schema:text
| - Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact checks doneFOLLOW US
Fact Check
Claim
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ನಿ ಮತದಾನ ಮಾಡುವ ವೇಳೆ ಜೊತೆಗೆ ಇದ್ದು ನಿಯಮ ಉಲ್ಲಂಘಿಸಿದ್ದಾರೆ
Fact
ಮತಗಟ್ಟೆಯಲ್ಲಿ ಪತ್ನಿಯೊಂದಿಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕಾಣಿಸಿಕೊಂಡ ವಿದ್ಯಮಾನ 2019ರದ್ದಾಗಿದೆ
ಪತ್ನಿ ಮತದಾನ ಮಾಡುವ ವೇಳೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಜೊತೆಗೇ ಇದ್ದು ನಿಯಮ ಉಲ್ಲಂಘಿಸಿದ್ದಾರೆ ಎಂದು ಹೇಳುವ ಪೋಸ್ಟ್ ಒಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದೆ.
ವಾಟ್ಸಪ್ ನಲ್ಲಿ ಕಂಡುಬಂದ ಪೋಸ್ಟ್ ನಲ್ಲಿ “ದೇಶದಲ್ಲಿ ಮೋದಿ ಅಲೆ ಯಾವ ಲೆವೆಲ್ಲಿಗಿದೆ ಅಂದ್ರೆ ವಿರೋಧ ಪಕ್ಷದ ನಾಯಕ ಕೂಡಾ ತನ್ನ ಪತ್ನಿಯೇ ಎಲ್ಲಿ ಮೋದಿ ಪಕ್ಷಕ್ಕೆ ಓಟು ಹಾಕಿಬಿಡುತ್ತಾಳೋ ಎಂದು ಸಂಶಯಪಟ್ಟು ಕದ್ದು ನೋಡುವಷ್ಟು!” ಎನ್ನುವುದರೊಂದಿಗೆ “ಒಬ್ಬರು ಮತದಾನ ಮಾಡುವಾಗ ಇನ್ನೊಬ್ಬರಿಗೆ ಅಲ್ಲಿ ಇರಲು ಅವಕಾಶ ಇಲ್ಲ. ಇಂತಹ ಕನಿಷ್ಠ ಜ್ಞಾನ ಇಲ್ಲದವನನ್ನು ಪ್ರಧಾನಿ ಅಭ್ಯರ್ಥಿ ಎನ್ನುತ್ತಾರೆ ಕಾಂಗಿಗಳು. ಈ ವಯ್ಯ ನೇ ಮತದಾನದ ಗೌಪ್ಯತೆ ಕಾಪಾಡದಿದ್ದರೆ ಇನ್ನೂ ಯಾರು ಕಾಪಾಡಬೇಕು ?” ಎಂದಿದೆ.
ಈ ಕುರಿತು ಸತ್ಯಶೋಧನೆ ಮಾಡುವಂತೆ ನ್ಯೂಸ್ ಚೆಕರ್ ಟಿಪ್ ಲೈನ್ (+91-9999499044) ಗೆ ಮನವಿ ಬಂದಿದ್ದು, ಇದು ತಪ್ಪಾದ ಸಂದರ್ಭ ಎಂದು ತಿಳಿದುಬಂದಿದೆ.
ಸತ್ಯಶೋಧನೆಗಾಗಿ ನಾವು ಗೂಗಲ್ ನಲ್ಲಿ ಕೀವರ್ಡ್ ಸರ್ಚ್ ನಡೆಸಿದ್ದೇವೆ. ಈ ವೇಳೆ ಫಲಿತಾಂಶಗಳು ಲಭ್ಯವಾಗಿವೆ.
ಏಪ್ರಿಲ್ 24, 2019 ರ ಡೆಕ್ಕನ್ ಹೆರಾಲ್ಡ್ ವರದಿಯ ಪ್ರಕಾರ, ಕಾಂಗ್ರೆಸ್ ಮುಖಂಡ ಹಾಗೂ ಕಲಬುರಗಿ ಕಾಂಗ್ರೆಸ್ ಅಭ್ಯರ್ಥಿ ಎಂ.ಮಲ್ಲಿಕಾರ್ಜುನ ಖರ್ಗೆ ಅವರು ಪತ್ನಿ ರಾಧಾಬಾಯಿ ಅವರೊಂದಿಗೆ ಮತಗಟ್ಟೆಗೆ ಆಗಮಿಸಿ ಒಟ್ಟಿಗೆ ಮತ ಚಲಾಯಿಸಿದ್ದಕ್ಕಾಗಿ ರಾಜ್ಯ ಬಿಜೆಪಿ ಘಟಕ ಮಂಗಳವಾರ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ ಎಂದಿದೆ.
