About: http://data.cimple.eu/claim-review/56cc41b64cc7960cec512b7d15658763b69b841b76e30ff54656f52e     Goto   Sponge   NotDistinct   Permalink

An Entity of Type : schema:ClaimReview, within Data Space : data.cimple.eu associated with source document(s)

AttributesValues
rdf:type
http://data.cimple...lizedReviewRating
schema:url
schema:text
  • ಫ್ಯಾಕ್ಟ್ಚೆಕ್: ಇಬ್ಬರು ಮುಸ್ಲಿಮರು ಹಸುವಿನ ತಲೆಯನ್ನು ಕತ್ತರಿಸಿ ದೇವಸ್ಥಾನಕ್ಕೆ ಎಸೆದಿದ್ದಾರೆ ಎಂಬ ಫೋಟೋ ವೈರಲ್ ಇಬ್ಬರು ಮುಸ್ಲಿಮರು ಹಸುವಿನ ತಲೆಯನ್ನು ಕತ್ತರಿಸಿ ದೇವಸ್ಥಾನಕ್ಕೆ ಎಸೆದಿದ್ದಾರೆ ಎಂಬ ಫೋಟೋ ವೈರಲ್ Claim :ಇಬ್ಬರು ಮುಸ್ಲಿಮರು ಹಸುವಿನ ತಲೆಯನ್ನು ದೇವಸ್ಥಾನಕ್ಕೆ ಎಸೆದಿದ್ದಾರೆ Fact :ಮೂಲ ಚಿತ್ರವನ್ನು ಬಿಲ್ಲೇಶ್ವರ ದೇವಾಲಯದಲ್ಲಿ ದುರ್ಗಾ ಪೂಜೆಯ ಸಮಯದಲ್ಲಿ ತೆಗೆದದ್ದು ಇಬ್ಬರು ವ್ಯಕ್ತಿಗಳು ಕತ್ತರಿಸಿದ ಹಸುವಿನ ತಲೆಯನ್ನು ದೇವಸ್ಥಾನಕ್ಕೆ ಎಸೆದಿದ್ದಾರೆ ಎಂಬ ಸ್ಕ್ರೀನ್ಶಾಟ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವೈರಲ್ ಚಿತ್ರದಲ್ಲಿ, ವ್ಯಕ್ತಿಯೊಬ್ಬ ತನ್ನ ತಲೆಯ ಮೇಲೆ ಎಮ್ಮೆಯ ತಲೆಯನ್ನು ಹಿಡಿದು ಜನನಿಬಿಡ ಪ್ರದೇಶದಿಂದ ನಡೆದುಕೊಂಡು ಹೋಗುತ್ತಿರುವುದನ್ನು ನೋಡಬಹುದು. ಎಮ್ಮೆಯ ತಲೆಯನ್ನು ಹಿಡಿದಿರುವ ವ್ಯಕ್ತಿ, ಹಿಂದೂ ಪುರೋಹಿತರಂತೆ ಕಾಣುತ್ತಾನೆ. ಹೀಗಾಗಿ ಸಾಮಾಜಿಕ ಮಾಧ್ಯಮದಲ್ಲಿ ಬಳಕೆದಾರರು ನಿರ್ದಿಷ್ಟ ಧರ್ಮದ ವಿರುದ್ಧ ಹಿಂಸೆಯನ್ನು ಪ್ರಚೋದಿಸುವ ಶೀರ್ಷಿಕೆಯೊಂದಿಗೆ ವೈರಲ್ ಆದ ಚಿತ್ರವನ್ನು ಹಂಚಿಕೊಂಚಿಕೊಳ್ಳುತ್ತಿದ್ದಾರೆ: That chopped cow's head was thrown by two Muslim men into a temple. The priest had to do this to maintain the temple's sanctity. And now, see how this Islamist is mocking it... Bloody secularism." ಎಂಬ ಶೀರ್ಷಿಕೆಯೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಫೋಟೋವನ್ನು ಹಂಚಿಕೊಂಡಿದ್ದಾರೆ. That chopped head of cow was thrown by 2 MusIim guys in a temple, Pujari ji had to do this to maintain the sanctity of temple and then see how this IsIamist is making fun of it....— tweetkrishna (@krishnapaudel78) June 17, 2024 Bloody secularism....