About: http://data.cimple.eu/claim-review/421ddcdf6160acafa4c6edd532245dd9b0696de3867282212748ca41     Goto   Sponge   NotDistinct   Permalink

An Entity of Type : schema:ClaimReview, within Data Space : data.cimple.eu associated with source document(s)

AttributesValues
rdf:type
http://data.cimple...lizedReviewRating
schema:url
schema:text
  • ಮೂಲಕ: ರಾಹುಲ್ ಅಧಿಕಾರಿ ಆಗಸ್ಟ್ 23 2024 ವೈರಲ್ ಚಿತ್ರದಲ್ಲಿ ಕಾಣುವ ಮಹಿಳೆ ಢಾಕಾ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲರಲ್ಲ, ಮಾಜಿ ವಿದ್ಯಾರ್ಥಿ ಎಂದು ಹೇಳಿಕೊಳ್ಳುವ ವ್ಯಕ್ತಿಯನ್ನು ಕಟ್ಟಿಹಾಕಿರುವುದನ್ನು ತೋರಿಸುತ್ತದೆ. ಹೇಳಿಕೆ ಏನು? ಬಾಂಗ್ಲಾದೇಶದಲ್ಲಿ ಮುಸ್ಲಿಂ ವಿದ್ಯಾರ್ಥಿಗಳು ಗೀತಾಂಜಲಿ ಬರುವಾ ಎಂಬ ಹಿಂದೂ ಶಿಕ್ಷಕಿಯನ್ನು ಮರಕ್ಕೆ ಕಟ್ಟಿಹಾಕಿದ್ದರೆ ಎನ್ನುವ ಚಿತ್ರವು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಈ ಸಮರ್ಥನೆಗಳ ಪ್ರಕಾರ, ಬರುವಾಗೆ ರಾಜೀನಾಮೆ ನೀಡುವಂತೆ ಒತ್ತಡ ಹೇರಲಾಯಿತು ಮತ್ತು ಅವರು ನಿರಾಕರಿಸಿದಾಗ ವಿದ್ಯಾರ್ಥಿಗಳಿಂದ ಈ ಚಿಕಿತ್ಸೆಗೆ ಒಳಪಡಿಸಲಾಯಿತು ಎಂದು ಹೇಳಲಾಗಿದೆ. ಎಕ್ಸ್ (ಹಿಂದೆ ಟ್ವಿಟ್ಟರ್) ನಲ್ಲಿನ ಪೋಷ್ಟ್ ಗಳು ಇದನ್ನು ಬಾಂಗ್ಲಾದೇಶದಲ್ಲಿ ಕೋಮು ಹಿಂಸಾಚಾರದ ಪುರಾವೆ ಎಂದು ಉಲ್ಲೇಖಿಸಿವೆ, ಕೆಲವು ಬಳಕೆದಾರರು ಇದನ್ನು ನಡೆಯುತ್ತಿರುವ "ಹತ್ಯಾಕಾಂಡ" ದ ಭಾಗವೆಂದು ವಿವರಿಸಿದ್ದಾರೆ. ಈ ಪೋಷ್ಟ್ ಗಳ ಆರ್ಕೈವ್ ಮಾಡಿದ ಆವೃತ್ತಿಗಳು ಇಲ್ಲಿ ಮತ್ತು ಇಲ್ಲಿ ಲಭ್ಯವಿದೆ. ಸಾಮಾಜಿಕ ಮಾಧ್ಯಮ ಪೋಷ್ಟ್ ಗಳ ಸ್ಕ್ರೀನ್ಶಾಟ್ಗಳು. (ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್ನಿಂದ ಮಾರ್ಪಡಿಸಲಾಗಿದೆ) "ಗೀತಾಂಜಲಿ ಬರುವಾ ಬೀಯಿಂಗ್ ಟೈಡ್ ಟು ಆ ಟ್ರೀ ಬೈ ಹರ್ ಸ್ಟೂಡೆಂಟ್ಸ್" ಎಂಬ ಶೀರ್ಷಿಕೆಯ ವರದಿಯನ್ನು ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ಪ್ರಕಟಿಸಿದೆ. ಬರುವಾ ಅವರನ್ನು ವಿದ್ಯಾರ್ಥಿಗಳು ಮರಕ್ಕೆ ಕಟ್ಟಿದ್ದರು ಎಂಬ ಹೇಳಿಕೆಯನ್ನು ವರದಿ ಪುನರುಚ್ಚರಿಸಿದೆ. ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ನ ವರದಿಯ ಸ್ಕ್ರೀನ್ಶಾಟ್. (ಮೂಲ: ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್/ಲಾಜಿಕಲಿ ಫ್ಯಾಕ್ಟ್ಸ್ನಿಂದ ಮಾರ್ಪಡಿಸಲಾಗಿದೆ) ಅದ್ದರೆ, ಈ ಹೇಳಿಕೆ ತಪ್ಪು. ವೈರಲ್ ಚಿತ್ರದಲ್ಲಿರುವ ಮಹಿಳೆ ಮಾಜಿ ವಿದ್ಯಾರ್ಥಿಯಾಗಿದ್ದು, ಪ್ರತಿಭಟನಾಕಾರರಿಂದ ಮರಕ್ಕೆ ಕಟ್ಟಿಹಾಕಲಾಗಿತ್ತು. ಪ್ರಾಂಶುಪಾಲೆ ಗೀತಾಂಜಲಿ ಬರುವಾ ವಿದ್ಯಾರ್ಥಿಗಳಿಂದ ಕಟ್ಟಿದ ವ್ಯಕ್ತಿ ಅಲ್ಲ. ನಾವು ಸತ್ಯವನ್ನು ಹೇಗೆ ಕಂಡುಕೊಂಡೆವು? ವೈರಲ್ ಪೋಷ್ಟ್ ಗಳ ನಿಖರತೆಯನ್ನು ದೃಢಪಡಿಸಲು ನಾವು ವಿವರಗಳನ್ನು ಪರಿಶೀಲಿಸಿದ್ದೇವೆ. ಢಾಕಾದ ಅಜೀಂಪುರ ಸರ್ಕಾರಿ ಬಾಲಕಿಯರ ಶಾಲೆ ಮತ್ತು ಕಾಲೇಜಿನ ವಿದ್ಯಾರ್ಥಿಗಳು ಪ್ರಾಂಶುಪಾಲೆ ಬರುವಾ ಸೇರಿದಂತೆ ಇಬ್ಬರು ಶಿಕ್ಷಕರ ರಾಜೀನಾಮೆಗೆ ಕರೆ ನೀಡಿ ಪ್ರತಿಭಟನೆ ನಡೆಸಿದ್ದರು. ಬಾಂಗ್ಲಾದೇಶದ ಮಾಧ್ಯಮ ಸಂಸ್ಥೆ ಅಜ್ಕರ್ ಪತ್ರಿಕಾ ವರದಿಯ ಪ್ರಕಾರ, ವಿದ್ಯಾರ್ಥಿಗಳ ಮೇಲೆ ದಾಳಿ ಮಾಡಲು ಶಿಕ್ಷಕರು ಮಾಜಿ ವಿದ್ಯಾರ್ಥಿಗಳನ್ನು ಕರೆಸಿಕೊಂಡಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದರು. ಪ್ರತೀಕಾರವಾಗಿ, ವಿದ್ಯಾರ್ಥಿಗಳು ಈ ಮಾಜಿ ವಿದ್ಯಾರ್ಥಿಯೊಬ್ಬರನ್ನು ಮರಕ್ಕೆ ಕಟ್ಟಿ ಹಾಕಿದರು. "ವಿದ್ಯಾರ್ಥಿಗಳಿಗೆ ಬೆದರಿಕೆ, ಅಜೀಂಪುರದಲ್ಲಿ ಮರಕ್ಕೆ ಕಟ್ಟಿದ ಮಾಜಿ ವಿದ್ಯಾರ್ಥಿ" ಎಂಬ ಶೀರ್ಷಿಕೆಯಡಿಯಲ್ಲಿ ಈ ಘಟನೆಯನ್ನು ಆಗಸ್ಟ್ ೧೯ ರಂದು ವರದಿ ಮಾಡಲಾಗಿದೆ. ವರದಿಯಲ್ಲಿ ಮಾಜಿ ವಿದ್ಯಾರ್ಥಿಯನ್ನು ಮರಕ್ಕೆ ಕಟ್ಟಿದ ಹಲವಾರು ಚಿತ್ರಗಳೊಂದಿಗೆ ವೀಡಿಯೋವನ್ನೂ ಸಹ ಒಳಗೊಂಡಿದೆ. ಈ ಚಿತ್ರಗಳನ್ನು ವೈರಲ್ ಫೋಟೋದೊಂದಿಗೆ ಹೋಲಿಸಿದಾಗ, ಅವು ಅದೇ ಘಟನೆಯನ್ನು ಚಿತ್ರಿಸುತ್ತವೆ ಎಂದು ನಾವು ಖಚಿತಪಡಿಸಿಕೊಂಡಿದ್ದೇವೆ. ಸುದ್ದಿ ವರದಿ ಒಳಗೊಂಡ ಚಿತ್ರ ಮತ್ತು ವೈರಲ್ ಚಿತ್ರದ ನಡುವಿನ ಹೋಲಿಕೆ. (ಮೂಲ: ಎಕ್ಸ್/ಅಜ್ಕರ್ ಪತ್ರಿಕಾ) ಬಾಂಗ್ಲಾದೇಶದ ಟೆಲಿವಿಷನ್ ನೆಟ್ವರ್ಕ್ ಎಟಿಎನ್ ನ್ಯೂಸ್ ಲೈವ್ (ಇಲ್ಲಿ ಆರ್ಕೈವ್ ಮಾಡಲಾಗಿದೆ) ಈ ಪ್ರತಿಭಟನೆಯನ್ನು ವರದಿ ಮಾಡಿದೆ, ಇದು ಶಾಲೆಯ ಮೊದಲ ದಿನದಂದು ನಡೆದಿದ್ದು ಎಂದು ಹೇಳಲಾಗಿದೆ. ಅಕ್ರಮ ಕೋಚಿಂಗ್ ವ್ಯವಹಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಪ್ರಾಂಶುಪಾಲರು ಮತ್ತು ಶಿಕ್ಷಕರ ರಾಜೀನಾಮೆಗೆ ವಿದ್ಯಾರ್ಥಿಗಳು ಒತ್ತಾಯಿಸಿದ್ದರು. ಶಿಕ್ಷಕರು ಅವಾಚ್ಯ ಶಬ್ದಗಳಿಂದ ವಿದ್ಯಾರ್ಥಿಗಳನ್ನು ನಿಂದಿಸಿದ್ದಾರೆ ಮತ್ತು ಅವರ ವಿರುದ್ಧ ಸೇಡು ತೀರಿಸಿಕೊಳ್ಳಲು ಮಾಜಿ ವಿದ್ಯಾರ್ಥಿಗಳನ್ನು ಕರೆದಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದರು. ವೀಡಿಯೋದಲ್ಲಿ ಪ್ರಾಂಶುಪಾಲ ಬರುವಾ ಅವರು ಪರಿಸ್ಥಿತಿಯನ್ನು ತಿಳಿಸಿದ್ದು, ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಪ್ರತಿಭಟನೆಯ ನಡುವೆ, ಬರುವಾ ಅವರು ಲಿಖಿತ ರಾಜೀನಾಮೆ ಸಲ್ಲಿಸಿದರು, ಇದು ಸುದ್ದಿ ದೃಶ್ಯಗಳಲ್ಲಿ ಸೆರೆಹಿಡಿಯಲಾಗಿದೆ. ವಿದ್ಯಾರ್ಥಿಗಳು ತಮ್ಮ ಮೇಲೆ 'ಹೊರಗಿನವರು' ದಾಳಿ ಮಾಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ, ನಂತರ ಅವರನ್ನು ಮಾಜಿ ವಿದ್ಯಾರ್ಥಿಗಳು ಎಂದು ಗುರುತಿಸಲಾಗಿತ್ತು. ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ವಿದ್ಯಾರ್ಥಿನಿಯೊಬ್ಬರು, ೧೪ ವರ್ಷಗಳ ಹಿಂದೆ ಶಾಲೆಯಿಂದ ಪದವಿ ಪಡೆದಿರುವುದನ್ನು ದೃಢಪಡಿಸಿದರು. ಉದ್ವಿಗ್ನತೆ ಉಲ್ಬಣಗೊಳ್ಳುತ್ತಿದ್ದಂತೆ, ಸುವ್ಯವಸ್ಥೆಯನ್ನು ಪುನಃಸ್ಥಾಪಿಸಲು ಸೇನೆಯು ಮಧ್ಯಪ್ರವೇಶಿಸಿತು ಎಂದು ವರದಿ ಮಾಡಲಾಗಿದೆ. ಹೆಚ್ಚುವರಿಯಾಗಿ, ನಾವು ಸುದ್ದಿ ವೀಡಿಯೋದಿಂದ ಪ್ರಾಂಶುಪಾಲೆ ಬರುವಾ ಅವರ ಚಿತ್ರಗಳನ್ನು ಮರಕ್ಕೆ ಕಟ್ಟಿದ ಮಹಿಳೆಯ ಚಿತ್ರಗಳೊಂದಿಗೆ ಹೋಲಿಸಿದ್ದೇವೆ. ಹೋಲಿಕೆಯು ಅವರು ಎರಡು ವಿಭಿನ್ನ ವ್ಯಕ್ತಿಗಳು ಎಂದು ನಿರ್ಣಾಯಕವಾಗಿ ತೋರಿಸುತ್ತದೆ. ಪ್ರಾಂಶುಪಾಲೆ ಗೀತಾಂಜಲಿ ಬರುವಾ (ಎಡ) ಮತ್ತು ವಿದ್ಯಾರ್ಥಿಗಳಿಂದ ಮರಕ್ಕೆ ಕಟ್ಟಿಹಾಕಲ್ಪಟ್ಟ ಹೊರಗಿನ ವ್ಯಕ್ತಿಯನ್ನು ತೋರಿಸುತ್ತದೆ (ಬಲ). (ಮೂಲ: ಎಟಿಎನ್ ನ್ಯೂಸ್ ಲೈವ್/ಎಕ್ಸ್/ ಸ್ಕ್ರೀನ್ಶಾಟ್) ಇದನ್ನು ಮತ್ತಷ್ಟು ದೃಢೀಕರಿಸಲು, ಅಧಿಕೃತ ಅಜೀಂಪುರ ಸರ್ಕಾರಿ ಬಾಲಕಿಯರ ಶಾಲೆ ಮತ್ತು ಕಾಲೇಜು ವೆಬ್ಸೈಟ್ನಲ್ಲಿ ಬರುವಾ ಅವರ ಚಿತ್ರವು ವೈರಲ್ ಚಿತ್ರದಲ್ಲಿರುವ ಮಹಿಳೆ ಅವರಲ್ಲ ಎಂದು ಸ್ಪಷ್ಟಪಡಿಸುತ್ತದೆ. ಮರಕ್ಕೆ ಕಟ್ಟಿದ ಮಹಿಳೆಯನ್ನು ನಾವು ಖಚಿತವಾಗಿ ಗುರುತಿಸಲು ಸಾಧ್ಯವಾಗದಿದ್ದರೂ, ಅವರು ಪ್ರಾಂಶುಪಾಲೆ ಬರುವಾ ಅಲ್ಲ ಎಂಬುದು ಸ್ಪಷ್ಟವಾಗಿದೆ. ಪ್ರತಿಭಟನೆಯು ಶಿಕ್ಷಕರಿಂದ ಭ್ರಷ್ಟಾಚಾರ ಮತ್ತು ದುರ್ನಡತೆಯ ಆರೋಪಗಳ ಮೇಲೆ ಕೇಂದ್ರೀಕೃತವಾಗಿತ್ತು ಮತ್ತು ಕೋಮು ವಿಚಾರಗಳಿಂದ ಪ್ರೇರಿತವಾಗಿರಲಿಲ್ಲ. ಶೇಖ್ ಹಸೀನಾ ಅವರು ಬಾಂಗ್ಲಾದೇಶದ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ, ವಿವಿಧ ಪ್ರದೇಶಗಳಲ್ಲಿ ಹಿಂಸಾಚಾರದ ವರದಿಗಳೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಕೋಮುವಾದದ ತಪ್ಪು ಮಾಹಿತಿಯ ಉಲ್ಬಣವು ತುಂಬಿದೆ. ಲಾಜಿಕಲಿ ಫ್ಯಾಕ್ಟ್ಸ್ ಹಲವಾರು ರೀತಿಯ ಹೇಳಿಕೆಗಳನ್ನು