ಏಪ್ರಿಲ್ 23, 2019 ರ ವಾರ್ತಾ ಭಾರತಿ ವರದಿ ಪ್ರಕಾರ, ಕಲಬುರಗಿ ಮೈತ್ರಿ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ತಮ್ಮ ಪತ್ನಿಯೊಂದಿಗೆ ಮತದಾನ ಮಾಡುವ ಮೂಲಕ ‘ಪ್ರಜಾ ಪ್ರತಿನಿಧಿ ಕಾಯ್ದೆ’ ಉಲ್ಲಂಘಿಸಿದ್ದು, ಅವರ ವಿರುದ್ಧ ಚುನಾವಣಾ ಆಯೋಗ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಮನವಿ ಮಾಡಿದೆ. ಮಂಗಳವಾರ ಮಲ್ಲಿಕಾರ್ಜುನ ಖರ್ಗೆ ಕಲಬುರಗಿಯ ಬೂತ್ ಸಂಖ್ಯೆ 119ರಲ್ಲಿ ಪತ್ನಿಯೊಂದಿಗೆ ಮತಗಟ್ಟೆಗೆ ತೆಳಿದ್ದು ದಂಪತಿ ಒಟ್ಟಿಗೆ ಮತದಾನ ಮಾಡಿದ್ದು, ಇದು ಗುಪ್ತ ಮತದಾನ ಮಾಡಬೇಕೆಂಬ ಪ್ರಜಾ ಪ್ರತಿನಿಧಿ ಕಾಯ್ದೆ ಉಲ್ಲಂಘನೆಯಾಗಿದೆ. ಅಲ್ಲದೆ ಈ ಬಗ್ಗೆ ಎಚ್ಚರಿಕೆ ವಹಿಸಬೇಕಿದ್ದ ಚುನಾವಣಾಧಿಕಾರಿಗಳು ಕರ್ತವ್ಯ ಲೋಪ ಎಸಗಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ ಎಂದಿದೆ.
ಇದೇ ರೀತಿಯ ವರದಿಗಳನ್ನು ಇಲ್ಲಿ, ಇಲ್ಲಿ ನೋಡಬಹುದು.
ಈ ವರದಿಗಳ ಪ್ರಕಾರ, ಪತ್ನಿಯೊಂದಿಗೆ ಖರ್ಗೆ ಮತದಾನ ಮಾಡಿ, ಗೌಪ್ಯತಾ ನಿಯಮ ಉಲ್ಲಂಘಿಸಿದ್ದಾರೆ ಎಂದ ಆರೋಪ 2019ರದ್ದಾಗಿದೆ. ಇದರೊಂದಿಗೆ ಪ್ರಕರಣ ಆ ಬಳಿಕ ಏನಾಯಿತು ಎಂಬ ಬಗ್ಗೆಯೂ ನಾವು ಶೋಧ ನಡೆಸಿದ್ದೇವೆ.
ಏಪ್ರಿಲ್ 26, 2019ರ ಕನ್ನಡ ಪ್ರಭ ವರದಿಯಲ್ಲಿ, ಹಿರಿಯ ಕಾಂಗ್ರೆಸ್ ನಾಯಕ, ಕಲಬುರಗಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ. ಮಲ್ಲಿಕಾರ್ಜುನ ಖರ್ಗೆ ಅವರು ಏಪ್ರಿಲ್ 23ರಂದು ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದಿಂದ ಚುನಾವಣಾ ಆಯೋಗ ಕ್ಲೀನ್ ಚಿಟ್ ನೀಡಿದೆ. ಏಪ್ರಿಲ್ -23ರಂದು ಮತದಾನದ ವೇಳೆ ಕಾಂಗ್ರೆಸ್ ನಾಯಕ ಖರ್ಗೆ ಅವರು, ಯಾವುದೇ ನೀತಿ ಸಂಹಿತೆಯನ್ನು ಉಲ್ಲಂಘಿಸಿಲ್ಲ. ಮತಗಟ್ಟಗೆ ಅವರೊಬ್ಬರೇ ಪ್ರವೇಶಿಸಿ ಮತಚಲಾಯಿಸಿದ್ದಾರೆ ಎಂದು ಮತಗಟ್ಟೆ ಅಧಿಕಾರಿಗಳು ಹೇಳಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ ಎಂದಿದೆ.
ಈ ಪುರಾವೆಗಳ ಪ್ರಕಾರ, ಪತ್ನಿ ಮತದಾನ ಮಾಡುವ ವೇಳೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಜೊತೆಗೇ ಇದ್ದು ನಿಯಮ ಉಲ್ಲಂಘಿಸಿದ್ದಾರೆ ಎನ್ನುವ ಹೇಳಿಕೆ ತಪ್ಪಾದ ಸಂದರ್ಭವಾಗಿದೆ. ಇದು 2019ರಲ್ಲಿ ನಡೆದ ವಿದ್ಯಮಾನವಾಗಿದೆ.
Our Sources:
Report BY Deccan Herald, Dated: April 24, 2019
Report By Varthabharathi, Dated: April 23, 2019
Report By Kannadaprabha, Dated: April 26, 2019
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.
Ishwarachandra B G
January 21, 2025
Prasad Prabhu
November 29, 2024
Ishwarachandra B G
October 26, 2024
|