About: http://data.cimple.eu/claim-review/475b98b0de5e6ff997ef47e7c939f9b9d0d9f48f5aa396afa3d1030d     Goto   Sponge   NotDistinct   Permalink

An Entity of Type : schema:ClaimReview, within Data Space : data.cimple.eu associated with source document(s)

AttributesValues
rdf:type
http://data.cimple...lizedReviewRating
schema:url
schema:text
  • ಫ್ಯಾಕ್ಟ್ಚೆಕ್: ವೈಎಸ್ಆರ್ಸಿಪಿ ನಾಯಕರು ಮತದಾನದ ವೇಳೆ ಅಳಿಸಲಾಗದ ಶಾಯಿ ಬಳಸುತ್ತಿದ್ದಾರೆ ಎಂದು ಜನಸೇನಾ ಮುಖಂಡ ನಾಗೇಂದ್ರ ಬಾಬು ಕೊನಿಡೇಲ ಆರೋಪದಲ್ಲಿ ನಿಜಾಂಶವೇನು? ವೈಎಸ್ಆರ್ಸಿಪಿ ನಾಯಕರು ಮತದಾನದ ವೇಳೆ ಅಳಿಸಲಾಗದ ಶಾಯಿ ಬಳಸುತ್ತಿದ್ದಾರೆ ಎಂದು ಜನಸೇನಾ ಮುಖಂಡ ನಾಗೇಂದ್ರ ಬಾಬು ಕೊನಿಡೇಲ ಆರೋಪದಲ್ಲಿ ನಿಜಾಂಶವೇನು? Claim :ಮತದಾನದ ಸಮಯದಲ್ಲಿ ಒಂದು ಪಕ್ಷವು ಮತದಾರರನ್ನು ಖರೀದಿಸಿ ಅವರಿಗೆ ಆ ಪಕ್ಷದ ಶಾಯಿಯ ಗುರುತನ್ನು ಬೆರಳಿಗೆ ಹಾಕಿದ್ದಾರೆ ಎಂದು ಜನಸೇನಾ ಪಕ್ಷದ ನಾಯಕ ನಾಗೇಂದ್ರ ಬಾಬು ಕೊನಿಡೇಲ ಆರೋಪಿಸಿದ್ದಾರೆ Fact :ಭಾರತೀಯ ಚುನಾವಣಾ ಆಯೋಗವು ನೇಮಿಸಿದ ಅಧಿಕಾರಿಗಳಿಗೆ ಮಾತ್ರ ಅಳಿಸಲಾಗದ ಶಾಯಿಯನ್ನು ಬಳಸುವ ಅಧಿಕಾರವಿದೆ ಎಂದು ಆಂಧ್ರಪ್ರದೇಶದ ಸಿಇಒ ಸ್ಪಷ್ಟಪಡಿಸಿದ್ದಾರೆ. ಆಂಧ್ರಪ್ರದೇಶದಲ್ಲಿ ನಡೆದ ಅಸೆಂಬ್ಲಿ ಚುನಾವಣೆ ಮತ್ತು ಲೋಕಸಭೆ ಸಾರ್ವತ್ರಿಕ ಚುನಾವಣೆಯ ನಾಲ್ಕನೇ ಹಂತದ ಮತದಾನವು ಮೇ 14 ರಂದು ನಡೆಯಿತು. YSRCP ಅಧ್ಯಕ್ಷ ಮತ್ತು ಹಾಲಿ ಸಿಎಂ ಜಗನ್ ಮೋಹನ್ ರೆಡ್ಡಿ ಪುಲಿವೆಂದುಲಾ ಕ್ಷೇತ್ರದಿಂದ ಸ್ಪರ್ಥಿಸಿದರು. ವಿರೋಧ ಪಕ್ಷದ ನಾಯಕ ಮತ್ತು ತೆಲುಗು ದೇಶಂ ಪಾರ್ಟಿಯ ಅಧ್ಯಕ್ಷ ನಾರಾ ಚಂದ್ರಬಾಬು ನಾಯ್ಡು ಕುಪ್ಪಂನಿಂದ ಮತ್ತು ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ಪಿಠಾಪುರಂ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಜನಸೇನಾ ಮುಖಂಡ ನಾಗೇಂದ್ರ ಬಾಬು ಕೊನಿಡೇಲಗೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮೇ 11,2024ರಂದು ಅಪ್ಲೋಡ್ ಆಗಿರುವ ವೈರಲ್ ವಿಡಿಯೋವಿನಲ್ಲಿ ನಾಗೇಂದ್ರ ಬಾಬು "ಮತದಾನದ ಸಮಯದಲ್ಲಿ ವೈಸಿಪಿ ಪಕ್ಷ ಮತದಾರರನ್ನು ಖರೀದಿಸಿ ಅವರಿಗೆ ಆ ಪಕ್ಷದ ಶಾಯಿಯ ಗುರುತನ್ನು ಬೆರಳಿಗೆ ಹಾಕಿದ್ದಾರೆ ಎಂದು ಜನಸೇನಾ ಪಕ್ಷದ ನಾಯಕ ನಾಗೇಂದ್ರ ಬಾಬು ಕೊನಿಡೇಲ ಆರೋಪಿಸಿದ್ದಾರೆ" ఓటర్ మహాశయులార బీ అలర్ట్ మీ ఓటు దోపిడీ కాబోతుంది— Naga Babu Konidela (@NagaBabuOffl) May 11, 2024 సిరా పూసి ఓటు వెయ్యకుండానే మీ ఓటుని కాజేసే వైసిపి కుట్ర ని తరిమికొట్టండి....