ನಿರಾಕರಿಸಿದೆ, ಅದನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು. ತೀರ್ಪು ವೈರಲ್ ಚಿತ್ರವು ಅಜೀಂಪುರ ಸರ್ಕಾರಿ ಬಾಲಕಿಯರ ಶಾಲೆ ಮತ್ತು ಕಾಲೇಜಿನ ಪ್ರಾಂಶುಪಾಲೆ ಗೀತಾಂಜಲಿ ಬರುವಾ ಅವರನ್ನು ಮರಕ್ಕೆ ಕಟ್ಟಿಹಾಕಿರುವುದನ್ನು ತೋರಿಸುವುದಿಲ್ಲ. ಇದು ವಾಸ್ತವವಾಗಿ ಪ್ರತಿಭಟಿಸುವ ವಿದ್ಯಾರ್ಥಿಗಳಿಂದ ಸಂಯಮದ ಮಾಜಿ ವಿದ್ಯಾರ್ಥಿಯನ್ನು ಚಿತ್ರಿಸುತ್ತದೆ. ಕೋಮು ಘಟನೆಯ ಭಾಗವಾಗಿ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ತಪ್ಪಾಗಿ ಪ್ರಸ್ತುತಪಡಿಸಲಾಗಿದೆ. (ಅನುವಾದಿಸಿದವರು: ಅಂಕಿತಾ ಕುಲಕರ್ಣಿ) Read this fact-check in English here.
schema:mentions
schema:reviewRating
schema:author
schema:datePublished
schema:inLanguage
  • English
schema:itemReviewed
Faceted Search & Find service v1.16.115 as of Oct 09 2023


Alternative Linked Data Documents: ODE     Content Formats:   [cxml] [csv]     RDF   [text] [turtle] [ld+json] [rdf+json] [rdf+xml]     ODATA   [atom+xml] [odata+json]     Microdata   [microdata+json] [html]    About   
This material is Open Knowledge   W3C Semantic Web Technology [RDF Data] Valid XHTML + RDFa
OpenLink Virtuoso version 07.20.3238 as of Jul 16 2024, on Linux (x86_64-pc-linux-musl), Single-Server Edition (126 GB total memory, 5 GB memory in use)
Data on this page belongs to its respective rights holders.
Virtuoso Faceted Browser Copyright © 2009-2025 OpenLink Software