About: http://data.cimple.eu/claim-review/6ef3ea9d24a1429e4e6509e5d8aa088d29b3a6bab6d44eb8c7bdbde8     Goto   Sponge   NotDistinct   Permalink

An Entity of Type : schema:ClaimReview, within Data Space : data.cimple.eu associated with source document(s)

AttributesValues
rdf:type
http://data.cimple...lizedReviewRating
schema:url
schema:text
  • ಫ್ಯಾಕ್ಟ್ಚೆಕ್ :ನ್ಯೂಯಾರ್ಕ್ನಲ್ಲಿರುವ ವಿರಾಟ್ ಕೊಹ್ಲಿ ಪ್ರತಿಮೆಯ ವೈರಲ್ ಚಿತ್ರದ ಅಸಲಿಯತ್ತೇನು? ನ್ಯೂಯಾರ್ಕ್ನಲ್ಲಿರುವ ವಿರಾಟ್ ಕೊಹ್ಲಿ ಪ್ರತಿಮೆಯ ವೈರಲ್ ಚಿತ್ರದ ಅಸಲಿಯತ್ತೇನು? Claim :ನ್ಯೂಯಾರ್ಕ್ನ ಟೈಮ್ಸ್ ಸ್ಕ್ವೇರ್ನಲ್ಲಿ ಭಾರತೀಯ ಕ್ರಿಕೆಟಿಗ ವಿರಾಟ್ ಕೊಹ್ಲಿಯ ಪ್ರತಿಮೆಯನ್ನು ಅನಾವರಣಗೊಳಿಸಲಾಗಿದೆ. Fact :ವೈರಲ್ ಆದ ಚಿತ್ರವು ಮೂಲ ಚಿತ್ರವಲ್ಲ ಈ ಚಿತ್ರವನ್ನು ಸಿಜಿಐ ಮೂಲಕ ಡ್ಯುರೊಫ್ಲೆಕ್ಸ್ ಹಾಸಿಗೆ ಕಂಪನಿಯ ರಚಿಸಲಾಗಿದೆ. ಜೂನ್ 29 ರಂದು ಬಾರ್ಬಡೋಸ್ನಲ್ಲಿ ನಡೆದ ಫೈನಲ್ನಲ್ಲಿ ಭಾರತವು ದಕ್ಷಿಣ ಆಫ್ರಿಕಾವನ್ನು ಏಳು ರನ್ಗಳಿಂದ ಸೋಲಿಸಿ ಎರಡನೇ ವಿಶ್ವಕಪ್ ಟ್ರೋಫಿಯನ್ನು ಗೆದ್ದಿತ್ತು. ಭಾರತದ ಗೆಲುವಿನ ನಂತರ, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ರವೀಂದ್ರ ಜಡೇಜಾ ತಮ್ಮ T20I ನಿವೃತ್ತಿ ಘೋಷಿಸಿದರು. ವಿರಾಟ್ ಕೊಹ್ಲಿ ಒಳ್ಳೆಯ ಬ್ಯಾಟ್ಸ್ಮನ್, ಅಪಾರ ಪ್ರತಿಭಾವಂತ ಮತ್ತು ಭಾರತ ದೇಶದ ಅತ್ಯುತ್ತಮ ಬ್ಯಾಟ್ಸ್ಮನ್ಗಳಲ್ಲಿ ಒಬ್ಬರು. ಇದೀಗ, ನ್ಯೂಯಾರ್ಕ್ನ ಟೈಮ್ಸ್ ಸ್ಕ್ವೇರ್ನಲ್ಲಿ ವಿರಾಟ್ ಕೊಹ್ಲಿಯ ಪ್ರತಿಮೆಯನ್ನು ತೋರಿಸುವ ವೀಡಿಯೊ ಮತ್ತು ಕೆಲವು ಚಿತ್ರಗಳು ವೈರಲ್ ಆಗಿದ್ದು, ನ್ಯೂಯಾರ್ಕ್ನ ಟೈಮ್ಸ್ ಸ್ಕ್ವೇರ್ನಲ್ಲಿ ವಿರಾಟ್ನ ಪ್ರತಿಮೆಯನ್ನು ಅನಾವರಣಗೊಳಿಸಲಾಗಿದೆ ಎಂಬ ಹೇಳಿಕೆಯೊಂದಿಗೆ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಫ್ಯಾಕ್ಟ್ಚೆಕ್ ವೈರಲ್ ವಿಡಿಯೋವಿನಲ್ಲಿ ಯಾವುದೇ ಸತ್ಯಾಂಶವಿಲ್ಲ. ವೈರಲ್ ಆದ ವಿಡಿಯೋವನ್ನು CGI ಮೂಲಕ ರಚನೆ ಮಾಡಲಾಗಿದೆ ಅಷ್ಟೇ ಅಲ್ಲ ಈ ವಿಡಿಯೋ ಜಾಹೀರಾತು ಪ್ರಚಾರದ ಒಂದು ಭಾಗವಾಗಿ ರಚಿಸಲಾಗಿದೆ. ಮತ್ತಷ್ಟು ಮಾಹಿತಿಯನ್ನು ಕಲೆಹಾಕಲು ನಾವು ವೈರಲ್ ವಿಡಿಯೋವಿನಿಂದ ತೆಗೆದ ಕೆಲವು ಕೀಫ್ರೇಮ್ಗಳಿಂದ ಗೂಗಲ್ ರಿವರ್ಸ್ ಇಮೇಜ್ ಸರ್ಚ್ನಲ್ಲಿ ಹುಡುಕಾಡಿದಾಗ ನಮಗೆ "ಇದು ಮ್ಯಾಟ್ರೆಸ್ ಕಂಪನಿಯಾದ ಡ್ಯುರೊಫ್ಲೆಕ್ಸ್ನ ಜಾಹಿರಾತುವಿನ ಭಾಗವಾಗಿದೆ ಎಂದು ತಿಳಿದುಬಂದಿತು. ವಿರಾಟ್ ಕೊಹ್ಲಿ ಪ್ರತಿಮೆಯ ಹಿಂದಿನ ಕಟ್ಟಡಗಳಲ್ಲಿನ ಟಿವಿಗಳಲ್ಲಿ ಡ್ಯೂರೊಫ್ಲೆಕ್ಸ್ ಜಾಹೀರಾತನ್ನು ಪ್ರದರ್ಶಿಸುವುದನ್ನು ನಾವು ನೋಡಬಹುದು. ಅಷ್ಟೇ ಅಲ್ಲ ವೀಡಿಯೊವನ್ನು ಡ್ಯುರೊಫ್ಲೆಕ್ಸ್ ತನ್ನ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ #CGIanimation ಹ್ಯಾಶ್ಟ್ಯಾಗ್ನೊಂದಿಗೆ ಹಂಚಿಕೊಂಡಿದೆ ಎಂದು ನಾವು ಕಂಡುಕೊಂಡಿದ್ದೇವೆ. ಜೂನ್ 23, 2024 ರಂದು ಮ್ಯಾಟ್ರೆಸ್ ಕಂಪನಿಯ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವೀಡಿಯೊವನ್ನು ಹಂಚಿಕೊಂಡಿದೆ: “Just Unveiled: a larger-than-life statue of Virat Kohli at the iconic Times Square.” ಈ ರಾಜನ ಕರ್ತವ್ಯವೇನೆಂದರೆ, ಇತಿಹಾಸವನ್ನು ರಚಿಸುವುದು. ಈಗ ಇತಿಹಾಸವನನ್ನು ರಚಿಸಲು ಈಗ ವಿರಾಟ್ನ ನೆಚ್ಚಿನ ಡ್ಯುರೊಫ್ಲೆಕ್ಸ್ ಹಾಸಿಗೆಯನ್ನು ನ್ಯೂಯಾರ್ಕ್, ವೆಸ್ಟ್ ಇಂಡೀಸ್ ಮತ್ತು 2024 ರ ವಿಶ್ವಕಪ್ನಾದ್ಯಂತ ಅವರಿಗೆ ತಲುಪಿಸಲಾಗುತ್ತಿದೆ! #ViratSleepsOnDuroflex *CGIvideo #GreatSleepGreatHealth # ViratKohli #worldcup #cricket #CGI #ಸಿಗಿಅನಿಮೇಷನ್ ಫೇಸ್ಬುಕ್ ಮತ್ತು ಎಕ್ಸ್ (ಟ್ವಿಟರ್) ಖಾತೆಗಳಲ್ಲೂ ಸಹ #CGI #cgianimation ಎಂಬ ಹ್ಯಾಶ್ಟ್ಯಾಗ್ಗಳೊಂದಿಗೆ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. Just Unveiled :A larger-than-life statue of Virat Kohli at the iconic Times Square.— Duroflex (@Duroflex_world) June 23, 2024 This King's Duty, we are going global and making history! We’re delivering great sleep and great health to Virat Kohli.