About: http://data.cimple.eu/claim-review/1bc1c9a01f4c95cc16c1ec3ea83153df192474b02f5556b4b7667243     Goto   Sponge   NotDistinct   Permalink

An Entity of Type : schema:ClaimReview, within Data Space : data.cimple.eu associated with source document(s)

AttributesValues
rdf:type
http://data.cimple...lizedReviewRating
schema:url
schema:text
  • ಫ್ಯಾಕ್ಟ್ಚೆಕ್: ಎಐ ಮೂಲಕ ರಚಿಸಲಾದ ಖಡ್ಗವನ್ನು ಕುಂಭಕರ್ಣನ ಖಡ್ಗ ಪತ್ತೆಯಾಗಿದೆ ಎಂದು ಹಂಚಿಕೊಳ್ಳಲಾಗುತ್ತಿದೆ ಎಐ ಮೂಲಕ ರಚಿಸಲಾದ ಖಡ್ಗವನ್ನು ಕುಂಭಕರ್ಣನ ಖಡ್ಗ ಪತ್ತೆಯಾಗಿದೆ ಎಂದು ಹಂಚಿಕೊಳ್ಳಲಾಗುತ್ತಿದೆ Claim :ರಾಮಾಯಣದಲ್ಲಿ ಬರುವ ಕುಂಭಕರ್ಣನ ಖಡ್ಗ ಪತ್ತೆಯಾಗಿದೆ Fact :ವೈರಲ್ ಆದ ಚಿತ್ರಗಳನ್ನು ಎಐ ಮೂಲಕ ರಚಿಸಲಾಗಿದೆ ರಾಮಾಯಣದಲ್ಲಿ ಬರುವ ಕುಂಭಕರ್ಣನೊಬ್ಬ ರಾಕ್ಷಸ ಹಾಗೆ ಆತನು ರಾವಣನ ಸಹೋದರ. ಕುಂಭಕರ್ಣ ದೈತ್ಯಾಕಾರದ ಗಾತ್ರ, ನಿದ್ದೆಯ ಕಾರಣದಿಂದ ಹೆಚ್ಚು ಪ್ರಸಿದ್ಧ ಎನ್ನಬಹುದು. ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಕುಂಭಕರ್ಣನಿಗೆ ಸಂಬಂಧಿಸಿದ ಖಡ್ಗವೊಂದು ಪತ್ತೆಯಾಗಿದೆ ಎಂದು ಕೆಲವು ಚಿತ್ರಗಳೊಂದಿಗೆ ಸಾಮಾಜಿಕ ಬಳಕೆದಾರರು ತಮ್ಮ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಅಕ್ಟೋಬರ್ 15, 2024ರಂದು "ಸಿನಿ ಸುದ್ದಿ ಮತ್ತು ಇತರೆ ಮಾಹಿತಿ" ಎಂಬ ಯೂಟ್ಯೂಬ್ ಚಾನೆಲ್ನಲ್ಲಿ "ಶ್ರೀಲಂಕಾದಲ್ಲಿ ಕುಂಭಕರ್ಣನ ಖಡ್ಗ ಪತ್ತೆ #ramayana #kumbakarna" ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವಿಡಿಯೋವಿಗೆ ಶೀರ್ಷಿಕೆಯಾಗಿ "ಶ್ರೀಲಂಕಾ ಕಂಭಕರ್ಣನ ಖಡ್ಗ ಪತ್ತೆ, ರಾಮಾಯಣ ನಡೆದಿದೆ ಎಂಬುವುದಕ್ಕೆ ಇದಕ್ಕಿಂತ ಸಾಕ್ಷಿ ಬೇಕಿಲ್ಲದಲ್ಲಿ" ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ನ್ಯೂಸ್ ಟಿವಿ6 ಕನ್ನಡ ಎಂಬ ಯೂಟ್ಯೂಬ್ ಖಾತೆಯಲ್ಲಿ "ಕುಂಭಕರ್ಣನ ಖಡ್ಗ ಪತ್ತೆ, ಮಹಾಭಾರತದ ಕುರುಹು. #mahabharata #kumbakarna" ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ನಾಗೇಶ್ ಪ್ರೀತಮ್ ಎಂಬ ಎಕ್ಸ್ ಖಾತೆದಾರ ತನ್ನ ಎಕ್ಸ್ ಖಾತೆಯಲ್ಲಿ "ಕುಂಭಕರ್ಣನ ಖಡ್ಗ ಪತ್ತೆ ರಾಮಾಯಣ ನಡೆದಿದೆ ಎಂಬುವುದಕ್ಕೆ ಇದಕ್ಕಿಂತ ಸಾಕ್ಷಿ ಬೇಕಿಲ್ಲ" ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ ಫ್ಯಾಕ್ಟ್ಚೆಕ್ ವೈರಲ್ ಆದ ಸುದ್ದಿ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಚಿತ್ರಗಳನ್ನು ಎಐ ಮೂಲಕ ರಚಿಸಲಾಗಿದೆ. ನಾವು ವೈರಲ್ ಅದ ಚಿತ್ರಗಳನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ಜುಲೈ 26,2024ರಂದು "ಟೈಯಿಟ್" ಎಂಬ ವೆಬ್ಸೈಟ್ನಲ್ಲಿ ಇದೇ ಚಿತ್ರವನ್ನು ಹಂಚಿಕೊಂಡಿರುವುದನ್ನು ನಾವು ಕಾಣಬಹುದು" ಟರ್ಕಿಯಲ್ಲಿ ಪುರಾತತ್ವ ಶೋಧನೆಯಲ್ಲಿ ಪತ್ತೆಯಾದ ದೈತ್ಯ ಖಡ್ಗಗಳು. ಈ ಚಿತ್ರಗಲನ್ನು ಎಐ ಮೂಲಕ ರಚಿಸಲಾಗಿದೆ" ಎಂದು ಬರೆದು ಹಂಚಿಕೊಂಡಿದ್ದರು. ಟ್ರೂಮೀಡಿಯಾ ವೆಬ್ಸೈಟ್ನಲ್ಲಿ ಕಾಣುವ ನಾಲ್ಕು ಫೋಟೋಗಳನ್ನು ನಾವು ಉಪಯೋಗಿಸಿಕೊಂಡು ಈ ಚಿತ್ರಗಳು ಎಐ ತಂತ್ರಜ್ಞಾನದಿಂದ ರಚಿಸಲಾಗಿದೆಯಾ ಎಂದು ಹುಡುಕಾಟ ನಡೆಸಿದೆವು. ವಿಶ್ಲೇಷಿಸಿದ ನಂತರ ತಿಳಿದಿದ್ದೇನೆಂದರೆ ಈ ನಾಲ್ಕು ಚಿತ್ರಗಳು ಎಐ ತಂತ್ರಜ್ಞಾನವನ್ನು ಬಳಸಿ ರಚಿಸಲಾಗಿದೆ ಎಂಬ ಫಲಿತಾಂಶವನ್ನು ಕಂಡುಕೊಂಡೆವು (ಫೋಟೋ 1, ಫೋಟೋ 2, ಫೋಟೋ 3, ಫೋಟೋ 4 ) ನಾವು ಟರ್ಕಿಯಲ್ಲಿ ಪತ್ತೆಯಾದ ದೈತ್ಯ ಖಡ್ಗಗಳು ಎಐ ಮೂಲಕ ರಚಿಸಲಾಗಿದೆ ಎಂಬುದಕ್ಕೆ ಹಲವಾರು ಸಾಕ್ಷಿಗಳಿವೆ. ಮೊದಲನೆಯದಾಗಿ ಫೋಟೋಗಳಲ್ಲಿ ಕಾಣುವ ವ್ಯಕ್ತಿಗಳ ಮುಖ, ದೇಹ, ಕೈಕಾಲುಗಳು ಅಸ್ವಾಭಾವಿಕವಾಗಿರುತ್ತದೆ. ಕೆಲವು ಚಿತ್ರಗಳಲ್ಲಿ ಮನುಷ್ಯನ ತಲೆಯ ಭಾಗ ವಿಕೃತವಾಗಿರುತ್ತದೆ ಅಥವಾ ಕೈಬೆರಳುಗಳು ಹೆಚ್ಚಾಗಿರುತ್ತದೆ ಇಲ್ಲವಾದರೆ, ಚಿತ್ರದಲ್ಲಿ ಕಾಣುವ ಮುಖಗಳು ಮಸುಕಾಗಿರುತ್ತದೆ. ಆಗಸ್ಟ್ 4,2024ರಂದು ಆರ್ಕಾಲಜಿ ಯುಎಸ್ಎ ಫೇಸ್ಬುಕ್ ಖಾತೆಯಲ್ಲಿ ಇದೇ ಚಿತ್ರವನ್ನು ಹಂಚಿಕೊಂಡು "“Shocking Find: Archaeologists Discover Huge Swords from a 3,000-Year-Old Civilization in Turkey, Unleashing Intrigue About Giant Warriors and Their Astonishing Craftsmanship.See more in the comments below" ಎಂಬ ಶೀರ್ಷಿಕೆಯೊಂದಿಗೆ ಚಿತ್ರಗಳನ್ನು ಹಂಚಿಕೊಂಡಿದ್ದಾರೆ, ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ "ಪುರಾತತ್ವ ಶಾಸ್ತ್ರಜ್ಞರು ಮೂರು ಸಾವಿರ ವರ್ಷಗಳಷ್ಟು ಹಳೆಯದಾದ ಕತ್ತಿಯನ್ನು ಕಂಡುಕೊಂಡಿದ್ದಾರೆ. ಈ ಖಡ್ಗವನ್ನು ನೋಡುತ್ತಿದ್ದರೆ ಇದು ಯಾರದೋ ದೈತ್ಯ ಯೋಧರದ್ದು ಇರಬಹುದು. ಈ ಖಡ್ಗವನ್ನು ತಯಾರಿಸಿದ ಮನುಷ್ಯನ ಕರಕುಶಲತೆಯ ಬಗ್ಗೆ ಆಶ್ಚರ್ಯವೆನುಸುತ್ತದೆ" ಎಂದು ಬರೆದು ಪೋಸ್ಟ್ ಮಾಡಿದ್ದರು. ನಾವು ಮತ್ತಷ್ಟು ಮಾಹಿತಿಯನ್ನು ಕಲೆಹಾಕಲು ಗೂಗಲ್ನಲ್ಲಿ ಪುರಾತತ್ವ ಶಾಸ್ತ್ರಜ್ಞರಿಗೆ ದೊರೆತ ಅತಿದೊಡ್ಡ ಖಡ್ಗ ಎಂಬ ಕೀವರ್ಡ್ನ್ನು ಉಪಯೋಗಿಸಿ ಹುಡುಕಾಟ ನಡೆಸಿದಾಗ ನಮಗೆ ಜಪಾನ್ನ ನಾರಾದಲ್ಲಿರುವ ಟೋಮಿಯೋ ಮರುಯಾಮಾ ಸಮಾಧಿಯ ಮೈಧಾನದಲ್ಲಿ 2.3ಮೀಟರ್ ಉದ್ದ್ ಡಯೋಕೆನ್ ಖಡ್ಗವೊಂದನ್ನು ಶಾಸ್ತ್ರಜ್ಞರು ಕಂಡುಹಿಡಿದಿದ್ದಾರೆ ಎಂದು ́ಜಪಾನ್ ಟೈಮ್ಸ್ ́ವರದಿ ಮಾಡಿರುವುದನ್ನು ನಾವು ನೋಡಬಹುದು. ಇದರಿಂದ ಸಾಭಿತಾಗಿರುವುದೇನೆಂದರೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಚಿತ್ರ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವೈರಲ್ ಆದ ಚಿತ್ರ ರಾಮಾಯಣದಲ್ಲಿ ಬರುವ ಕುಂಭಕರ್ಣನ ಖಡ್ಗವಲ್ಲ. ವೈರಲ್ ಆದ ಚಿತ್ರವನ್ನು ಎಐ ಮೂಲಕ ರಚಿಸಲಾಗಿದೆ ಎಂದು ಸಾಭೀತಾಗಿದೆ
schema:mentions
schema:reviewRating
schema:author
schema:datePublished
schema:inLanguage
  • Telugu
schema:itemReviewed
Faceted Search & Find service v1.16.115 as of Oct 09 2023


Alternative Linked Data Documents: ODE     Content Formats:   [cxml] [csv]     RDF   [text] [turtle] [ld+json] [rdf+json] [rdf+xml]     ODATA   [atom+xml] [odata+json]     Microdata   [microdata+json] [html]    About   
This material is Open Knowledge   W3C Semantic Web Technology [RDF Data] Valid XHTML + RDFa
OpenLink Virtuoso version 07.20.3238 as of Jul 16 2024, on Linux (x86_64-pc-linux-musl), Single-Server Edition (126 GB total memory, 5 GB memory in use)
Data on this page belongs to its respective rights holders.
Virtuoso Faceted Browser Copyright © 2009-2025 OpenLink Software