About: http://data.cimple.eu/claim-review/2d2db155c1aceade48f91ae22f98858dbc600ed9495ecd9b0f06ed64     Goto   Sponge   NotDistinct   Permalink

An Entity of Type : schema:ClaimReview, within Data Space : data.cimple.eu associated with source document(s)

AttributesValues
rdf:type
http://data.cimple...lizedReviewRating
schema:url
schema:text
  • Authors Claim ಲೋಕಸಭೆ ಚುನಾವಣೆಯಲ್ಲಿ 10 ರಾಜ್ಯಗಳಲ್ಲಿ ಐ.ಎನ್.ಡಿಐ. ಬಣ ಮುನ್ನಡೆ ಸಾಧಿಸಲಿದೆ ಎಂದು ದೈನಿಕ್ ಭಾಸ್ಕರ್ ಮತ್ತು ನೀಲ್ಸನ್ ನಡೆಸಿದ ಸಮೀಕ್ಷೆ ಭವಿಷ್ಯ ನುಡಿದಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಅಂತಹ ಪೋಸ್ಟ್ ಗಳನ್ನು ಇಲ್ಲಿ, ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು. Also Read: ‘ಜನಾರ್ದನ ಪೂಜಾರಿ ಎನ್ಕೌಂಟರ್ ಮಾಡಿ’ ಎಂಬ ಹಳೆಯ ವಿವಾದಿತ ಹೇಳಿಕೆ ಹಂಚಿಕೆ Fact ಸತ್ಯಶೋಧನೆಗಾಗಿ ನಾವು ಗೂಗಲ್ ನಲ್ಲಿ “Dainik Bhaskar, Lok Sabha Polls” ಮತ್ತು “survey” ಎಂದು ಕೀವರ್ಡ್ ಸರ್ಚ್ ನಡೆಸಿದ್ದು, ಅದರ “ಮೇರಿ ವೋಟ್, ಮೇರಿ ಮರ್ಜಿ” ಸಮೀಕ್ಷೆಯ ಫಲಿತಾಂಶಗಳನ್ನು ವಿವರಿಸುವ ಲೇಖನ ಲಭ್ಯವಾಗಿದೆ. ಏಪ್ರಿಲ್ 1 ರಿಂದ ಏಪ್ರಿಲ್ 6 ರವರೆಗೆ 308 ಲೋಕಸಭಾ ಕ್ಷೇತ್ರಗಳಲ್ಲಿ ಈ ಸಮೀಕ್ಷೆಗಳನ್ನು ನಡೆಸಲಾಗಿದೆ. ಸಮೀಕ್ಷೆಯು ಎರಡು ಪ್ರಮುಖ ಅಂಶಗಳ ಮೇಲೆ ಕೇಂದ್ರೀಕೃತವಾಗಿದೆ. ಮೊದಲನೆಯದಾಗಿ “ನಿಮ್ಮ ಕ್ಷೇತ್ರದಲ್ಲಿ ದೊಡ್ಡ ವಿಷಯ ಯಾವುದು ಮತ್ತು ಭವಿಷ್ಯದ ಸಂಸದರಿಗೆ ಬೇಡಿಕೆಗಳು ಯಾವುವು? ಎಂಬುದು, ಎರಡನೆಯದು “ಯಾಕಾಗಿ ಪ್ರತಿಕ್ರಿಯೆಗಾರರು ಏಕೆ ಮತ ಚಲಾಯಿಸಲು ಬಯಸುವುದಿಲ್ಲ, ಮತ್ತು ಅವರ ಪ್ರದೇಶದಲ್ಲಿ ಅತಿ ದೊಡ್ಡ ಸಮಸ್ಯೆ ಯಾವುದು?” ಎಂಬುದಾಗಿದೆ. ಈ ಸಮೀಕ್ಷೆಯ ಫಲಿತಾಂಶಗಳ ಬಗ್ಗೆ ಸಂಸ್ಥೆಯು ಈವರೆಗೆ ಎರಡು ವಿಶ್ಲೇಷಣಾತ್ಮಕ ವರದಿಗಳನ್ನು ಬಿಡುಗಡೆ ಮಾಡಿದೆ, ಅವುಗಳಲ್ಲಿ ಯಾವುದೂ ಐ.ಎನ್.ಡಿ.ಐ. ಬಣಕ್ಕೆ ಯಾವುದೇ ಮುನ್ನಡೆಯನ್ನು ತೋರಿಸುವುದಿಲ್ಲ. ಈ ವರದಿಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು. ಇದರಲ್ಲಿರುವ ಚಿತ್ರವನ್ನು ಎಚ್ಚರಿಕೆಯಿಂದ ವಿಶ್ಲೇಷಿಸಿದಾಗ, ದಿನಾಂಕ / ಸ್ಥಳ ವನ್ನು “ಭೋಪಾಲ್” ಮತ್ತು “ಏಪ್ರಿಲ್ 13, 2024” ಎಂದು ಉಲ್ಲೇಖಿಸಿರುವುದನ್ನು ನಾವು ಗಮನಿಸಿದ್ದೇವೆ. ನಂತರ ನಾವು ಏಪ್ರಿಲ್ 13, 2024 ರ ದೈನಿಕ್ ಭಾಸ್ಕರ್ ಭೋಪಾಲ್ ಸಂಚಿಕೆಯನ್ನು ನೋಡಿದ್ದೇವೆ ಮತ್ತು ಅದರ ಮುಖಪುಟವು ಅಂತಹ ಯಾವುದೇ ಸಮೀಕ್ಷೆಯ ಫಲಿತಾಂಶಗಳನ್ನು ಹೊಂದಿಲ್ಲ ಎಂದು ಕಂಡುಕೊಂಡಿದ್ದೇವೆ. ಇದಲ್ಲದೆ, ಏಪ್ರಿಲ್ 13, 2024 ರ ಎಕ್ಸ್ ಪೋಸ್ಟ್ನಲ್ಲಿ, ಐ.