@BJP4India @HMOIndia @VHPDigital @AnandaRamPoudel #repost @MrSinha_ pic.twitter.com/8PV9vME4Nt That chopped head of cow was thrown by 2 MusIim guys in a temple, Pujari ji had to do this to maintain the sanctity of temple and then see how this IsIamist is making fun of it....— Amitabh Chaudhary (@MithilaWaala) June 17, 2024 Bloody secularism.... pic.twitter.com/aQBwmA4QyW ಫ್ಯಾಕ್ಟ್ಚೆಕ್ ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ಹಳೆಯ ಫೋಟೋವನ್ನು ತಪ್ಪು ತಪ್ಪು ಶೀರ್ಷಿಕೆಯೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ವೈರಲ್ ಆದ ಸುದ್ದಿಯಲ್ಲಿ ಸತ್ಯಾಂಶವನನು ತಿಳಿಯಲು ನಾವು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದೆವು ಹುಡುಕಾಟದಲ್ಲಿ ನಮಗೆ "Animal sacrifice in Guwahati, Assam, India - 07 Oct 2019." ಎಂಬ ಶಿರ್ಷಿಕೆಯೊಂದಿಗೊರುವ ಹಲವು ವರದಿಗಳು ನಮಗೆ ಸಿಕ್ಕಿತು. ಅಷ್ಟೇ ಅಲ್ಲ ಈ ಆಚರಣೆಗೆ ಸಂಬಂಧಿಸಿದ ಕೆಲವು ಫೋಟೋಗಳು ಸಹ ನಮಗೆ ಕಂಡುಬಂದಿತು. 07 ಅಕ್ಟೋಬರ್ 2019, ಭಾರತದ ಅಸ್ಸಾಂನಲ್ಲಿರುವ ಬಿಲ್ಲೇಶ್ವರ ದೇವಾಲಯದಲ್ಲಿ ಮಹಾನವಮಿಯ ದುರ್ಗಾ ಪೂಜೆಯ ಸಂದರ್ಭದಲ್ಲಿ ಹಿಂದೂ ಪುರೋಹಿತರು ಬಲಿ ಕೊಡುವ ಎಮ್ಮೆಯನ್ನು ಹಿಡಿದಿದ್ದಾರೆ ಎಂದಿರುವ ವರದಿಯನ್ನು ನಾವು ಕಂಡುಕೊಂಡೆವು. 07 ಅಕ್ಟೋಬರ್ 2019 ರಂದು ಭಾರತದ ಅಸ್ಸಾಂನ ಬಿಲ್ಲೇಶ್ವರ ದೇವಾಲಯದಲ್ಲಿ ದುರ್ಗಾ ಪೂಜೆಯ ಹಿಂದೂ ಹಬ್ಬವಾದ ಮಹಾ ನವಮಿಯ ಸಮಯದಲ್ಲಿ ಭಕ್ತರು ಬಲಿಯ ನಂತರ ಎಮ್ಮೆಯನ್ನು ಒಯ್ಯುತ್ತಾರೆ . ಐದು ದಿನಗಳ ಕಾಲ ನಡೆಯುವ ದುರ್ಗಾ ಪೂಜೆಯಲ್ಲಿ ಬಿಲ್ಲೇಶ್ವರ ದೇವಾಲಯದಲ್ಲಿ ಒಟ್ಟು 40 ಎಮ್ಮೆಗಳನ್ನು ಬಲಿ ನೀಡಿ ದುರ್ಗಾ ದೇವಿಯನ್ನು ಸಮಾಧಾನಪಡಿಸುತ್ತಾರೆ. ಅಷ್ಟೇ ಅಲ್ಲ, "ದುರ್ಗಾ ಪೂಜೆಯ ಸಮಯದಲ್ಲಿ ಬಿಲ್ಲೇಶ್ವರ ದೇವಸ್ಥಾನದಲ್ಲಿ ಎಮ್ಮೆ ಬಲಿ" ಎಂದು ನಾವು ಗೂಗಲ್ನಲ್ಲಿ ಹುಡುಕಿದಾಗ, ನಮಗೆ ಗೆಟ್ಟಿ ಇಮೇಜಸ್ನಲ್ಲಿ ವೈರಲ್ ಆದ ಚಿತ್ರ ಕಾಣಿಸಿತು. ಡೇವಿಡ್ ತಾಲೂಕ್ದಾರ್ ಎಂಬ ಛಾಯಾಗ್ರಾಹಕ ಸೆರೆಹಿಡಿದ ಚಿತ್ರಕ್ಕೆ "ದುರ್ಗಾ ಪೂಜೆಯ ಸಮಯದಲ್ಲಿ ಹಿಂದೂ ದೇವತೆ ದುರ್ಗಾಗೆ ಸಮರ್ಪಿತವಾದ ಬಿಲ್ಲೇಶ್ವರ ದೇವಾಲಯದ ದೇವಸ್ಥಾನದಲ್ಲಿ ಎಮ್ಮೆ ಬಲಿ" ಎಂಬ ಶೀರ್ಷಿಕೆಯೊಂದಿಗೆ ಚಿತ್ರವನ್ನು ಅಪ್ಲೋಡ್ ಮಾಡಲಾಗಿತ್ತು . ಪೋಸ್ಟ್ನಲ್ಲಿ: ʼ29 ಸೆಪ್ಟೆಂಬರ್ 2017, ಭಾರತದ ಅಸ್ಸಾಂನಲ್ಲಿರುವ ಗುವಾಹಟಿಯಲ್ಲಿ ಹೊರವಲಯದಲ್ಲಿರುವ ಬೆಲ್ಸೋರ್ನಲ್ಲಿ ನವಮಿ ದುರ್ಗಾ ಪೂಜೆ ಉತ್ಸವದ ಸಂದರ್ಭದಲ್ಲಿ ಹಿಂದೂ ದೇವತೆ ದುರ್ಗದ ಬಿಲ್ಲೇಶ್ವರ ದೇವಾಲಯದಲ್ಲಿ ವ್ಯಕ್ತಿಯೊಬ್ಬರು ಬಲಿ ನೀಡಿದ ಎಮ್ಮೆಯ ತಲೆಯನ್ನು ಹೊತ್ತೊಯ್ದಿದ್ದಾರೆ. ದೆ. ಅಕ್ಟೋಬರ್ 18, 2018 ರಂದು CRD ಡ್ರಾಮಾ ಎಂಬ ಹೆಸರಿನ ಯೂಟ್ಯೂಬರ್ ತನ್ನ ಚಾನೆಲ್ನಲ್ಲಿ ಅಪ್ಲೋಡ್ ಮಾಡಲಾದ ವೀಡಿಯೊವನ್ನು ಸಹ ನಾವು ಕಂಡುಕೊಂಡೆವು. 