About: http://data.cimple.eu/claim-review/7468685db23c61f6863230bb291407b6dbba9df796a27b6f2e7384de     Goto   Sponge   NotDistinct   Permalink

An Entity of Type : schema:ClaimReview, within Data Space : data.cimple.eu associated with source document(s)

AttributesValues
rdf:type
http://data.cimple...lizedReviewRating
schema:url
schema:text
  • Authors Claim ಸೆ.30ರಂದು ಎಲ್ಲ ಪ್ಲ್ಯಾನ್ ಗಳನ್ನು ಹಿಂತೆಗೆದುಕೊಳ್ಳುವುದಾಗಿ ನಕಲಿ ಎಲ್ಐಸಿ ಸುತ್ತೋಲೆ ಘೋಷಣೆ ವೈರಲ್ ಆಗಿದೆ. ಸೆಪ್ಟೆಂಬರ್ 30, 2024 ರಂದು ಪರಿಷ್ಕರಣೆಗಾಗಿ ಎಲ್ಲಾ ವಿಮಾ ಯೋಜನೆಗಳು (ಪ್ಲ್ಯಾನ್) /ಉತ್ಪನ್ನಗಳನ್ನು ಹಿಂತೆಗೆದುಕೊಳ್ಳುವುದಾಗಿ LIC ಸುತ್ತೋಲೆ ಪ್ರಕಟಿಸಿದೆ. ಪರಿಷ್ಕೃತ ಯೋಜನೆಗಳು/ನೀತಿಗಳನ್ನು ಅಕ್ಟೋಬರ್ 1, 2024 ರ ನಂತರ ಕೆಲವು ಷರತ್ತುಗಳೊಂದಿಗೆ ಪರಿಚಯಿಸಲಾಗುವುದು ಎಂದು ಸುತ್ತೋಲೆಯಲ್ಲಿದೆ ಎಂದು ಎಕ್ಸ್ ಪೋಸ್ಟ್ ನಲ್ಲಿ ಹೇಳಲಾಗಿದೆ. Also Read: ಮಿ17 ಹೆಲಿಕಾಪ್ಟರ್ ಕೇದಾರನಾಥದಲ್ಲಿ ಪತನ ಎಂದ ವೀಡಿಯೋ ಹಿಂದಿನ ಅಸಲಿಯತ್ತೇನು? ಈ ಪೋಸ್ಟ್ನ ಆರ್ಕೈವ್ ಮಾಡಿದ ಆವೃತ್ತಿಯನ್ನು ಇಲ್ಲಿ ನೋಡಬಹುದು . ಈ ಸುತ್ತೋಲೆ ಬಗ್ಗೆ ಸತ್ಯಶೋಧನೆ ನಡೆಸುವಂತೆ ನ್ಯೂಸ್ಚೆಕರ್ ವಾಟ್ಸಾಪ್ ಟಿಪ್ಲೈನ್ನಲ್ಲಿ (9999499044) ಮೂಲಕ ಬಳಕೆದಾರರೊಬ್ಬರು ವಿನಂತಿಸಿದ್ದಾರೆ. ಅದನ್ನು ಸತ್ಯಶೋಧನೆಗಾಗಿ ಸ್ವೀಕರಿಸಲಾಗಿದೆ. Fact ಸತ್ಯಶೋಧನೆಯ ಆರಂಭದಲ್ಲಿ, ಈ “ಸುತ್ತೋಲೆ”ಯಲ್ಲಿ ಹೊರಡಿಸಲಾದ ದಿನಾಂಕವನ್ನು ಬರೆದಿಲ್ಲ ಎಂಬುದನ್ನು ನಾವು ಗಮನಿಸಿದ್ದೇವೆ. ಇದರೊಂದಿಗೆ ಪತ್ರದಲ್ಲಿ ಹಲವು ವ್ಯಾಕರಣ ದೋಷಗಳನ್ನು ಗಮನಿಸಿದ್ದೇವೆ. ಉದಾಹರಣೆಗೆ ಕೆಳಭಾಗದಲ್ಲಿ “Regards” ಸ್ಪೆಲ್ಲಿಂಗ್ ತಪ್ಪಾಗಿದೆ ಎಂಬುದು ಇದರ ಸತ್ಯಾಸತ್ಯತೆ ಮೇಲೆ ಅನುಮಾನಗಳನ್ನು ಹೆಚ್ಚಿಸಿದೆ. ಬಳಿಕ ನಾವು ಎಲ್ಐಸಿಯ ಅಧಿಕೃತ ವೆಬ್ ಸೈಟ್ ಪರಿಶೀಲಿಸಿದ್ದು, ಪ್ಲ್ಯಾನ್ ಗಳನ್ನು ಹಿಂತೆಗೆದುಕೊಳ್ಳುವ ಬಗ್ಗೆ ಯಾವುದೇ ಪ್ರಕಟಣೆಗಳು ಕಂಡುಬಂದಿಲ್ಲ. ನಾವು ಅನಂತರ LIC ಯ ಅಧಿಕೃತ X ಖಾತೆಯನ್ನು ನೋಡಿದ್ದೇವೆ, ಅದರಲ್ಲಿ PIB ಫ್ಯಾಕ್ಟ್ ಚೆಕ್ ಟ್ವೀಟ್ ಅನ್ನು ಮರುಪೋಸ್ಟ್ ಮಾಡಿದೆ , ದಿನಾಂಕ ಸೆಪ್ಟೆಂಬರ್ 