ಎನ್.ಡಿ.ಐ. ಬಣವು 10 ರಾಜ್ಯಗಳಲ್ಲಿ ಮುನ್ನಡೆ ಸಾಧಿಸಲಿದೆ ಎಂದು ತೋರಿಸುವ ವೈರಲ್ ಚಿತ್ರ ನಕಲಿ ಎಂದು ದೈನಿಕ್ ಭಾಸ್ಕರ್ ಸ್ಪಷ್ಟಪಡಿಸಿರುವುದನ್ನೂ ಗಮನಿಸಿದ್ದೇವೆ. ಈ ಪುರಾವೆಗಳ ಪ್ರಕಾರ, ದೈನಿಕ್ ಭಾಸ್ಕರ್-ನೀಲ್ಸನ್ ಸಮೀಕ್ಷೆಯಲ್ಲಿ ಐ.ಎನ್.ಡಿ.ಐ ಬಣ 10 ರಾಜ್ಯಗಳಲ್ಲಿ ಮುನ್ನಡೆ ಸಾಧಿಸಲಿದೆ ಎಂದು ಊಹಿಸಿದೆ ಎಂದು ಹೇಳುವ ವೈರಲ್ ಚಿತ್ರ ನಕಲಿ ಎಂದು ನಾವು ತೀರ್ಮಾನಿಸಬಹುದು. Also Read: ವಯನಾಡ್ ಅಭ್ಯರ್ಥಿ ರಾಹುಲ್ ಗಾಂಧಿ ನಾಮಪತ್ರ ಸಲ್ಲಿಕೆ ರಾಲಿಯಲ್ಲಿ ಮುಸ್ಲಿಂ ಬಾವುಟಗಳನ್ನು ಹಾರಿಸಲಾಗಿದೆಯೇ? Result: False Our Sources X Post By @DainikBhaskar, Dated: April 13, 2024 Dainik Bhaskar E-Paper, Bhopal Edition, Dated: April 13, 2024 (ಈ ಲೇಖನವನ್ನು ಮೊದಲು ನ್ಯೂಸ್ಚೆಕರ್ ಇಂಗ್ಲಿಷ್ನಲ್ಲಿ ಪ್ರಕಟಿಸಲಾಗಿದ್ದು ಅದು ಇಲ್ಲಿದೆ) ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.
schema:mentions
schema:reviewRating
schema:author
schema:datePublished
schema:inLanguage
  • Hindi
schema:itemReviewed
Faceted Search & Find service v1.16.123 as of May 22 2025


Alternative Linked Data Documents: ODE     Content Formats:   [cxml] [csv]     RDF   [text] [turtle] [ld+json] [rdf+json] [rdf+xml]     ODATA   [atom+xml] [odata+json]     Microdata   [microdata+json] [html]    About   
This material is Open Knowledge   W3C Semantic Web Technology [RDF Data]
OpenLink Virtuoso version 07.20.3241 as of May 22 2025, on Linux (x86_64-pc-linux-musl), Single-Server Edition (126 GB total memory, 8 GB memory in use)
Data on this page belongs to its respective rights holders.
Virtuoso Faceted Browser Copyright © 2009-2026 OpenLink Software