@ECISVEEP#beawareofbrastachars #castyourvote pic.twitter.com/vRdyD35ZSt ಮೇ 11, 2024 ರಂದು, ಜನ ಸೇನಾ ಪಕ್ಷವು ತಮ್ಮ ಅಧಿಕೃತ ಸಾಮಾಜಿಕ ಮಾಧ್ಯಮದ ಖಾತೆಗಳಲ್ಲಿ ಅದೇ ವೀಡಿಯೊವನ್ನು ಹಂಚಿಕೊಂಡಿದೆ. ఓటు హక్కు వినియోగించుకోకుండా ఉండాలని బెదిరిస్తూ, డబ్బు ఆశ చూపి ముందుగానే చేతి వేలికి సిరా చుక్క పెట్టే ప్రయత్నం చేస్తున్న వైసీపీ నాయకుల దుర్మార్గాన్ని అడ్డుకోవాలి.— JanaSena Party (@JanaSenaParty) May 11, 2024 -శ్రీ నాగబాబు గారు#PawanKalyanWinningPithapuram #VoteForGlass #Pithapuram pic.twitter.com/FJppq9itUE ಫ್ಯಾಕ್ಟ್ಚೆಕ್ ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ಭಾರತದ ಚುನಾವಣಾ ಆಯೋಗದಿಂದ ನೇಮಕಗೊಂಡ ಅಧಿಕಾರಿಗಳಿಗೆ ಮಾತ್ರ ಅಳಿಸಲಾಗದ ಶಾಯಿ ಬಳಸುವ ಅಧಿಕಾರವಿದೆ ಎಂದು ಆಂಧ್ರಪ್ರದೇಶದ ಮುಖ್ಯ ಚುನಾವಣಾಧಿಕಾರಿ ಸ್ಪಷ್ಟಪಡಿಸಿದ್ದಾರೆ. ನಾವು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ನಮಗೆ ಮೇ 12, 2024 ರಂದು ಆಂಧ್ರಪ್ರದೇಶದ ಮುಖ್ಯ ಚುನಾವಣಾ ಅಧಿಕಾರಿ ನಾಗೇಂದ್ರ ಬಾಬು ಕೊನಿಡೆಲಾ ಹಂಚಿಕೊಂಡಿರುವ ವೀಡಿಯೊವಿನ ಸ್ಕ್ರೀನ್ಶಾಟ್ವೊಂದನ್ನು ನಾವು ಕಂಡಿಕೊಂಡೆವು. ಸಿಇಓ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ವೈರಲ್ ಆದ ಸುದ್ದಿಯ ಕುರಿತು ಪೋಸ್ಟ್ವೊಂದನ್ನು ಹಂಚಿಕೊಂಡಿದ್ದರು, ಹಂಚಿಕೊಂಡ ಪೋಸ್ಟ್ಗೆ ಶೀರ್ಷಿಕೆಯಾಗಿ,"ಸುಳ್ಳು ಮಾಹಿತಿಯನ್ನು ನಂಬಬೇಡಿ ಹಾಗೂ ಶೇರ್ ಮಾಡಬೇಡಿ ಎಂದು ಪಿಠಾಪುರಂ ವಿಧಾನಸಭಾ ಕ್ಷೇತ್ರದ ಜಂಟಿ ಕಲೆಕ್ಟರ್ ಮತ್ತು ಚುನಾವಣಾಧಿಕಾರಿ ವಿಡಿಯೋವನ್ನು ಮಾಡಿ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದರು. ⚠️ MISINFORMATION ALERT! ⚠️— Chief Electoral Officer, Andhra Pradesh (@CEOAndhra) May 12, 2024 🛑 This morning