5:34 ಟೈಮ್ಸ್ಟ್ಯಾಂಪ್ನಲ್ಲಿ, ವೈರಲ್ ಚಿತ್ರದಲ್ಲಿ ಕಾಣುವ ವ್ಯಕ್ತಿಯ ವೇಷಭೂಷಣದಂತೆ ಪೂಜಾರಿಯನ್ನು ನಾವು ಕಾಣಬಹುದು. ETV ಭಾರತ್ನಲ್ಲಿ "Muslims part of Durga puja celebration in this Assam temple" ಎಂಬ ಶೀರ್ಷಿಕೆಯೊಂದಿಗೆ ವರದಿಯನ್ನು ಪ್ರಕಟಿಸಿರುವುದನ್ನು ನಾವು ಕಂಡುಕೊಂಡಿದ್ದೇವೆ . ಲೇಖನದಲ್ಲಿ ನಾವು ಅಸ್ಸಾಂನ ನಲ್ಬರಿ ಜಿಲ್ಲೆಯ 350 ವರ್ಷಗಳಷ್ಟು ಹಳೆಯದಾದ ಬಿಲ್ಲೇಶ್ವರ ದೇವಾಲಯದಲ್ಲಿ ಹಿಂದೂ ಮತ್ತು ಮುಸ್ಲಿಮರ ನಡುವಿನ ಕೋಮು ಸೌಹಾರ್ದ ಮತ್ತು ಸಹೋದರತ್ವಕ್ಕೆ ಜೀವಂತ ಉದಾಹರಣೆಯಾಗಿದೆ. ಮುಸ್ಲಿಮರು ದೈನಂದಿನ ಆಚರಣೆಗಳ ಅವಿಭಾಜ್ಯ ಅಂಗವಾಗಿದ್ದಾರೆ ಎಂದು ವರದಿ ಮಾಡಲಾಗಿದೆ. ಹೀಗಾಗಿ ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ಅಸ್ಸಾಂನ ಬಿಲ್ಲೇಶ್ವರ ದೇವಾಲಯದಲ್ಲಿ ಧಾರ್ಮಿಕ ವಿಧಿವಿಧಾನದ ಪ್ರಕಾರ ಪ್ರಾಣಿಯ ಬಲಿಯನ್ನು ಕೊಟ್ಟಿದ್ದಾರೆ ಎಂಬ ಸಶಿರ್ಷಿಕೆಯೊಂದಿಗೆ ಹರಿದಾಡುತ್ತಿರುವ ಸುದ್ದಿ ಸುಳ್ಳಿ. ಹಳೆಯ ವಿಡಿಯೋವನ್ನು ತಪ್ಪು ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ.
schema:mentions
schema:reviewRating
schema:author
schema:datePublished
schema:inLanguage
  • Telugu
schema:itemReviewed
Faceted Search & Find service v1.16.115 as of Oct 09 2023


Alternative Linked Data Documents: ODE     Content Formats:   [cxml] [csv]     RDF   [text] [turtle] [ld+json] [rdf+json] [rdf+xml]     ODATA   [atom+xml] [odata+json]     Microdata   [microdata+json] [html]    About   
This material is Open Knowledge   W3C Semantic Web Technology [RDF Data] Valid XHTML + RDFa
OpenLink Virtuoso version 07.20.3238 as of Jul 16 2024, on Linux (x86_64-pc-linux-musl), Single-Server Edition (126 GB total memory, 11 GB memory in use)
Data on this page belongs to its respective rights holders.
Virtuoso Faceted Browser Copyright © 2009-2025 OpenLink Software