, ಇದು ಅತಿಯಾಗಿ ತಿನ್ನುವುದನ್ನು ತಡೆಯಲು ಸಹಾಯ ಮಾಡುತ್ತದೆ. ಪ್ರೋಟೀನ್ ಮತ್ತು ನಾರಿನಂಶದ ನಿಧಾನ ಜೀರ್ಣಕ್ರಿಯೆ ನಿರಂತರವಾಗಿ ಶಕ್ತಿ ನೀಡಲು ಕೊಡುಗೆ ನೀಡುತ್ತದೆ. ಶುಂಠಿ: ಶುಂಠಿಯು ಸುವಾಸನೆಯ ಮತ್ತು ಪರಿಮಳಯುಕ್ತ ಮಸಾಲೆಯಾಗಿದ್ದು, ಆರೋಗ್ಯ ಪ್ರಯೋಜನಗಳಿಗೆ ಹೆಸರುವಾಸಿಯಾಗಿದೆ. ಇದು ಜಿಂಜರಾಲ್ ನಂತಹ ಜೈವಿಕ ಸಕ್ರಿಯ ಸಂಯುಕ್ತಗಳನ್ನು ಹೊಂದಿರುತ್ತದೆ, ಇದು ಉರಿಯೂತದ ಮತ್ತು ಆಂಟಿ ಆಕ್ಸಿಡೆಂಟ್ಗಳನ್ನು ಹೊಂದಿರುತ್ತದೆ. ಶುಂಠಿಯು ಒಟ್ಟಾರೆ ಆರೋಗ್ಯಕ್ಕೆ ಪ್ರಯೋಜನ ನೀಡಬಹುದಾದರೂ, ಅದು ದಿನವಿಡೀ ನಿರಂತರ ಶಕ್ತಿಯನ್ನು ಒದಗಿಸುತ್ತದೆ ಎಂಬುದನ್ನು ಹೇಳುವ ಯಾವುದೇ ನೇರ ಪುರಾವೆಗಳಿಲ್ಲ. Also Read: ದಿನವೂ ಈರುಳ್ಳಿ ತಿನ್ನೋದ್ರಿಂದ ವೀರ್ಯದ ಗುಣಮಟ್ಟ ಹೆಚ್ಚುತ್ತದೆಯೇ, ಸತ್ಯ ಏನು? ನಿಂಬೆ: ನಿಂಬೆ ವಿಟಮಿನ್ ಸಿ ಯ ಅತ್ಯುತ್ತಮ ಮೂಲವಾಗಿದೆ, ಇದು ರೋಗನಿರೋಧಕ ವ್ಯವಸ್ಥೆಯನ್ನು ಬೆಂಬಲಿಸುವ ಆಂಟಿ ಆಕ್ಸಿಡೆಂಟ್ ಆಗಿದೆ. ನಿಂಬೆ ರಸವು ಆಹಾರಕ್ಕೆ ಉತ್ತಮ ಪರಿಮಳವನ್ನು ಸೇರಿಸುತ್ತದೆ ಮತ್ತು ಮೊಳಕೆಗಳಂತಹ ಸಸ್ಯ ಆಧಾರಿತ ಮೂಲಗಳಿಂದ ಕಬ್ಬಿಣಾಂಶ ಹೀರಿಕೊಳ್ಳುವಲ್ಲಿ ಸಹಾಯ ಮಾಡುತ್ತದೆ. ಉಪ್ಪು: ಎಲೆಕ್ಟ್ರೋಲೈಟ್ ಸಮತೋಲನ ಮತ್ತು ಜಲಸಂಚಯನ ಕಾಪಾಡಿಕೊಳ್ಳಲು ಆಹಾರದಲ್ಲಿ ಮಧ್ಯಮ ಪ್ರಮಾಣದ ಉಪ್ಪು (ಸೋಡಿಯಂ) ಅನ್ನು ಸೇರಿಸುವುದು ಅತ್ಯಗತ್ಯ. ಆದಾಗ್ಯೂ, ಅತಿಯಾದ ಉಪ್ಪು ಸೇವನೆ ತಪ್ಪಿಸಬೇಕು ಏಕೆಂದರೆ ಇದು ರಕ್ತದೊತ್ತಡ ಮತ್ತು ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಉಂಟುಮಾಡಬಹುದು. ಮೆಣಸಿನ ಪುಡಿ: ಮೆಣಸಿನ ಹುಡಿ ಅಥವಾ ಅರೆದ ಪುಡಿ ಆಹಾರಕ್ಕೆ ಮಸಾಲೆ ಮತ್ತು ಪರಿಮಳಯುಕ್ತವನ್ನಾಗಿ ಮಾಡುತ್ತದೆ. ಸಂಶೋಧನೆ ಪ್ರಕಾರ ಮೆಣಸಿನಲ್ಲಿರುವ ಕ್ಯಾಪ್ಸಾಸಿನ್ ಚಯಾಪಚಯವನ್ನು ಸ್ವಲ್ಪಮಟ್ಟಿಗೆ ಹೆಚ್ಚಿಸಬಹುದು ಮತ್ತು ಹಸಿವು ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ, ಆದರೆ ದೀರ್ಘಕಾಲದಲ್ಲಿ ಶಕ್ತಿಯನ್ನು ಉಂಟುಮಾಡುವ ಅಂಶಗಳ ಮೇಲೆ ಅದರ ಪರಿಣಾಮ ಉತ್ತಮವಾಗಿಲ್ಲ. ಮೊಳಕೆ ಕಾಳುಗಳು, ಶುಂಠಿ, ನಿಂಬೆ, ಉಪ್ಪು ಮತ್ತು ಮೆಣಸಿನಕಾಯಿಗಳನ್ನು ಹಾಕಿದ ಆಹಾರವನ್ನು ಉಪಾಹಾರಕ್ಕೆ ಕೊಡುಗೆ ನೀಡಬಹುದಾದರೂ, ಒಟ್ಟಾರೆಯಾಗಿ ಈ ಆಹಾರದ ಮಾದರಿ ದಿನವಿಡೀ ಶಕ್ತಿಯ ಮಟ್ಟವನ್ನು ಉಳಿಸಿಕೊಳ್ಳುವಲ್ಲಿ ಹೆಚ್ಚು ಮಹತ್ವದ ಪಾತ್ರವನ್ನು ವಹಿಸುತ್ತವೆ ಎಂಬುದನ್ನು ನೆನಪಿಟ್ಟುಕೊಳ್ಳುವುದು ಬಹಳ ಮುಖ್ಯ. ಇದರೊಂದಿಗೆ ಸಮತೋಲಿತ ಉಪಹಾರವು ವಿವಿಧ ಹಣ್ಣುಗಳು, ತರಕಾರಿಗಳು ಮತ್ತು ಧಾನ್ಯಗಳ ಜೊತೆಗೆ ಮೈಕ್ರೋನ್ಯೂಟ್ರಿಯಂಟ್ಗಳ (ಕಾರ್ಬೋಹೈಡ್ರೇಟ್ಗಳು, ಪ್ರೋಟೀನ್ಗಳು ಮತ್ತು ಕೊಬ್ಬುಗಳು) ಮಿಶ್ರಣವನ್ನು ಕೂಡ ನಾವು ಹೊಂದಬೇಕಾಗುತ್ತದೆ. ದೇಹಕ್ಕೆ ಅತ್ಯುತ್ತಮ ಶಕ್ತಿಯ ಮಟ್ಟ ಮತ್ತು ಒಟ್ಟಾರೆ ಯೋಗಕ್ಷೇಮ ಕಾಪಾಡಿಕೊಳ್ಳಲು, ವಿವಿಧ ರೀತಿಯ ಆಹಾರವನ್ನು ತೆಗೆದುಕೊಳ್ಳುವ ಮೂಲಕ ಊಟವನ್ನು ಸಮತೋಲನಗೊಳಿಸುವುದು ನಿರ್ಣಾಯಕವಾಗಿದೆ, ಇದು ದೇಹಕ್ಕೆ ಅಗತ್ಯ ಪೋಷಕಾಂಶಗಳ ವೈವಿಧ್ಯಮಯ ಸೇವನೆಯನ್ನು ಖಾತ್ರಿಪಡಿಸುತ್ತದೆ. ಬೆಳಗಿನ ಉಪಾಹಾರದಲ್ಲಿ ಅತಿಯಾದ ಸಕ್ಕರೆಯನ್ನು ತಪ್ಪಿಸುವುದು ಸಹ ಮುಖ್ಯವಾಗಿದೆ, ಏಕೆಂದರೆ ಹೆಚ್ಚಿನ ಸಕ್ಕರೆಯ ಊಟವು ಕ್ಷಿಪ್ರವಾಗಿ ಸಾಮರ್ಥ್ಯ ಕುಸಿತಕ್ಕೆ ಕಾರಣವಾಗಬಹುದು. ಆ ನಂತರ ಇದರಿಂದಾಗಿ ನೀವು ದಣಿದಂತೆ ಅಥವಾ ಆಲಸ್ಯಕ್ಕೆ ಕಾರಣವಾಗುತ್ತದೆ. ಹೆಚ್ಚುವರಿಯಾಗಿ, ದಿನವಿಡೀ ಶಕ್ತಿಯ ಮಟ್ಟವನ್ನು ಕಾಪಾಡಿಕೊಳ್ಳಲು ಸಾಕಷ್ಟು ನೀರಿನಂಶ ಸೇವನೆ ಅತ್ಯಗತ್ಯ. ನಿಯಮಿತ ದೈಹಿಕ ಚಟುವಟಿಕೆ, ಶಕ್ತಿಯ ಮಟ್ಟವನ್ನು ಸುಧಾರಿಸುವಲ್ಲಿ ಮತ್ತು ಉತ್ತಮ ನಿದ್ದೆಯನ್ನು ಉತ್ತೇಜಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ಆಯಾಸವನ್ನು ತಡೆಗಟ್ಟಲು ಮತ್ತು ದಿನವಿಡೀ ಸ್ಥಿರವಾದ ಶಕ್ತಿಯ ಮಟ್ಟವನ್ನು ಕಾಪಾಡಿಕೊಳ್ಳಲು ಪ್ರತಿ ರಾತ್ರಿ 7-9 ಗಂಟೆಗಳ ಗುಣಮಟ್ಟದ ನಿದ್ದೆಗೆ ಆದ್ಯತೆ ನೀಡಬೇಕಾಗುತ್ತದೆ. ಈ ಮಾರ್ಗಸೂಚಿಗಳನ್ನು ಅನುಸರಿಸುವ ಮೂಲಕ, ದೇಹದ ಶಕ್ತಿಯ ಅಗತ್ಯಗಳನ್ನು ಮತ್ತು ಒಟ್ಟಾರೆ ಆರೋಗ್ಯವನ್ನು ಉತ್ತಮಗೊಳಿಸಬಹುದು. Also Read: ಮೋದಿ ಸರ್ಕಾರ ಸ್ತನ ಕ್ಯಾನ್ಸರ್ ಔಷಧ ಬೆಲೆಯನ್ನು ₹95 ಸಾವಿರದಿಂದ ₹5 ಸಾವಿರಕ್ಕೆ ಇಳಿಸಿದೆಯೇ? Conclusion ಈ ಸತ್ಯಶೋಧನೆಯ ಪ್ರಕಾರ, ಮೊಳಕೆ ಕಾಳುಗಳೊಂದಿಗೆ ಸಮತೋಲಿತ,ವಿಭಿನ್ನ ಆಹಾರಗಳನ್ನು ತೆಗೆದುಕೊಂಡಾಗ ದೇಹಕ್ಕೆ ಇಡೀ ದಿನ ಶಕ್ತಿ ಸಿಗುತ್ತದೆ ಇದರೊಂದಿಗೆ ಉತ್ತಮ ನಿದ್ದೆ, ವ್ಯಾಯಾಮಗಳು ಪೂರಕ ಅಂಶಗಳು ಎಂಬುದನ್ನು ನಾವು ಕಂಡುಕೊಂಡಿದ್ದೇವೆ. Result: Partly False Our Source Regularity of Breakfast Consumption and Diet: Insights from National Adult Nutrition Survey – PubMed (nih.gov) Ghostscript wrapper for D:\acta\Alimentaria\Acta_Alimentaria_November_30.pdf (isga-sprouts.org) Gingerol and Its Role in Chronic Diseases – PubMed (nih.gov) Citrus limon (Lemon) Phenomenon—A Review of the Chemistry, Pharmacological Properties, Applications in the Modern Pharmaceutical, Food, and Cosmetics Industries, and Biotechnological Studies – PMC (nih.gov) Salt and Sodium | The Nutrition Source | Harvard T.H. Chan School of Public Health Capsaicin: Current Understanding of Its Mechanisms and Therapy of Pain and Other Pre-Clinical and Clinical Uses – PMC (nih.gov) Balancing food and physical activity – Healthy Eating & Active Living (wisc.edu) (This article has been published in collaboration with THIP Media) ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.
schema:mentions
schema:reviewRating
schema:author
schema:datePublished
schema:inLanguage
  • Hindi
schema:itemReviewed
Faceted Search & Find service v1.16.115 as of Oct 09 2023


Alternative Linked Data Documents: ODE     Content Formats:   [cxml] [csv]     RDF   [text] [turtle] [ld+json] [rdf+json] [rdf+xml]     ODATA   [atom+xml] [odata+json]     Microdata   [microdata+json] [html]    About   
This material is Open Knowledge   W3C Semantic Web Technology [RDF Data] Valid XHTML + RDFa
OpenLink Virtuoso version 07.20.3238 as of Jul 16 2024, on Linux (x86_64-pc-linux-musl), Single-Server Edition (126 GB total memory, 2 GB memory in use)
Data on this page belongs to its respective rights holders.
Virtuoso Faceted Browser Copyright © 2009-2025 OpenLink Software