2, 2024, ವೈರಲ್ ಪತ್ರವನ್ನು ನಕಲಿ ಎಂದು ಹೇಳಿದೆ. “ಎಲ್ಐಸಿ ಹೊರಡಿಸಿದ ಸೂಚನೆಯು ಸಾಮಾಜಿಕ ಮಾಧ್ಯಮದಲ್ಲಿ ಸುತ್ತು ಹಾಕುತ್ತಿದೆ ಮತ್ತು 30 ಸೆಪ್ಟೆಂಬರ್ 2024 ರಂದು ಪರಿಷ್ಕರಣೆಗಾಗಿ ಎಲ್ಲಾ ವಿಮಾ ಉತ್ಪನ್ನಗಳು/ಯೋಜನೆಗಳನ್ನು ಹಿಂತೆಗೆದುಕೊಳ್ಳಲಿದೆ ಎಂದು ಹೇಳುತ್ತದೆ. @LICIndiaForever ನಿಂದ ಅಂತಹ ಯಾವುದೇ ಸೂಚನೆಯನ್ನು ನೀಡಲಾಗಿಲ್ಲ,” ಎಂದಿದೆ. ಪೋಸ್ಟ್ ಅನ್ನು ಇಲ್ಲಿ ನೋಡಿ. ಆದ್ದರಿಂದ ಈ ಸತ್ಯಶೋಧನೆಯ ಪ್ರಕಾರ, ಎಲ್ಐಸಿ .30ರಂದು ಎಲ್ಲ ಎಲ್ಐಸಿ ಪ್ಲ್ಯಾನ್ ಹಿಂತೆಗೆದುಕೊಳ್ಳುವುದಾಗಿ ಹೇಳಿದ ಸುತ್ತೋಲೆ ನಕಲಿ ಎಂದು ತಿಳಿದುಬಂದಿದೆ. Also Read: ರಾಜಸ್ಥಾನದಲ್ಲಿ ಹಸುವಿನ ಬಾಲ ಕತ್ತರಿಸಿ ದೇವಸ್ಥಾನದ ಬಾಗಿಲಿಗೆ ಎಸೆದ ಮುಸ್ಲಿಮರಿಗೆ ಪೊಲೀಸರು ಥಳಿಸಿದ ವೀಡಿಯೋ ನಿಜವೇ? Result: False Our Source LIC website X post, PIB Fact Check, September 2, 2024 (ಈ ಲೇಖನವನ್ನು ಮೊದಲು ನ್ಯೂಸ್ಚೆಕರ್ ಇಂಗ್ಲಿಷ್ ನಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ) ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.
schema:mentions
schema:reviewRating
schema:author
schema:datePublished
schema:inLanguage
  • Hindi
schema:itemReviewed
Faceted Search & Find service v1.16.123 as of May 22 2025


Alternative Linked Data Documents: ODE     Content Formats:   [cxml] [csv]     RDF   [text] [turtle] [ld+json] [rdf+json] [rdf+xml]     ODATA   [atom+xml] [odata+json]     Microdata   [microdata+json] [html]    About   
This material is Open Knowledge   W3C Semantic Web Technology [RDF Data]
OpenLink Virtuoso version 07.20.3241 as of May 22 2025, on Linux (x86_64-pc-linux-musl), Single-Server Edition (126 GB total memory, 10 GB memory in use)
Data on this page belongs to its respective rights holders.
Virtuoso Faceted Browser Copyright © 2009-2026 OpenLink Software