false information in the form of video message from a leader of the Jana Sena Party has been spread in WhatsApp claiming that functionaries from another political party were giving out money and marking voters with indelible ink to… pic.twitter.com/O2dH0dh5OS ವೈರಲ್ ವಿಡಿಯೋವಿಗೆ ಸಂಬಂಧಿಸಿದ ಕೆಲವು ಕೀವರ್ಡ್ಗಳನ್ನು ಉಪಯೋಗಿಸಿ ಹುಡುಕಾಟ ನಡೆಸಿದಾಗ ನಮಗೆ ಮೇ,13,2024ರಂದು ಟೈಮ್ಸ್ ಆಫ್ ಇಂಡಿಯಾ ಬರೆದಿರುವ ವರದಿಯೊಂದು ಕಾಣಿಸಿತು. ಚುನಾವಣಾ ಆಯೋಗವು ಚುನಾವಣಾ ಶಾಯಿಯನ್ನು ದುರ್ಬಳಿಕೆ ಮಾಡಿಕೊಳ್ಳುತ್ತಿಲ್ಲ ಎಂದು ಸ್ಪಷ್ಟನೆ ನೀಡಿ ವಿಡಿಯೋವನ್ನು ಹಂಚಿಕೊಂಡಿದ್ದನ್ನು ನಾವು ಕಂಡೆವು. ತೆಲುಗು ವೋಕ್ಸ್ ವರದಿಯ ಪ್ರಕಾರ "ನಾಗಬಾಬು ಅವರ ಹೇಳಿಕೆಗೆ ಸಿಇಓ ಸ್ಪಷ್ಟನೆ ನೀಡಿದೆ " ಹೀಗಾಗಿ, ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ಭಾರತದ ಚುನಾವಣಾ ಆಯೋಗದಿಂದ ನೇಮಕಗೊಂಡ ಅಧಿಕಾರಿಗಳಿಗೆ ಮಾತ್ರ ಅಳಿಸಲಾಗದ ಶಾಯಿ ಬಳಸುವ ಅಧಿಕಾರವಿದೆ ಎಂದು ಆಂಧ್ರಪ್ರದೇಶದ ಮುಖ್ಯ ಚುನಾವಣಾಧಿಕಾರಿ ಸ್ಪಷ್ಟಪಡಿಸಿದ್ದಾರೆ.
schema:mentions
schema:reviewRating
schema:author
schema:datePublished
schema:inLanguage
  • Telugu
schema:itemReviewed
Faceted Search & Find service v1.16.115 as of Oct 09 2023


Alternative Linked Data Documents: ODE     Content Formats:   [cxml] [csv]     RDF   [text] [turtle] [ld+json] [rdf+json] [rdf+xml]     ODATA   [atom+xml] [odata+json]     Microdata   [microdata+json] [html]    About   
This material is Open Knowledge   W3C Semantic Web Technology [RDF Data] Valid XHTML + RDFa
OpenLink Virtuoso version 07.20.3238 as of Jul 16 2024, on Linux (x86_64-pc-linux-musl), Single-Server Edition (126 GB total memory, 3 GB memory in use)
Data on this page belongs to its respective rights holders.
Virtuoso Faceted Browser Copyright © 2009-2025 OpenLink Software