schema:text
| - Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact checks doneFOLLOW US
Fact Check
Claim
ರಸಗೊಬ್ಬರ ಬೆಲೆ ದಿಢೀರ್ 700 ರೂ. ಏರಿಕೆ
Fact
ರಸಗೊಬ್ಬರ ಬೆಲೆ ಏರಿಕೆ 2021 ಎಪ್ರಿಲ್ ಹೊತ್ತಿಗೆ ಆಗಿದ್ದು, ಈಗ ಯಾವುದೇ ಬೆಲೆ ಏರಿಕೆಯಾಗಿಲ್ಲ.
ರೈತರಿಗೆ ಬೇಕಾದ ರಸಗೊಬ್ಬರ ಬೆಲೆ 700 ರೂ. ದಿಢೀರ್ ಏರಿಕೆಯಾಗಿದೆ ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಮಾಡಿದೆ.
ಈ ಕುರಿತ ಕ್ಲೇಮ್ ಹೀಗಿದೆ “ರೈತ ವಿರೋಧಿ ಬಿಜೆಪಿ ಸರ್ಕಾರ ಮತ್ತೆ ರೈತರು ಉಪಯೋಗಿಸುವ ರಸಗೊಬ್ಬರ 700 ರೂ. ಬೆಲೆ ಏರಿಕೆ ಮಾಡಿದೆ” ಎಂದು ಹೇಳಲಾಗಿದೆ. ಇದನ್ನು ಇಲ್ಲಿ ನೋಡಬಹುದು.
ಈ ಕುರಿತು ನ್ಯೂಸ್ಚೆಕರ್ ಸತ್ಯಶೋಧನೆ ನಡೆಸಿದ್ದು, ಇದು ತಪ್ಪಾದ ಕ್ಲೇಮ್ ಎಂಬುದನ್ನು ಕಂಡುಕೊಂಡಿದೆ.
ಸತ್ಯಶೋಧನೆಗಾಗಿ ನ್ಯೂಸ್ಚೆಕರ್ ಕ್ಲೇಮಿನೊಂದಿಗೆ ಹಾಕಲಾದ ಕನ್ನಡಪ್ರಭ ಪತ್ರಿಕೆಯ ವರದಿಯನ್ನು ಕೂಲಂಕಷವಾಗಿ ಪರಿಶೀಲನೆ ನಡೆಸಲಾಗಿದೆ. ಈ ವರದಿಯ ಕೆಳಭಾಗದಲ್ಲಿ ಸುದ್ದಿ ಪ್ರಕಟಗೊಂಡ ದಿನಾಂಕ ಎಪ್ರಿಲ್ 9 2021 ಎನ್ನುವುದು ಪತ್ತೆಯಾಗಿದೆ. ಈ ವರದಿಯಲ್ಲಿ “ಮಾರ್ಚ್ ಆರಂಭದಲ್ಲಷ್ಟೇ ಏರಿಕೆಯಾಗಿದ್ದ ರಸಗೊಬ್ಬರ ಬೆಲೆ ಒಂದು ತಿಂಗಳಲ್ಲಿ ಏರಿಕೆಯಾಗಿದೆ. ಎಪ್ರಿಲ್ 1ರಿಂದ 700 ರೂ. ಅಧಿಕ ಹೆಚ್ಚಳವಾಗಿದೆ ಎಂದು ಹೇಳಲಾಗಿದೆ”
ಇದೇ ವರದಿಯನ್ನ ಏಷ್ಯಾನೆಟ್ ಸುವರ್ಣ ನ್ಯೂಸ್ ಎಪ್ರಿಲ್ 9, 2021ರಂದು ಪ್ರಕಟಿಸಿದ್ದು, ಅದನ್ನು ಇಲ್ಲಿ ನೋಡಬಹುದು.