#GreatSleepGreatHealth #ViratKohli #worldcup #cricket #CGI pic.twitter.com/5WpkZcwa7i ಅದೇ ವೀಡಿಯೊವನ್ನು ಡ್ಯುರೊಫ್ಲೆಕ್ಸ್ನ ಯೂಟ್ಯೂಬ್ ವೀಡಿಯೊದಲ್ಲಿ Duroflex with the caption Duroflex on King's Duty | Times Square, New York City | Virat Kohli | CGI |ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ ಕಂಪ್ಯೂಟರ್ ಜೆನೆರೇಟೆಡ್ ಇಮೇಜೆರಿ ( CGI ) ಒಂದು ರೀತಿಯ ತಂತ್ರಜ್ಞಾನವಾಗಿದ್ದು ಅದು ಲೈವ್-ಆಕ್ಷನ್ ಮತ್ತು ಅನಿಮೇಟೆಡ್ ಚಿತ್ರ ಅಥವಾ ವಿಡಡಿಯೋವನ್ನು ತಯಾರಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಆದ್ದರಿಂದ, ವಿರಾಟ್ ಕೊಹ್ಲಿಯ ಗಾತ್ರದ ಪ್ರತಿಮೆಯನ್ನು ತೋರಿಸುವ ವೀಡಿಯೊ ಮತ್ತು ಚಿತ್ರಗಳು CGI ಮೂಲಕ ರಚಿಸಲಾಗಿದೆ, ನ್ಯೂಯಾರ್ಕ್ನ ಟೈಮ್ಸ್ ಸ್ಕ್ವೇರ್ನಲ್ಲಿ ಅನಾವರಣಗೊಂಡ ಮೂಲ ಪ್ರತಿಮೆಯಲ್ಲ ಎಡಿಟ್ ಮಾಡಿರುವ ಚಿತ್ರ.
schema:mentions
schema:reviewRating
schema:author
schema:datePublished
schema:inLanguage
  • Telugu
schema:itemReviewed
Faceted Search & Find service v1.16.115 as of Oct 09 2023


Alternative Linked Data Documents: ODE     Content Formats:   [cxml] [csv]     RDF   [text] [turtle] [ld+json] [rdf+json] [rdf+xml]     ODATA   [atom+xml] [odata+json]     Microdata   [microdata+json] [html]    About   
This material is Open Knowledge   W3C Semantic Web Technology [RDF Data] Valid XHTML + RDFa
OpenLink Virtuoso version 07.20.3238 as of Jul 16 2024, on Linux (x86_64-pc-linux-musl), Single-Server Edition (126 GB total memory, 11 GB memory in use)
Data on this page belongs to its respective rights holders.
Virtuoso Faceted Browser Copyright © 2009-2025 OpenLink Software