ಇದನ್ನು ಸಾಕ್ಷ್ಯವಾಗಿಟ್ಟು ಗೂಗಲ್ನಲ್ಲಿ ಕೀವರ್ಡ್ ಸರ್ಚ್ ನಡೆಸಲಾಗಿದ್ದು, ಈ ವೇಳೆ ಕೆಲವು ವರದಿಗಳು ಲಭ್ಯವಾಗಿವೆ.
Also Read: ಹೃದಯದ ಬ್ಲಾಕ್ಗೆ ಆಂಜಿಯೋಪ್ಲಾಸ್ಟಿ ಬದಲಿಗೆ ಮನೆಮದ್ದು, ಆಯುರ್ವೇದ ಔಷಧ ಪ್ರಯೋಜನವಾಗುತ್ತಾ, ಸತ್ಯ ಏನು?
ಎಪ್ರಿಲ್ 8, 2021ರ ಎಕನಾಮಿಕ್ ಟೈಮ್ಸ್ ವರದಿ ಪ್ರಕಾರ, “ಹಲವು ರಸಗೊಬ್ಬರಗಳ ಬೆಲೆ ಏರಿಕೆ ಕಂಡಿವೆ. ಇಂಡಿಯನ್ ಫಾರ್ಮರ್ಸ್ ಫರ್ಟಿಲೈಸರ್ ಕೊಆಪರೇಟಿವ್ (ಇಫ್ಕೋ) ದರ ಹೆಚ್ಚಳ ಮಾಡಿದ್ದು ಯೂರಿಯಾ ಬೆಲೆಯಲ್ಲಿ ಶೇ.58ರಷ್ಟು ಏರಿಕೆಯಾಗಿದೆ. 1200 ರೂ. ಬೆಲೆ ಇದ್ದ ಡಿಎಪಿ ಗೊಬ್ಬರದ ಬೆಲೆ 1900ಕ್ಕೆ ಏರಿಕೆಯಾಗಿದೆ ಎನ್ಪಿಕೆ ಬೆಲೆ 1500ರಿಂದ 1800 ರೂ.ಗೆ ಏರಿಕೆಯಾಗಿದೆ” ಎಂದಿದೆ.
ಎಪ್ರಿಲ್ 9, 2021ರ ದಿ ಇಂಡಿಯನ್ ಎಕ್ಸ್ ಪ್ರೆಸ್ ವರದಿಯಲ್ಲೂ ಇಫ್ಕೋ ತನ್ನ ರಸಗೊಬ್ಬರಗಳ ಬೆಲೆಯನ್ನು ಶೇ.45ರಿಂದ ಶೇ.58ರಷ್ಟು ಏರಿಕೆ ಮಾಡಿದ್ದನ್ನು ಹೇಳಿದೆ.
ರಸಗೊಬ್ಬರ ಬೆಲೆ ಏರಿಕೆ ಕುರಿತಾದ ಈ ವರದಿಗಳು 2021ರ ಎಪ್ರಿಲ್ ಹೊತ್ತಿನದ್ದಾಗಿದೆ. ಪರಿಶೀಲನೆ ವೇಳೆ ಇತ್ತೀಚಿಗೆ ಯಾವುದೇ ಬೆಲೆ ಏರಿಕೆಯಾಗಿರುವುದು ಕಂಡುಬಂದಿರುವುದಿಲ್ಲ.
ಸದ್ಯ ರಸಗೊಬ್ಬರದ ಬೆಲೆಯ ಬಗ್ಗೆ ಪರಿಶೀಲನೆ ನಡೆಸಲಾಗಿದ್ದು, ಕೇಂದ್ರ ರಸಗೊಬ್ಬರ ಖಾತೆಯ ವೆಬ್ಸೈಟ್ನಲ್ಲಿ ದರ ಪಟ್ಟಿ ಹೀಗಿದೆ. ಇದರ ಪರಿಶೀನೆ ವೇಳೆ 2020-21ನೇ ಸಾಲಿನಲ್ಲಿ ಮತ್ತು 2021-22ನೇ ಸಾಲಿನಲ್ಲಿ ರಸಗೊಬ್ಬರಗಳ ಬೆಲೆಯಲ್ಲಿ ಏರಿಕೆಯಾಗಿರುವುದು ಕಂಡು ಬಂದಿದೆ. ಉದಾಹರಣೆಗೆ ಎನ್ಪಿಕೆ (10.26.26) ಒಂದರ ದರವನ್ನೇ ಪರಿಗಣಿಸಿದರೆ, 2020-21 ರಲ್ಲಿ ಸಬ್ಸಿಡಿ ರಹಿತ ದರ 18,293 ರೂ. ಮತ್ತು 2021-22ರಲ್ಲಿ 34,689 ರೂ. ಇದೆ. ಇದೇ ರೀತಿ ವಿವಿಧ ರಸಗೊಬ್ಬರಗಳ ಬೆಲೆಯಲ್ಲಿ ಹೆಚ್ಚಿನ ಬದಲಾವಣೆಯಾಗಿರುವುದನ್ನು ಕಾಣಬಹುದು. ಎನ್ಬಿಎಸ್ ದರದಲ್ಲೂ ಹೆಚ್ಚಳವಾಗಿರುವುದನ್ನು ಇಲ್ಲಿ ಕಾಣಬಹುದು.
ರಸಗೊಬ್ಬರದ ಸ್ಥಳೀಯ ಮಾರುಕಟ್ಟೆ ದರದ ಬಗ್ಗೆ ಬಂಟ್ವಾಳದ ಇಂದ್ರ ಅಗ್ರಿ ಸಪ್ಲೈಸಸ್ನ ಸುಮಂತ್ ಕುಮಾರ್ ಅವರನ್ನು ಸಂಪರ್ಕಿಸಲಾಗಿದ್ದು, ಅವರು “ಕಳೆದ ಒಂದು ವರ್ಷದಿಂದ ಯಾವುದೇ ದರ ಹೆಚ್ಚಳವಾಗಿಲ್ಲ” ಎಂದು ತಿಳಿಸಿದ್ದಾರೆ. “ಫಾಸ್ಪರಿಕ್ ಆಸಿಡ್ ದರ ವ್ಯತ್ಯಾಸದಿಂದಾಗಿ ಬೆಲೆಗಳಲ್ಲಿ ವ್ಯತ್ಯಾಸವಾಗುತ್ತದೆ. ಈಗಿನ ಮಾರುಕಟ್ಟೆ ದರ ಡಿಎಪಿ ಗೊಬ್ಬರಕ್ಕೆ 1350 ರೂ. ಮತ್ತು ಎನ್ಪಿಕೆ ಗೊಬ್ಬರಕ್ಕೆ (10.26.26) 1470 ರೂ. ಇದೆ” ಎಂದು ಹೇಳಿದ್ದಾರೆ.
ಸತ್ಯಶೋಧನೆಯ ಪ್ರಕಾರ, ರಸಗೊಬ್ಬರ ಬೆಲೆ ಏರಿಕೆ ಯಾಗಿದ್ದು 2021 ಎಪ್ರಿಲ್ ಹೊತ್ತಿಗೆ ಆಗಿದ್ದು, ಈಗ ಯಾವುದೇ ಬೆಲೆ ಏರಿಕೆಯಾಗಿಲ್ಲ. ಆದ್ದರಿಂದ ಇದು ತಪ್ಪಾದ ಸಂದರ್ಭವಾಗಿದೆ.
Our Sources:
Report by Kannadaprabha, Dated April 9, 2021
Report by Economic Times, Dated April 8, 2021
Report by The Indian Express, Dated April 9, 2021
Fertilizer price in Department of Fertilizers, Govt of India
Conversation with Local Fertilizer vendor Indra Agri supplies, Sumanth Kumar
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.
|